ಪ್ರತಿಯೊಬ್ಬರಿಗೂ ವೈಯಕ್ತಿಕ ಸಾಲದ ಅಗತ್ಯ ಹೆಚ್ಚಿರುತ್ತದೆ. ತರ್ತು ಪರಿಸ್ಥಿತಿಗಳಿಗಾಗಿ, ಶಿಕ್ಷಣದ ವೆಚ್ಚಗಳಿಗಾಗಿ, ಮನೆ ನವೀಕರಣಕ್ಕಾಗಿ,ಕೆಲವು ಅನವಾರ್ಯತೆಗಳಿಗಾಗಿ ನಮಗೆ ವೈಯಕ್ತಿಕ ಸಾಲಗಳು ಬೇಕಾಗುತ್ತದೆ.
ಇಂತಹ ವೈಯಕ್ತಿಕ ಸಾಲವನ್ನು ಪಡೆಯುವ ಮೊದಲು ಈಗಾಗಲೇ ತೆಗೆದುಕೊಂಡಿರುವ ವೈಯಕ್ತಿಕ ಸಾಲದ ಮೇಲೆ ಹೆಚ್ಚುವರಿ ಶುಲ್ಕಗಳನ್ನು ತಪ್ಪಿಸಲು ತ್ವರಿತವಾಗಿ ಮರುಪಾವತಿ ಮಾಡುವುದು ಹೇಗೆ ಎನ್ನುವುದನ್ನ ನಾವು ತಿಳಿದುಕೊಳ್ಳಬೇಕಾಗುತ್ತದೆ. ನೀವು ನಿಮ್ಮ ಸಾಲವನ್ನ ಸರಿಯಾದ ಸಮಯಕ್ಕೆ ಪಾವತಿಸುವುದು ಎಷ್ಟು ಮುಖ್ಯವೋ ಹಾಗೆ ನಿಗದಿತ ದಿನಾಂಕಕ್ಕಿಂತ ಮೊದಲು ಪಾವತಿಸುವುದರಿಂದ ನೀವು ಅಷ್ಟೇ ಪ್ರಯೋಜನಗಳನ್ನ ಪಡೆಯಬಹುದು.

ಏಕೆ ವೈಯಕ್ತಿಕ ಸಾಲವನ್ನು ವೇಗವಾಗಿ ಪಾವತಿಸಬೇಕು?
1. ಬಡ್ಡಿ: ನೀವು ನಿಮ್ಮ ಪರ್ಸನಲ್ ಲೋನ್ ಅನ್ನು ವೇಗವಾಗಿ ಪಾವತಿಸುವುದರಿಂದ, ಪ್ರತಿ ತಿಂಗಳು ನಿಮ್ಮ ಸಾಲದ ಮೇಲೆ ವಿಧಿಸುವಂತಹ ಬಡ್ಡಿದರವ್ನ ನೀವು ಉಳಿಸಬಹುದು.
2. ಸಾಲದ ವಿನಂತಿಗಳು: ಈಗಾಗಲೇ ಅಸ್ತಿತ್ವದಲ್ಲಿರುವ ನಿಮ್ಮ ವೈಯಕ್ತಿಕ ಸಾಲವನ್ನ ಮರುಪಾವತಿ ಮಡುವ ಮೂಲಕ ನೀವು ನಿಮಗೆ ಬೇಕಾದಾಗ ಮತ್ತೆ ಹೊಸ ಸಾಲವನ್ನ ಪಡೆಯಬಹುದು. ಹಾಗೆ ಹೊಸ ಲೋನ್‌ಗಳನ್ನ ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಹಾಗೆ ಭವಿಷ್ಯದಲ್ಲಿ ಅದನ್ನ ಮರುಪವತಿಸಲು ಸಹಾಯ ಮಾಡುತ್ತದೆ.
3. ಕ್ರೆಡಿಟ್ ಸ್ಕೋರ್: ವೈಯಕ್ತಿಕ ಸಾಲಗಳನ್ನು ನೀವು ಸರಿಯಾದ ಸಮಯಕ್ಕೆ ಪಾವತಿಸುವುದರಿಂದ ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಬಹುದು.
ವೈಯಕ್ತಿಕ ಸಾಲವನ್ನು ವೇಗವಾಗಿ ಪಾವತಿಸುವ ಮಾರ್ಗಗಳನ್ನ ತಿಳಿಯಿರಿ
ಮರುಪಾವತಿ ಸಾಮರ್ಥ್ಯ: ನೀವು ವೈಯಕ್ತಿಕ ಸಾಲವನ್ನು ಮರುಪಾವತಿ ಮಾಡುವ ಮೊದಲು ನಿಮ್ಮ ಬಳಿ ಸಮರ್ಥವಾದ ಆದಾಯ ಇದೆಯಾ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಮರುಪಾವತಿ ಮಾಡುವುದು ಸಂಪೂರ್ಣ ನಿಮ್ಮ ಆದಾಯದ ಮೇಲೆ ಅವಂಬಿತವಾಗಿರುತ್ತದೆ. ಹೀಗಾಗಿ ವೇಗವಾಗಿ ಮರುಪಾವತಿ ಮಾಡುವ ಮೊದಲು ನಿಮ್ಮ ಆದಾಯದ ಸಾಮರ್ಥ್ಯದ ಬಗ್ಗೆ ನೀವು ತಿಳಿದಿರಬೇಕು. ನೀವು ಸಾಲ ಮರುಪಾವತಿಗಾಗಿ ನೀವು ಎಷ್ಟು ಅಂದಾಜು ಹಣವನ್ನ ಹೊಂದಿದ್ದೀರಿ ಎನ್ನವುದನ್ನು ನೀವು ತಿಳಿಯಬೇಕು. ಹಾಗೆ ನೀವು ನಿಮ್ಮ ಉಳಿತಾಯದಿಂದ ಹೆಚ್ಚುವರಿ ಹಣವನ್ನು ಹೊಂದಿರುವುದನ್ನು ನೀವ ಖಚಿತಪಡಿಸಿಕೊಳ್ಳಬೇಕು.
ಮರುಪಾವತಿ ಯೋಜನೆ: ನಿಮ್ಮ ವೈಯಕ್ತಿಕ ಸಾಲವನ್ನು ಪಾವತಿಸುವ ಮುನ್ನ, ನೀವು ಪಾವತಿ ಮಾಡಬೇಕಾಗಿರುವ ಒಟ್ಟು ಸಾಲದ ಮೊತ್ತವನ್ನು ನೀವು ಅಂದಾಜು ಮಾಡುವುದು ಮುಖ್ಯ. ಹಾಗೆ ಇಲ್ಲಯವರೆಗೆ ನೀವು ಮಾಡಿರುವ ಎಲ್ಲಾ ಪಾವತಿಗಳ ಮೊತ್ತದ ಪಟ್ಟಿಯನ್ನು ನೀವು ಹೊಂದಿರಬೇಕು.
ಹೆಚ್ಚುವರಿಯಾಗಿ, ವೈಯಕ್ತಿಕ ಸಾಲದ ಹೊರತಾಗಿ ತಿಂಗಳಿಗೆ ಬಾಕಿ ಇರುವ ಎಲ್ಲಾ ಇತರೆ ಬಿಲ್‌ಗಳ ಬಗ್ಗೆ ನೀವು ತಿಳಿದಿರುವುದು ಮಖ್ಯ. ನಿಮ್ಮ ಆದಾಯಕ್ಕೆ ಅನುಗುಣವಾಗಿ ನೀವು ಮರುಪತಿಯನ್ನ ನಿಯೋಜಿಸಬೇಕು.
ಇದರಿಂದಾಗಿ ನೀವು ನಿಮ್ಮ ಹಣಕಾಸಿಗೆ ಹಾನಿಯಾಗದಂತೆ ಸಕಾಲಿಕ ಪಾವತಿಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಹೆಚ್ಚುವರಿ ಆದಾಯ: ನೀವೇನದ್ರು ನಿರ್ದಿಷ್ಟ ತಿಂಗಳಲ್ಲಿ ಹಚ್ಚುವರಿ ಆದಾಯವನ್ನ ಹೊಂದಿದ್ದರೆ, ಅಥವಾ ಬೋನಸ್ ಹಣವನ್ನ ಹೊಂದಿದ್ದರೆ ನೀವು ಅದನ್ನ ಮರುಪಾತಿ ಮಡಲು ಬಳಸಬಹುದು. ಅಲ್ಲದೆ ಇಸು ನಿಮಗೆ ಸಮಯ ಮುಗಿಯುವ ಮೊದಲು ನಿಮ್ಮ ಸಾಲವನ್ನು ಮರುಪಾವತಿಸಲು ಸಹಾಯ ಮಾಡುತ್ತದೆ.
ಹೆಚ್ಚುವರಿ EMI: ಪ್ರತಿ ವರ್ಷ ನೀವು ಹೆಚ್ಚುವರಿ EMI ಪಾವತಿಸಲು ಪ್ರಯತ್ನಿಸಿ . ಇದರಿಂದಾಗಿ ನೀವು ದೀರ್ಘಾವಧಿಯ ವರೆಗೆ ನಿಮ್ಮ ವಯಕ್ತಿಕ ಸಾಲವನ್ನ ನಿಗಧಿತ ಸಮಯಕ್ಕಿಂತ ಮೊದಲೇ ಪಾವತಿ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಅಸಲು ಮತ್ತು ಬಡ್ಡಿ ಮೊತ್ತವನ್ನು ಪ್ರತಿ ವರ್ಷ ಕಡಿಮೆಗೊಳಿಸುತ್ತದೆ. ಅದಲ್ಲದೆ, ಎಲ್ಲರಿಗೂ ಹೆಚ್ಚುವರಿ EMI ಪಾವತಿಸುವುದು ಸಾಧ್ಯವಾಗುದಿಲ್ಲ ಹೀಗಾಗಿ ನೀವು ಸರಿಯಾದ ರೀತಿಯಲ್ಲಿ ಇದನ್ನು ನಿರ್ವಹಿಸಬೇಕು.
ಸಾಲದ ಬಾಕಿ ವರ್ಗಾವಣೆ: ನೀವೇನಾದ್ರು ಕೆಲವು ಕಾರಣಗಳಿಂದಾಗಿ ಹೆಚ್ಚಿನ ವೈಯಕ್ತಿಕ ಸಾಲವನ್ನ ಹೊಂದಿದ್ದರೆ, ಅದನ್ನ ನೀವು ಸಾಲದ ಬಾಕಿ ವರ್ಗಾವಣೆ ಎಂದು ಪರಿಗಣಿಸಬಹುದು. ಅಂದರೆ ಸಾಮಾನ್ಯವಾಗಿ ನೀವು ಕಡಿಮೆ ಬಡ್ಡಿ ದರ, ದೀರ್ಘ ಮರುಪಾವತಿ ಅವಧಿಯಂತಹ ಉತ್ತಮ ನಿಯಮಗಳ ಲಾಭವನ್ನು ಪಡೆಯಲು. ಇದರಿಂದಾಗಿ ನೀವು ನಿಮ್ಮಸಾಲವನ್ನು ಸಮಯಕ್ಕೆ ಸುಲಭವಾಗಿ ಪಾವತಿಸಬಹುದು.
ಗಮನಿಸಬೇಕಾದ ಅಂಶ: ಹಲವು ಸಾಲದಾತರು ನಿಗದಿತ ದಿನಾಂಕದ ಮೊದಲು ಸಾಲವನ್ನು ಪಾವತಿಸಿದರೆ ಪೂರ್ವ-ಪಾವತಿ ದಂಡವನ್ನ ಕೂಡ ವಿಧಿಸಬಹುದು. ಹೀಗಾಗಿ ನೀವು ಇದನ್ನ ಗಮನದಲ್ಲಿಟ್ಟುಕೊಂಡು ಮರುಪಾವತಿ ಮಾಡಬೇಕು.
ನೀವು ನಿಮ್ಮ ವೈಯಕ್ತಿಕ ಸಾಲವನ್ನ ನಿಗಧಿತ ಸಮಯಕ್ಕೂ ಮೊದಲು ಪಾತಿ ಮಾಡುವುದರಿಂದ ನೀವು ಹಲವು ಪ್ರಯೋಜನಳನ್ನ ಪಡಯಬಹುದು. ಹಾಗೆ ಯಾವುದೇ ಒತ್ತಡವಿಲ್ಲದೇ ನೀವು ಮತ್ತೆ ಹೊಸ ಸಾಲವನ್ನ ಪಡೆಯಬಹುದು. ನಿಮ್ಮ ಮರುಪಾವತಿ ಸಾಮರ್ಥ್ಯ ಹಾಗೆ ಅಸ್ತಿತ್ವದಲ್ಲಿರುವ ಮೊತ್ತವನ್ನು ನೀವು ಅರ್ಥ ಮಾಡಿಕೊಳ್ಳಬೇಕು ನಂತರ, ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಸರಿಹೊಂದುವ ಯೋಜನೆಯನ್ನು ಮಾಡಲು ಖಚಿತಪಡಿಸಿಕೊಳ್ಳಿ.


Click it and Unblock the Notifications