ರೈತರ (Farmers) ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದರಲ್ಲೂ ಬಡ ರೈತರ ಆರ್ಥಿಕ ಅನುಕೂಲಕ್ಕಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಪಿಎಂ ಕಿಸಾನ್ ಮಾನ್‌ಧನ್ ಯೋಜನೆ (PM Kisan Samman Nidhi Yojana-PM Kisan Mandhan Yojana) ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಕೇಂದ್ರದ ಎರಡು ಯೋಜನೆಗಳಿಂದ ದೇಶದ ರೈತರು ಡಬಲ್ ಲಾಭ ಪಡೆಯುವ ಅವಕಾಶವಿದೆ.

ಹೌದು, ಕೇಂದ್ರ ಸರ್ಕಾರ ರೈತರಿಗೆ ಡಬಲ್ ಪ್ರಯೋಜನಗಳನ್ನು ನೀಡುವ ಎರಡು ಮಹತ್ವದ ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಅದೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಮತ್ತು ಪಿಎಂ ಕಿಸಾನ್ ಮಾನ್ ಧನ್ ಯೋಜನೆ. ಈ ಯೋಜನೆಗಳಲ್ಲಿ ಒಮ್ಮೆ ನೋಂದಾಯಿಸಿಕೊಂಡರೆ, ಇದು ರೈತರ ಜೀವನಕ್ಕೆ ಭದ್ರತೆ ಒದಗಿಸುವುದು ಖಂಡಿತ. ಈ ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ ₹6,000 ಆರ್ಥಿಕ ನೆರವು ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ. ಇದರೊಂದಿಗೆ, ವೃದ್ಧಾಪ್ಯ ಭದ್ರತೆಗಾಗಿ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯನ್ನು ಸಹ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದು 60 ವರ್ಷದ ನಂತರ ಮಾಸಿಕವಾಗಿ ಸ್ಥಿರ ಆದಾಯ ರೈತರಿಗೆ ನೀಡುವಂತೆ ಮಾಡುವ ಪಿಂಚಣಿ ಯೋಜನೆಯಾಗಿದೆ.
ಮಾನ್‌ಧನ್ ಯೋಜನೆಯ ಪ್ರಯೋಜನಗಳು:
ಮಾನ್ ಧನ್ ಯೋಜನೆ ಅಡಿಯಲ್ಲಿ 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು ₹3,000 ಪಿಂಚಣಿ ಸಿಗುತ್ತದೆ. ಇದು ವಾರ್ಷಿಕವಾಗಿ ₹36,000 ಆಗಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. 18 ರಿಂದ 40 ವರ್ಷದ ಸಣ್ಣ ಮತ್ತು ಅತಿಸಣ್ಣ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ವಯಸ್ಸಿಗೆ ಅನುಗುಣವಾಗಿ, ಮಾಸಿಕ ₹55 ರಿಂದ ಗರಿಷ್ಠ ₹200 ಪ್ರೀಮಿಯಂ ಪಾವತಿಸಬೇಕು.
ಮಾಸಿಕ ಪ್ರೀಮಿಯಂ ಪಾವತಿಯ ಹೊರೆ ಕಡಿಮೆ ಮಾಡಲು, ರೈತರಿಗೆ ಸರ್ಕಾರ ಬೆಸ್ಟ್ ಆಯ್ಕೆಯನ್ನು ಸಹ ನೀಡಿದೆ. ಪಿಎಂ ಕಿಸಾನ್ ಯೋಜನೆಯಡಿ ಬರುವ ಆರ್ಥಿಕ ನೆರವಿನಿಂದಲೇ ಮಾನ್ ಧನ್ ಪ್ರೀಮಿಯಂ ಸ್ವಯಂಚಾಲಿತವಾಗಿ ಕಡಿತವಾಗುವಂತೆ ಆಯ್ಕೆ ಮಾಡಬಹುದು. ಇದು ರೈತರಿಗೆ ಹೆಚ್ಚುವರಿ ಹಣದ ಹೊರೆ ತಪ್ಪಿಸಿ, ಯೋಜನೆಯನ್ನು ನಿರಂತರವಾಗಿ ಮುನ್ನಡೆಸಲು ಸಹಾಯ ಮಾಡುತ್ತದೆ.
ಕೇಂದ್ರ ಸರ್ಕಾರದಿಂದಲೂ ಕೊಡುಗೆ
ಈ ಯೋಜನೆಯಲ್ಲಿ, ರೈತರು ಪಾವತಿಸುವಷ್ಟೇ ಪ್ರೀಮಿಯಂ ಮೊತ್ತವನ್ನು ಕೇಂದ್ರ ಸರ್ಕಾರ ಕೂಡ ಪಿಂಚಣಿ ನಿಧಿಗೆ ಜಮಾ ಮಾಡುತ್ತದೆ. ಉದಾಹರಣೆಗೆ, ಒಬ್ಬ ರೈತ ₹100 ಕೊಟ್ಟರೆ, ಕೇಂದ್ರದಿಂದ 100 ರೂ. ಸೇರಿಸಲಾಗುತ್ತದೆ. ಇದು ಪಿಂಚಣಿ ನಿಧಿಯ ಬೆಳವಣಿಗೆಗೂ ಸಹಕಾರಿಯಾಗಲಿದೆ. ದೇಶಾದ್ಯಂತ ಇರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳೊಂದಿಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಯೋಜನೆಯು ಫಲಾನುಭವಿಗಳ ಕುಟುಂಬದ ಭದ್ರತೆಗೂ ನೆರವಾಗುತ್ತದೆ. ಪಿಂಚಣಿ ಪಡೆಯುತ್ತಿರುವಾಗ ರೈತರು ಅಕಾಲಿಕ ಮರಣ ಹೊಂದಿದರೆ, ಅವರ ಸಂಗಾತಿಗೆ (ಪತಿ/ಪತ್ನಿ) 50% ಪಿಂಚಣಿ, ಅಂದರೆ ಪ್ರತಿ ತಿಂಗಳು ₹1,500, ಕುಟುಂಬ ಪಿಂಚಣಿಯಾಗಿ ಸಿಗುತ್ತದೆ. ಯೋಜನೆ ಅವಧಿಯ ಮಧ್ಯದಲ್ಲಿ ರೈತರು ನಿಧನರಾದರೆ, ಅಲ್ಲಿಯವರೆಗೆ ಪಾವತಿಸಿದ ಮೊತ್ತವನ್ನು ಬಡ್ಡಿಯೊಂದಿಗೆ ನಾಮಿನಿದಾರರಿಗೆ ನೀಡುವಂತೆ ಮಾಡಲಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
- ವಯಸ್ದು 18 ರಿದ 40 ವರ್ಷ ನಡುವೆ ಇರಬೇಕು.
- ಚಿಕ್ಕ ಅಥವಾ ಅತಿ ಚಿಕ್ಕ ರೈತ ಆಗಿರಬೇಕು
- ಒಡೆತನದ ಭೂಮಿ 2 ಹೆಕ್ಟೇರ್‌ಗಿಂತ ಕಡಿಮೆ ಇರಬೇಕು
- ಕುಟುಂಬದ ಯಾವುದೇ ಸದಸ್ಯರು ಎಪಿಎಸ್, ಇಪಿಎಸ್, ಎನ್‌ಪಿಎಸ್ ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಪೆನ್ಷನ್ ಸೌಲಭ್ಯ ಪಡೆಯುತ್ತಿರಬಾರದು.
- ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಆಗಿರಬೇಕು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications