ICICI ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್...ಅದೇನೆಂದರೆ ಯೆಸ್ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಮಾದರಿಯಲ್ಲಿ, ಈಗ ಐಸಿಐಸಿಐ ಬ್ಯಾಂಕ್ ಕೂಡ ಆಗಸ್ಟ್ 1ರಿಂದ ಯುಪಿಐ ವಹಿವಾಟುಗಳಿಗೆ ಪಾವತಿ ಸಂಗ್ರಾಹಕರಿಗೆ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರಬಿದ್ದಿದೆ.

ಬ್ಯಾಂಕ್‌ಗಳಿಗೆ ಹತ್ತಿರದ ಮೂಲಗಳ ಪ್ರಕಾರ, ಐಸಿಐಸಿಐ ಬ್ಯಾಂಕ್ ತಮ್ಮ ಮೂಲಕ ನಡೆಯುವ ಪ್ರತಿಯೊಂದು ಯುಪಿಐ ವಹಿವಾಟಿಗೆ ಪಿಎ ಗಳಿಗೆ 'ವಹಿವಾಟು ನಿರ್ವಹಣಾ ಶುಲ್ಕ'ವನ್ನು (Transaction Processing Fee) ವಿಧಿಸಲು ಯೋಜಿಸುತ್ತಿದೆ. ಈ ಶುಲ್ಕವನ್ನು ಎಸ್ಕ್ರೋ ಖಾತೆ ಇರುವ ಅಥವಾ ಇಲ್ಲದ ಪಿಎಗಳ ಆಧಾರದ ಮೇಲೆ ವಿಭಜಿಸಲಾಗುತ್ತದೆ.
ಎಸ್ಕ್ರೋ ಖಾತೆ ಇರುವ ಪಿಎಗಳಿಗೆ ಕಡಿಮೆ ಶುಲ್ಕ:
ಈ ಯೋಜನೆಯ ಪ್ರಕಾರ, ಐಸಿಐಸಿಐ ಬ್ಯಾಂಕಿನಲ್ಲಿ ಎಸ್ಕ್ರೋ ಖಾತೆಯನ್ನು ನಿರ್ವಹಿಸುವ ಪಿಎಗಳ ಮೇಲೆ ಪ್ರತಿ ವಹಿವಾಟಿಗೆ 2 ಬೇಸಿಸ್ ಪಾಯಿಂಟ್ (0.02%) ಶುಲ್ಕ ವಿಧಿಸಲಾಗುತ್ತದೆ. ಆದರೆ ಈ ಶುಲ್ಕದ ಗರಿಷ್ಠ ಮಿತಿ ₹6 ಎಂದು ನಿಗದಿಪಡಿಸಲಾಗುತ್ತದೆ.
ಎಸ್ಕ್ರೋ ಖಾತೆ ಇಲ್ಲದ ಪಿಎಗಳಿಗೆ ಹೆಚ್ಚು ವೆಚ್ಚ:
ಇದರ ವಿರುದ್ಧವಾಗಿ, ಐಸಿಐಸಿಐ ಬ್ಯಾಂಕಿನಲ್ಲಿ ಎಸ್ಕ್ರೋ ಖಾತೆ ಹೊಂದಿರದ ಪಿಎಗಳ ಮೇಲೆ ಪ್ರತಿ ವಹಿವಾಟಿಗೆ 4 ಬೇಸಿಸ್ ಪಾಯಿಂಟ್ (0.04%) ಶುಲ್ಕ ವಿಧಿಸಲಾಗುವುದು. ಇದಕ್ಕೂ ಗರಿಷ್ಠ ಮಿತಿ ₹10 ಆಗಿರಲಿದೆ. ಈ ಹೊಸ ರಚನೆಯು ಪಿಎಗಳ ವ್ಯವಹಾರ ಮಾದರಿಗಳ ಮೇಲೆ ನೇರ ಪರಿಣಾಮ ಬೀರಬಹುದಾಗಿದೆ.
ನೇರ ವ್ಯವಹಾರಗಳಿಗೆ ಮಾತ್ರ ವಿನಾಯಿತಿ:
ಆದರೆ, ಪಿಎಗಳು ವಹಿವಾಟನ್ನು ನೇರವಾಗಿ ವ್ಯಾಪಾರಿಗಳ ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಿದರೆ, ಅಂತಹ ವ್ಯವಹಾರಗಳಿಗೆ ಈ ಹೊಸ ಶುಲ್ಕ ಅನ್ವಯಿಸುವುದಿಲ್ಲ ಎಂಬ ಮಾಹಿತಿ ಬಂದಿದೆ. ಇದರಿಂದ, ನೇರ ವ್ಯವಹಾರ ಪ್ರಕಾರಕ್ಕೆ ಪ್ರೋತ್ಸಾಹ ಸಿಗುವ ಸಾಧ್ಯತೆ ಇದೆ.
ಇತರೆ ಬ್ಯಾಂಕುಗಳ ಹಾದಿಯಲ್ಲಿ ICICSI ಬ್ಯಾಂಕ್:
ಈ ಹಿಂದೆ ಯೆಸ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಈಗಾಗಲೇ ಕಳೆದ 8 ರಿಂದ 10 ತಿಂಗಳಿನಿಂದ ಪಿಎಗಳಿಗೆ ಯುಪಿಐ ವ್ಯವಹಾರ ಶುಲ್ಕ ವಿಧಿಸುತ್ತಿರುವುದು ಗಮನಾರ್ಹ. ಇದೀಗ ಐಸಿಐಸಿಐ ಬ್ಯಾಂಕ್ ಕೂಡ ಇದೇ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿರುವುದರಿಂದ, ಇಡೀ ಪಾವತಿ ಎಕ್ವೋಸಿಸ್ಟಮ್ ಮೇಲೆ ಇದರ ಪರಿಣಾಮ ಬೀರುವ ನಿರೀಕ್ಷೆ ಇದೆ.
ಶೂನ್ಯ MDR ಆದೇಶದ ನಡುವೆಯೂ ಶುಲ್ಕ ಭಾರ:
ಸರಕಾರವು ವ್ಯಾಪಾರಿಗಳಿಂದ ಯುಪಿಐ ವಹಿವಾಟುಗಳಿಗಾಗಿ ಯಾವುದೇ ರಿಯಾಯಿತಿ ದರ (Merchant Discount Rate - MDR) ವಿಧಿಸಬಾರದು ಎಂದು ನಿರ್ಧರಿಸಿದ್ದರೂ, ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನುಡಿವಂತೆ ಸ್ವಿಚ್ ಶುಲ್ಕವನ್ನು ಬ್ಯಾಂಕುಗಳಿಗೆ ವಿಧಿಸುತ್ತಿದೆ. ಈ ವೆಚ್ಚವನ್ನು ಕೆಲವು ಬ್ಯಾಂಕುಗಳು ಪಿಎಗಳ ಮೇಲೆ ಹೊರಿಸುತ್ತಿರುವುದು ಹೊಸ ವಿಚಾರವಲ್ಲ.
ಪಿಎಗಳು ತಮ್ಮೊಳಗೆ ಈ ವೆಚ್ಚವನ್ನು ಹಿಡಿದುಕೊಳ್ಳುವ ಬದಲು, ವ್ಯಾಪಾರಿಗಳ ಮೇಲೆ 'ಪ್ಲಾಟ್‌ಫಾರ್ಮ್ ಶುಲ್ಕ', 'ಸಮನ್ವಯ ಶುಲ್ಕ' ಇತ್ಯಾದಿ ರೂಪದಲ್ಲಿ ವರ್ಗಾಯಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ನಿರೀಕ್ಷಿತ ಶೂನ್ಯ ವೆಚ್ಚದ ಯುಪಿಐ ವಹಿವಾಟುಗಳು ಇದೀಗ ಕೆಲವೆಡೆ ವ್ಯಾಪಾರಿಗಳಿಗೆ ದುಬಾರಿಯಾಗುತ್ತಿರುವ ಉದಾಹರಣೆಗಳು ಕೂಡ ಉಂಟು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications