ಹೂಡಿಕೆಗಾಗಿ ಬ್ಯಾಂಕ್, ಪೋಸ್ಟ್ ಆಫೀಸ್ ಹೀಗೆ ಹಲವು ಯೋಜನೆಗಳನ್ನು ಆಯ್ಕೆ ಮಾಡುತ್ತಾರೆ. ತಾವು ದುಡಿದ ಹಣದಲ್ಲಿ ಸ್ವಲ್ಪವಾದ್ರೂ ಸೇವಿಂಗ್ಸ್ ಮಾಡಬೇಕೆಂಬುದು ಹಲವರ ಕನಸಾಗಿರುತ್ತೆ. ಇನ್ನು ಕೆಲವರು ಷೇರು ಮಾರುಕಟ್ಟೆ, ಎಸ್‌ಐಪಿ, ಮ್ಯೂಚುವಲ್ ಫಂಡ್‌ಗಳಂತಹವುಗಳಲ್ಲಿ (Mutual Fund) ಹೂಡಿಕೆ ಮಾಡುತ್ತಾರೆ. ಆದ್ರೆ ಎಸ್‌ಐಪಿಯಲ್ಲಿ (Systematic Investment Plan) ಹೂಡಿಕೆ ಮಾಡುವುದರಿಂದ ಹೆಚ್ಚು ಆದಾಯ ಬರುತ್ತದೆ ಎಂದು ಹೆಚ್ಚಿನವರಿಗೆ ಗೊತ್ತಿರಲ್ಲ. ಹಾಗಿದ್ರೆ ತಿಂಗಳಿಗೆ 100 ರೂ. ಹೂಡಿಕೆ ಮಾಡಿ, ಎಷ್ಟು ಆದಾಯ ಗಳಿಸಬಹುದು ಗೊತ್ತಾ?

ಪೋಸ್ಟ್ ಆಫೀಸ್, ಬ್ಯಾಂಕ್, ಎಸ್‌ಐಪಿ ಯಾವುದರಲ್ಲಾದರೂ ದೀರ್ಘಕಾಲೀನ ಹೂಡಿಕೆಯು ಅನೇಕ ಪ್ರಯೋಜನಗಳನ್ನು ನೀಡಲಿದೆ. ಕೇವಲ 100 ರೂ.ಗಳಿಂದ ಆರಂಭಿಸಿ, ಮಾಸಿಕ ಮೊತ್ತವನ್ನು 500 ರೂ. ಅಥವಾ 1,000 ರೂ.ಗಳಿಗೆ ಹೆಚ್ಚಿಸುವ ಮೂಲಕ 10-15 ವರ್ಷಗಳಲ್ಲಿ ಲಕ್ಷಾಂತರ ರೂಪಾಯಿಗಳ ಒಡೆಯನಾಗಬಹುದು.
ಸಣ್ಣ ಮೊತ್ತದ ಮಾಸಿಕ ಎಸ್‌ಐಪಿ ಕೂಡಾ ಹೆಚ್ಚಿನ ಬಡ್ಡಿಯಿಂದಾಗಿ ಗಣನೀಯವಾಗಿ ಏರಿಕೆ ಕಾಣುತ್ತದೆ. ಉದಾಹರಣೆಗೆ, ಮಾಸಿಕ 100 ರೂ.ಗಳನ್ನು 25 ವರ್ಷಗಳ ಕಾಲ 12% ವಾರ್ಷಿಕ ಆದಾಯದೊಂದಿಗೆ ಹೂಡಿಕೆ ಮಾಡಿದರೆ, ಅದು 1,70,221 ರೂ.ಗಳಾಗಿ ಬದಲಾಗಬಹುದು. ಮಾಸಿಕ ಮೊತ್ತವನ್ನು 500 ರೂ. ಅಥವಾ 1,000 ರೂ.ಗಳಿಗೆ ಹೆಚ್ಚಿಸಿದರೆ, 10-15 ವರ್ಷಗಳಲ್ಲಿ ಲಕ್ಷಾಂತರ ರೂಪಾಯಿಗಳಷ್ಟು ಆದಾಯ ನೀವು ಸಂಪಾದಿಸಬಹುದು. ಇದು ಶಿಸ್ತುಬದ್ಧ ದೀರ್ಘಕಾಲೀನ ಹೂಡಿಕೆಯಿಂದ ಎಷ್ಟು ಆದಾಯ ಗಳಿಸಬಹುದು ಎಂಬುದನ್ನು ತೋರಿಸುತ್ತದೆ.
ಬೆಲೆ ಏರಿಕೆ, ಲಕ್ಸುರಿ ಲೈಫ್‌ನಿಂದಾಗಿ ಹೆಚ್ಚಿನವರಿಗೆ ಹಣ ಉಳಿತಾಯ ಮಾಡುವುದೇ ಕಷ್ಟಸಾಧ್ಯವಾಗಿದೆ. ಆದ್ರೆ ಇದಕ್ಕೆ ಸ್ಪಷ್ಟ ಮಾರ್ಗದರ್ಶನ ಇಲ್ಲದಿರುವುದು ಪ್ರಮುಖ ಕಾರಣ. ಆದ್ದರಿಂದ ಹೆಚ್ಚಿನ ಆದಾಯ ಸಂಪಾದಿಸಲು ದೊಡ್ಡ ಮೊತ್ತದಲ್ಲಿ ಆರಂಭಿಕ ಹೂಡಿಕೆಯ ಅಗತ್ಯವಿಲ್ಲ. ಅದಕ್ಕಾಗಿ, ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ಮೂಲಕ ಕೇವಲ 100 ರೂ.ಗಳ ಮಾಸಿಕ ಹೂಡಿಕೆಯೂ ಕಾಲಾನಂತರದಲ್ಲಿ ಹೆಚ್ಚಿನ ಆದಾಯ ಗಳಿಸಬಹುದು.
ತಿಂಗಳಿಗೆ 100 ರೂ.ಗಳ ಎಸ್‌ಐಪಿನಲ್ಲಿ ಹೂಡಿಕೆ ಮಾಡಿ:
ತಿಂಗಳಿಗೆ 100 ರೂ. ಹೂಡಿಕೆ ಮಾಡಿದ್ರೆ, ಹೆಚ್ಚಿನ ಆದಾಯ ಸಿಗಬಹುದು. ಉದಾಹರಣೆಗೆ, ಒಬ್ಬ ವ್ಯಕ್ತಿ ತಿಂಗಳಿಗೆ 100 ರೂಪಾಯಿಯಂತೆ 25 ವರ್ಷಗಳ ಕಾಲ ಹೂಡಿಕೆ ಮಾಡಿದ್ರೆ, ಸರಿಸುಮಾರು 12% ವಾರ್ಷಿಕ ಆದಾಯದಲ್ಲಿ ಹೂಡಿಕೆ ಮಾಡಿದರೆ, ಸುಮಾರು 1,40,221 ರೂ. ಬಡ್ಡಿ ಆಡ್ ಆಗುತ್ತದೆ. ಇದರಿಂದ ಒಟ್ಟು ಆದಾಯವು 1,70,221 ರೂ.ಗಳಾಗುತ್ತದೆ. ಈ ಹೂಡಿಕೆಯು ಒಬ್ಬ ವ್ಯಕ್ತಿಯನ್ನು ಮಿಲಿಯನೇರ್ ಆಗುವಂತೆ ಮಾಡಬಹುದು..
ಹಣವನ್ನು ಬೆಳೆಸಲು ಸಂಯುಕ್ತ ಬಡ್ಡಿ ಹೇಗೆ ಸಹಾಯ ಮಾಡುತ್ತದೆ?
ಎಸ್‌ಐಪಿ ಸಂಯುಕ್ತ ಬಡ್ಡಿಯ ನೀತಿಯ ಮೇಲೆ ಕೆಲಸ ಮಾಡುತ್ತದೆ. ನೀವು ಮಾಡಿದ ಮಾಸಿಕ ನಿಗದಿತ ಮೊತ್ತವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಕಾಲಾನಂತರದಲ್ಲಿ, ಈ ಸಣ್ಣ ಮೊತ್ತಗಳಿಗೆ ಬಡ್ಡಿ ಸೇರಿ ಹೆಚ್ಚಿನ ಆದಾಯವಾಗಿ ಬದಲಾವಣೆಯಾಗುತ್ತದೆ.
25 ವರ್ಷಗಳವರೆಗೆ ಹೂಡಿಕೆ ಮಾಡಿದ್ರೆ ಎಷ್ಟು ಸಿಗುತ್ತೆ?
ಒಬ್ಬರು 25 ವರ್ಷಗಳ ಕಾಲ ಪ್ರತೀ ತಿಂಗಳು 100 ರೂಪಾಯಿ ನಿರಂತರವಾಗಿ ಹೂಡಿಕೆ ಮಾಡಬೇಕು. ಆ ನಂತರ ಅವರ ಒಟ್ಟು 30,000 ರೂ.ಗಳ ಹೂಡಿಕೆಯು 12% ವಾರ್ಷಿಕ ಆದಾಯದಲ್ಲಿ ಅಂದಾಜು 1,89,000 ರೂ.ಗಳಾಗಿ ಸಿಗುತ್ತದೆ. ಆದಾಯದ ದರ 10% ಇದ್ದರೂ, ನಿಧಿಯು ಸುಮಾರು 1,18,000 ರೂ. ಆಗಿರುತ್ತದೆ, ಮತ್ತು 14% ಆದಾಯದೊಂದಿಗೆ ಅದು ಸುಮಾರು 2,92,000 ರೂ.ಗಳಿಗೆ ಏರಿಕೆಯಾಗಬಹುದು.
ಯಾವುದೇ ಯೋಜನೆಯ ಮೇಲೆ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸುವುದು ಮುಖ್ಯ. ಎಸ್‌ಐಪಿ ಮಾತ್ರವಲ್ಲ ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡುವ ಮುನ್ನ ಹಣಕಾಸು ತಜ್ಞರ ಸಲಹೆ ಪಡೆಯಿರಿ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications