EPF ವರ್ಗಾವಣೆ ಮಾಡುವುದು ಈಗ ಸುಲಭವಗಿದೆ. EPFO ಸದಸ್ಯರು ತಮ್ಮ EPF ಖಾತೆಗೆ ಆಧಾರ್ ಲಿಂಕ್ ಮಾಡುವ ಮೂಲಕ ನೀವು ಸುಲಭವಾಗಿ ನಿಮ್ಮ EPF ಖಾತೆಯನ್ನ ವರ್ಗಾಯಿಸಬಹುದು. ಈ ಮೊದಲು ಉದ್ೋಗಿಗಳು EPF ಖಾತೆಯನ್ನ ವಾರ್ಗಾವಣೆ ಮಾಡಲು ಉದ್ಯೋಗದಾತರನ್ನ ಭೇಟಿ ಮಡಬೇಕಿತ್ತು. ಆದ್ರೀಗ ನಿಮ್ಮ EPF ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ರೆ ಸಾಕು ನೀವು ಉದ್ಯೋಗಾತರ ಬಳಿ ಹೋಗುವ ಅವಶ್ಯಕತೆ ಇಲ್ಲ.
EPF ಖಾತೆಯನ್ನು ವರ್ಗಾಯಿಸಲು ಬಯಸುವವರು ಆಧಾರ್ ಓಟಿಪಿಯನ್ನ ಬಳಸಿಕೊಂಡು ಅನ್‌ಲೈನ್‌ನಲ್ಲಿ ನಿಮ್ಮ ಖಾತೆಯನ್ನ ವರ್ಗಾಯಿಸಲು ಕ್ಲೈಮ್‌ಗಳನ್ನ ಸಲ್ಲಿಸಬಹುದು. ಅಕ್ಟೋಬರ್
1 2017 ನಂತರ UAN ಹೊಂದಿರರುವ ಸದಸ್ಯರು ಈ ಸೌಲಭ್ಯವನ್ನ ಪಡೆದುಕೊಳ್ಳಬಹುದು. ಈ ಹಿಂದೆ ಇಪಿಫ್‌ಒ ಸದಸ್ಯರು ಎದುರಿಸುತ್ತಿದ್ದ ತೊಂದರೆಗಳನ್ನ್ ತೆಗೆದುಹಾಕಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗಿಗಳ ಸಚಿವ ಮಾನ್ಸುಖ್ ಮಾಂಡವೀಯ ಈ ಹೊಸ ವಿಧಾನವನ್ನ ಪರಿಚಯಿಸಿದ್ದಾರೆ.

ಆಧಾರ್ ಕಾರ್ಡ್ ಲಿಂಕ್ ಮಾಡಲು ಅಗತ್ಯವಿರುವ ದಾಖಲೆಗಳು
ಈಗಾಗಲೇ ಆಧಾರ್ ಲಿಂಕ್ ಆಗಿರುವ ಇ-ಕೆವೈಸಿ ಇಪಿಎಫ್ ಸದಸ್ಯರು ಈಗ ಈ ಹೊಸ ಸೌಲಭ್ಯವನ್ನ ಕೂಡ ಬಳಸಿಕೊಡು ನಿಮ್ಮ ಇಪಿಎಫ್ ಖಾತೆಯನ್ನ ವರ್ಗಾಯಿಸಬಹುದು. ಆಧಾರ್ ಓಟಿಪಿ ಮೂಲಕ ನೀವು ನಿಮ್ಮ ಉದ್ಯೋಗದಾತರ ಹಸ್ತಕ್ಷೇಪವಿಲ್ಲದೇ ನಿಮ್ಮ ಖಾತೆಯನ್ನ ವರ್ಗಾಯಿಸಬಹುದು.
ಇಪಿಎಫ್ ಖತೆಗೆ ಆಧರ್ ಲಿಂಕ್ ಮಾಡುವುದು ಕಡ್ಡಾಯವಾದ ನಂತರ ಯಾರೆಲ್ಲಾ ಅಕ್ಟೋಬರ್ 1, 2017ರ ನಂತರ UAN ಖಾತೆಯನ್ನ ಹೊಂದಿರುತ್ತಾರೋ ಅಂತವರಿಗೆ ಮಾತ್ರ ಈ ಆಯ್ಕೆ ಲಭ್ಯವಿರುತ್ತದೆ.
EPF UAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ ಇಲ್ಲಿ ತಿಳಿಯಿರಿ
- EPF UAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು EPFO ಸದಸ್ಯರ ಇ-ಸೇವಾ ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕು.
- ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಹಾಕಿ ಸೈನ್ ಇನ್ ಮಾಡಬೇಕು
- ನಿಮ್ಮ ಇಪಿಎಫ್ ಖಾತೆಗೆ ನಿಮ್ಮ ಆದಾರ್ ಕಾರ್ಡ್ ಲಿಂಕ್ ಮಾಡಲು ನಿರ್ವಹಿಸು ವಿಭಾಗಕ್ಕೆ ಹೋಗಿ ಜೊತೆಗೆ ಕೆವೈಸಿ ಮೇಲೆ ಕ್ಲಿಕ್ ಮಾಡಬೇಕು.
- ಕೆವೈಸಿ ವಿಭಗವನ್ನ ಆಯ್ಕೆ ಮಾಡಿದ ನಂತರ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನ ಹಾಕಿ ಮತ್ತು ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನ ಹಾಕಿ ಪರಿಶೀಲಿಸಬೇಕು.
- ನೀವು ಒಂದು ಬಾರಿ ಸೇವ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲರು ಮಾಹಿತಿಗಳನ್ನ UIDAI ಜೊತೆಗೆ ಪರಿಶೀಲನೆ ಮಾಡಿ.
- ನಿಮ್ಮ ಪರಿಶೀಲನೆ ಮುಕ್ತಾಯವಾದ ನಂತರ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಇಪಿಎಫ್ ಕಾತೆಗೆ ಲಿಂಕ್ ಆಗುತ್ತದೆ.
ಈ ಮೂಲಕ ನೀವು ನಿಮ್ಮ ಉದ್ಯೋಗದಾತರ ಹಸ್ತಕ್ಷೇಪವಿಲ್ಲದೇ, ನಿಮ್ಮ ಇಪಿಎಫ್ ಖಾತೆಯನ್ನ ವರ್ಗಾಯಿಸಬಹದು.
EPFO ಪ್ರಯೋಜನಗಳ ಬಗ್ಗೆ ತಿಳಿಯರಿ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭಾರತದಲ್ಲಿನ ಸರ್ಕಾರಿ ಸಂಸ್ಥೆಯಾಗಿದ್ದು, ದೇಶದ ಉದ್ಯೋಗಿಗಳಿಗೆ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ಯೋಜನೆಗಳನ್ನು ನಿರ್ವಹಿಸುತ್ತದೆ. ಇದು ಪ್ರಾಥಮಿಕವಾಗಿ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಸಂಬಳದ ಉದ್ಯೋಗಿಗಳಿಗೆ ಸೇವೆ ಸಲ್ಲಿಸುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿಗೆ (ಇಪಿಎಫ್) ಕೊಡುಗೆಗಳನ್ನು ಸಂಗ್ರಹಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಇಪಿಎಫ್‌ಒ ಹೊಂದಿದೆ.
ಇದು ನಿವೃತ್ತಿ ಉಳಿತಾಯ ಯೋಜನೆಯಾಗಿದೆ, ಉದ್ಯೋಗಿಗಳು ನಿವೃತ್ತರಾದ ನಂತರ ಆರ್ಥಿಕ ಭದ್ರತೆಯನ್ನು ಹೊಂದಿರುತ್ತಾರೆ. ನಿವೃತ್ತಿಯ ನಂತರ ಉದ್ಯೋಗಿಗಳಿಗೆ ಪಿಂಚಣಿ ಪ್ರಯೋಜನಗಳನ್ನು ಒದಗಿಸುವ ನೌಕರರ ಪಿಂಚಣಿ ಯೋಜನೆ (ಇಪಿಎಸ್) ಮತ್ತು ಉದ್ಯೋಗಿಗಳ ಠೇವಣಿ-ಸಂಯೋಜಿತ ವಿಮಾ ಯೋಜನೆ (EDLI) ಯನ್ನು ಸಹ ಸಂಸ್ಥೆಯು ಮೇಲ್ವಿಚಾರಣೆ ಮಾಡುತ್ತದೆ, ಇದು ನೌಕರರಿಗೆ ಮರಣದ ಸಂದರ್ಭದಲ್ಲಿ ಜೀವ ವಿಮಾ ಪ್ರಯೋಜನಗಳನ್ನು ಒದಗಿಸುತ್ತದೆ.
ಭವಿಷ್ಯ ನಿಧಿಗಳು ಮತ್ತು ಪಿಂಚಣಿಗಳನ್ನು ನಿರ್ವಹಿಸುವ ಪ್ರಮುಖ ಜವಾಬ್ದಾರಿಗಳ ಹೊರತಾಗಿ, ಇಪಿಎಫ್‌ಒ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಸುಧಾರಿಸಲು, ಜಾಗೃತಿಯನ್ನು ಹೆಚ್ಚಿಸಲು ಮತ್ತು ವಿವಿಧ ವಲಯಗಳಲ್ಲಿ ಹೆಚ್ಚಿನ ಉದ್ಯೋಗಿಗಳಿಗೆ ತನ್ನ ಯೋಜನೆಗಳ ವ್ಯಾಪ್ತಿಯನ್ನು ಹೆಚ್ಚಿಸುವ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದೆ.
ಈ ಯೋಜನೆಗಳ ಪ್ರಯೋಜನಗಳನ್ನು ಸರಿಯಾಗಿ ಬಳಸಿಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಇದು ಉದ್ಯೋಗದಾತರು ಮತ್ತು ಉದ್ಯೋಗಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವ್ಯಾಪಕ ಜನಸಂಖ್ಯೆಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಸಲುವಾಗಿ ಅನೌಪಚಾರಿಕ ಮತ್ತು ಅಸಂಘಟಿತ ವಲಯಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ವಿಸ್ತರಿಸುವ ಈ ಪ್ರಯತ್ನವು ಭಾರತದ ಸಾಮಾಜಿಕ ಭದ್ರತಾ ಮೂಲಸೌಕರ್ಯಕ್ಕೆ ಪ್ರಮುಖವಾಗಿದೆ, ಅಗತ್ಯವಿರುವ ಸಮಯದಲ್ಲಿ ಕಾರ್ಮಿಕರಿಗೆ ಆರ್ಥಿಕ ಬೆಂಬಲವನ್ನು ನೀಡುತ್ತದೆ.


Click it and Unblock the Notifications