ದೇಶದೆಲ್ಲೆಡೆ ಇಂದು (ನ.14) ಮಕ್ಕಳ ದಿನಾಚರಣೆಯನ್ನು (Children's Day) ಭಾರೀ ಮಹತ್ವದೊಂದಿಗೆ ಆಚರಿಸಲಾಗುತ್ತದೆ. ಜವಾಹರಲಾಲ್ ನೆಹರೂ (Jawaharlal Nehru) ಅವರ ಜನ್ಮದಿನವನ್ನು ಗುರುತಿಸುವ ನಿಟ್ಟಿನಲ್ಲಿ ಭಾರತದಲ್ಲಿ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಆಚರಿಸುವಂತೆ ಜಾರಿಗೆ ತರಲಾಯಿತು. ಇನ್ನು ಮಕ್ಕಳಿಗೆ ಶಿಕ್ಷಣ (Education) ನೀಡುವುದು ಮಾತ್ರವಲ್ಲ, ಅವರ ಸುಭದ್ರ ಭವಿಷ್ಯಕ್ಕಾಗಿ ಹೂಡಿಕೆಗಳು ಕೂಡಾ ಮುಖ್ಯವಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು, ಅವರ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಪಾಲಕರಾದವರ ದೊಡ್ಡ ಕರ್ತವ್ಯ.

ಇನ್ನು ಮಕ್ಕಳ ಶಿಕ್ಷಣಕ್ಕಾಗಿ, ಭವಿಷ್ಯದ ದೃಷ್ಟಿಯಿಂದ ಹುಟ್ಟಿದಾಗಿನಿಂದಲೇ ಹೂಡಿಕೆ ಮಾಡಲು ಶುರು ಮಾಡಿದ್ರೆ ಬಹಳ ಆರ್ಥಿಕ ಲಾಭವನ್ನು ಪಡೆಯಬಹುದು. ಆದ್ದರಿಂದ ಮಕ್ಕಳಿಗಾಗಿ ಇರುವ ಬೆಸ್ಟ್ ಹೂಡಿಕೆ ಯೋಜನೆಗಳ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC): NSC ಒಂದು ಸ್ಥಿರ ಆದಾಯ ನೀುವ ಯೋಜನೆಯೆಂದು ಗುರುತಿಸಿಕೊಂಡಿದೆ. ಇದನ್ನು ಯಾವುದೇ ಅಂಚೆ ಕಚೇರಿಗಳಲ್ಲೂ ಸುಲಭವಾಗಿ ತೆರೆಯಬಹುದಾಗಿದೆ. ಇನ್ನು ಈ ಯೋಜನೆಯಿಂದಾಗಿ ಆದಾಯ ತೆರಿಗೆಯಲ್ಲೂ ವಿನಾಯಿತಿ ಪಡೆಯಬಹುದಾಗಿದೆ. ಭಾರತ ಸರ್ಕಾರದ ಅಧೀನದಲ್ಲಿರುವ ಈ ಯೋಜನೆ ಹೂಡಿಕೆಗೆ ಸೂಕ್ತವಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ (SSY): ಸಣ್ಣ ಮೊತ್ತವನ್ನು ಹೂಡಿಕೆ ಮಾಡುವವರಿಗೆ ಈ ಉಳಿತಾಯ ಯೋಜನೆ ಸೂಕ್ತವಾಗಿದೆ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆ ಸರ್ಕಾರ ಬೆಂಬಲಿತ ಯೋಜನೆಯಾಗಿದ್ದು, ಕೇವಲ ಹುಡುಗಿಯರಿಗೆ ಮಾತ್ರ ಅನ್ವಯವಾಗುತ್ತದೆ. ಇದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015 ರಲ್ಲಿ ಪ್ರಾರಂಭಿಸಿದರು. 'ಬೇಟಿ ಬಚಾವೋ ಬೇಟಿ ಪಢಾವೋ' ಕಾರ್ಯಕ್ರಮದ ಭಾಗವಾಗಿ ಬಂದಿರುವ ಈ ಯೋಜನೆ ಹೆಣ್ಣುಮಕ್ಕಳ ಶಿಕ್ಷಣದಿಂದ ಮದುವೆವರೆಗಿನ ಖರ್ಚು-ವೆಚ್ಚಗಳಿಗೆ ಪ್ರಯೋಜನವಾಗಲಿದೆ.
ಸಾರ್ವಜನಿಕ ಭವಿಷ್ಯ ನಿಧಿ (PPF): ಪೋಷಕರ ಹೆಸರಿನಲ್ಲಿ ಈಗಾಗಲೇ PPF ಖಾತೆ ಇದ್ದರೆ, ಮಕ್ಕಳ ಹೆಸರಿನಲ್ಲಿ ಮತ್ತೊಂದು ಖಾತೆಯನ್ನು ತೆರೆಯುವ ಅವಕಾಶ ನೀಡಲಾಗಿದೆ. ಪೋಷಕರ ಖಾತೆ ಮತ್ತು ಮಕ್ಕಳ ಖಾತೆ - ಈ ಎರಡೂ ಸೇರಿ ಒಂದು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ. ಮಾತ್ರ ಜಮಾ ಮಾಡುವ ಅವಕಾಶವಿದೆ. ಈ ಮೂಲಕ ನಿಮ್ಮ ಪರ್ಸನಲ್ ಖಾತೆ ಜೊತೆಗೆ ಮಕ್ಕಳ ಹೆಸರಿನಲ್ಲೂ ಪಿಪಿಎಫ್ ಖಾತೆಯನ್ನು ತೆರದು ಹಣ ಜಮಾ ಮಾಡಬಹುದು.
ಮ್ಯೂಚುಯಲ್ ಫಂಡ್: ಪೋಷಕರು ಮಕ್ಕಳ ಹೆಸರಿನಲ್ಲಿ ಡಿಮ್ಯಾಟ್ ಖಾತೆಯನ್ನು ತೆರೆದು ಮ್ಯೂಚುಯಲ್ ಫಂಡ್‌ನಂತಹ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಬಹುದು. ಪೋಷಕರು ಈ ರೀತಿ SIP (Systematic Investment Plan) ಆರಂಭಿಸುವ ಮೂಲಕ ಮಕ್ಕಳ ಪರವಾಗಿ ಮ್ಯೂಚುಯಲ್ ಫಂಡ್ ಹೂಡಿಕೆಯನ್ನು ನಿರ್ವಹಿಸಬಹುದು. ಇನ್ನು ಈ ಮ್ಯೂಚುವಲ್ ಫಂಡ್ ಹೂಡಿಕೆ ಮಕ್ಕಳ ಖಾತೆಯಿಂದಲೇ ತೆರೆದರೆ ಉತ್ತಮ.
ಕನಿಷ್ಠ 1000 ರೂಪಾಯಿಗಳೊಂದಿಗೆ NSC ಖಾತೆಯನ್ನು ತೆರೆಯಬಹುದು. ನಂತರ ಪ್ರತಿ ತಿಂಗಳು 100 ರೂಪಾಯಿಗಳ ಗುಣಕಗಳಲ್ಲಿ ಜಮಾ ಮಾಡಬಹುದು. NSC ಯಲ್ಲಿ ಗರಿಷ್ಠ ಹೂಡಿಕೆ ಮಿತಿಯಿಲ್ಲ. ಆದರೆ 10 ವರ್ಷ ಮೇಲ್ಪಟ್ಟ ಮಕ್ಕಳು ಸಹ ಹೂಡಿಕೆ ಮಾಡಬಹುದು. ಅಲ್ಲದೇ ಮಕ್ಕಳ ಪರವಾಗಿ ಪೋಷಕರು ಸಹ ಹೂಡಿಕೆ ಮಾಡಬಹುದು.
ಮಕ್ಕಳಿಗಾಗಿ ULIP ಗಳು: ಚೈಲ್ಡ್ ULIP ಗಳು ಎಂದರೆ ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಯೋಜನೆಗಳು. ಇವು ವಿಶೇಷವಾಗಿ ಮಕ್ಕಳಿಗಾಗಿ ಜಾರಿಗೆ ತಂದಿರುವ ಪಾಲಿಸಿಗಳಾಗಿವೆ. ಇವು ವಿಮೆ ಕವರೇಜ್ ಜೊತೆಗೆ ಹೂಡಿಕೆಯ ಅವಕಾಶವನ್ನೂ ನೀಡುತ್ತದೆ. ಭವಿಷ್ಯದ ಅಗತ್ಯಗಳಿಗಾಗಿ ಉತ್ತಮ ಹಣ ಈ ಪಾಲಿಸಿಗಳಲ್ಲಿ ಸಂಗ್ರಹವಾಗುತ್ತದೆ.
ಚೈಲ್ಡ್ ULIP ಗಳಿಗೆ ಸಾಮಾನ್ಯವಾಗಿ 5 ವರ್ಷಗಳ ಲಾಕ್-ಇನ್ ಅವಧಿ ಇರುತ್ತದೆ. ಪಾಲಿಸಿ ಅವಧಿಯನ್ನು ಆಯ್ಕೆ ಮಾಡುವ ಮೊದಲು ಎಷ್ಟು ಕಾಲ ಕವರೇಜ್ ಬೇಕು ಎಂದು ನೀವೇ ನಿಗದಿ ಮಾಡಬೇಕು. 20 ವರ್ಷಗಳು, 30 ವರ್ಷಗಳಂತಹ ಅವಧಿಗಳು ಈ ಪಾಲಿಸಿಗೆ ಉತ್ತಮವಾಗಿದೆ. ಆಯ್ಕೆ ಮಾಡಿದ ಫಂಡ್ ಪ್ರಕಾರ ಹಣವನ್ನು ಸಾಲ ಮತ್ತು ಇಕ್ವಿಟಿಗಳಲ್ಲಿ ವಿತರಿಸಲಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications