ವೈಯಕ್ತಿಕ ಸಾಲಗಳಿಗಾಗಿ ನಮಗೆ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯವಾಗುತ್ತದೆ. ಕ್ರೆಡಿಟ್ ಸ್ಕೋರ್‌ಗಳನ್ನ ಪರಿಗಣಿಸಿ ಸಾಲದಾತರು ನಮಗೆ ಉತ್ತಮ ಬಡ್ಡಿಗಳನ್ನ ನೀಡುತ್ತಾರೆ. ಬ್ಯಾಂಕ್‌ಗಳು ಅಥವಾ ಸಾಲದಾತರು ಮೊದಲು ನಮ್ಮ ಕ್ರೆಡಿಟ್ ಸ್ಕೋರ್‌ಗಳನ್ನ ಪರಿಗಣಿಸುತ್ತಾರೆ.
ಮೊದಲನೆಯದಾಗಿ ನಮ್ಮ ಕ್ರೆಡಿಟ್ ಸ್ಕೋರ್‌ಗಳು ನಾವು ಸಾಲಗಳನ್ನ ಪಡೆಯಲು ಅರ್ಹರಾ ಅಥವಾ ಇಲ್ಲವಾ ಎಂಬುದನ್ನು ನಿರ್ಧಾರ ಮಾಡುತ್ತವೆ. ಕನಿಷ್ಠ ನಮ್ಮ ಕ್ರೆಡಿಟ್ ಸ್ಕೋರ್‌ಗಳು 750 ಇರಲೇಬೇಕಾಗುತ್ತದೆ. ಅದಕ್ಕಿಂತ ಕಡಿಮೆ ಅಂದರೆ 600 ಹೊಂದಿದ್ದರೂ ಕೂಡ ಇದು ನಿಮ್ಮ ಸಾಲದ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್‌ಗಳನ್ನ ಹೊಂದಲು ಇಲ್ಲಿದೆ ಸಲಹೆಗಳು.

ನಿಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ತಿಳಿಯಿರಿ
ನೀವು ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂಬುದನ್ನು ತಿಳಿಯಿರಿ. ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ಅರಿತರೆ ನೀವು ನಿಮ್ಮ ಆರ್ಥಿಕ ಸ್ಥಿತಿಯನ್ನ ಕೂಡ ತಿಳಿಯಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಬಹುದು.
ಹಲವು ಸಾಲದಾತರನ್ನ ಸಂಪರ್ಕಿಸಿ
ನಿಮ್ಮ ಕ್ರೆಡಿಟ್ ಸ್ಕೋರ್ ಸ್ಥಿತಿ ಬಗ್ಗೆ ತಿಳಿಯಿರಿ ನಂತರ ಹಲವು ಸಾಲದಾರನ್ನ ಸಂಪರ್ಕಿಸಿ. ನಿಮ್ಮ ಕ್ರೆಡಿಟ್ ಇತಿಹಾಸವನ್ನ ಪರಿಶೀಲಿಸಿ. ನೀವು ದೊಡ್ಡ ಸಾಲತಾರನ್ನ ಸಂಪರ್ಕಿಸಿದಾಗ ಅವರು ನಿಮ್ಮ ಕಡಿಮೆ ಕ್ರೆಡಿಟ್ ಸ್ಕೋರ್‌ನಿಂದಾಗಿ ಅತೀ ಹೆಚ್ಚು ಬಡ್ಡಿದರಗಳನ್ನ ವಿಧಿಸಬಹುದು.
ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಾಗ ನೀವು ವೈಯಕ್ತಿಕ ಸಾಲಗಳ ಮೊರಡ ಹೋಗುವುದು ಉತ್ತಮ. ಏಕೆಂದರೆ ನೀವು ಕೆಟ್ಟ ಕ್ರೆಡಿಟ್ ಸ್ಕೋರ್ ಹೊಂದಿದ್ದರೂ ಕೂಡ ಕೆಲವೊಮ್ಮೆ ನೀವು ವೈಯಕ್ತಿಕ ಸಾಲಗಳನ್ನ ಪಡೆಯುತ್ತೀರಿ.
ಸಹ-ಅರ್ಜಿದಾರ
ನೀವು ಸಹ ಅರ್ಜಿದಾರನನ್ನ ಹೊಂದುವ ಮೂಲಕ ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೂ ಕೂಡ ನೀವು ಸಾಲವನ್ನ ಪಡೆಯುತ್ತೀರಿ. ನಿಮ್ಮ ಸಹ ಅರ್ಜಿದಾರರು ನಿಮ್ಮ ಸಾಲದ ಜವಬ್ದಾರಿಯನ್ನ ತೆಗೆದುಕೊಂಡಾಗ ನೀವು ಉತ್ತಮ ಸಾಲ ಪಡೆಯಲು ಸಹಾಯವಾಗುತ್ತದೆ.
ಕ್ರೆಡಿಟ್ ಸ್ಕೋರ್ ಸುಧಾರಿಸಿ
ಕ್ರೆಡಿಟ್ ಸ್ಕೋರ್ ಹೆಚ್ಚಿಸುವ ಮೂಲಕ ನೀವು ನಿಮ್ಮ ಸಾಲಗಳಿಗೆ ಉತ್ತಮ ಬಡ್ಡಿದರಗಳನ್ನ ಪಡೆಯುತ್ತೀರಿ. ಕ್ರೆಡಿಟ್ ಸ್ಕೋರ್‌ಗಳನ್ನ ಹೆಚ್ಚಿಸುವುದು ಹೇಗೆ ಇಲ್ಲಿ ತಿಳಿಯಿರಿ.
ಸಮಯಕ್ಕೆ ಬಿಲ್‌ಗಳನ್ನ ಪಾವತಿಸಿ: ಸಾಲಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಉಪಯುಕ್ತತೆಗಳಿಗೆ ಸಮಯೋಚಿತ ಪಾವತಿಗಳು ಅತ್ಯಗತ್ಯ. ತಡವಾದ ಪಾವತಿಗಳು ನಿಮ್ಮ ಕ್ರೆಡಿಟ್ ಸ್ಕೋರ್‌ಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಕ್ರೆಡಿಟ್ ಬಳಕೆಯನ್ನು ಕಡಿಮೆ ಮಾಡಿ : ಜವಾಬ್ದಾರಿಯುತ ಕ್ರೆಡಿಟ್ ನಿರ್ವಹಣೆಯನ್ನು ತೋರಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು 30% ಮಿತಿಗಿಂತ ಕಡಿಮೆ ಇರಿಸಿ.
ಕ್ರೆಡಿಟ್ ವರದಿಯನ್ನು ಪರಿಶೀಲಿಸಿ : ದೋಷಗಳು ಅಥವಾ ವಂಚನೆಗಾಗಿ ನಿಮ್ಮ ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸಿ. ಸರಿಯಾದ ಕ್ರೆಡಿಟ್ ಸ್ಕೋರ್ ಅನ್ನು ಖಚಿತಪಡಿಸಿಕೊಳ್ಳಲು ಯಾವುದೇ ತಪ್ಪುಗಳನ್ನು ವಿವಾದಿಸಿ.
ಕ್ರೆಡಿಟ್ ಪ್ರಕಾರಗಳನ್ನು ವೈವಿಧ್ಯಗೊಳಿಸಿ : ಕ್ರೆಡಿಟ್ (ಕ್ರೆಡಿಟ್ ಕಾರ್ಡ್‌ಗಳು, ಸಾಲಗಳು, ಇತ್ಯಾದಿ) ಮಿಶ್ರಣವನ್ನು ನೀವು ಜವಾಬ್ದಾರಿಯುತವಾಗಿ ನಿರ್ವಹಿಸುವುದರಿಂದ ಇದು ನಿಮ್ಮ ಸ್ಕೋರ್‌ಗಳ ಮೇಲೆ ಪರಿಣಾಮ ಬೀರುತ್ತದೆ.
ಅಲ್ಪಾವಧಿ ಸಾಲಗಳನ್ನ ಪಡೆಯಿರಿ
ಸಹಜವಾಗಿ ಅಲ್ಪಾವಧಿಯ ಸಾಲಗಳ ಅಡಿಯಲ್ಲಿ ಸಣ್ಣ ಮೊತ್ತದ ಹಣವನ್ನ ನಾವು ತೆಗೆದುಕೊಳ್ಳಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರದಿದ್ದಾಗ ನೀವು ಅಲ್ಪಾವಧಿ ಸಾಲಗಳ ಮೊರೆ ಹೋಗುವುದು ಉತ್ತಮ. ಅಲ್ಪಾವಧಿಯ ಸಾಲಗಳು ಕಡಿಮೆ ಅಪಾಯವನ್ನ ಹೊಂದಿರುವುದರಿಂದ ನೀವು ಇಂತಹ ಸಾಲಗಳ ಮೊರೆ ಹೋಗಬಹುದು.
ಒಟ್ಟಿನಲ್ಲಿ ನೀವು ಕೆಲವೊಮ್ಮೆ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೂ ಕೂಡ ನೀವು ವೈಯಕ್ತಿಕ ಸಾಲಗಳಿಗೆ ಅರ್ಹರಾಗಿರುತ್ತೀರಿ. ಇನ್ನು ಕಡಿಮೆ ಕ್ರೆಡಿಟ್ ಸ್ಕೋರ್‌ಗಳನ್ನ ಹೊಂದಿ ಸಾಲವನ್ನ ಪಡೆಯುವುದರಿಂದ ನಮ್ಮ ಸಾಲದ ಬಡ್ಡಿದರಗಳು ಹೆಚ್ಚಾಗಬಹುದು. ಹೀಗಾಗಿ ಸಾಲವನ್ನ ಪಡೆಯುವ ಮೊದಲು ಒಮ್ಮೆ ನಿಮ್ಮ ಕ್ರೆಡಿಟ್ ಇತಿಹಾಸ ಜೊತೆಗೆ ನಿಮ್ಮ ಕ್ರೆಡಿಟ್ ಸ್ಕೋರ್ ತಿಳಿಯುವುದು ಉತ್ತಮ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications