ಈಗಾಗಲೇ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಜನರಿಗೆ ಹಲವು ಯೋಜನೆಗಳನ್ನ ನೀಡ್ತಿದೆ. ಇದರ ಜೊತೆಗೆ ನಿವೃತ್ತಿ ಸಮಯದಲ್ಲಿ ಸಹಯವಾಗಬೇಕು ಎನ್ನುವ ಉದ್ದೇಶದಿಂದ ಎಲ್‌ಐಸಿಯಿಂದ ಪಿಂಚಣಿಯಂತಹ ಯೋಜನೆಗಳನ್ನ ಜನರಿಗೆ ಪರಿಚಯ ಮಾಡ್ತಿದೆ.
ನೀವು ಪಿಂಚಣಿ ಯೋಜನೆಯನ್ನು ಹುಡುಕುತ್ತಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ನೀವು ಎಲ್ಐಸಿಯ ಯೋಜನೆಯನ್ನು ಆಯ್ಕೆ ಮಾಡಬಹುದು. ಈ ಯೋಜನೆ ನಿಮಗೆ ಉತ್ತಮವಾಗಿದ್ದು, ಇದರಲ್ಲಿ ಯಾವುದೇ ರೀತಿಯ ಅಪಾಯವಿರುವುದಿಲ್ಲ ಹಾಗೆ ಪ್ರತಿ ತಿಂಗಳು ನಿಯಮಿತ ಆದಾಯದ ಅಡಿಯಲ್ಲಿ ಪಿಂಚಣಿಯ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಯೋಜನೆಯು ಎಲ್ಐಸಿ ಸರಳ್ ಪಿಂಚಣಿ ಯೋಜನೆಯೆಂಬ ಯೋಜನೆಯನ್ನ ತರುತ್ತಿದ್ದು, ಈ ಯೋಜನೆ ನಿಮಗೆ ಪ್ರತಿ ತಿಂಗಳು ಪಿಂಚಣಿಯನ್ನ ನೀಡುತ್ತದೆ. ಅಲ್ಲದೆ ನೀವು ಒಂದು ಬಾರಿ ಮಾತ್ರ ಇದರಲ್ಲಿ ಹೂಡಿಕೆ ಮಾಡಬಹುದು ಮತ್ತು ನೀವು ಜೀವನಪೂರ್ತಿ ಪಿಂಚಣಿ ಪಡೆಯಬಹುದು.
ಎಲ್ಐಸಿ ಸರಳ ಪಿಂಚಣಿ ಯೋಜನೆಯು ಒಂದ ಪ್ರಸಿದ್ಧ ಯೋಜನೆಯಾಗಿದ್ದು, ನಿವೃತ್ತಿ ನಂತರ ನಿಮ್ಮ ಹಣದ ಕೊರತೆಯನ್ನ ಈ ಯೋಜನೆ ಪೂರೈಸುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿವೃತ್ತಿಯ ನಂತರ ಪ್ರತಿ ತಿಂಗಳು 12000 ರೂಪಾಯಿಗಳ ಪಿಂಚಣಿಯನ್ನು ಪಡೆಯಬಹುದು.
ನಿಮ್ಮ ನಿವೃತ್ತಿಯ ನಂತರ 12000 ರೂಪಾಯಿಗಳ ಪಿಂಚಣಿಯ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.
ಒರ್ವ ವ್ಯಕ್ತಿ ಖಾಸಗಿ ಅಥವಾ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅವರು ತಮ್ಮ ನಿವೃತ್ತಿಯ ಮೊದಲು ತಮಗೆ ಬರುವ ಪಿಎಫ್ ನಿಧಿ ಮತ್ತು ಗ್ರಾಚ್ಯುಟಿ ಮೊತ್ತವನ್ನು ನೀವು ಅದರಲ್ಲಿ ಹೂಡಿಕೆ ಮಾಡುವ ಮೂಲಕ ಇದರ ಲಾಭವನ್ನ ಪಡೆಯಬಹುದು. ಹಾಗೆ ಅವರು ತಮ್ಮ ಜೀವನದುದ್ದಕ್ಕೂ ಪ್ರತಿ ತಿಂಗಳು ನೀವ ಪಿಂಚಣಿಯ ಪ್ರಯೋಜವನ್ನು ಪಡೆಯಬಹುದು.
LIC ಸರಳ್ ಪಿಂಚಣಿ ಯೋಜನೆಯ ವೈಶಿಷ್ಟ್ಯಗಳು
ಎಲ್ಐಸಿಯ ಈ ಯೋಜನೆಯಲ್ಲಿ ಮುಖ್ಯವಾಗಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿ ಇದರಲ್ಲಿ ಹೂಡಿೆ ಮಾಡುವ ಅವಕಾಶವಿರುವುದಿಲ್ಲ. ನೀವು ನಿಮ್ಮ ಗರಿಷ್ಠ 80 ವರ್ಷ ವಯಸ್ಸಿನವರೆಗೆ ನೀವು ಯಾವಾಗ ಬೇಕಾದರೂ ಈ ಯೋಜನೆಯ ಮೂಲಕ ಹೂಡಿಕೆ ಮಾಡಬಹುದು. ಈ ಪಾಲಿಸಿಯ ಅಡಿಯಲ್ಲಿ, ಮಸಿಕವಾಗಿ ನೀವು 1000 ರೂಪಾಯಿಗಳನ್ನ ನೀವು ಹೂಡಿಕೆ ಮಾಡಬೇಕು ಹಾಗೆ ತ್ರೈಮಾಸಿಕದಲ್ಲಿ ನೀವು ಕನಿಷ್ಠ 3000 ರೂ. ಹಡಿಕೆ ಮಾಡಬಾಕಾಗುತ್ತದೆ. ಹಾಗೆ
ಅರ್ಧ-ವಾರ್ಷಿಕ ಆಧಾರದ ಮೇಲೆ 6000 ರೂ. ಹೂಡಿಕೆ ಮಾಡಬೇಕು ಮತ್ತು ವಾರ್ಷಿಕ ಆಧಾರದ ಮೇಲೆ ರೂ 12000 ವರ್ಷಾಶನವನ್ನು ತೆಗೆದುಕೊಳ್ಳಬೇಕು.
12000 ಪಿಂಚಣಿ ಪಡೆಯುವುದು ಹೇಗೆ?
ಎಲ್ಐಸಿಯ ಸರಳ ಪಿಂಚಣಿ ಯೋಜನೆಯಲ್ಲಿ, ನೀವು ವಾರ್ಷಿಕವಾಗಿ ಕನಿಷ್ಠ 12 ಸಾವಿರ ರೂ. ಹೂಡಿಕೆ ಮಾಡಬೇಕು. ಇದಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ. ನೀವು ಎಷ್ಟು ಬೇಕಾದರೂ ಇದರಲ್ಲಿ ಹೂಡಿಕೆ ಮಾಡಬಹುದು. ಈ ಪಾಲಿಸಿ ಯೋಜನೆಯಡಿಯಲ್ಲಿ, ಯಾವ ವ್ಯಕ್ತಿ ಕೂಡ ಒಮ್ಮೆ ಪ್ರೀಮಿಯಂ ಪಾವತಿಸುವ ಮೂಲಕ ವಾರ್ಷಿಕ, ಅರ್ಧ-ವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಪಿಂಚಣಿಗಳ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯಬಹುದು. ಎಲ್ಐಸಿ ಕ್ಯಾಲ್ಕುಲೇಟರ್ ಪ್ರಕಾರ, ನೀವೇನದ್ರು 42 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದರೆ ನೀವು 30 ಲಕ್ಷ ರೂ.ಗಳನ್ನು ವರ್ಷಾಶನವನ್ನು ಖರೀದಿಸಿ, ಈ ಮೂಲಕ ನೀವು ಪ್ರತಿ ತಿಂಗಳು 12,388 ರೂ. ಪಿಂಚಣಿ ಪಡೆಯಬಹುದು.
ಸಾಲವನ್ನೂ ತೆಗೆದುಕೊಳ್ಳಬಹುದು
ನೀವು www.licindia.in ಗೆ ಭೇಟಿ ನೀಡಿ LICಯ ಈ ಯೋಜನೆಯನ್ನು ಪಡೆಯಬಹುದು. ಈ ಪಾಲಿಸಿಯ ಅಡಿಯಲ್ಲಿ 6 ತಿಂಗಳು ಪೂರ್ಣಗೊಂಡಿದ್ದರೆ, ಅಗತ್ಯವಿದ್ದರೆ ನೀವು ಅಷ್ಟಕ್ಕೆ ನಿಲ್ಲಿಸಬಹುದು. ಅಲ್ಲದೆ, ಈ ಯೋಜನೆಯಡಿ ನೀವು ಸಾಲವನ್ನು ತೆಗೆದುಕೊಳ್ಳಬಹುದು. ಆದಾಗ್ಯೂ, ನಿಮ್ಮ ಸಾಲದ ಮೊತ್ತ ನಿಮ್ಮ ಹೂಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications