ಶಿಕ್ಷಣ ಸಾಲ ಬೇಗ ತೀರಿಸಲು ಈ ಮಾರ್ಗಗಳನ್ನು ಅನುಸರಿಸಿ

ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆಯುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಓದು ಮುಂದುವರಿಸಲು ಸಾಧ್ಯವಿಲ್ಲದಿದ್ದರೆ ಶಿಕ್ಷಣದ ಸಾಲದ ಮೂಲಕ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು. ಆದರೆ, ಕೋರ್ಸ್ ಮುಗಿದ ತಕ್ಷಣವೇ ಸಾಲ ಮರುಪಾವತಿ ಆರಂಭವಾಗುವುದಿಲ್ಲ. ಸಾಲವನ್ನು ಮರುಪಾವತಿಸಲು 6 ತಿಂಗಳಿನಿಂದ 1 ವರ್ಷದವರೆಗಿನ ಕಾಲಾವಕಾಶವನ್ನು ಬ್ಯಾಂಕುಗಳು ನೀಡುತ್ತವೆ. ಈ ಅವಧಿಯ ನಂತರ, ನೀವು ಮಾಸಿಕ ಕಂತುಗಳನ್ನು (EMI) ಪಾವತಿಸಬೇಕಾಗುತ್ತದೆ.

ಆದರೆ ಆರಂಭಿಕ ಮರುಪಾವತಿಯು ವಿದ್ಯಾರ್ಥಿಗಳು ತಮ್ಮ ಸಾಲಗಳನ್ನು ಬೇಗನೆ ತೀರಿಸಲು ಮತ್ತು ಭವಿಷ್ಯಕ್ಕಾಗಿ ಅವರ ಹಣಕಾಸು ಯೋಜಿಸಲು ಸಹಾಯ ಮಾಡುತ್ತದೆ. ಶಿಕ್ಷಣ ಸಾಲವು ಹೆಚ್ಚಾಗಿ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ತೆಗೆದುಕೊಳ್ಳುವ ಮೊದಲ ಸಾಲವಾಗಿರುವುದರಿಂದ ಇದು ಅವರ ಕ್ರೆಡಿಟ್ ಸ್ಕೋರ್ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ . ಶಿಕ್ಷಣ ಸಾಲಗಳನ್ನು ನೀವು ಹೇಗೆ ವೇಗವಾಗಿ ಮರುಪಾವತಿಸಬಹುದು ಎಂಬುದರ ಕುರಿತು ಮಾರ್ಗದರ್ಶಿ ಇಲ್ಲಿದೆ.

ಶಿಕ್ಷಣ ಸಾಲದಿಂದ ಮುಕ್ತಿ: ಈ ಟಿಪ್ಸ್ ಅನುಸರಿಸಿ

ಶಿಕ್ಷಣ ಸಾಲಗಳ ಹೊರೆ ಕಡಿಮೆ ಮಾಡಲು ವಿದ್ಯಾರ್ಥಿವೇತನವನ್ನು ಹುಡುಕಿ

ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡಲು ವಿದ್ಯಾರ್ಥಿವೇತನಗಳು ಒಂದು ಉತ್ತಮ ಮಾರ್ಗವಾಗಿದೆ. ಅನೇಕ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತವೆ. ಈ ವಿದ್ಯಾರ್ಥಿವೇತನಗಳ ಮೊತ್ತವು ವಿದ್ಯಾರ್ಥಿಯ ಆದಾಯ, ಶೈಕ್ಷಣಿಕ ಸಾಧನೆ ಮತ್ತು ಸಾಮಾಜಿಕ ಹಿನ್ನೆಲೆಯಂತಹ ಅಂಶಗಳನ್ನು ಅವಲಂಬಿಸಿರುತ್ತದೆ. ವಿದ್ಯಾರ್ಥಿವೇತನಗಳು ಬೋಧನಾ ಶುಲ್ಕವನ್ನು ಭರಿಸಲು ಸಹಾಯ ಮಾಡುವುದರಿಂದ, ಇದು ಸಾಲದ ಮೂಲ ಮೊತ್ತವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದರಿಂದಾಗಿ, ಮರುಪಾವತಿ ಅವಧಿ ಮತ್ತು ಬಡ್ಡಿ ದರಗಳು ಕಡಿಮೆಯಾಗುತ್ತವೆ. ಆದ್ದರಿಂದ, ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ಲಭ್ಯವಿರುವ ವಿದ್ಯಾರ್ಥಿವೇತನಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ.

ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸುವಾಗ, ಸಾಲ ನೀಡುವವರು ವಿದ್ಯಾರ್ಥಿಗೆ ಮರುಪಾವತಿ ಅವಧಿಯ ಆಯ್ಕೆಗಳನ್ನು ನೀಡುತ್ತಾರೆ. ಸಾಮಾನ್ಯವಾಗಿ, ಕಡಿಮೆ ಮತ್ತು ದೀರ್ಘಾವಧಿ ಎಂಬ ಎರಡು ಆಯ್ಕೆಗಳಿರುತ್ತವೆ. ಅಲ್ಪಾವಧಿಯ ಸಾಲಗಳಲ್ಲಿ ಮಾಸಿಕ ಕಂತುಗಳು (EMI) ಹೆಚ್ಚಾಗಿರುತ್ತವೆ, ಆದರೆ ಒಟ್ಟಾರೆ ಬಡ್ಡಿ ಪಾವತಿಗಳು ಕಡಿಮೆಯಾಗುತ್ತವೆ. ದೀರ್ಘಾವಧಿಯ ಸಾಲಗಳಲ್ಲಿ EMI ಕಡಿಮೆ ಇರುತ್ತದೆ, ಆದರೆ ಒಟ್ಟಾರೆ ಬಡ್ಡಿ ಪಾವತಿಗಳು ಹೆಚ್ಚಾಗುತ್ತವೆ.

ಶಿಕ್ಷಣ ಸಾಲದ ಮರುಪಾವತಿ ಅವಧಿಯು ಒಟ್ಟಾರೆ ಬಡ್ಡಿ ವೆಚ್ಚದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಉದಾಹರಣೆಗೆ, 15 ವರ್ಷಗಳ ಮರುಪಾವತಿ ಅವಧಿಯೊಂದಿಗೆ ವಾರ್ಷಿಕ 11% ಬಡ್ಡಿದರದೊಂದಿಗೆ ₹ 50 ಲಕ್ಷ ಸಾಲದ ಮೇಲಿನ ಬಡ್ಡಿ ಸುಮಾರು ₹ 52.3 ಲಕ್ಷಕ್ಕೆ ತಲುಪುತ್ತದೆ. ಆದರೆ, ಅವಧಿಯನ್ನು 10 ವರ್ಷಗಳಿಗೆ ಕಡಿಮೆ ಮಾಡಿದರೆ, ಬಡ್ಡಿ ₹ 32.65 ಲಕ್ಷಕ್ಕೆ ಇಳಿಯುತ್ತದೆ, ಅಂದರೆ ಸುಮಾರು ₹ 20 ಲಕ್ಷದಷ್ಟು ಉಳಿತಾಯವಾಗುತ್ತದೆ. ಆದಾಗ್ಯೂ, 10 ವರ್ಷಗಳ ಸಾಲದ ಮೇಲಿನ EMI ₹ 68,875 ಆಗಿದ್ದರೆ, 15 ವರ್ಷಗಳ ಸಾಲಕ್ಕೆ ಅದು ಕೇವಲ ₹ 56,830 ಆಗಿರುತ್ತದೆ. ಆದ್ದರಿಂದ, ನಿಮ್ಮ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ, ಕಡಿಮೆ ಅವಧಿಯ ಸಾಲವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇದರಿಂದ ಒಟ್ಟು ಬಡ್ಡಿ ಮೊತ್ತವನ್ನು ಕಡಿಮೆ ಮಾಡಬಹುದು.

ಮುಂಚಿತವಾಗಿಯೇ ಇಎಂಐ ಪಾವತಿ ಆರಂಭಿಸಿ

ಪೋಷಕರು ಆರ್ಥಿಕವಾಗಿ ಸಬಲರಾಗಿದ್ದರೆ, ಆ ಅವಧಿಯಲ್ಲೇ ಇಎಂಐ ಪಾವತಿ ಪ್ರಾರಂಭಿಸುವುದರಿಂದ ಬಡ್ಡಿ ಉಳಿತಾಯವಾಗುತ್ತದೆ ಮತ್ತು ಸಾಲ ಬೇಗ ತೀರಿಸಬಹುದು. ಜೊತೆಗೆ ಕೆಲಸ ದೊರೆತ ಬಳಿಕ ಬಡ್ಡಿ ಹೊರೆ ಕಡಿಮೆ ಮಾಡಲು ಹೆಚ್ಚುವರಿ ಪಾವತಿಗಳನ್ನು ಮಾಡಿದರೆ ಒಟ್ಟಾರೆ ಸಾಲದ ಅವಧಿಯನ್ನು ಕಡಿಮೆ ಮಾಡಲು ಸಹಾಯಕವಾಗಿತ್ತದೆ.

ತೆರಿಗೆ ಪ್ರಯೋಜನಗಳನ್ನು ಪಡೆಯಿರಿ

ಶಿಕ್ಷಣ ಸಾಲಗಳ ಮೇಲೆ ಪಾವತಿಸುವ ಬಡ್ಡಿಯ ಮೇಲೆ ವಿದ್ಯಾರ್ಥಿಗಳು 'ಆದಾಯ ತೆರಿಗೆ (ಐಟಿ) ಕಾಯ್ದೆಯ ಸೆಕ್ಷನ್ 80 ಇ' ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು . ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲ ಪಡೆದಿರುವ ವಿದ್ಯಾರ್ಥಿಗಳಿಗೂ ಈ ಪ್ರಯೋಜನ ಲಭ್ಯವಿದೆ. ಇದು ಬಡ್ಡಿ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ವಿದ್ಯಾರ್ಥಿಗಳು ಶಿಕ್ಷಣ ಸಾಲಗಳನ್ನು ವೇಗವಾಗಿ ಪಾವತಿಸಲು ಅನುವು ಮಾಡಿಕೊಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+