'ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಗಾದೆ ಮಾತು ಎಲ್ಲರೂ ಕೇಳಿರುತ್ತೀರಿ. ಮನೆ ಕಟ್ಟೋದು ಪ್ರತಿಯೊಬ್ಬರ ಕನಸು. ಅದೇ ರೀತಿ ಮದುವೆಯಾಗೋದು ಜೀವನದ ಪ್ರಮುಖ ಘಟ್ಟ. ಈ ಎರಡೂ ಸುಲಭದ ದಾರಿಗಳಲ್ಲ. ಅದೆಷ್ಟೋ ಯುವಕರಿಗೆ ಮನೆ (Home) ಕಟ್ಟೋದು ದೊಡ್ಡ ಕನಸಾಗಿರುತ್ತೆ. ಅದೇ ಕಾರಣದಿಂದ ಎಷ್ಟೋ ಮಂದಿ, ತಾನು ದುಡಿದ ಹಣವನ್ನೆಲ್ಲಾ ಉಳಿತಾಯ ಮಾಡಿ, ನಂತರ ಮನೆಗಾಗಿ ಖರ್ಚು ಮಾಡುತ್ತಾರೆ.

ಆದರೆ ಇತ್ತೀಚೆಗೆ ಹಲವರ ಮನೆ ಕಟ್ಟುವ ಕನಸುಗಳು, ಕೇವಲ ಗೃಹ ಸಾಲದ (Home Loan) ಮೂಲಕ ಸಾಕಾರಗೊಳ್ಳುತ್ತದೆ. ಆದರೆ, ಭಾರತದಲ್ಲಿ ಗೃಹ ಸಾಲಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಭಾರತದಲ್ಲಿ ಮನೆ ನಿರ್ಮಾಣ (Home Construction Loan) ಸಾಲವೂ ಇದೆ. ಆದರೆ ಈ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಹಾಗಿದ್ರೆ ಏನಿದು ಹೋಮ್ ಕನ್ಸ್ಟ್ರಕ್ಷನ್ ಲೋನ್? ಇಲ್ಲಿದೆ ಸಂಪೂರ್ಣ ಮಾಹಿತಿ
Home Construction Loan ಎಂದರೇನು?
ಭಾರತದಲ್ಲಿ ಮನೆ ನಿರ್ಮಾಣ ಸಾಲ ಎಂದರೆ ನೀವು ಖಾಲಿ ಜಾಗದಲ್ಲಿ ಹೊಸ ಮನೆ ಕಟ್ಟಲು ಅಥವಾ ಹಳೆಯ ಮನೆಯನ್ನು ಮರುನಿರ್ಮಾಣ ಮಾಡಲು ಬ್ಯಾಂಕ್ ಅಥವಾ ಹೌಸಿಂಗ್ ಫೈನಾನ್ಸ್ ಕಂಪನಿಗಳು (HFC) ನೀಡುವ ಸಾಲವಾಗಿದೆ. ಇದು ಸಾಮಾನ್ಯ ಹೋಮ್ ಲೋನ್‌ಗಳಿಗೆ ಹೋಲಿಸಿದ್ರೆ ಸ್ವಲ್ಪ ಭಿನ್ನವಾಗಿದೆ. ಈ ಸಾಲದಲ್ಲಿ ಹಣವನ್ನು ಹಂತ ಹಂತವಾಗಿ ನೀಡಲಾಗುತ್ತದೆ,
ಇಲ್ಲಿ ಬ್ಯಾಂಕುಗಳು ಒಟ್ಟು ನಿರ್ಮಾಣ ವೆಚ್ಚದ ಶೇ 70% ರಷ್ಟು ಸಾಲ ನೀಡುತ್ತವೆ. ಇದು ಸ್ಥಿರ ಅಥವಾ ಫ್ಲೋಟಿಂಗ್ ಬಡ್ಡಿದರಗಳಲ್ಲಿ ಲಭ್ಯವಿದೆ. ಸಾಮಾನ್ಯ ಗೃಹ ಸಾಲಕ್ಕಿಂತ ಭಿನ್ನವಾಗಿ, ನಿರ್ಮಾಣ ಪ್ರಗತಿಗೆ ಅನುಗುಣವಾಗಿ ಹಂತ ಹಂತವಾಗಿ ವಿತರಿಸಲಾಗುತ್ತದೆ.
ಅರ್ಹತೆ:
ಮನೆ ನಿರ್ಮಾಣ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಕೆಲವು ಅಗತ್ಯ ಅರ್ಹತೆಗಳನ್ನು ಪೂರೈಸುವುದು ಅಗತ್ಯ. ಇದರಿಂದ ಬ್ಯಾಂಕ್‌ಗಳು ನಿಮ್ಮ ವಯಸ್ಸು, ಆದಾಯ, ಕ್ರೆಡಿಟ್ ಸ್ಕೋರ್, ಪ್ರಾಪರ್ಟಿ ವಿವರಗಳನ್ನು ಪರಿಶೀಲಿಸುತ್ತದೆ.
ಮನೆ ನಿರ್ಮಾಣ ಸಾಲಕ್ಕೆ ಅರ್ಜಿ ಸಲ್ಲಿಸಲು, ಗುರುತಿನ ಪುರಾವೆ, ಆದಾಯದ ದಾಖಲೆಗಳು, ಆಸ್ತಿ ದಾಖಲೆಗಳು, ಹಾಗೂ ಸ್ಥಳೀಯ ನಗರಸಭಾ ಪ್ರಾಧಿಕಾರದಿಂದ ಅನುಮೋದಿತ ಕಟ್ಟಡ ನಿರ್ಮಾಣ ಯೋಜನೆಯನ್ನು ಸಿದ್ಧವಾಗಿಡಬೇಕು.
ಸಾಲ ಹೇಗೆ ವಿತರಿಸಲಾಗುತ್ತದೆ?
ಸಾಮಾನ್ಯ ಗೃಹ ಸಾಲಗಳಲ್ಲಿ ಸಂಪೂರ್ಣ ಮೊತ್ತ ಮುಂಚಿತವಾಗಿ ನೀಡಲಾಗುತ್ತದೆ, ಆದರೆ ಮನೆ ನಿರ್ಮಾಣ ಸಾಲ ಹಂತ ಹಂತವಾಗಿ ಹಣವನ್ನು ಬಿಡುಗಡೆ ಮಾಡುತ್ತದೆ. ಪ್ರಾರಂಭದಲ್ಲಿ, ಸಾಲಗಾರರು ತಮ್ಮಲ್ಲಿರುವ ಹಣವನ್ನು ಬಳಸಬೇಕು. ನಂತರ, ನಿರ್ಮಾಣದ ಪ್ರಗತಿಗೆ ಅನುಗುಣವಾಗಿ ಹಣ ವಿತರಿಸಲಾಗುತ್ತದೆ.
ಪ್ರತಿ ಹಣ ವಿತರಣಾ ಹಂತದಲ್ಲಿ, ಸಾಲಗಾರರು ನಿರ್ಮಾಣ ಸ್ಥಳದ ಛಾಯಾಚಿತ್ರಗಳು ಹಾಗೂ ಆಯಾ ಹಂತ ಪೂರ್ಣಗೊಂಡ ಬಗ್ಗೆ ಸಿವಿಲ್ ಇಂಜಿನಿಯರ್‌ನ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಕೆಲವೊಮ್ಮೆ, ಸಾಲ ನೀಡುವವರು ತಮ್ಮ ಇಂಜಿನಿಯರ್‌ಗಳನ್ನು ಸಹ ಪರಿಶೀಲನೆಗೆ ಕಳುಹಿಸಬಹುದು.
ಈ ಹೆಚ್ಚುವರಿ ಪರಿಶೀಲನೆಗಳು ಸಾಮಾನ್ಯ ಗೃಹ ಸಾಲಗಳಲ್ಲಿ ಇರುವುದಿಲ್ಲ, ಇದು ನಿರ್ಮಾಣ ವಿಳಂಬಕ್ಕೆ ಕಾರಣವಾಗಬಹುದು. ಹೀಗಾಗಿ, ಇಂತಹ ವಿಳಂಬಗಳನ್ನು ನಿಭಾಯಿಸಲು ಕೆಲವು ಹೆಚ್ಚುವರಿ ಹಣವನ್ನು ಸಿದ್ಧವಾಗಿಟ್ಟುಕೊಳ್ಳುವುದು ಸೂಕ್ತ.
ಇಎಂಐ ಕಟ್ಟೋದು ಹೇಗೆ?
ಈ ಸಾಲಕ್ಕೆ ಪ್ರೀ ಇಎಂಐ ನೀಡಲಾಗುತ್ತದೆ. ಅಂದರೆ ನಿರ್ಮಾಣ ಸಮಯದಲ್ಲಿ ಹಣವನ್ನು ಹಂತ ಹಂತವಾಗಿ ನೀಡುವುದರಿಂದ, ನೀವು ಪೂರ್ಣ ಸಾಲದ ಮೇಲೆ ಬಡ್ಡಿ ಪಾವತಿಸುವುದಿಲ್ಲ. ಬದಲಿಗೆ ವಿತರಣೆಯಾದ ಮೊತ್ತದ ಮೇಲೆ ಮಾತ್ರ ಬಡ್ಡಿ ಪಾವತಿಸಬೇಕು. ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಸಾಲಗಾರರು ನಿಯಮಿತ ಇಎಂಐಗಳನ್ನು ಪಾವತಿಸಲು ಪ್ರಾರಂಭಿಸಬೇಕು, ಅದರಲ್ಲಿ ಮೂಲ ಹಾಗೂ ಬಡ್ಡಿ ಎರಡೂ ಸೇರಿರುತ್ತವೆ. ಇನ್ನು ಸಾಮಾನ್ಯವಾಗಿ ಬಡ್ಡಿದರಗಳು 8.5% ರಿಂದ 10.5% ರಷ್ಟು ಇರುತ್ತದೆ ಎನ್ನಲಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications