Personal Loan: ಕ್ರೆಡಿಟ್ ಸ್ಕೋರ್ ಮಾತ್ರ ಸಾಕಾಗುವುದಿಲ್ಲ! ಈಗ ಡಿಜಿಟಲ್ ವರ್ತನೆಯಿಂದಲೇ ವೈಯಕ್ತಿಕ ಸಾಲ ಅನುಮೋದನೆ!

ಇದು ಡಿಜಿಟಲ್ ಯುಗ..ಈಗೆಲ್ಲಾ ಕೆಲಸಗಳು ಡಿಜಿಟಲ್ ಮೂಲಕವೇ ಆಗುತ್ತವೆ. ಈ ಯುಗದಲ್ಲಿ ವೈಯಕ್ತಿಕ ಸಾಲ ಪಡೆಯೋದು ಮೊದಲಿನಂತೆ ಕಷ್ಟದ ಕೆಲಸವೂ ಅಲ್ಲ. ಯಾಕೆಂದರೆ ಮೊದಲೆಲ್ಲ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಮಾತ್ರ ಪ್ರಮುಖವಾಗಿತ್ತು. ಕಡಿಮೆ ಸ್ಕೋರ್ ಇದ್ದವರಿಗೆ ಲೋನ್ ಅರ್ಜಿ ರಿಜೆಕ್ಟ್ ಆಗುತ್ತಿತ್ತು. ಆದ್ರೆ ಈಗ ಹಾಗಿಲ್ಲ..ಸಾಲ ಅರ್ಹತೆಯನ್ನು ಪರಿಶೀಲಿಸಲೆಂದೆ ಹೊಸ ಬದಲಾವಣೆಯೂ ಕಂಡುಬಂದಿದೆ. ಅಂದರೆ ವ್ಯಕ್ತಿಯ ಸಂಪೂರ್ಣ ಹಣಕಾಸು ವರ್ತನೆಯನ್ನು ಗಮನಿಸಿ ಸಾಲ ಕೊಡಬೇಕೋ, ಬೇಡವೋ ಎಂಬ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ವೈಯಕ್ತಿಕ ಸಾಲಕ್ಕೆ ಈಗ ಕ್ರೆಡಿಟ್ ಸ್ಕೋರ್ ಮಾತ್ರ ಸಾಕಾಗುವುದಿಲ್ಲ!

ಕ್ರೆಡಿಟ್ ಸ್ಕೋರ್ ಮಾತ್ರ ಸಾಕಾಗುವುದಿಲ್ಲ:

ಹೌದು, ಆಗಲೇ ಹೇಳಿದಂತೆ ಮೊದಲು ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಮಾತ್ರ ಸಾಕಾಗುತ್ತಿತ್ತು. ಆದರೆ ಈಗ ಅನೇಕ ಯುವ ಉದ್ಯೋಗಿಗಳಿಗೆ ಸ್ಥಿರ ಆದಾಯದ ಜೊತೆ ಕೆಲಸವೂ ಇದೆ. ಹೀಗಿದ್ರೂ ಕೂಡ ಕ್ರೆಡಿಟ್ ಹಿಸ್ಟರಿ ಕಡಿಮೆ. ಇದರಿಂದ ಅವರ ಕ್ರೆಡಿಟ್ ಸ್ಕೋರ್ ಹೆಚ್ಚಿನ ಮಟ್ಟದಲ್ಲಿರದೇ ಇರಬಹುದು. ಆದರೆ ಇದು ಅವರ ನಿಜವಾದ ಮರುಪಾವತಿ ಸಾಮರ್ಥ್ಯವನ್ನು ತೋರಿಸುವುದಿಲ್ಲ. ಆದ್ದರಿಂದ ಈಗ ಸಾಲ ನೀಡುವ ಸಂಸ್ಥೆಗಳು ಇನ್ನಷ್ಟು ಅಂಶಗಳನ್ನು ಪರಿಗಣಿಸುತ್ತಿವೆ.

ಡಿಜಿಟಲ್ ವ್ಯವಹಾರಗಳ ಮಹತ್ವ:

ನಿಯಮಿತವಾಗಿ ಮೊಬೈಲ್ ಬಿಲ್ ಪಾವತಿಸುವುದು, ವಿದ್ಯುತ್ ಮತ್ತು ಇತರ ಬಿಲ್ಗಳನ್ನು ಸಮಯಕ್ಕೆ ಪಾವತಿಸುವುದು, ಬ್ಯಾಂಕ್ ಖಾತೆಯಲ್ಲಿ ಸರಿಯಾದ ವಹಿವಾಟುಗಳನ್ನು ನಡೆಸುವುದು ಇವೆಲ್ಲವೂ ಆರ್ಥಿಕ ಶಿಸ್ತಿನ ಸೂಚಕಗಳಾಗಿವೆ. ಇಂತಹ ಸ್ಥಿರ ಹಣಕಾಸು ವರ್ತನೆ ಇದ್ದರೆ, ಸಾಲ ಪಡೆಯುವ ಅವಕಾಶ ಹೆಚ್ಚಾಗುತ್ತದೆ. ಡಿಜಿಟಲ್ ಪಾವತಿ ಪದ್ಧತಿಗಳು ವ್ಯಕ್ತಿಯ ಜವಾಬ್ದಾರಿತನವನ್ನು ತೋರಿಸುತ್ತವೆ.

ಆದಾಯ ಮತ್ತು ಇಎಂಐ ಸಮತೋಲನ:

ಸಾಲ ಪಡೆಯುವಾಗ ಆದಾಯದ ಸ್ಥಿರತೆ ಬಹಳ ಮುಖ್ಯ. ಪ್ರತಿಮಾಸ ಸಂಬಳ ಸರಿಯಾಗಿ ಖಾತೆಗೆ ಜಮಾ ಆಗಬೇಕು. ಜೊತೆಗೆ, ಈಗಿರುವ ಇಎಂಐಗಳು ಒಟ್ಟು ಆದಾಯದ ಅರ್ಧಕ್ಕಿಂತ ಕಡಿಮೆ ಇದ್ದರೆ ಹೊಸ ಸಾಲ ಪಡೆಯುವುದು ಸುಲಭವಾಗುತ್ತದೆ. ಹೆಚ್ಚು ಸಾಲಗಳು ಇದ್ದರೆ ಮರುಪಾವತಿಯಲ್ಲಿ ಕಷ್ಟ ಉಂಟಾಗಬಹುದು. ಆದ್ದರಿಂದ ಮೊದಲು ನಿಮ್ಮ ಹಣಕಾಸು ಸ್ಥಿತಿಯನ್ನು ಲೆಕ್ಕ ಹಾಕುವುದು ಅಗತ್ಯ.

ಸಾಲ ಅರ್ಜಿ ಪ್ರಕ್ರಿಯೆ ಸುಲಭವಾಗಿದೆ:

ಇಂದಿನ ದಿನಗಳಲ್ಲಿ ಮೊಬೈಲ್ ಆಪ್ ಅಥವಾ ವೆಬ್ಸೈಟ್ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಗತ್ಯ ಮಾಹಿತಿಯನ್ನು ನೀಡಿದ ಬಳಿಕ ಅರ್ಹತೆ ಪರಿಶೀಲನೆ ತ್ವರಿತವಾಗಿ ನಡೆಯುತ್ತದೆ. ದಾಖಲೆಗಳು ಸರಿಯಾಗಿದ್ದರೆ ಅನುಮೋದನೆ ಕೂಡ ಬೇಗ ಸಿಗುತ್ತದೆ. ನಂತರ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಜವಾಬ್ದಾರಿಯುತ ನಿರ್ಧಾರ ಮುಖ್ಯ:

ತ್ವರಿತವಾಗಿ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಅಗತ್ಯಕ್ಕಿಂತ ಹೆಚ್ಚು ಮೊತ್ತವನ್ನು ಪಡೆಯಬಾರದು. ನಿಮ್ಮ ಆದಾಯ, ಖರ್ಚು ಮತ್ತು ಮರುಪಾವತಿ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಂಡು ಮಾತ್ರ ಸಾಲ ಪಡೆಯುವುದು ಉತ್ತಮ.

ಹಣಕಾಸು ಶಿಸ್ತನ್ನು ಕಾಪಾಡಿಕೊಂಡು, ಸಮಯಕ್ಕೆ ಪಾವತಿಗಳನ್ನು ಮಾಡಿ ಮತ್ತು ಸರಿಯಾದ ಯೋಜನೆಯೊಂದಿಗೆ ಸಾಲ ಬಳಸಿದರೆ, ಅದು ನಿಮ್ಮ ಅಗತ್ಯಗಳನ್ನು ಸುಲಭವಾಗಿ ಪೂರೈಸಲು ಸಹಾಯ ಮಾಡುತ್ತದೆ. ಇಂದಿನ ವ್ಯವಸ್ಥೆಯಲ್ಲಿ ಸಾಲ ಪಡೆಯುವುದು ಸುಲಭವಾದರೂ, ಜವಾಬ್ದಾರಿಯುತವಾಗಿ ಬಳಸುವುದು ಅತ್ಯಂತ ಮುಖ್ಯವಾಗಿದೆ.

(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+