ಜಾಗತಿಕ ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್ ಗೂಗಲ್ ಪೇ ಮತ್ತು ಭಾರತೀಯ ಹಣಕಾಸು ಸಂಸ್ಥೆ ಆಕ್ಸಿಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಇದೀಗ ಹೊಸ "ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್" (Google Pay Flex Axis Bank Credit Card) ಲಾಂಚ್ ಆಗಿದೆ. ಮಂಗಳವಾರ, ಡಿಸೆಂಬರ್ 17, 2025 ರಂದು ಈ ಕ್ರೆಡಿಟ್ ಕಾರ್ಡ್ ಅನ್ನು ಅನಾವರಣಗೊಳಿಸಿದ್ದು, ಯುಪಿಐ (UPI) ಸೇವೆಗಳೊಂದಿಗೆ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಸರಳಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಈ ಹೊಸ ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಆಕ್ಸಿಸ್ ಬ್ಯಾಂಕ್‌ನ ಸಹಯೋಗದೊಂದಿಗೆ Rupee ಪೇಮೆಂಟ್ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುತ್ತದೆ. ಇದು ಗ್ರಾಹಕರಿಗೆ ತಮ್ಮ ದೈನಂದಿನ ಯುಪಿಐ ಪಾವತಿಗಳೊಂದಿಗೆ ಕ್ರೆಡಿಟ್ ಕಾರ್ಡ್ ಬಳಸಲು ಸುಲಭವಾಗಲಿದೆ. ಕಂಪನಿಗಳು ತಮ್ಮ ಅಧಿಕೃತ ಪ್ರಕಟಣೆಯಲ್ಲಿ, "ರೂಪಿ ನೆಟ್‌ವರ್ಕ್‌ನಲ್ಲಿ ನಿರ್ಮಿಸಲಾಗಿರುವ ಈ ಕಾರ್ಡ್, ಗೂಗಲ್ ಪೇನ ಅನುಕೂಲಕರ, ಸುರಕ್ಷಿತ ಅನುಭವ ಮತ್ತು ಆಕ್ಸಿಸ್ ಬ್ಯಾಂಕ್‌ನ ವಿಶ್ವಾಸಾರ್ಹ ಬ್ಯಾಂಕಿಂಗ್ ಸೌಲಭ್ಯದೊಂದಿಗೆ, ದೈನಂದಿನ ಯುಪಿಐ ಬಳಕೆಯಂತೆಯೇ ಈ ಕ್ರೆಡಿಟ್ ಕಾರ್ಡ್ ಅನ್ನು ವಿಸ್ತರಿಸಲಿದೆ" ಎಂದು ತಿಳಿಸಿದೆ.
ಕ್ರೆಡಿಟ್ ಕಾರ್ಡ್‌ನ ಪ್ರಯೋಜನಗಳೇನು?
ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರು ಈ ಮೂಲಕ ಹಲವು ಪ್ರಯೋಜನಗಳನ್ನು ಪಡೆಯಬಹುದು. ಅಧಿಕೃತ ಪ್ರಕಟಣೆಯ ಪ್ರಕಾರ, ಪ್ರತಿ ಫ್ಲೆಕ್ಸ್ ವಹಿವಾಟಿನೊಂದಿಗೆ ತಕ್ಷಣವೇ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ಮತ್ತು ರಿಡೀಮ್ ಮಾಡಲು ಇದು ಅವಕಾಶ ನೀಡುತ್ತದೆ, ಹೀಗೆ ಅವರ ದೈನಂದಿನ ಖರ್ಚುಗಳಿಗೆ ನೆರವಾಗುತ್ತದೆ. ಅಷ್ಟಲ್ಲದೆ, ಈ ಕ್ರೆಡಿಟ್ ಕಾರ್ಡ್ ಗೂಗಲ್ ಪೇ ಫಾರ್ಮ್ ಮೂಲಕ ಹೊಂದಿಕೊಳ್ಳುವ ರಿಫಂಡ್ ಆಯ್ಕೆಗಳನ್ನು ಸಹ ನೀಡುತ್ತದೆ ಮತ್ತು ಬಳಕೆದಾರರು ತಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಇಎಂಐಗಳಾಗಿ ಪರಿವರ್ತಿಸುವ ಅವಕಾಶವನ್ನೂ ಪಡೆಯುತ್ತಾರೆ.
ಆಕ್ಸಿಸ್ ಬ್ಯಾಂಕ್‌ನ ಕಾರ್ಡ್, ಪೇಮೆಂಟ್‌ಗಳು ಮತ್ತು ವೆಲ್ತ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷರು ಹಾಗೂ ಮುಖ್ಯಸ್ಥರಾದ ಅರ್ನಿಕಾ ದೀಕ್ಷಿತ್ ಅವರು ಮಾತನಾಡಿ, "ಯುಪಿಐ ಪಾವತಿಯು ಸದ್ಯ ಆದ್ಯತೆಯ ವಿಧಾನವಾಗಿ ಹೊರಹೊಮ್ಮುತ್ತಿರುವಾಗ, ಡಿಜಿಟಲ್-ಮೊದಲು ಗ್ರಾಹಕರಿಗೆ ಅನುಗುಣವಾದ ಕ್ರೆಡಿಟ್ ಕೊಡುಗೆಯನ್ನು ಸಹ-ರಚಿಸಲು ಸ್ಪಷ್ಟ ಅವಕಾಶವನ್ನು ನಾವು ಗುರುತಿಸಿದ್ದೇವೆ" ಎಂದು ಹೇಳಿದರು.
"ಇದು ಆಕ್ಸಿಸ್ ಬ್ಯಾಂಕ್‌ನ ಹಣಕಾಸು ವಹಿವಾಟು ಮತ್ತು ಗೂಗಲ್ ಪೇನ ಅತ್ಯಾಧುನಿಕ ತಂತ್ರಜ್ಞಾನವನ್ನು ತೋರಿಸುತ್ತದೆ. ಇದರಿಂದ ತಕ್ಷಣದ ರಿವಾರ್ಡ್‌ಗಳು, ಮರುಪಾವತಿ ಆಯ್ಕೆಗಳು ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ದೈನಂದಿನ ವಹಿವಾಟು ಮತ್ತಷ್ಟು ಸುಲಭವಾಗಲಿದೆ" ಎಂದರು.
ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಪ್ರಮುಖ ಲಕ್ಷಣಗಳು:
1. ಡಿಜಿಟಲ್ ಬಳಕೆಗೆ ಅನುಕೂಲ: ಗ್ರಾಹಕರು ಈ ಕಾರ್ಡ್‌ಗೆ ಎಲ್ಲಿಂದಲಾದರೂ "ಶೂನ್ಯ ವೆಚ್ಚ"ದಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಕೆಲವೇ ನಿಮಿಷಗಳಲ್ಲಿ ವಹಿವಾಟುಗಳನ್ನು ಪ್ರಾರಂಭಿಸಬಹುದು. ಇದಕ್ಕೆ ಯಾವುದೇ ಭೌತಿಕ ದಾಖಲೆಗಳ ಅವಶ್ಯಕತೆಯಿಲ್ಲ, ಮತ್ತು ಕಾರ್ಡ್ ಬಳಕೆದಾರರ ಮೊಬೈಲ್ ಫೋನ್‌ನಲ್ಲೇ ಲಭ್ಯವಿರುತ್ತದೆ. ಇದರಿಂದ ಯಾವುದೇ ಸಮಯದಲ್ಲಿ ಕಾರ್ಡ್ ಬಳಸಬಹುದು.
2. ಪಾವತಿ ವಿಧಾನ: ಈ ಕ್ರೆಡಿಟ್ ಕಾರ್ಡ್ Rupee ಪಾವತಿ ನೆಟ್‌ವರ್ಕ್‌ನಲ್ಲಿ ಸಿದ್ಧಪಡಿಸಲಾಗಿದೆ. ಇದು ಗ್ರಾಹಕರಿಗೆ, ಲಕ್ಷಾಂತರ ಆಫ್‌ಲೈನ್ ವ್ಯಾಪಾರಿಗಳಲ್ಲಿ ಅಥವಾ ಅವರ ನೆಚ್ಚಿನ ಆನ್‌ಲೈನ್ ಅಪ್ಲಿಕೇಶನ್‌ಗಳಲ್ಲೂ ಪೇಮೆಂಟ್ ಮಾಡಲು ಅವಕಾಶ ನೀಡುತ್ತದೆ.
3. ಕ್ರೆಡಿಟ್ ಕಾರ್ಡ್ ರಿವಾರ್ಡ್‌ಗಳು: ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ 1 ಸ್ಟಾರ್ (ಪಾಯಿಂಟ್) = ₹1 ರಿವಾರ್ಡ್ ರೇಷಿಯೋ ಹೊಂದಿದೆ. ಗ್ರಾಹಕರು ಈ ಪಾಯಿಂಟ್‌ಗಳನ್ನು ತಿಂಗಳಾಂತ್ಯದವರೆಗೂ ಕಾಯದೆ, ಯಾವುದೇ ಫ್ಲೆಕ್ಸ್ ವಹಿವಾಟುಗಳಲ್ಲಿ ತಕ್ಷಣವೇ ರಿಡೀಮ್ ಮಾಡುವ ಅವಕಾಶವೂ ಇದೆ.
4. ಮರುಪಾವತಿ: ಕ್ರೆಡಿಟ್ ಕಾರ್ಡ್‌ನಲ್ಲಿನ ಖರ್ಚು ಮತ್ತು ಬಿಲ್ಲಿಂಗ್‌ಗಳನ್ನು ಗ್ರಾಹಕರು ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಟ್ರ್ಯಾಕ್ ಮಾಡಬಹುದು. ಪೂರ್ಣ ಮೊತ್ತವನ್ನು ಪಾವತಿಸುವ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐಗಳಾಗಿ ಪರಿವರ್ತಿಸುವ ಆಯ್ಕೆಯನ್ನೂ ಇಲ್ಲಿ ನೀಡಲಾಗಿದೆ.
5. ಇನ್-ಆ್ಯಪ್ ಬಳಕೆ: ಗೂಗಲ್ ಪೇ ಅಪ್ಲಿಕೇಶನ್, ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅವರ ಕಾರ್ಡ್ ಬಳಕೆಯನ್ನು ನಿರ್ವಹಿಸಲು, ಕಾರ್ಡ್ ಅನ್ನು ನಿರ್ಬಂಧಿಸಲು ಅಥವಾ ಓಪನ್ ಮಾಡಲು, ಅಥವಾ ಪಿನ್ ಚೇಂಜ್ ಮಾಡಲು ಅನುಮತಿ ನೀಡುತ್ತದೆ.


Click it and Unblock the Notifications