ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ಸ್ವಲ್ಪವಾದ್ರೂ ಸೇವಿಂಗ್ಸ್ (Savings) ಮಾಡಬೇಕೆಂದು ಹೆಚ್ಚಿನವರು ಪ್ಲಾನ್ ಮಾಡುತ್ತಿರುತ್ತಾರೆ. ಎಷ್ಟೇ ಸ್ಯಾಲರಿ ಇರಲಿ ತಿಂಗಳಿಗೆ 100 ರೂಪಾಯಿ ಉಳಿತಾಯ ಮಾಡೋ ಅಭ್ಯಾಸ ರೂಢಿಸಿಕೊಂಡರೆ, ಮುಂದೊಂದು ದಿನ ದೊಡ್ಡ ಲಾಭವನ್ನು ಅದು ನೀಡುತ್ತದೆ. ಇನ್ನು ಹೆಚ್ಚಿನವರು ರಿಸ್ಕ್ ತೆಗೆದುಕೊಳ್ಳಲು ರೆಡಿ ಇರಲ್ಲ. ಅಂತವರು ಸರ್ಕಾರಿ ಯೋಜನೆಗಳ ಬಗ್ಗೆ ನೋಡುತ್ತಲೇ ಇರುತ್ತಾರೆ. ಏಕೆಂದರೆ ಸರ್ಕಾರಿ ಹೂಡಿಕೆ ಯೋಜನೆಗಳು (Government Investment Tips) ಹೆಚ್ಚು ಲಾಭದೊಂದಿಗೆ, ಭದ್ರತೆಯನ್ನೂ ನೀಡುತ್ತದೆ.

ತಮ್ಮ ಉಳಿತಾಯ ಹಣದಲ್ಲಿ ರಿಸ್ಕ್ ತೆಗೆದುಕೊಳ್ಳಲು ಬಯಸದವರು, ಸರ್ಕಾರಿ ಉಳಿತಾಯ ಯೋಜನೆಗಳನ್ನು ಆಯ್ಕೆ ಮಾಡಬಹುದು. ಇದರಲ್ಲಿ ಕೆಲವು ಯೋಜನೆಗಳು ಶೇ. 8.2% ರಷ್ಟು ಲಾಭವನ್ನು ನೀಡುತ್ತದೆ. ಹಾಗಿದ್ರೆ ಆ ಯೋಜನೆಗಳು ಯಾವುದು? ಎಷ್ಟು ಲಾಭ ಪಡೆಯಬಹುದು? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಪೋಸ್ಟ್ ಆಫೀಸ್ ಹೂಡಿಕೆದಾರರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪೋಸ್ಟ್ ಆಫೀಸ್‌ನಲ್ಲಿ ಕೆಲವು ಯೋಜನೆಗಳು ಶೇ. 7% ರಿಂದ 8.2% ದಷ್ಟು ಆದಾಯವನ್ನು ನೀಡುತ್ತದೆ. ಈ ಯೋಜನೆಗಳು ಸುರಕ್ಷಿಯ ಹೂಡಿಕೆ, ಸ್ಥಿರ ಆದಾಯ ಪಡೆಯುವವರಿಗೆ ಸೂಕ್ತವಾಗಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Savings Certificate - NSC): ಎನ್‌ಎಸ್‌ಸಿ ವಾರ್ಷಿಕವಾಗಿ ಶೇ. 7.7 ರಷ್ಟು ಆದಾಯವನ್ನು ನೀಡುತ್ತದೆ, ಇದನ್ನು ವಾರ್ಷಿಕವಾಗಿ ನೀಡಲಾಗುತ್ತದೆ. ಆದರೆ ಬಡ್ಡಿಯ ಹಣ ನಿಮಗೆ ಮೆಚೂರಿಟಿ ಸಮಯದಲ್ಲಿ ಮಾತ್ರ ನೀಡಲಾಗುತ್ತದೆ. ಇಲ್ಲಿ ಹೂಡಿಕೆ ಮಾಡಬಹುದಾದ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಈ ಯೋಜನೆಯು ಠೇವಣಿ ದಿನಾಂಕದಿಂದ ಐದು ವರ್ಷಗಳಲ್ಲಿ ಪಕ್ವವಾಗುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme - SCSS): ನಿವೃತ್ತಿ ಪಡೆದ ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದ ಎಸ್‌ಸಿಎಸ್‌ಎಸ್ ಯೋಜನೆ, ಪ್ರಸ್ತುತ ವಾರ್ಷಿಕವಾಗಿ ಶೇ. 8.2 ರಷ್ಟು ಅತಿ ಹೆಚ್ಚು ಆದಾಯವನ್ನು ನೀಡುವ ಯೋಜನೆಯೆಂದು ಗುರುತಿಸಿಕೊಂಡಿದೆ. ಇನ್ನು ಈ ಯೋಜನೆಯಲ್ಲಿ ಕನಿಷ್ಠ ₹1,000 ರೂ.ನಿಂದ ₹30 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯು ಐದು ವರ್ಷಗಳಲ್ಲಿ ಪಕ್ವವಾಗುತ್ತದೆ, ಆದರೆ ಅಗತ್ಯವಿದ್ದರೆ ಇದನ್ನು ಮೂರು ವರ್ಷಗಳಂತೆ ವಿಸ್ತರಿಸಬಹುದು.
ಸಾರ್ವಜನಿಕ ಭವಿಷ್ಯ ನಿಧಿ (Public Provident Fund - PPF): ಸಾರ್ವಜನಿಕ ಭವಿಷ್ಯ ನಿಧಿಯು ದೀರ್ಘಾವಧಿಯ ಹೂಡಿಕೆ ಮಾಡುವ ಪ್ಲಾನ್‌ನಲ್ಲಿದ್ದವರಿಗೆ ಸೂಕ್ತವಾಗಿದೆ. ಇದು ಪ್ರಸ್ತುತ ವಾರ್ಷಿಕವಾಗಿ ಶೇ. 7.1% ರಷ್ಟು ಬಡ್ಡಿದರವನ್ನು ಹೂಡಿಕೆದಾರರು ವಾರ್ಷಿಕವಾಗಿ ಪಡೆಯಬಹುದು. ಕನಿಷ್ಠ ಅಂದರೆ 500 ರೂ.ನೊಂದಿಗೆ ನೀವು ಹೂಡಿಕೆ ಮಾಡಲು ಆರಂಭಿಸಬಹುದು.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (Mahila Samman Savings Certificate): ಇದೂ ಕೂಡಾ ವಿಶೇಷವಾಗಿ ಮಹಿಳೆಯರಿಗಾಗಿ ಜಾರಿಗೆ ತಂದ ಅಲ್ಪಾವಧಿಯ ಉಳಿತಾಯ ಯೋಜನೆಯಾಗಿದೆ. ಇದು ಪ್ರತಿ ತ್ರೈಮಾಸಿಕಕ್ಕೆ ಲೆಕ್ಕಹಾಕಲಾಗುವ ಶೇ. 7.5 ರಷ್ಟು ವಾರ್ಷಿಕ ಬಡ್ಡಿದರವನ್ನು ನೀಡುತ್ತದೆ. ಹೂಡಿಕೆಗಳು ₹1,000 ದಿಂದ ಪ್ರಾರಂಭವಾಗಿ ₹2 ಲಕ್ಷದವರೆಗೆ ಮಾಡಬಹುದು. ಈ ಯೋಜನೆಯು ಎರಡು ವರ್ಷಗಳ ನಂತರ ಪಕ್ವವಾಗುತ್ತದೆ, ಇದು ಅಲ್ಪಾವಧಿಯ ಲಾಕ್-ಇನ್ ಅವಧಿಯನ್ನು ಬಯಸುವವರಿಗೆ ಉತ್ತಮವೆಂದು ಹೇಳಳಾಗಿದೆ.
ಸುಕನ್ಯಾ ಸಮೃದ್ಧಿ ಖಾತೆ (Sukanya Samriddhi Account): ದೇಶದ ಹೆಣ್ಣುಮಕ್ಕಳಿಗಾಗಿ ಜಾರಿಗೆ ತಂದ ಹಲವು ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡಾ ಒಂದು. ವಾರ್ಷಿಕವಾಗಿ ಈ ಯೋಜನೆಯಲ್ಲಿ ಬಡ್ಡಿದರವು ಶೇ. 8.2 ರಷ್ಟಿದೆ. ಪೋಷಕರು ವರ್ಷಕ್ಕೆ ₹250 ರಿಂದ ₹1.5 ಲಕ್ಷದವರೆಗೆ ಈ ಸ್ಕೀಮ್ ಮೂಲಕ ಹೂಡಿಕೆ ಮಾಡಬಹುದು. ಇನ್ನು ಸುಕನ್ಯಾ ಸಮೃದ್ಧಿ ಯೋಜನೆ ತೆರೆದ ದಿನಾಂಕದಿಂದ 21 ವರ್ಷಗಳ ನಂತರ ಮೆಚ್ಯೂರಿಟಿಯನ್ನು ಪಡೆಯಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications