ಭಾರತದ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಆರ್‌ಬಿಐ (RBI) ಕೈಗೊಂಡ ನೀತಿ ಬಹಳ ಮಹತ್ವಪೂರ್ಣದ್ದಾಗಿದೆ. ಅಲ್ಲದೇ ಈ ನೀತಿಯಿಂದ ಹಲವು ಬ್ಯಾಂಕ್‌ಗಳಿಗೆ ಅನುಕೂಲವಾಗಲಿದ್ದು, ಇದೀಗ ಆರ್‌ಬಿಐ ರೆಪೋ ದರ ಕಡಿತದ (Repo Rate Cut) ನಿರ್ಧಾರದ ಬೆನ್ನಲ್ಲೇ, ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕು ಎಂದು ಗುರುತಿಸಿಕೊಂಡಿರುವ ಬ್ಯಾಂಕ್ ಆಫ್ ಬರೋಡಾ (Bank Of Baroda) ಕೂಡಾ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

ಹೌದು, ಆರ್‌ಬಿಐ ರೆಪೊ ದರ ಕಡಿತದ ಬೆನ್ನಲ್ಲೇ ಬ್ಯಾಂಕ್ ಆಫ್ ಬರೋಡಾ ಕೂಡಾ ತನ್ನ ಅವಧಿ ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಬ್ಯಾಂಕ್ ಆಫ್ ಬರೋಡಾದಿಂದ ಮಹತ್ವದ ನಿರ್ಧಾರ!
ಆರ್‌ಬಿಐನ ಇತ್ತೀಚಿನ ನೀತಿ ರೆಪೊ ದರ ನಿರ್ಧಾರದಿಂದಾಗಿ, ಬ್ಯಾಂಕ್ ಆಫ್ ಬರೋಡಾ, ತನ್ನ ಅವಧಿ ಸಾಲಗಳ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಆದ್ದರಿಂದ ಈ ಬಡ್ಡಿದರಗಳು ಡಿಸೆಂಬರ್ 6, 2025 ರಿಂದ ಜಾರಿಗೆ ಬರಲಿವೆ. ಈ ಕಡಿತವು ಗೃಹ ಸಾಲಗಳು, ವೈಯಕ್ತಿಕ ಸಾಲಗಳು ಮತ್ತು ವಾಹನ ಸಾಲಗಳು ಸೇರಿದಂತೆ ವಿವಿಧ ಸಾಲಗಳ ಇಎಂಐಗಳನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಬ್ಯಾಂಕ್ ನಿಯಂತ್ರಕ ಸಲ್ಲಿಕೆಯ ಪ್ರಕಾರ, ಬ್ಯಾಂಕ್ ತನ್ನ ಬರೋಡಾ ರೆಪೊ ಆಧಾರಿತ ಸಾಲದ ದರವನ್ನು (BRLLR) 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಈ ಬದಲಾವಣೆಯೊಂದಿಗೆ BRLLR ದರವು 8.15% ರಿಂದ 7.90% ಕ್ಕೆ ಇಳಿಯಲಿದೆ ಎಂದು ಹೇಳಲಾಗಿದೆ. ಇದು ಸೆಂಟ್ರಲ್ ಬ್ಯಾಂಕ್ ರೆಪೊ ದರವನ್ನು 5.50% ರಿಂದ 5.25% ಕ್ಕೆ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದ ನಿರ್ಧಾರಕ್ಕೆ ಅನುಗುಣವಾಗಿದೆ. ಆದರೆ, ಮಾರ್ಕ್-ಅಪ್ ದರ 2.65% ನಲ್ಲಿ ಸ್ಥಿರವಾಗಿದೆ.
ಗೃಹಸಾಲದ ಬಡ್ಡಿದರ:
ಬ್ಯಾಂಕ್ ಆಫ್ ಬರೋಡಾದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಸಿಬ್ಬಂದಿಯೇತರ ಸದಸ್ಯರಿಗೆ ನೀಡುವ ವೇರಿಯೇಬಲ್ ಗೃಹ ಸಾಲಗಳ ಬಡ್ಡಿದರಗಳು ವೇತನದಾರರಿಗೆ ಮತ್ತು ವೇತನರಹಿತರಿಗೆ 7.20% ರಿಂದ 8.95% ರಷ್ಟಿದೆ. ಈ ದರಗಳು ಸಾಲದ ಮಿತಿ ಹಾಗೂ ಅರ್ಜಿದಾರರು ಹೊಂದಿರುವ ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತವೆ.
ಅದೇ ರೀತಿ, ಸ್ಥಿರ ದರದಲ್ಲಿ ಸಿಬ್ಬಂದಿಯೇತರ ಸದಸ್ಯರಿಗೆ ನೀಡುವ ಗೃಹ ಸಾಲಗಳು ವೇತನದಾರರಿಗೆ 8.90% ರಿಂದ 9.95% ರಷ್ಟಿದ್ದರೆ, ವೇತನರಹಿತರಿಗೆ 9% ರಿಂದ 9.95% ರಷ್ಟಿದೆ. ಈ ಗೃಹ ಸಾಲಗಳಿಗೆ ವಿವಿಧ ಸಂಸ್ಕರಣಾ ಶುಲ್ಕಗಳು ಅನ್ವಯಿಸುತ್ತವೆ. ಉದಾಹರಣೆಗೆ, ₹50 ಲಕ್ಷದವರೆಗಿನ ಸಾಲಕ್ಕೆ ಕನಿಷ್ಠ ₹8,500 ರಿಂದ ಗರಿಷ್ಠ ₹15,000 ವರೆಗೆ ಶುಲ್ಕ ವಿಧಿಸಲಾಗುತ್ತದೆ. ₹50 ಲಕ್ಷಕ್ಕಿಂತ ಹೆಚ್ಚಿನ ಸಾಲಗಳಿಗೆ ಕನಿಷ್ಠ ₹8,500 ರಿಂದ ಗರಿಷ್ಠ ₹25,000 ವರೆಗೆ ಶುಲ್ಕ ಅನ್ವಯಿಸುತ್ತದೆ.
ಆರ್‌ಬಿಐನ ನಿರ್ಧಾರ!
ಡಿಸೆಂಬರ್ 5, 2025 ರಂದು ನಡೆದ ಸಭೆಯಲ್ಲಿ, ಆರ್‌ಬಿಐನ ಹಣಕಾಸು ನೀತಿ ಸಮಿತಿ (MPC) ಸರ್ವಾನುಮತದಿಂದ ಲಿಕ್ವಿಡಿಟಿ ಅಡ್ಜಸ್ಟ್‌ಮೆಂಟ್ ಫೆಸಿಲಿಟಿ (LAF) ಅಡಿಯಲ್ಲಿ ಪಾಲಿಸಿ ರೆಪೊ ದರವನ್ನು 5.25% ಕ್ಕೆ ಇಳಿಸಲು ನಿರ್ಧರಿಸಿತು. ಈ ನಿರ್ಧಾರವು ಹಣಕಾಸು ಮಾರುಕಟ್ಟೆಯಲ್ಲಿ ಭಾರೀ ಪರಿಣಾಮ ಬೀರಿತು.


Click it and Unblock the Notifications