ವರ್ಷಾಂತ್ಯ ಬಂದರೆ, ಹೊಸ ವರ್ಷದ ಆಗಮನವಾಗುತ್ತಿದ್ದಂತೆ ಹಲವರು ಟ್ರಿಪ್, ಟೂರ್ ಪ್ಲಾನ್ ಮಾಡುತ್ತಾರೆ. ಕೆಲವರು ಇದ್ದ ರಜೆಯನ್ನು ಖಾಲಿ ಮಾಡೋದಕ್ಕಾಗಿ ಟ್ರಿಪ್ ಹೋದ್ರೆ, ಇನ್ನೂ ಕೆಲವರು ಕುಟುಂಬದೊಂದಿಗೆ ರಿಫ್ರೆಶ್‌ಮೆಂಟ್‌ಗಾಗಿ ರಜೆ ಹಾಕುತ್ತಾರೆ. ಆದ್ರೆ ಇದೀಗ ಡಿಸೆಂಬರ್‌ನಲ್ಲಿ ರಜಾ ಜೊತೆ ಮಜಾ ಮಾಡುವವರಿಗಾಗಿ ಕೇರಳ ರಾಜ್ಯ (Kerala Govt) ಬಂಪರ್ ಗುಡ್ ನ್ಯೂಸ್ ನೀಡುತ್ತಿದೆ.

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಈ ಡಿಸೆಂಬರ್‌ನಲ್ಲಿ ಪ್ರವಾಸಿಗರಿಗಾಗಿ ಟ್ರಾವೆಲ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಈ ಮೂಲಕ ತಿರುವನಂತಪುರಂನ ಶಂಖುಮುಖಂ ನೌಕಾದಳ ದಿನಾಚರಣೆ ಕಾರ್ಯಕ್ರಮವನ್ನೂ ವೀಕ್ಷಿಸಲು ಆಸಕ್ತಿ ಹೊಂದಿರುವವರು ಈ ಟ್ರಾವೆಲ್ ಪ್ಯಾಕೇಜ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು.
ನೌಕಾಪಡೆಯ ಪ್ರದರ್ಶನ!
ಭಾರತದ ನೌಕಾಪಡೆಯ ಶಕ್ತಿ ಪ್ರದರ್ಶನ ಡಿಸೆಂಬರ್ 3 ರಂದು ತಿರುವನಂತಪುರಂನ ಶಂಖುಮುಖ-ವೇಲಿ ಕರಾವಳಿಯಲ್ಲಿ ನಡೆಯಲಿದೆ. KSRTC ಕೇರಳದಲ್ಲಿ ಮೊದಲ ಬಾರಿಗೆ ಈ ನೌಕಾ ಕಾರ್ಯಾಚರಣೆ ಪ್ರದರ್ಶಿಸುವ ಸುಸಂದರ್ಭವನ್ನು ಆಯೋಜನೆ ಮಾಡುತ್ತಿದೆ. ಆದ್ದರಿಂದ ಈ ಪ್ರವಾಸಕ್ಕಾಗಿ ಕಣ್ಣೂರು, ಪಯ್ಯನೂರು, ತಲಶ್ಶೇರಿ ಡಿಪೋಗಳಿಂದ ಟಿಕೆಟ್ ಬುಕ್ ಮಾಡಬಹುದು.
ಈ ವಿಶೇಷ ಪ್ರವಾಸ ಡಿಸೆಂಬರ್ 2 ರಂದು ಸಂಜೆ 5 ಗಂಟೆಗೆ ಕಣ್ಣೂರಿನಿಂದ ಆರಂಭವಾಗಿ, ಮರುದಿನ ಬೆಳಿಗ್ಗೆ ತಿರುವನಂತಪುರಂ ತಲುಪುತ್ತದೆ. ಅಲ್ಲಿ ಕಪ್ಪುಕಾಡು ಆನೆ ಧಾಮ, ವೇಲಿ ಪ್ರವಾಸಿ ಗ್ರಾಮ ಮತ್ತು ಪೂವಾರ್ ದೋಣಿ ವಿಹಾರ ನಂತರ, ಸಂಜೆ 4 ರೊಳಗೆ ಶಂಖುಮುಖಂ ಕಡಲತೀರದಲ್ಲಿ ನೌಕಾ ಪ್ರದರ್ಶನ ವೀಕ್ಷಿಸಲು ಅವಕಾಶ ನೀಡಲಾಗುತ್ತದೆ
ಮರುದಿನ, ಪ್ರವಾಸಿಗರು ಕನ್ಯಾಕುಮಾರಿಗೆ ತೆರಳಿ ತ್ರಿಪ್ಪರಪ್ಪು ಜಲಪಾತ, ಪದ್ಮನಾಭಪುರಂ ಅರಮನೆ, ಕನ್ಯಾಕುಮಾರಿ ದೇವಾಲಯ, ಗ್ಲಾಸ್ ಸೇತುವೆ, ವಿವೇಕಾನಂದ ರಾಕ್‌ಗೆ ಭೇಟಿ ನೀಡುತ್ತಾರೆ. ಬಸ್ ಡಿಸೆಂಬರ್ 5 ರಂದು ಕಣ್ಣೂರಿಗೆ ಮರಳುವುದರೊಂದಿಗೆ ಪ್ರವಾಸ ಮುಕ್ತಾಯಗೊಳ್ಳುತ್ತದೆ.
ಕಣ್ಣೂರು ಡಿಪೋದಿಂದ ಇತರೆ ಡಿಸೆಂಬರ್ ಪ್ರವಾಸಗಳು:
ಡಿಸೆಂಬರ್ 5 - ಮೂನಾರ್, ಗವಿ, ನೆಲ್ಲಿಯಂಪತಿ
ಡಿಸೆಂಬರ್ 6 - ಪೋಲಿಯಂ ತುರುತ್, ಕವ್ವಾಯಿ, ರಾಣಿಪುರಂ
ಡಿಸೆಂಬರ್ 7 - ವಯನಾಡ್, ನಿಲಂಬೂರು, ಅಕಳಪ್ಪುಝ
ಡಿಸೆಂಬರ್ 12 - ಮೂಕಾಂಬಿಕಾ, ಮುರುಡೇಶ್ವರ, ವಾಗಮೋನ್ - ಇಳಿಕ್ಕಲ್ ಕಲ್ಲು, ಮಾಮಲಕಂದಂ - ಮಂಕುಳಂ
ಡಿಸೆಂಬರ್ 13 - ಪೈತಲ್ಮಲ, ನಿಲಂಬೂರು.
ಡಿಸೆಂಬರ್ 14 - ವಯನಾಡ್
ಡಿಸೆಂಬರ್ 19 - ಮೂಕಾಂಬಿಕಾ, ಮುರುಡೇಶ್ವರ
ಡಿಸೆಂಬರ್ 23 - ಮೂನಾರ್, ಮರಯೂರು, ಸೈಲೆಂಟ್ ವ್ಯಾಲಿ, ಆಕ್ಸಿ ವ್ಯಾಲಿ
ಡಿಸೆಂಬರ್ 25 - ಗವಿ, ಕಂಬಂ, ನೆಲ್ಲಿಯಂಪತಿ, ನಿಲಂಬೂರು
ಡಿಸೆಂಬರ್ 26 - ವಾಗಮೋನ್, ಇಳಿಕ್ಕಲ್ ಕಲ್ಲು
ಡಿಸೆಂಬರ್ 28 - ನಿಲಂಬೂರು, ಅಕಳಪ್ಪುಝ, ವಯನಾಡ್.
ಈ ಜಿಲ್ಲೆಗಳು ಮಾತ್ರವಲ್ಲದೇ, ಇತರ ಜಿಲ್ಲೆಗಳ ಬಜೆಟ್ ಪ್ರವಾಸ ಪ್ಯಾಕೇಜ್‌ಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಮತ್ತು ಟೂರಿಸಂ ಪ್ಲಾನ್ ಮಾಡಲು, ಕೆಎಸ್‌ಆರ್‌ಟಿಸಿ ಪ್ರವಾಸ ಸಂಯೋಜಕರನ್ನು ಸಂಪರ್ಕಿಸಬಹುದು. ಸದ್ಯ ಕೇರಳ ಸಾರಿಗೆ ಇಲಾಖೆಯಿಂದ ಮಾತ್ರ ಘೋಷಿಸಲಾಗಿದ್ದು, ಡಿಸೆಂಬರ್‌ನಲ್ಲಿ ಈ ಪ್ರವಾಸ ಪ್ಯಾಕೇಜ್ ಅನ್ನೂ ಘೋಷಣೆ ಮಾಡಲಾಗಿದೆ.


Click it and Unblock the Notifications