ನಿಮಗೆ ಜ್ಯೋತಿಷ್ಯದಲ್ಲಿ ನಂಬಿಕೆ ಇದೆಯಾ? ಒಂದು ವೇಳೆ ಇದ್ದರೂ ಇಲ್ಲದಿದ್ದರೂ ಹ್ಯುರನ್ ಇಂಡಿಯಾ ಶ್ರೀಮಂತರ ಪಟ್ಟಿ 2020 ಒಮ್ಮೆ ನೋಡಿ. ಇದರಲ್ಲಿ 828 ಮಂದಿ ಶ್ರೀಮಂತರ ಸ್ಥಾನ ಪಡೆದಿದ್ದಾರೆ. ಇವರೆಲ್ಲ ಬರೀ ಶ್ರೀಮಂತರಲ್ಲ, ಅಭಿನವ ಕುಬೇರರು. ಇನ್ನು ಆ ಕ್ಯಾಟಗರಿಯಲ್ಲಿ ಹೇಳಬೇಕು ಅಂದರೆ, ಸೀನಿಯರ್, ಜೂನಿಯರ್, ಸಬ್ ಜೂನಿಯರ್ ಹೀಗೆ ಬೇಕಾದರೆ ಕುಬೇರರ ವರ್ಗೀಕರಣ ಮಾಡಬಹುದು.
ಈ ಕುಬೇರರ ಪಟ್ಟಿಯಲ್ಲಿ ಇರುವವರಲ್ಲಿ ಹತ್ತಿರ ಹತ್ತಿರ ಶೇಕಡಾ ಐವತ್ತರಷ್ಟು ಮಂದಿ ಶ್ರೀಮಂತ ಭಾರತೀಯರು ಕರ್ಕಾಟಕ, ಕನ್ಯಾ, ಮಿಥುನ, ಮೇಷ ಹಾಗೂ ಮಕರ ರಾಶಿಯ ಸನ್ ಸೈನ್ ನವರು. ಅಂದರೆ ರವಿಯನ್ನು ಆಧಾರವಾಗಿಟ್ಟುಕೊಂಡು, ಈ ರಾಶಿಯವರು ಎಂದು ಹೇಳಲಾಗುತ್ತದೆ. ಇನ್ನು ಈ ಐದು ರಾಶಿಗಳ ಪೈಕಿ ಪಾರಮ್ಯ ಸಾಧಿಸಿರುವವರು ಕರ್ಕಾಟಕ ರಾಶಿಯವರು.
ಕರ್ಕಾಟಕ ರಾಶಿಯಲ್ಲಿ ರವಿ ಇರುವವರಲ್ಲಿ ಅತ್ಯಂತ ಶ್ರೀಮಂತ ಭಾರತೀಯರು ಅಂದರೆ ಶಿವ ನಾಡಾರ್. ಅವರ ಬಳಿ 1.41 ಲಕ್ಷ ಕೋಟಿ ಸಂಪತ್ತಿದೆ. ಹಾಗಿದ್ದರೆ ಸೂರ್ಯನ ಆಧಾರದಲ್ಲಿ ರಾಶಿಗಳನ್ನು ತಿಳಿದುಕೊಂಡುಬಿಡಿ. ಇದು ಯಾವ ತಿಂಗಳು ಮತ್ತು ದಿನಾಂಕ ಹುಟ್ಟಿದವರು ಎಂಬ ಆಧಾರದಲ್ಲಿ ರವಿ ಇರುವ ಸ್ಥಿತಿಯಿಂದ ರಾಶಿಯನ್ನು ಹೇಳಲಾಗುತ್ತದೆ. ಆದ್ದರಿಂದ ಅದನ್ನು ತಿಳಿದುಕೊಳ್ಳಿ.
ಯಾವ ತಿಂಗಳ ಯಾವ ದಿನಾಂಕ ಹುಟ್ಟಿದವರು ಯಾವ ಸನ್ ಸೈನ್
ಮಾರ್ಚ್ 21ರಿಂದ ಏಪ್ರಿಲ್ 19- ಮೇಷ
ಏಪ್ರಿಲ್ 20- ಮೇ 20- ವೃಷಭ
ಮೇ 21- ಜೂನ್ 20- ಮಿಥುನ
ಜೂನ್ 21- ಜುಲೈ 22- ಕರ್ಕಾಟಕ
ಜುಲೈ 23- ಆಗಸ್ಟ್ 22- ಸಿಂಹ
ಆಗಸ್ಟ್ 23- ಸೆಪ್ಟೆಂಬರ್ 22- ಕನ್ಯಾ
ಸೆಪ್ಟೆಂಬರ್23 - ಅಕ್ಟೋಬರ್ 22- ತುಲಾ
ಅಕ್ಟೋಬರ್ 23- ನವೆಂಬರ್ 21- ವೃಶ್ಚಿಕ
ನವೆಂಬರ್ 22- ಡಿಸೆಂಬರ್ 21- ಧನುಸ್ಸು
ಡಿಸೆಂಬರ್ 22- ಜನವರಿ 19- ಮಕರ
ಜನವರಿ 20- ಫೆಬ್ರವರಿ 18- ಕುಂಭ
ಫೆಬ್ರವರಿ 19- ಮಾರ್ಚ್ 20- ಮೀನ
ಯಾವ ರಾಶಿಯ ಚಿಹ್ನೆಯಲ್ಲಿ ಯಾರು ಶ್ರೀಮಂತ ನಂಬರ್ ಒನ್
ಮೇಷ: ಮುಕೇಶ್ ಅಂಬಾನಿ, ವೃಷಭ: ಸೈರಸ್ ಎಸ್. ಪೂನಾವಾಲ, ಮಿಥುನ: ಲಕ್ಷ್ಮೀ ಎನ್ ಮಿತ್ತಲ್, ಕರ್ಕಾಟಕ: ಶಿವ ನಾಡಾರ್, ಸಿಂಹ- ಅಜೀಂ ಪ್ರೇಮ್ ಜೀ, ಕನ್ಯಾ: ಶಾಪೂರ್ ಪಲ್ಲೋಂಜೀ ಮಿಸ್ತ್ರಿ, ತುಲಾ: ದಿಲೀಪ್ ಶಾಂಘ್ವಿ, ವೃಶ್ಚಿಕ: ಅಶ್ವಿನಿ ದನಿ, ಧನುಸ್ಸು: ಎಸ್ ಪಿ ಹಿಂದೂಜಾ (ಹಿಂದೂಜಾ ಸೋದರರು). ಮಕರ: ಕರ್ಸನ್ ಭಾಯಿ ಪಟೇಲ್, ಕುಂಭ: ನುಸ್ಲಿ ವಾಡಿಯಾ, ಮೀನ: ರಾಧಾಕಿಶನ್ ದಮಾನಿ.
ಆಸ್ತಿ ಹೆಚ್ಚಳ, ಕಡಿಮೆ ಆದ ರಾಶಿಗಳ ಟಾಪ್ ಟೆನ್ ಪಟ್ಟಿ
ಮೇಷ: 55%, ವೃಶ್ಚಿಕ: 52%, ಮೀನ: 35%, ಮಕರ: 33%, ಕರ್ಕಾಟಕ: 30%, ಕುಂಭ: 20%, ವೃಷಭ: 15%, ಸಿಂಹ- 14%, ತುಲಾ: 7.3%, ಕನ್ಯಾ: 3%, ಧನುಸ್ಸು: 1%, ಮಿಥುನ: -3%.


Click it and Unblock the Notifications