ಭಾರತ ಸರ್ಕಾರ, ಸರ್ಕಾರಿ ಉದ್ಯೋಗಿಗಳ ಪಾಲಿಗೆ ಬಂಪರ್ ಗಿಫ್ಟ್ ನೀಡುವ ಸಮಯ ಬಂದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರ, ಪಿಂಚಣಿದಾರರ ವೇತನ, ಭತ್ಯೆ (DA, HRA, DR) ಪರಿಷ್ಕರಣೆಯಾಗಲಿದೆ. ಪ್ರತೀ ಹತ್ತು ವರ್ಷಕ್ಕೊಮ್ಮೆ ಪರಿಷ್ಕರಣೆಯಾಗುವ ವೇತನ ಆಯೋಗದ ಸಮಿತಿಗೆ ಇದೀಗ ಸುವರ್ಣವಕಾಶ ಬಂದಿದೆ. 7ನೇ ವೇತನ ಆಯೋಗದ ಅವಧಿ 2025 ಡಿಸೆಂಬರ್ 31ಕ್ಕೆ ಮುಕ್ತಾಯವಾಗಿದೆ. ಆದ್ದರಿಂದ 8ನೇ ವೇತನ ಆಯೋಗದ (8th Pay Commission) ಶಿಫಾರಸುಗಳು 2026 ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಇದೀಗ ಹೊಸ ವರ್ಷ ಬರುತ್ತಿದ್ದಂತೆ, 8ನೇ ವೇತನ ಆಯೋಗದ ಸದ್ದು ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ "8ನೇ ವೇತನ ಆಯೋಗದ ಫಿಟ್‌ಮೆಂಟ್ ಫ್ಯಾಕ್ಟರ್" ಗೂಗಲ್ ಟ್ರೆಂಡ್ಸ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಪದವಾಗಿದೆ. ವೇತನ ಹೆಚ್ಚಳದ ಕುರಿತು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಲ್ಲಿ ಕುತೂಹಲವೂ ಹೆಚ್ಚಾಗಿದೆ. ಈಗಾಗಲೇ 8ನೇ ವೇತನ ಆಯೋಗದ ಕಾರ್ಯಾರಂಭಕ್ಕೆ ಸಮಿತಿಯೂ ರಚನೆಯಾಗಿದ್ದು, ವೇತನ-ಪಿಂಚಣಿ ಎಷ್ಟು ಹೆಚ್ಚಾಗಬಹುದು ಎಂಬುದನ್ನು ಜನರು ಆನ್‌ಲೈನ್‌ನಲ್ಲಿ ಹುಡುಕಲು ಆರಂಭಿಸಿದ್ದಾರೆ. ಈ ಪರಿಷ್ಕರಣೆಯ ಮೊತ್ತವನ್ನು ಫಿಟ್‌ಮೆಂಟ್ ಫ್ಯಾಕ್ಟರ್ ನಿರ್ಧರಿಸುತ್ತದೆ.
ಆಯೋಗವನ್ನು ಜನವರಿ 16, 2025 ರಂದು ಘೋಷಿಸಲಾಗಿದ್ದು, ಅದರ ಕಾರ್ಯವ್ಯಾಪ್ತಿ (ToR) ನವೆಂಬರ್ ಮೊದಲ ವಾರದಲ್ಲಿ ಹೊರಡಿಸಲಾಯಿತು. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ರಂಜನಾ ದೇಸಾಯಿ ಅವರು ಈ ಬಾರಿಯ 8ನೇ ಆಯೋಗದ ಅಧ್ಯಕ್ಷರಾಗಿದ್ದಾರೆ. ಪಂಕಜ್ ಜೈನ್ ಕಾರ್ಯದರ್ಶಿ-ಸದಸ್ಯರಾಗಿ ಹಾಗೂ ಐಐಎಂ ಬೆಂಗಳೂರಿನ ಪ್ರಾಧ್ಯಾಪಕ ಪುಲಕ್ ಘೋಷ್ ಸದಸ್ಯರಾಗಿದ್ದಾರೆ. 18 ತಿಂಗಳಲ್ಲಿ ವರದಿ ಸಲ್ಲಿಸಬೇಕಿದ್ದು, ಆದ್ದರಿಂದ ವೇತನ ಆಯೋಗದ ಘೋಷಣೆ 2027 ರ ಅಂತ್ಯ ಅಥವಾ 2028 ರ ಆರಂಭದಲ್ಲಾಗುವ ಸಾಧ್ಯತೆಯಿದೆ.
ಫಿಟ್‌ಮೆಂಟ್ ಫ್ಯಾಕ್ಟರ್ ಎಂದರೆ ವೇತನ ಆಯೋಗದಲ್ಲಿ ಬಳಸುವ ಒಂದು ಗುಣಕಾರ ಸಂಖ್ಯೆ. ಇದನ್ನು ಮೂಲವೇತನ ಮತ್ತು ಪಿಂಚಣಿ ಪರಿಷ್ಕರಣೆಯಲ್ಲಿ ಅಳೆಯಲಾಗುತ್ತದೆ. ಈ ಸಂಖ್ಯೆಯಲ್ಲಿನ ಸಣ್ಣ ಬದಲಾವಣೆಯೂ ವೇತನ, ತುಟ್ಟಿ ಭತ್ಯೆ (ಡಿಎಂ) ಹೆಚ್ಚಳ ಮತ್ತು ನಿವೃತ್ತಿ ಪ್ರಯೋಜನಗಳಲ್ಲಿ ದೊಡ್ಡ ವ್ಯತ್ಯಾಸವಾಗಬಹುದು. ಇದಕ್ಕಾಗಿಯೇ ಇದು 8ನೇ ವೇತನ ಆಯೋಗದ ಪ್ರಮುಖ ಚರ್ಚೆಯಾಗಿದ್ದು, ಗೂಗಲ್ ಟ್ರೆಂಡ್ಸ್‌ನಲ್ಲೂ ಭಾರೀ ಹುಡುಕಾಟಕ್ಕೆ ಕಾರಣವಾಗಿದೆ.
ಉದಾಹರಣೆಗೆ, ಪ್ರಸ್ತುತ ಕನಿಷ್ಠ ಮೂಲ ವೇತನ: 18,000. ಫಿಟ್‌ಮೆಂಟ್ ಫ್ಯಾಕ್ಟರ್ 2.57 (7ನೇ ಆಯೋಗ): ಇದನ್ನು 18,000*2.57= 46,260 (ಹೊಸ ಮೂಲ ವೇತನವಾಗುತ್ತದೆ. ಅಂದರೆ ಇಲ್ಲಿ ಫ್ಯಾಕ್ಟರ್ ಹೆಚ್ಚಾದರೆ ಸಂಬಳವೂ ಹೆಚ್ಚಾಗುತ್ತದೆ.
8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಫ್ಯಾಕ್ಟರ್ ಎಷ್ಟಿರಬಹುದು?
ಪ್ರಸ್ತುತ ವರದಿಗಳ ಪ್ರಕಾರ, 8ನೇ ವೇತನ ಆಯೋಗದಲ್ಲಿ 1.83 ರಿಂದ 3.0 ರ ವ್ಯಾಪಕ ಶ್ರೇಣಿಯನ್ನು ಸೂಚಿಸುತ್ತವೆ. ಅನೇಕ ಅಂದಾಜುಗಳು 2.28 ರಿಂದ 2.86 ರ ಸುತ್ತ ಕೇಂದ್ರೀಕೃತವಾಗಿವೆ. ಇದು 7ನೇ ವೇತನ ಆಯೋಗದ 2.57 ಫಿಟ್‌ಮೆಂಟ್ ಫ್ಯಾಕ್ಟರ್‌ಗೆ ಹೋಲಿಸಿದರೆ ಭಾರೀ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸುವಂತೆ ಮಾಡಿದೆ.
ನೌಕರರ ಒತ್ತಾಯ
ಇನ್ನು ರಾಷ್ಟ್ರೀಯ ಕೌನ್ಸಿಲ್-ಜಂಟಿ ಸಲಹಾ ಯಂತ್ರಾಂಶದ (NC JCM) ಸಿಬ್ಬಂದಿ ವಿಭಾಗ ಸೇರಿದಂತೆ ಹಲವು ನೌಕರರ ಸಂಘಗಳು ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು 2.57 ಅಥವಾ ಅದಕ್ಕಿಂತ ಹೆಚ್ಚಿಸುವಂತೆ ಒತ್ತಡ ಹೇರಿದೆ.


Click it and Unblock the Notifications