ಹೂಡಿಕೆ (Invest) ಮಾಡೋದು ಭವಿಷ್ಯದಲ್ಲಿ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲೂ ಕೆಲವು ಹೂಡಿಕೆ ಯೋಜನೆಗಳು ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಅದರಲ್ಲೊಂದು ಪಿಪಿಎಫ್ ಯೋಜನೆ. ಹಾಗಿದ್ರೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ನಲ್ಲಿ ತಿಂಗಳಿಗೆ 5,000, ₹9,000, ಮತ್ತು 12,000 ರೂಪಾಯಿ ಹೂಡಿಕೆ ಮಾಡಿದ್ರೆ, 15 ವರ್ಷಗಳಲ್ಲಿ ಎಷ್ಟು ಹಣ ನಿಮ್ಮ ಕೈಗೆ ಸಿಗುತ್ತೆ ಗೊತ್ತಾ? PPF ಯೋಜನೆಯು EEE ತೆರಿಗೆ ವಿನಾಯಿತಿಯನ್ನು ಹೊಂದಿದ್ದು, ಇದು ಮೂರು ಹಂತಗಳಲ್ಲಿ ತೆರಿಗೆ ಉಳಿತಾಯಕ್ಕೆ ನೆರವಾಗುತ್ತದೆ.

ತೆರಿಗೆ ವಿನಾಯಿತಿಗೆ ಬೆಸ್ಟ್
PPF ನಲ್ಲಿ ಹೂಡಿಕೆ ಮಾಡುವ ಎಲ್ಲಾ ಮೊತ್ತಕ್ಕೆ ನೀವು ಸೆಕ್ಷನ್ 80(C) ಅಡಿಯಲ್ಲಿ ತೆರಿಗೆ ಕಡಿತ ಪಡೆಯಬಹುದು. ಇದರ ಜೊತೆಗೆ, ಗಳಿಸಿದ ಬಡ್ಡಿ ಮತ್ತು ಮೆಚ್ಯೂರಿಟಿ ಸಮಯದಲ್ಲಿ ಹಿಂಪಡೆಯುವ ಹಣ ಕೂಡಾ ತೆರಿಗೆ ಮುಕ್ತವಾಗಿರುತ್ತೆ. ಇನ್ನು ಈ ಯೋಜನೆ ಭಾರತ ಸರ್ಕಾರದ ಅಧೀನದಲ್ಲಿರುವುದರಿಂದ ಸುರಕ್ಷಿತ ಯೋಜನೆಯೆಂದು ಗುರುತಿಸಲ್ಪಟ್ಟಿದೆ.
ಎಷ್ಟು ಹೂಡಿಕೆ ಮಾಡಬಹುದು?
ಈ ಯೋಜನೆಯು 15 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ, ಇದನ್ನು ಐದು ವರ್ಷಗಳಂತೆ ವಿಸ್ತರಿಸುತ್ತಾ ಹೋಗಬಹುದು. PPF ಖಾತೆಗೆ ವಾರ್ಷಿಕವಾಗಿ ಕನಿಷ್ಠ 500 ರೂಪಾಯಿಯಿಂದ ಹೂಡಿಕೆ ಮಾಡಿ, ಗರಿಷ್ಠ 1,50,000 ರೂಪಾಯಿವರೆಗೆ ಹೂಡಿಕೆ ಮಾಡಬಹುದು.
ಬಡ್ಡಿ ಎಷ್ಟು ಸಿಗುತ್ತೆ?
ಪ್ರಸ್ತುತ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಗೆ ವಾರ್ಷಿಕ 7.1% ಬಡ್ಡಿದರವನ್ನು ನೀಡಲಾಗುತ್ತದೆ, ಇದನ್ನು ವಾರ್ಷಿಕವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ.
PPF ಖಾತೆ ತೆರೆಯಲು ಯಾರು ಅರ್ಹರು?
ಭಾರತದಲ್ಲೇ ಜೀವನ ಕಲ್ಪಿಸಿಕೊಂಡಿರುವ ಯಾರೂ ಕೂಡಾ, ವೈಯಕ್ತಿಕವಾಗಿ PPF ಖಾತೆಯನ್ನು ಓಪನ್ ಮಾಡಬಹುದು. ಅಲ್ಲದೆ, ಪೋಷಕರು, ತಮ್ಮ ಮಕ್ಕಳ ಹೆಸರಲ್ಲಿ ಅಥವಾ ಇತರ ವ್ಯಕ್ತಿಗಳ ಪರವಾಗಿ ಖಾತೆಯನ್ನು ತೆರೆಯಬಹುದು. ದೇಶಾದ್ಯಂತ ಒಮ್ಮೆ ಒಂದು PPF ಖಾತೆಯನ್ನು ಮಾತ್ರ ತೆರೆಯಲು ಸಾಧ್ಯ, ಅದು ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕ್‌ನಲ್ಲಿ ತೆರೆಯಬಹುದು.
ಮಾಸಿಕ 5,000 ರೂ. ಹೂಡಿಕೆ: 15 ವರ್ಷಗಳಲ್ಲಿ 5 ಸಾವಿರದಂತೆ ವಾರ್ಷಿಕವಾಗಿ ಹೂಡಿಕೆ ಮೊತ್ತ 60,000 ರೂ. ಆಗುತ್ತದೆ. ಅಂದರೆ 15 ವರ್ಷಗಳಲ್ಲಿ ಒಟ್ಟು 9,00,000 ರೂ. ಹೂಡಿಕೆಯಾಗುತ್ತದೆ. ಇದರ ಅಂದಾಜು ಬಡ್ಡಿ ₹7,27,284 ಆಗಿದ್ದು, ನಿಮ್ಮ ಕೈಗೆ ಒಟ್ಟು ಮೆಚ್ಯೂರಿಟಿ ಮೊತ್ತ ₹16,27,284 ಸಿಗುತ್ತದೆ.
ಮಾಸಿಕವಾಗಿ 9,000 ರೂಪಾಯಿ ಹೂಡಿಕೆ: ತಿಂಗಳಿಗೆ 9 ಸಾವಿರ ಹೂಡಿಕೆ ಮಾಡಿದ್ರೆ, ವಾರ್ಷಿಕ ಹೂಡಿಕೆ 1,08,000 ಆಗುತ್ತದೆ. 15 ವರ್ಷಗಳಲ್ಲಿ ಒಟ್ಟು 16,20,000 ರೂ. ಹೂಡಿಕೆಯಾಗುತ್ತದೆ. ಈ ಹಣಕ್ಕೆ ಒಟ್ಟು 13,09,111 ರೂ. ಬಡ್ಡಿ ಸಿಗುತ್ತದೆ. ಇದರಿಂದ ಒಟ್ಟು ಮೆಚ್ಯೂರಿಟಿ ಮೊತ್ತ 29,29,111 ರೂ. ಆಗಲಿದೆ.
ಮಾಸಿಕ 12,000 ರೂಪಾಯಿ ಹೂಡಿಕೆ: 12 ಸಾವಿರ ಹೂಡಿಕೆ ಮಾಡಿದ್ರೆ, ವಾರ್ಷಿಕ ಹೂಡಿಕೆ ಮೊತ್ತ 1,44,000 ರೂ. ಆಗುತ್ತದೆ. 15 ವರ್ಷಗಳಲ್ಲಿ ಒಟ್ಟು ಹೂಡಿಕೆ ಮೊತ್ತ 21,60,000 ರೂ. ಆಗುತ್ತದೆ. ಈ ಹೂಡಿಕೆಗೆ ಅಂದಾಜು ಬಡ್ಡಿ 17,45,481 ರೂ. ಆಗುತ್ತದೆ, ಇದರಿಂದ ಒಟ್ಟು ಮೆಚ್ಯೂರಿಟಿ ಮೊತ್ತ 39,05,481 ರೂ. ಆಗಲಿದೆ.
(ಈ ವಿಶ್ಲೇಷಣೆ ಮತ್ತು ಶಿಫಾರಸುಗಳು ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆಗೆ ಖಾತರಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟವನ್ನು ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸ್ವತಂತ್ರವಾಗಿ ಪರಿಶೀಲಿಸಬೇಕು.)


Click it and Unblock the Notifications