ನೀವು ನಿಮ್ಮ ಆಧಾರ್‌ ಕಾರ್ಡ್ ಫೋಟೋ ಅಪ್‌ಡೇಟ್‌ ಮಾಡಿದ್ದೀರಾ? ಮಾಡಿಲ್ಲಾ ಅಂದ್ರೆ ಸಮಸ್ಯೆ ಏನು?

ಆಧಾರ್ ಕಾರ್ಡ್ ಭಾರತೀಯ ನಿವಾಸಿಗಳಿಗೆ ಸಾರ್ವತ್ರಿಕ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ನಾವು ಎಲ್ಲೇ ಹೋದರು ಕೂಡ ನಮಗೆ ಅಗತ್ಯವಿರುವ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ಒಂದು. ನಮ್ಮ ಶಿಕ್ಷಣ, ಉದ್ಯೋಗ, ಸರ್ಕಾರಿ ಅಥವಾ ಕಾಸಗಿ ಅಥವಾ ವೈಯಕ್ತಿಕ ಕೆಲಸಗಳಿಗೆ ಆಧಾರ್ ಕಾರ್ಡ್ ಬೇಕಾಗುತ್ತದೆ.

ಆಧಾರ್‌ ಕಾರ್ಡ್‌ನಲ್ಲಿ ಯಾವುದೇ ಲೋಪ ದೋಶಗಳಾದ್ರೂ ಕೂಡ ನಾವು ಸಂಬಮಧ ಪಟ್ಟ ಕಚೇರಿಗೆ ಹೋಗಿ ನಾವು ನಮ್ಮ ಆಧಾರ್‌ ಕಾರ್ಡ್‌ಗಳನ್ನ ಅಪ್‌ಡೇಟ್‌ ಮಾಡಿಕೊಳ್ಳುತ್ತೇವೆ. ಅದಕ್ಕಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಗಡುವನ್ನ ನೀಡುತ್ತದೆ. ಆದ್ರೆ ಆಧಾರ್‌ ಕಾಡ್‌ನಲ್ಲಿರುವ ಭಾವಚಿತ್ರದ ಅಪ್‌ಡೇಟ್‌ಗಾಗಿ ಯಾವುದೇ ಗಡುವನ್ನು ಅದು ನೀಡುವುದಿಲ್ಲ ಆದ್ರೂ ಕೂಡ ನಮ್ಮ ಫೋಟೋವನ್ನ ನಾವು ಅಪ್‌ಡೇಟ್‌ ಮಾಡಬೇಕಾಗುತ್ತದೆ. ಇದರಿಂದ ನಾವು ಮುಂಬರುವ ಸಮಸ್ಯೆಗಳಿಂದ ದೂರ ಉಳಿಯಬಹುದು.

ಆಧಾರ್‌ ಕಾರ್ಡ್ ಫೋಟೋ ಅಪ್‌ಡೇಟ್‌ ಮಾಡದಿದ್ರೆ ಸಮಸ್ಯೆ! ಎಚ್ಚರ!

ಆಧಾರ್‌ ಕಾರ್ಡ್ ಫೋಟೋ ಅಪ್‌ಡೇಟ್‌ ಮಾಡದಿದ್ರೆ ಸಮಸ್ಯೆ ಏನು?

ಆಧಾರ್‌ ಕಾರ್ಡ್ ಫೋಟೋ ಅಪ್‌ಡೇಟ್‌ ಮಾಡಿ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಯಾವುದೇ ದಿನಾಂಕವನ್ನ ನೀಡುವುದಿಲ್ಲ. ಅಲ್ಲದೆ ಹೆಚ್ಚಿನ ಜನರು ಈ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಅಲ್ಲದೆ ನಾವು ನಮ್ಮ ಆಧಾರ್‌ ಕಾರ್ಡ್ನಲ್ಲಿರುವ ವಿವರಗಳನ್ನ ಅಪ್‌ಡೇಟ್‌ ಮಾಡಿದಂತೆ ನಮ್ಮ ಫೋಟೋವನ್ನ ಕೂಡ ಅಪ್‌ಡೇಟ್‌ ಮಾಡಬೇಕು. ಹೌದು ಯೂನಿಕ್‌ ಐಡೆಮಟಿಫಿಕೇಶನ್‌ ಅಥಾರಿಟಿ ಆಫ್‌ ಇಂಡಿಯಾ (UIDAI) ಪ್ರತಿ 10 ವರ್ಷಗಳಿಗೆ ಒಮದು ಬಾರಿ ಆಧಾರ್‌ ಕಾರ್ಡ್‌ ಫೋಟೋವನ್ನ ನವೀಕರಿಸಲು ಸೂಚನೆಯನ್ನ ನೀಡುತ್ತದೆ. ಹೀಗಾಗಿ ನೀವು ನಿಮ್ಮ ಆಧಾರ್‌ ಕಾರ್ಡ್ ಫೋಟಟೋವನ್ನ 10 ವರ್ಷಗಳಿಗೊಮ್ಮೆಯಾದ್ರೂ ಅಪ್‌ಡೇಟ್‌ ಮಾಡಬೇಕು.

ಮಕ್ಕಳ ಆಧಾರ್‌ ಕಾರ್ಡ್ಗಳನ್ನ ಕೂಡ ಅಪ್‌ಡೇಟ್‌ ಮಾಡಿಸಬೇಕು. ಮಕ್ಕಳ ಆಧಾರ್‌ ಕಾಡ್‌ಗಳನ್ನ ಮಕ್ಕಳು 5 ವರ್ಷ ಇದ್ದಾಗ ನಾವು ಮಾಡಿಸಿದ್ದರೆ, ನಂತರ ಮಕ್ಕಳಿಗೆ 15 ವರ್ಷ ಆದಮೇಲೆ ಮತ್ತೆ ಆಧಾರ್‌ ಕಾರ್ಡ್ ಪೋಟೋ ಅಪ್‌ಡೇಟ್‌ ಮಾಬೇಕು. ವರ್ಷ ವಯಸ್ಸಿನ ಜೊತೆಜೊತೆಗೆ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಿಸುವುದು ಕಡ್ಡಾಯವಿರುತ್ತದೆ. ಅಲ್ಲದೆ ನೀವು ನಿಮ್ಮ ಫೋಟೋಗಳನ್ನ ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಕೂಡ ಬದಲಿಸಬಹುದು.

ಫೋಟೋಗಳನ್ನ ಅಪ್‌ಡೇಟ್‌ ಮಾಡಿಸದೇ ಹೋದರೆ ನೀವು ಬೇರೆಡೆ ಹೋದಾಗ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ನಿಮ್ಮ 15 ವರ್ಷದ ಫೋಟೋ ಇದ್ದು ಈಗ ನಿಮಗೆ 25 ವರ್ಷ ಆಗಿದ್ದರೆ, ನಿಮ್ಮ ಫೋಟೋ ಮತ್ತು ನಿಮ್ಮ ಪ್ರಸ್ತುತ ಬಾವಚಿತ್ರಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇದರಿಂದಾಗಿ ಕೆಲವು ಸಾರ್ಕಾರಿ ಅಥವಾ ಸರ್ಕಾರಿಯೇತರ ನಿಮ್ಮ ಕೆಲಸಗಳು ವಿಳಂಬವಾಗಬಹುದು. ಹೀಗಾಗಿ ನೀವು ನಿಮ್ಮ ಫೋಟೋವನ್ನ ಅಪ್‌ಡೇಟ್‌ ಮಾಡದಿದ್ರೆ ಈ ಕೂಡಲೇ ಅಪ್‌ಡೇಟ್‌ ಮಾಡಿ.

ಆಧಾರ್‌ ಕಾರ್ಡ್‌ ಫೋಟೋ ಅಪ್‌ಡೇಟ್‌ ಮಾಡುವುದು ಹೇಗೆ?

-ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ, ಆಧಾರ್ ಕಾರ್ಡ್ ಫೋಟೋ ಅಪ್‌ಡೇಟ್‌ ಮಾಡಿಸಬಹುದು.

-ನೀವು ನಿಮ್ಮ ಗುರುತಿನ ಪುರಾವೆಗಳನ್ನ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ಹಾಗೆ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿವರಗಳು ಸರಿ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

- ನಂತರ ಆಧಾರ್ ಅಪ್‌ಡೇಟ್ ಫಾರ್ಮ್ ಅನ್ನು ಭರ್ತಿ ಮಾಡಿ . ಅಗತ್ಯವಿದ್ದರೆ ವಿಳಾಸ, ಹೆಸರು ಅಥವಾ ಮೊಬೈಲ್ ಸಂಖ್ಯೆಯಂತಹ ಯಾವುದೇ ಇತರ ವಿವರಗಳನ್ನ ಒದಗಿಸಿ.

-ದಾಖಲಾತಿ ಆಪರೇಟರ್‌ನಿಂದ ಬಯೋಮೆಟ್ರಿಕ್ ಅಪ್‌ಡೇಟ್ (ಫೋಟೋ, ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್) ತೆಗೆದುಕೊಳ್ಳಲಾಗುತ್ತದೆ.

-ಆಧಾರ್‌ನಲ್ಲಿ ನಿಮ್ಮ ಫೋಟೋವನ್ನು ನವೀಕರಿಸುವ ಸಾಮಾನ್ಯವಾಗಿ 50 ರೂಪಾಯಿ ವೆಚ್ಚ ಇರುತ್ತದೆ.

-ಫಾರ್ಮ್ ಅನ್ನು ಸಲ್ಲಿಸಿದ ನಂತರ ಮತ್ತು ಪಾವತಿಯನ್ನು ಮಾಡಿದ ನಂತರ, ನೀವು ಅಪ್‌ಡೇಟ್ ವಿನಂತಿ ಸಂಖ್ಯೆ (URN) ನೊಂದಿಗೆ ಸ್ವೀಕೃತಿ ಸ್ಲಿಪ್ ಅನ್ನು ಸ್ವೀಕರಿಸುತ್ತೀರಿ . ನಿಮ್ಮ ನವೀಕರಣ ವಿನಂತಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೀವು ಈ ಸಂಖ್ಯೆಯನ್ನು ಬಳಸಬಹುದು.

ಆನ್‌ಲೈನ್‌ನಲ್ಲಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡುವುದು ಹೇಗೆ?

-ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ myaadhar.udai.gov.in ಅಥವಾ https ://uidai .gov .in ಲಿಂಕ್‌ ಬಳಸಿಕೊಂಡು ನಿಮ್ಮ ಆಧಾರ್‌ ಅಪ್‌ಡೇಟ್‌ ಮಾಡಬಹುದು.

- ಮೊದಲು ನಿಮ್ಮ ಆಧಾರ್‌ ಕರ್ಡ್‌ ಸಂಖ್ಯೆ ಹಾಕಿ ನಂತರ ನಿಮ್ಮ ಮೊಬೈಲ್‌ಗೆ ಬದಂತ OTPಯನ್ನ ಹಾಕಿ ಲಾಗ್‌ ಇನ್‌ ಮಾಡಬೇಕು.

- ನಂತರ ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆ ಮಾಡಬೇಕು. ಅಂದರೆ ವಿಳಾಸ, ಮೊಬೈಲ್ ಸಂಖ್ಯೆ, ಹೆಸರು ಹೀಗೆ ನೀವು ನವೀಕರಿಸಲು ಇಚ್ಛಿಸುವ ವಿವರಗಳನ್ನ ಆಯ್ಕೆ ಮಾಡಬಹುದು.

- ಒಮ್ಮೆ ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆ ಮಾಡಿದ ನಂತರ, ನೀವು ಸರಿಯಾದ ಮಾಹಿತಿಯನ್ನು ನಮೂದಿಸಬೇಕು. ಹಾಗೆ ಪರಿಶೀಲನೆಗಾಗಿ ಕೆಲ ದಾಖಲೆಳನ್ನ ಅಪ್‌ಲೋಡ್‌ ಮಾಡಬೇಕಾಗುತ್ತದೆ

- ಅಂತಿಮವಾಗಿ ನಿಮ್ಮ ದಾಖಲೆಗಳು ಸರಿಯಾಗಿ ಇದೆಯಾ ಎಂದು ಖಚಿತಪಿಸಿಕೊಳ್ಳಿ, ನಂತರ ಸಬ್‌ಮಿಟ್‌ ಮೇಲೆ ಕ್ಲಿಕ್‌ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+