Home Loan: SBI, PNB ಸೇರಿ 8 ಬ್ಯಾಂಕುಗಳ ಗೃಹಸಾಲದ ಬಡ್ಡಿದರ ಇಳಿಕೆ! ಎಷ್ಟು ಗೊತ್ತಾ?

ಪ್ರಸ್ತುತ ವಿದ್ಯಮಾನದಲ್ಲಿ ಸ್ವಂತ ಮನೆ ಕಟ್ಟೋದೆ ಒಂದು ಸಾಹಸವಾಗಿದೆ. ಅತ್ತ ಸಾಲ ಮಾಡಿದರೂ, ಅದರ ಇಎಂಐ ಕಟ್ಟೋದೆ ಒಂದು ದೊಡ್ಡ ತಲೆನೋವು. ಕಾರಣ ಕೆಲವೊಮ್ಮೆ ತಿಂಗಳಾಂತ್ಯಕ್ಕೆ ಬರುವ ಇಎಂಐ (EMI), ಸಂಬಳಕ್ಕಿಂತಲೂ ಹೆಚ್ಚಾಗಿರುತ್ತೆ. ಆದರೆ ಇದೀಗ ಗೃಹ ಸಾಲ ಪಡೆಯಲು ಬಯಸುವವರಿಗೆ ಒಂದು ಶುಭ ಸುದ್ದಿಯಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಕಡಿತಗೊಳಿಸಿದ್ದು, ಇದರ ಬೆನ್ನಲ್ಲೇ ಹಲವು ಪ್ರಮುಖ ಬ್ಯಾಂಕುಗಳು ತಮ್ಮ ಗೃಹ ಸಾಲದ ಬಡ್ಡಿ ದರಗಳನ್ನು (Home Loans Interest Rates) ಸಹ ಇಳಿಸಿದೆ. ಇದು ಹೊಸ ಹಾಗೂ ಹಳೆಯ ಸಾಲಗಾರರಿಬ್ಬರಿಗೂ ನೇರ ಲಾಭ ನೀಡುವುದಂತೂ ಪಕ್ಕಾ..

SBI ಸೇರಿ 8 ಬ್ಯಾಂಕುಗಳ ಗೃಹಸಾಲದ ಬಡ್ಡಿದರ ಇಳಿಕೆ! ಎಷ್ಟು ಗೊತ್ತಾ?

ಆರ್‌ಬಿಐ ಇತ್ತೀಚೆಗೆ ರೆಪೋ ದರವನ್ನು 25 ಮೂಲ ಅಂಕಗಳಷ್ಟು ಕಡಿಮೆ ಮಾಡಿ, ಶೇಕಡಾ 5.25ಕ್ಕೆ ನಿಗದಿಪಡಿಸಿದೆ. ರೆಪೋ ದರ ಕಡಿತದ ಬೆನ್ನಲ್ಲೇ ಕೆಲವು ಬ್ಯಾಂಕುಗಳು ಸಹ ಸಾಲ ಪಡೆಯುವ ವೆಚ್ಚವನ್ನು ತಗ್ಗಿಸುತ್ತದೆ. ಇದರಿಂದ ಬ್ಯಾಂಕುಗಳು ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಮುಂದಾಗಿದೆ. ಇದೀಗ ಈ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸಬೇಕೆಂದು ಆರ್‌ಬಿಐ ಕೂಡಾ ನಿರ್ದೇಶನ ನೀಡಿದೆ.

ಬಡ್ಡಿ ದರ ಕಡಿತದ ಪ್ರಮುಖ ಲಾಭವು ಮಾಸಿಕ ಇಎಂಐನಲ್ಲೂ ಇಳಿಕೆಯಾಗುತ್ತದೆ. ಉದಾಹರಣೆಗೆ, 20 ವರ್ಷಗಳ ಅವಧಿಗೆ 50 ಲಕ್ಷ ರೂಪಾಯಿ ಗೃಹ ಸಾಲ ಪಡೆದವರಿಗೆ, ಬಡ್ಡಿ ದರ ಶೇಕಡಾ 8.5 ರಿಂದ 7.25ಕ್ಕೆ ಇಳಿದರೆ, ಪ್ರತಿ ತಿಂಗಳು ಸುಮಾರು 3,900 ರೂಪಾಯಿಗಳವರೆಗೆ ಉಳಿತಾಯವಾಗುತ್ತದೆ. ಈ ಉಳಿತಾಯವು ದೀರ್ಘಾವಧಿಯಲ್ಲಿ ಲಕ್ಷಾಂತರ ರೂಪಾಯಿಗಳಿಗೆ ತಲುಪಲಿದೆ.

ರೆಪೋ ದರ ಕಡಿತದ ನಂತರ ಅನೇಕ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ತಮ್ಮ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ MCLR, EBLR ಮತ್ತು RLLR ದರಗಳನ್ನು ಇಳಿಕೆ ಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಕೂಡ ರೆಪೋ ದರ ಆಧರಿತ ದರಗಳಲ್ಲಿ ಇಳಿಸಿದೆ.

ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಸೇರಿ ಹಲವು ಬ್ಯಾಂಕುಗಳು ಗೃಹ ಸಾಲಗಳ ಬಡ್ಡಿಯನ್ನು ಇಳಿಸಿದೆ. ಇದರಿಂದ ಗ್ರಾಹಕರು ಹೆಚ್ಚು ಗೃಹಸಾಲವನ್ನು ಕಡಿಮೆ ಬಡ್ಡಿಯಲ್ಲಿ ಪಡೆಯಬಹುದು.

ಗೃಹ ಸಾಲವು EBLR (External Benchmark Lending Rate) ಅಥವಾ RLLR (Repo Linked Lending Rate) ಮಾನದಂಡಕ್ಕೆ ಒಳಪಟ್ಟಿದ್ದರೆ, ಬಡ್ಡಿ ದರದಲ್ಲೂ ಇಳಿಕೆಯಾಗಲಿದೆ. ಇಂತಹ ಸಂದರ್ಭಗಳಲ್ಲಿ, ಇಎಂಐ ಕೂಡಾ ಕಡಿಮೆಯಾಗಬಹುದು ಅಥವಾ ಸಾಲದ ಅವಧಿ ಕಡಿತಗೊಳ್ಳಬಹುದು. MCLR (Marginal Cost Of Funds Based Lending Rate) ಗೆ ಸಂಬಂಧಿಸಿದ ಸಾಲಗಳಲ್ಲಿ ಈ ಲಾಭವು ಸ್ವಲ್ಪ ಸಮಯದ ನಂತರ ಅನ್ವಯವಾಗುತ್ತದೆ.

ಮನೆ ಕಟ್ಟಲು ಬೆಸ್ಟ್‌ ಟೈಂ
ಹೊಸ ಮನೆ ಖರೀದಿಸಲು ಯೋಜಿಸುತ್ತಿರುವವರಿಗೆ ಇದೇ ಬೆಸ್ಟ್‌ ಟೈಂ. ಹಾಲಿ ಗೃಹ ಸಾಲ ಗ್ರಾಹಕರು ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ತಮ್ಮ ಸಾಲವು ಯಾವ ಮಾನದಂಡಕ್ಕೆ ಸಂಪರ್ಕ ಹೊಂದಿದೆ ಎಂಬುದನ್ನು ಚೆಕ್‌ ಮಾಡಬೇಕು. ಇದರಿಂದ ನಿಮ್ಮ ಇಎಂಐ ಕೂಡಾ ಇಳಿಕೆಯಾಗಬಹುದು.

ಒಟ್ಟಾರೆಯಾಗಿ, ರೆಪೋ ದರ ಕಡಿತದಿಂದಾಗಿ ಗೃಹ ಸಾಲಗಳು ಅಗ್ಗವಾಗಿದ್ದು, ತಿಂಗಳ ಇಎಂಐ ಹೊರೆ ಕೂಡಾ ಕಡಿಮೆಯಾಗಲಿದೆ. ಇದು ಹೊಸ ಗೃಹಸಾಲಗಳಿಗೆ ಮಾತ್ರವಲ್ಲದೆ, ಪ್ರಸ್ತುತ ಸಾಲದಲ್ಲಿರುವವರಿಗೂ ನಿಟ್ಟುಸಿರು ಬಿಡುವಂತೆ ಮಾಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+