ಮದುವೆ ನಂತರ ಈ ಕೆಲಸ ಮಾಡುವುದನ್ನು ಮರೆಯಬೇಡಿ!

ನವದೆಹಲಿ, ಆಗಸ್ಟ್‌ 8: ಜೀವನದಲ್ಲಿ ಮದುವೆ ಪ್ರಮುಖ ಘಟ್ಟ. ಮದುವೆಯಾದ ಮೇಲೆ ಸಂಭ್ರಮ ಕಳೆಯಲು ಕೆಲ ದಿನಗಳ ಕಾಲ ಪ್ರವಾಸ, ಸುತ್ತಾಟ ಎಲ್ಲವನ್ನು ಮಾಡುತ್ತೇವೆ. ನಂತರ ಎಂದಿನಂತೆ ನವಜೋಡಿ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಒಂದು ಮುಖ್ಯವಾದ ಕೆಲಸವನ್ನೇ ಮರೆತುಬಿಡುತ್ತಾರೆ.

ಹೂಡಿಕೆ ಮರೆಯಬೇಡಿ:

ಹೂಡಿಕೆ ಮತ್ತು ಉಳಿತಾಯದ ಸಂಗತಿಯನ್ನು ಅನೇಕ ಜೋಡಿ ಮರೆತೇ ಬಿಡುತ್ತಾರೆ. ಹೂಡಿಕೆ ಮತ್ತು ಖರ್ಚು ವೆಚ್ಚಗಳ ಬಗ್ಗೆ ಯೋಚನೆ ಮಾಡುವುದಕ್ಕೆ ಇದು ಸಕಾಲ. ಇಷ್ಟು ದಿನ ದಂಪತಿ ಪ್ರತ್ಯೇಕವಾಗಿ ಈ ಯೋಜನೆಗಳನ್ನು ಮಾಡುತ್ತಿದ್ದರು. ಆದರೆ, ಈಗ ಮದುವೆ ನಂತರ ಸಂಗತಿಗಳು ಬದಲಾಗಿವೆ. ಮನೆ ಖರ್ಚನ್ನು ಹೇಗೆ ಹಂಚಿಕೊಳ್ಳುವುದು? ಸಾಲದ ಇಎಂಐಗಳನ್ನು ನಿರ್ವಹಿಸುವುದು ಹೇಗೆ? ಈ ಎಲ್ಲ ವಿಚಾರಗಳ ಮೇಲೆ ಗಮನ ಹರಿಸಬೇಕು.

ಮದುವೆ ನಂತರ ಈ ಕೆಲಸ ಮಾಡುವುದನ್ನು ಮರೆಯಬೇಡಿ!

ಮದುವೆ ನಂತರವೇ ಅಸಲಿ ಜೀವನ ಆರಂಭ:

ತಮ್ಮ ಮದುವೆ ಕಾರ್ಯಕ್ರಮಕ್ಕೆ ಹಣಕಾಸು ಹೊಂದಿಸುವುದು ಹೇಗೆ ಎಂದು ಚರ್ಚೆ ಮಾಡಿಕೊಳ್ಳುತ್ತಾರೆ. ಆದರೆ, ವಾಸ್ತವದಲ್ಲಿ, ಜೀವನ ಶುರುವಾಗುವುದೇ ಈ ಕಾರ್ಯಕ್ರಮಗಳೆಲ್ಲ ಮುಗಿದ ನಂತರ. ಈ ಜೀವನದ ಬಗ್ಗೆಯೇ ಅವರು ಹೆಚ್ಚು ಹಣಕಾಸಿನ ಖರ್ಚು ವೆಚ್ಚಗಳನ್ನು ನಿರ್ವಹಿಸಬೇಕಾಗುತ್ತದೆ.

ಹಣಕಾಸಿನ ಯೋಜನೆ ಸರಿಯಾಗಿರಲಿ:

ಮೊದಲನೆಯದಾಗಿ, ನಿಮ್ಮ ವೈಯಕ್ತಿಕ ಮತ್ತು ಜಂಟಿ ಹಣಕಾಸಿನ ಗುರಿಗಳ ಬಗ್ಗೆ ನಿರ್ಧಾರ ಮಾಡಿ. ನಿಮ್ಮ ಖರ್ಚು ಮತ್ತು ಹಣಕಾಸಿನ ಗುರಿಗಳ ಬಗ್ಗೆ ನಿಮ್ಮ ಸಂಗಾತಿಯ ಜೊತೆಗೆ ಪ್ರಾಮಾಣಿಕ, ಪಾರದರ್ಶಕವಾದ ಮಾತುಕತೆ ಮಾಡಿಕೊಳ್ಳಿ. ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ನಿರೀಕ್ಷೆಗಳಿರುತ್ತವೆ. ಅದಕ್ಕಾಗಿ ಆ ವ್ಯಕ್ತಿ ಸರಿಯಾಗಿ ಹಣಕಾಸಿನ ಯೋಜನೆ ಮಾಡಿಕೊಳ್ಳಬೇಕಾಗುತ್ತದೆ.

ಜಂಟಿ ಬ್ಯಾಂಕ್ ಅಕೌಂಟ್:

ಪ್ರತಿ ದಂಪತಿಯೂ ಜಂಟಿ ಬ್ಯಾಂಕ್ ಅಕೌಂಟ್ ಅನ್ನು ಮಾಡಿಕೊಳ್ಳಬೇಕು ಎಂದು ಪರಿಣಿತರು ಸಲಹೆ ಮಾಡುತ್ತಾರೆ. ಇದರ ಜೊತೆಗೆ, ಪ್ರತ್ಯೇಕ ಖಾತೆಯನ್ನೂ ತಮಗಾಗಿ ಮಾಡಿಕೊಳ್ಳಬೇಕು. ಇದರಿಂದ ದಂಪತಿ ಒಟ್ಟಾಗಿ ಬೆಳೆಯುವುದಕ್ಕೆ ಅನುವು ಮಾಡಿಕೊಡುವುದಷ್ಟೇ ಅಲ್ಲ, ಅವರ ವೈಯಕ್ತಿಕ ಗುರಿಗಳನ್ನು ಸಾಧಿಸಲೂ ಸಹಾಯ ಮಾಡುತ್ತದೆ.

ಗಳಿಕೆಯ ವಿಶ್ಲೇಷಣೆ ಮಾಡಿ:

ಪತಿ ಮತ್ತು ಪತ್ನಿ ಇಬ್ಬರೂ ಎಷ್ಟು ಗಳಿಸುತ್ತಾರೆ ಎಂಬುದನ್ನು ವಿಶ್ಲೇಷಿಸಿ. ಅವರ ಒಟ್ಟಾರೆ ವೆಚ್ಚ ಎಷ್ಟು ಮತ್ತು ಹೂಡಿಕೆಗೆ ಎಷ್ಟು ಹಣ ಉಳಿದಿದೆ ಎಂಬುದನ್ನು ನೋಡಿ. ನಂತರ, ಕಾರು, ಮನೆ ಖರೀದಿ ಮಾಡುವುದು, ರಜೆಯಲ್ಲಿ ಟ್ರಿಪ್‌ಗೆ ಹೋಗುವುದು ಅಥವಾ ಇತ್ಯಾದಿ ಗುರಿಗಳನ್ನು ಪಟ್ಟಿ ಮಾಡಿಕೊಳ್ಳಿ. ಗುರಿಗಳನ್ನು ಎಷ್ಟು ವರ್ಷಗಳಲ್ಲಿ ಪೂರೈಸಬೇಕು ಎಂಬುದನ್ನೂ ಟಿಪ್ಪಣಿ ಮಾಡಿಕೊಳ್ಳಿ. ಅಲ್ಲದೆ, ಇಂದಿನ ಪ್ರತಿ ಗುರಿಯ ಅಂದಾಜು ಮೌಲ್ಯವನ್ನೂ ಇದರಲ್ಲಿ ವಿವರಿಸಿ. ನಂತರ, ವೃತ್ತಿಪರರ ಸಹಾಯದಿಂದ, ಪ್ರತಿ ಗುರಿಯ ಹಣಕಾಸು ಮೌಲ್ಯದ ಅಂದಾಜನ್ನು ನಿಖರವಾಗಿ ದಂಪತಿ ಮಾಡಬಹುದು ಮತ್ತು ಅದಕ್ಕೆ ಅನುಗುಣವಾಗಿ ಬಜೆಟ್ ಮಾಡಬಹುದು.

ದಾಖಲಾತಿ ನಿರ್ಮಾಣ ಮುಂದೆ ಹಾಕಬೇಡಿ:

ಮದುವೆ ರಿಜಿಸ್ಟರ್ ಮಾಡಿಕೊಳ್ಳುವುದು ಅಥವಾ ಆಧಾರ್‌, ಪ್ಯಾನ್ ಕಾರ್ಡ್‌ ಮತ್ತು ಇತರ ಡಾಕ್ಯುಮೆಂಟ್‌ಗಳಲ್ಲಿ ಬದಲಾವಣೆ ಮತ್ತು ಅಪ್‌ಡೇಟ್ ಮಾಡಿಕೊಳ್ಳುವುದು ಇತ್ಯಾದಿಯನ್ನು ಮುಂದೂಡಬೇಡಿ. ಪತ್ನಿ ತನ್ನ ಹೆಸರನ್ನು ಬದಲಿಸಿಕೊಳ್ಳಲು ಬಯಸಿದರೂ ಸಹಿತ ಅದನ್ನು ಮಾಡಿಬಿಡಿ.

ಪ್ಲಾನಿಂಗ್ ನಿರಂತರವಾಗಿರಲಿ:

ಫೈನಾನ್ಷಿಯಲ್ ಪ್ಲಾನಿಂಗ್ ಒಂದು ಬಾರಿ ಮಾಡಿ ಮುಗಿಸುವುದಲ್ಲ. ಅದನ್ನು ಮಾಡುತ್ತಲೇ ಇರಬೇಕು ಎಂಬುದನ್ನು ನೆನಪಿಡಿ. ಕುಟುಂಬವನ್ನು ಆರಂಭಿಸುವುದು, ಉದ್ಯೋಗವನ್ನು ಬದಲಿಸುವುದು, ವೃತ್ತಿಯಿಂದ ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ಳುವುದು ಅಥವಾ ಬೇರೆ ನಗರ ಅಥವಾ ದೇಶಕ್ಕೆ ಶಿಫ್ಟ್ ಆಗುವುದು ಇತ್ಯಾದಿ ಜೀವನದಲ್ಲಿ ಬದಲಾವಣೆ ಆಗಬೇಕಿರುವ ಸಂದರ್ಭದಲ್ಲಿ ತಮ್ಮ ಪ್ಲಾನ್ ಅನ್ನು ದಂಪತಿ ಹೊಂದಿಸಿಕೊಳ್ಳಬೇಕಾಗುತ್ತದೆ. ರಿಟೈರ್‌ಮೆಂಟ್‌ಗೆ ಹಣ ಕೂಡಿಡುವುದು, ಮನೆ ಅಥವಾ ಕಾರನ್ನು ಖರೀದಿ ಮಾಡುವುದು ಇತ್ಯಾದಿ ಜೀವನದ ಗುರಿಗಳಿಗೆ ಹಣವನ್ನು ಪ್ರತ್ಯೇಕವಾಗಿ ತೆಗೆದಿಡುವ ಮೂಲಕ ನಿಮ್ಮ ಹಣಕಾಸಿನ ಸಿದ್ಧತೆಗಳನ್ನೂ ಆರಂಭಿಸಿ.

ಎಮರ್ಜನ್ಸಿ ಫಂಡ್ ಇರಲಿ:

ದಂಪತಿ ತಮ್ಮ ದಾಂಪತ್ಯ ಬದುಕಿನ ಆರಂಭದಿಂದಲೂ ಎಮರ್ಜನ್ಸಿ ಫಂಡ್ ಒಂದನ್ನು ಸಿದ್ಧ ಮಾಡಿಕೊಳ್ಳಬೇಕು. ಅನಿರೀಕ್ಷಿತವಾಗಿ ಹಣಕಾಸು ಮುಗ್ಗಟ್ಟು ಎದುರಿಸಬೇಕಾದ ಸಂದರ್ಭ ಎದುರಾದರೆ ಆಗಲು ದಂಪತಿ ಸಿದ್ಧರಾಗಿರಬೇಕು. ಎಸ್ ಐಪಿ, ಮ್ಯೂಚುವಲ್ ಫಂಡ್ ನಂತಹ ಹೂಡಿಕೆಯನ್ನು ಆರಂಭಿಸಿಕೊಳ್ಳಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+