Gen Z ಪೀಳಿಗೆ ಜೀವನದಲ್ಲಿ ಜಾಯ್‌ಫುಲ್ ಆಗಿ ಇರಲು ಬಯಸುವ ಪೀಳಿಗೆ. ಕಷ್ಟ ಪಟ್ಟಾದರೂ ಇಷ್ಟ ಪಟ್ಟಿದ್ದನ್ನ ನನಸಾಗಿಸಿಕೊಳ್ಳುವ ಈ ಪೀಳಿಗೆಯ ಯುವಕ-ಯುವತಿಯರು, ಖರ್ಚು ಹೆಚ್ಚಾಗೇ ಮಾಡುತ್ತಾರೆ. ಹಾಗಂತ ಹಣದ ಬೆಲೆ ಗೊತ್ತಿಲ್ಲವೆಂದೂ ಅಲ್ಲ. ಈ ಯುವ ಪೀಳಿಗೆ ಖರ್ಚು ಹೇಗೆ ಮಾಡುತ್ತದೋ, ಉಳಿತಾಯವನ್ನೂ ಹಾಗೆಯೇ ನಿಭಾಯಿಸುವ ಕಲೆ ಹೊಂದಿದೆ ಎಂದರೆ ತಪ್ಪಾಗಲ್ಲ. ಹಾಗಾದ್ರೆ Gen Z ಪೀಳಿಗೆ ಯಾವ ಉಳಿತಾಯದ ಹಾದಿಯನ್ನು ಹೇಗೆ ಬಳಸಿಕೊಳ್ತಿದೆ, ಹಾಗೂ ಅವರ ಉಳಿದಾಯದ ಹಾದಿ ಎಷ್ಟು ಉತ್ತಮ ಎಂದು ತಿಳಿಯಿರಿ.

ಈ Gen Z ಪೀಳಿಗೆ ಮೌಲ್ಯಾಧಾರಿತ ಹೂಡಿಕೆಗಳು, ಡಿಜಿಟಲ್ ಟೂಲ್‌ಗಳ ಹೆಚ್ಚು ಬಳಸಿಕೊಳ್ಳುವಿಕೆ, ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಮಾರ್ಗದರ್ಶನ ಪಡೆದು ಮುಂದಿನ ಆರ್ಥಿಕ ಪೀಳಿಗೆಗೆ ನಾಂದಿ ಹಾಡುತ್ತಿದೆ. ಆದರೆ ಈ ಬೆಳವಣಿಗೆಯೊಂದಿಗೇ ಕೆಲವು ಎಚ್ಚರಿಕೆಗಳನ್ನೂ ತಮ್ಮೊಂದಿಗೆ ಹೊತ್ತುಕೊಂಡು ಬರುತ್ತಿದೆ.
ಹೂಡಿಕೆಯ ಪ್ರಾರಂಭ:
Z ಪೀಳಿಗೆ ಹಣದ ಜಗತ್ತಿನಲ್ಲಿ ಮೊದಲ ಹೆಜ್ಜೆ ಇಡುತ್ತಿದೆ. ಡೆಲಾಯ್ಟ್ ಮತ್ತು ಬಿಸಿಜಿ ವರದಿಗಳ ಪ್ರಕಾರ, ಶೇ. 35 ರಷ್ಟು Gen Z ಯುವಕರು 25ನೇ ವಯಸ್ಸಿಗೆ ಮುಂಚೆಯೇ ಹೂಡಿಕೆ ಪ್ರಾರಂಭಿಸುತ್ತಿದ್ದಾರೆ. ಆದರೆ ಈ ಪೈಕಿ ಬಹುತೇಕರು ಹೂಡಿಕೆಯಲ್ಲಿ ತಜ್ಞರ ಮಾರ್ಗದರ್ಶನವಿಲ್ಲದೆ ಅಥವಾ ಆರ್ಥಿಕ ಸಾಕ್ಷರತೆ ಇಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ದೀರ್ಘಕಾಲಿಕ ಅಪಾಯಕ್ಕೆ ಆಹ್ವಾನವಾಗಬಹುದು.
ಹಣಕಾಸು ಸಲಹೆಗಾಗಿ ಯಾರನ್ನು ನಂಬುತ್ತಿದೆ?
ಸಾಮಾಜಿಕ ಮಾಧ್ಯಮದ ಆಧಾರದ ಆರ್ಥಿಕ ಜ್ಞಾನGen Z ಪೀಳಿಗೆ ಹಣಕಾಸು ಸಲಹೆಗಾಗಿ ಇನ್ಸ್ಟಾಗ್ರಾಂ, ಯೂಟ್ಯೂಬ್, ಟೆಲಿಗ್ರಾಂ ಮುಂತಾದ ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಂಬುತ್ತಿದೆ. ಆದರೆ ಬಹುತೇಕ "ಇನ್ಫ್ಲೂಯೆನ್ಸರ್"ಗಳು ಬ್ರಾಂಡ್ ಒಪ್ಪಂದಗಳು ಅಥವಾ ಅಂಗಸಂಸ್ಥೆಗಳ ಮೂಲಕ ಪ್ರಭಾವಿತರಾಗಿರುವ ಕಾರಣ, ನಿಷ್ಪಕ್ಷಪಾತ ಸಲಹೆಯ ಕೊರತೆಯಿದೆ. ಇದರಿಂದಾಗಿ ಇವರು ಪ್ರಚೋದಿತ ಉತ್ಪನ್ನಗಳಿಗೆ ತುತ್ತಾಗುವ ಅಪಾಯವೂ ಹೆಚ್ಚಿದೆ.
ವ್ಯವಸ್ಥಿತ ಶಿಕ್ಷಣದ ಅಗತ್ಯತೆಈ ಪೀಳಿಗೆಗೆ ಹೂಡಿಕೆ ತತ್ವಗಳು, ಆಸ್ತಿ ವರ್ಗಗಳು, ಅಪಾಯ ನಿರ್ವಹಣೆ ಮುಂತಾದ ಮೂಲಭೂತ ಅರಿವು ದೊರೆಯಬೇಕಾದರೆ, ಶಿಕ್ಷಣ ವ್ಯವಸ್ಥೆಯು ಇದನ್ನು ಪಾಠ್ಯಕ್ರಮದಲ್ಲಿ ಸೇರಿಸಬೇಕಿದೆ. ಹೂಡಿಕೆ ಬ್ಯಾಂಕಿಂಗ್, ಹಣಕಾಸು ವಿಶ್ಲೇಷಣೆ ಮುಂತಾದ ಪ್ರಾಯೋಗಿಕ ಕೋರ್ಸ್‌ಗಳು ಈ ಸಂಬಂಧ ಬಹುಪಾಲು ತಯಾರನ್ನು ಒದಗಿಸುತ್ತವೆ.
ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು:
ಸಬಲೀಕರಣವೂ, ಸವಾಲುಗಳೂGen Z ಪೀಳಿಗೆ ಹೂಡಿಕೆಗೆ ಪ್ರವೇಶ ಪಡೆಯುತ್ತಿರುವ ಪ್ರಮುಖ ಮಾರ್ಗವೇಕೆಂದರೆ ಆನ್‌ಲೈನ್ ಫಿನ್‌ಟೆಕ್ ಅಪ್ಲಿಕೇಶನ್‌ಗಳು. ಇವುಗಳು ಕಾಗದ ರಹಿತ ಲೆಕ್ಕ ತೆರೆಯುವಿಕೆ, ETF, ಮ್ಯೂಚುವಲ್ ಫಂಡ್, SIP ಮುಂತಾದ ಸೇವೆಗಳನ್ನು ಒದಗಿಸುತ್ತವೆ. ಆದರೆ, ಈ ಉಪಕರಣಗಳು ಸಂಪೂರ್ಣ ಮಾರ್ಗದರ್ಶನ ನೀಡದ ಕಾರಣ, ಹಲವರು ಡೇಟಾ ಓದಲು ಅಥವಾ ಅಪಾಯ ಮೌಲ್ಯಮಾಪನ ಮಾಡಲು ತಿಳಿವಳಿಕೆ ಹೊಂದಿಲ್ಲ.
ಹಣವನ್ನು ಅರ್ಥಪೂರ್ಣವಾಗಿ ಬಳಸುವ ಪ್ರವೃತ್ತಿGen Z ಪೀಳಿಗೆ ಸ್ಟಾಕ್ ಮಾರುಕಟ್ಟೆ, ಮ್ಯೂಚುವಲ್ ಫಂಡ್, ESG (ಪರಿಸರ, ಸಾಮಾಜಿಕ ಮತ್ತು ಆಡಳಿತ) ಆಧಾರಿತ ಹೂಡಿಕೆಗಳಲ್ಲಿ ಆಸಕ್ತಿಯನ್ನು ತೋರಿಸುತ್ತಿದೆ. ಶಾಶ್ವತ ಸಂಪತ್ತನ್ನು ನಿರ್ಮಿಸಲು ಇವರು ಎಚ್ಚರಿಕೆಯಿಂದ ಪಾವತಿಸುವ ಚಿನ್ನ ಅಥವಾ ಬ್ಯಾಂಕ್ FD ಗಳಿಗಿಂತ, SIP ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದಲ್ಲದೆ, ಕ್ರಿಪ್ಟೋಕರೆನ್ಸಿಗಳ ಕಡೆಗೂ ಇವರು ಎಚ್ಚರಿಕೆಯಿಂದ ಗಮನ ಹರಿಸುತ್ತಿದ್ದಾರೆ.
ಇನ್ನು ಈ ಫಿನ್‌ಟೆಕ್ ಗೆ ತಾತ್ವಿಕ ನೆಲೆ ಬೇಕು..Gen Z ಇಂದು ಹಣದ ಕುರಿತು ಅಪಾರ ತೀವ್ರತೆ ಹೊಂದಿದೆ. ಆದರೆ, ಉಪಕರಣಗಳಿಂದ ಹೊರತಾಗಿ ನಿಜವಾದ ಮಾರ್ಗದರ್ಶನ, ವಿಶ್ಲೇಷಣಾ ಕೌಶಲ್ಯ, ಮತ್ತು ವಾಸ್ತವಿಕ ವಿದ್ಯೆ ಅವಶ್ಯಕವಾಗಿದೆ.


Click it and Unblock the Notifications