SIPಯಲ್ಲಿ ಮಾಸಿಕ 1,500 ಹೂಡಿಕೆ ಮಾಡಿದ್ರೆ, ನಿವೃತ್ತಿಯ ವೇಳೆಗೆ 1 ಕೋಟಿ ಗಳಿಸಬಹುದು!

ಉತ್ತಮ ಆದಾಯವನ್ನ ಗಳಿಸಲು SIP ಉತ್ತಮ ಆಯ್ಕೆಯಾಗಿದೆ. ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಹಾಗೆ ಪ್ರತಿಯೊಬ್ಬ ವ್ಯಕ್ತಿಯೂ ಇದರಲ್ಲಿ ಹೂಡಿಕೆ ಮಾಡುವ ಮೂಲಕ ನಿವೃತ್ತಿಯನ್ನ ನಿಶ್ಚಿಂತೆಯಿಂದ ಕಳೆಯಬಹುದು. ಹಣವನ್ನ ಸಂಗ್ರಹ ಮಾಡಲು ಬಯಸುವ ಪ್ರತಿಯೊಬ್ಬರಿಗೂ ಕೂಡ ಇದು ಮುಖ್ಯವಾಗಿದೆ. ಶಿಸ್ತಿನ ಕೊಡುಗೆಗಳ ಮೂಲಕ ಹೆಚ್ಚು ಕಾರ್ಪಸ್‌ ನಿರ್ಮಿಸಲು ಇು ಉತ್ತಮ ಆಯ್ಕೆಯಾಗಿದೆ.

SIP ಎಂದರೇನು?

SIP ಇದೊಂದು ಮ್ಯೂಚುಯಲ್‌ ಫಂಡ್‌ಗಳು ನೀಡುವ ಹೂಡಿಕೆಯ ವಿಧಾನವಾಗಿದೆ. ಇದರಲ್ಲಿ ಒಟ್ಟು ಮೊತ್ತಕ್ಕಿಂತ ನಿಗದತ ಮೊತ್ತವನ್ನ ಹೂಡಿಕೆ ಮಾಡಲು ಇದು ಅನುವು ಮಾಡಿಕೊಡುತ್ತದೆ. ಇದರಲ್ಲಿ ಕನಿಷ್ಠ ಕಂತು 500 ರೂಗಳಿಂದ ಆರಂಭವಾಗುತ್ತದೆ. ಈ ಸ್ಥಿರ ಹೂಡಿಕೆಗಳ ಮೇಲೆ ನೀವು ಹೆಚ್ಚಿನ ಬಡ್ಡಿದರಗಳನ್ನ ಕೂಡ ಪಡೆಯುತ್ತೀರಿ. ಇವುಗಳು ನಿಯಮಿತವಾಗಿ ಹೂಡಿಕೆ ಮಾಡಲು ಹಾಗೆ ಉಳಿತಾಯ ಮಾಡಲು ಸಯ ಮಾಡುತ್ತವೆ. ಜೊತೆಗೆ ನಿಮ್ಮ ಹಣಕಾಸಿನ ಗುರಿಗಳಿಗೆ ಬದ್ಧರಾಗಿರಲು ಸಹಾಯ ಮಾಡುತ್ತದೆ.

SIPಯಲ್ಲಿ ಹೂಡಿಕೆ ಮಾಡಿ, ನಿವೃತ್ತಿಯ ವೇಳೆಗೆ 1 ಕೋಟಿ ಗಳಿಸಿ!

SIPಗಳಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತ ಅವಶ್ಯಕತೆಯಿಲ್ಲ. 500 ರೂಗಳ ಮೂಲಕ ನಿಮ್ಮ ಹೂಡಿಕೆಯನ್ನ ಆರಂಭ ಮಾಡಬಹುದು. ಇದರಿಂದಾಗಿ ನೀವು ನಿಮ್ಮ ನಿವೃತ್ತಿಯ ಸಮಯವನ್ನ ಚಿಂತೆಯಲ್ಲದೇ ಕಳೆಯಬಹುದು. ಹಾಗೆ ನೀವೇನಾದ್ರೂ ಈ SIPಗಳಲ್ಲಿ ಮಾಸಿಕ 1,500 ಹೂಡಿಕೆ ಮಾಡಿದ್ರೆ ನೀವು ನಿಮ್ಮ ನಿವೃತ್ತಿಯ ಒಳಗೆ ಒಂದು ಕೋಟಿ ಗಳಿಸಬಹುದು.

1 ಕೋಟಿ ಗುರಿಯನ್ನು ತಲುಪಲು ಎಷ್ಟು ವರ್ಷಗಳು ಬೇಕಾಗುತ್ತದೆ?

ನೀವು 1 ಕೋಟಿ ಕಾರ್ಪಸ್‌ ಅನ್ನು ನಿರ್ಮಿಸಲು SIPನಲ್ಲಿ ಕನಿಷ್ಠ 36 ವರ್ಷಗಳ ವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಹೇಗೆ ಎನ್ನುವುದನ್ನು ಇಲ್ಲಿ ತಿಳಿಯಿರಿ.

ನೀವು SIP ಮ್ಯೂಚುಯಲ್‌ ಫಂಡ್‌ನಲ್ಲಿ ಪ್ರೀ ತಿಂಗಳು 1,500 ರೂ. ಹೂಡಿಕೆ ಮಾಡುತ್ತಿದರೆ, 36 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ 6,48,000 ರೂ. ಆಗಿರುತ್ತದೆ. ಇದರ ಮೇಲೆ ನೀವು ಶೇಕಡಾ 12 ರಷ್ಟು ವರ್ಷಿಕ ಆದಾಯವನ್ನ ಗಳಿಸುತ್ತಿದ್ದೀರಾ ಎಂದರೆ ನಿಮ್ಮ ಬಂಡವಾಳದ ಲಾಭವು 1,03,49,762 ರೂ. ಆಗಿರುತ್ತದೆ. ಇದರಿಂದ 36 ವರ್ಷಗಳಲ್ಲಿ ನಿಮ್ಮ ಕಾರ್ಪಸ್‌ 1,09,97,762 ರೂಗಳಷ್ಟ ಬೆಳೆದಿರುತ್ತದೆ.

ನೀವು ಪೂರ್ಣ ಲೆಕ್ಕಾಚಾರವನ್ನ ತಿಳಿಯುವುದಾದ್ರೆ ಇಲ್ಲಿ ಗಮನಿಸಿ.

ನಿಮ್ಮ ಹೂಡಿಕೆ ಮೊತ್ತ: 6,48,000 ರೂ.
ನೀವು ಪಡೆದ ಬಂಡವಾಳ ಲಾಭ: 1,03,49,762 ರೂ.
ಒಟ್ಟು ನೀವು ಗಳಿಸಿದ ಮೌಲ್ಯ: 1,09,97,762 ರೂ.

SIPಯಲ್ಲಿ ಹೂಡಿಕೆ ಮಾಡುವಾಗ ಈ ವಿಷಯಗಳನ್ನ ನೆನಪಿಡಬೇಕು

SIP ಒಂದು ಮಾರುಕಟ್ಟೆ ಸಂಯೋಜಿತ ಯೋಜನೆಯಾಗಿದೆ. ಅಲ್ಲದೆ ಇದು ಸ್ಥಿರತೆಯ ಮೇಲೆ ಅವಲಂಬಿತವಾಗಿದೆ. ಇದರಲ್ಲಿ ಮೊತ್ತವನ್ನ ನಿಯಮಿತವಗಿ ಹೂಡಿಕೆ ಮಾಡಿ. ಇದರಲ್ಲಿ ಮಾರುಕಟ್ಟೆ ಪರಿಸ್ಥಿತಿ ಆಧಾರದ ಮೇಲೆ ಇದರ ನಿಜವಾದ ಆದಾಯ ಬದಲಾಗಬಹುದು.

ನಿಮ್ಮ ವಾರ್ಷಿಕ ಆದಾಯ ಶೇಕಡಾ 13ರಷ್ಟು ಆಗಿದ್ದರೆ, 36 ವರ್ಷಗಳಲ್ಲಿ ನೀವು 1,45,68,810 ರೂಗಳಷ್ಟು ಕಾರ್ಪಸ್ ಅನ್ನು ನಿರ್ಮಿಸಬಹುದು.

ಹಾಗೆ ನಿಮ್ಮ ವಾರ್ಷಿ ಆದಾಯ ಶೆಕಡಾ 14 ರಷ್ಟು ಇದ್ದರೆ ನೀವು 36 ವರ್ಷಗಳಲ್ಲಿ 1,93,84,377 ರೂಗಳಷ್ಟು ಕಾರ್ಪಸ್‌ ನಿರ್ಮಿಸಲು ಸಾಧ್ಯವಾಗುತ್ತದೆ.

SIPಯಲ್ಲಿ ಹೂಡಿಕೆ ಮಾಡುವುದರ ಪ್ರಯೋಜನಗಳೇನು?

ಶಿಸ್ತು ಮತ್ತು ಸ್ಥಿರತೆ: SIP ಗಳು ನಿಮಗೆ ನಿಗದಿತ ಮೊತ್ತವನ್ನು ತಪ್ಪದೆ ನಿಯಮಿತವಾಗಿ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ಶಿಸ್ತುಬದ್ಧ ಹೂಡಿಕೆಯ ಅಭ್ಯಾಸವನ್ನು ಹುಟ್ಟುಹಾಕುತ್ತದೆ.

ಸಂಯೋಜನೆಯ ಶಕ್ತಿ: ನಿಮ್ಮ ಹೂಡಿಕೆಯಲ್ಲಿ ನೀವು ಗಳಿಸುವ ಆದಾಯವು ತಮ್ಮದೇ ಆದ ಆದಾಯವನ್ನು ಉತ್ಪಾದಿಸಲು ಪ್ರಾರಂಭಿಸಿದಾಗ ಸಂಯೋಜನೆಯು ಸಂಭವಿಸುತ್ತದೆ. SIPಗಳು ನಿಮ್ಮ ಹೂಡಿಕೆಗಳನ್ನು ಸಂಯುಕ್ತದ ಮೂಲಕ ಬೆಳೆಯಲು ಹೆಚ್ಚಿನ ಸಮಯವನ್ನು ನೀಡುತ್ತವೆ.

ಕೈಗೆಟುಕುವಿಕೆ: ಹೂಡಿಕೆಯನ್ನ ಪ್ರಾರಂಭಿಸಲು ನಿಮಗೆ ದೊಡ್ಡ ಮೊತ್ತದ ಅಗತ್ಯವಿಲ್ಲ. ತಿಂಗಳಿಗೆ 500 ರೂಗಳಂತೆ SIPಯಲ್ಲಿ ಹೂಡಿಕೆ ಆರಂಭಿಸಬಹುದು.

ದೀರ್ಘಾವಧಿಯ ಸಂಪತ್ತು ಸೃಷ್ಟಿ: ನಿವೃತ್ತಿ, ಮನೆ ಖರೀದಿ ಅಥವಾ ಮಕ್ಕಳ ಶಿಕ್ಷಣಕ್ಕೆ ಧನಸಹಾಯದಂತಹ ದೀರ್ಘಾವಧಿಯ ಹಣಕಾಸಿನ ಗುರಿಗಳಿಗೆ SIP ಗಳು ಸೂಕ್ತವಾಗಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+