2020-21ರ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವ ಗಡುವನ್ನು ಸರ್ಕಾರ ಗುರುವಾರ ವಿಸ್ತರಿಸುವ ಮೂಲಕ ತೆರಿಗೆದಾರರಿಗೆ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಈ ಹಿಂದೆ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡುವ ಕೊನೆಯ ದಿನಾಂಕವು 2021ರ ಸೆಪ್ಟೆಂಬರ್ 30 ರಂದು ಆಗಿತ್ತು. ಆದರೆ ಸಿಬಿಡಿಟಿ ಈಗ ಈ ದಿನಾಂಕವನ್ನು ಮತ್ತಷ್ಟು ವಿಸ್ತರಣೆ ಮಾಡಿದೆ.
ಹಲವಾರು ತೆರಿಗೆದಾರರು 2021ರ ಫೆಬ್ರವರಿ ಒಂದರ ಹೊತ್ತಿಗೆ ಐಟಿಎಸ್‌ಸಿಯಲ್ಲಿ ತಮ್ಮ ರಿಟರ್ನ್ಸ್ ಅರ್ಜಿಯನ್ನು ಸಲ್ಲಿಸುವ ಮಧ್ಯದ ಪ್ರಕ್ರಿಯೆಯಲ್ಲಿ ಇದ್ದಾರೆ ಎಂದು ವರದಿಯಾಗಿತ್ತು. ಈ ನಡುವೆ ಹಲವಾರು ತೆರಿಗೆದಾರರು ತಮ್ಮ ಐಟಿ ರಿಟರ್ನ್ಸ್ ವಿನಂತಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಲು ಹೈಕೋರ್ಟ್ ಮೆಟ್ಟಲೇರಿದ್ದರು.
ಕೆಲವೊಂದು ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ಗಳು ತಾತ್ಕಾಲಿಕ ಪರಿಹಾರವನ್ನು ನೀಡಲು ಸೂಚನೆ ನೀಡಿತ್ತು. ಹಾಗೆಯೇ ಐಟಿ ರಿಟರ್ನ್ಸ್ ಅರ್ಜಿಗಳನ್ನು ಫೆಬ್ರವರಿ 1, 2021 ರ ನಂತರವೂ ಸ್ವೀಕರಿಸಬೇಕೆಂದು ಸೂಚನೆ ನೀಡಿತ್ತು. 2021 ರ ಜನವರಿ 31 ರಂದು ಅರ್ಜಿ ಸಲ್ಲಿಸಲು ಅರ್ಹರಾದ ತೆರಿಗೆದಾರರಿಗೆ ಪರಿಹಾರ ನೀಡಲು ಆದೇಶಿಸಲಾಗಿತ್ತು. ಆದರೆ 2021 ರ ಹಣಕಾಸು ಕಾಯಿದೆಯ ಅಡಿಯಲ್ಲಿ ಐಟಿಎಸ್‌ಸಿಯ ಮುಕ್ತಾಯದ ಕಾರಣದಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಹಾಗೆಯೇ ಈ ಪೋರ್ಟಲ್‌ನಲ್ಲೂ ಸಮಸ್ಯೆ ಕಾಣಿಸಿಕೊಂಡಿತ್ತು.

ಆದರೆ ಈಗ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಪರಿಹಾರ ಪಡೆಯಲು ತೆರಿಗೆದಾರರು ಸೆಪ್ಟೆಂಬರ್ 30 2021 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ನಿರ್ಧರಿಸಿತ್ತು. ಆದರೆ ಇದಕ್ಕಾಗಿ ಷರತ್ತನ್ನು ಕೂಡಾ ಅನ್ವಯ ಮಾಡಿತ್ತು.
* ವ್ಯಕ್ತಿಯು 2021 ರ ಜನವರಿ 31 ರಂದು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಲು ಅರ್ಜಿಯೊಂದನ್ನು ಸಲ್ಲಿಸಲು ಕೋರಲಾಗಿದೆ.
* ವ್ಯಕ್ತಿಯ ಎಲ್ಲಾ ಸಂಬಂಧಿತ ಮೌಲ್ಯಮಾಪನ ಪ್ರಕ್ರಿಯೆಗಳ ಇತ್ಯರ್ಥಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕದಂದೇ ಉಳಿದ ಪ್ರಕ್ರಿಯೆಗಳು ಬಾಕಿ ಉಳಿಯಲಿದೆ.
"ಅಂತಹ ಅರ್ಜಿಗಳನ್ನು, ಅವುಗಳ ಸಿಂಧುತ್ವವನ್ನು, ಕಾಯಿದೆಯ ಕಲಂ 245 ಎ ಕಲಂ (ಇಬಿ) ಅಡಿಯಲ್ಲಿ'ಬಾಕಿ ಇರುವ ಅರ್ಜಿಗಳು' ಎಂದು ಪರಿಗಣಿಸಲಾಗುತ್ತದೆ ಮತ್ತು ಕಾಯಿದೆಯ ನಿಬಂಧನೆಗಳ ಪ್ರಕಾರ ಮಧ್ಯಂತರ ಮಂಡಳಿಯಿಂದ ವಿಲೇವಾರಿ ಮಾಡಲಾಗುತ್ತದೆ," ಎಂದು ಸಿಬಿಡಿಟಿ ಹೇಳಿತ್ತು.
"ಅಂತಹ ಅರ್ಜಿಗಳನ್ನು ಸಲ್ಲಿಸಿದ ತೆರಿಗೆದಾರರು ಕಾಯಿದೆಯ ಸೆಕ್ಷನ್ 245 ಎಮ್ ನ ನಿಬಂಧನೆಗಳ ಪ್ರಕಾರ ಅಂತಹ ಅರ್ಜಿಗಳನ್ನು ಹಿಂತೆಗೆದುಕೊಳ್ಳುವ ಅವಕಾಶವನ್ನು ಹೊಂದಿರುವುದಿಲ್ಲ. ಇನ್ನು 2021 ಫೆಬ್ರವರಿ 1 ಅಥವಾ ನಂತರ ಇತ್ಯರ್ಥಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ತೆರಿಗೆದಾರರು ವಿವಿಧ ಹೈಕೋರ್ಟ್‌ಗಳ ನಿರ್ದೇಶನದ ಮೇರೆಗೆ ಮತ್ತು ಅಂತಹ ಅರ್ಜಿಯನ್ನು ಸಲ್ಲಿಸಲು ಅರ್ಹರಾದವರು, ಅರ್ಜಿಯನ್ನು ಸಲ್ಲಿಸಿದ ದಿನಾಂಕದಂದು ಅಂತಹ ಅರ್ಜಿಯನ್ನು ಮತ್ತೊಮ್ಮೆ ಸಲ್ಲಿಸುವ ಅಗತ್ಯವಿಲ್ಲ," ಸಿಬಿಡಿಟಿ ಸ್ಪಷ್ಟಪಡಿಸಿತ್ತು.
ಮೌಲ್ಯಮಾಪನ ಪ್ರಕ್ರಿಯೆಗಳಲ್ಲಿ ಎಲೆಕ್ಟ್ರಾನಿಕ್ ದಾಖಲೆಗಳನ್ನು ದೃಢೀಕರಿಸಲು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಆದಾಯ ರಹಿತ ನಿಯಮಗಳು, 1962 ರ ಸೆಪ್ಟೆಂಬರ್ 6, 2021 ರಂದು ಮಾರ್ಪಡಿಸಿದೆ. "ತಿದ್ದುಪಡಿ ಮಾಡಿದ ನಿಯಮಗಳು ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ನಲ್ಲಿ ತೆರಿಗೆದಾರರ ನೋಂದಾಯಿತ ಖಾತೆಯ ಮೂಲಕ ಸಲ್ಲಿಸಿದ ಎಲೆಕ್ಟ್ರಾನಿಕ್ ದಾಖಲೆಗಳನ್ನು ಎಲೆಕ್ಟ್ರಾನಿಕ್ ಪರಿಶೀಲನೆ ಕೋಡ್ (ಇವಿಸಿ) ಮೂಲಕ ತೆರಿಗೆದಾರರಿಂದ ದೃಡೀಕರಿಸಲ್ಪಟ್ಟಿದೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯು ಆದಾಯ ತೆರಿಗೆ ಇಲಾಖೆಯ ಗೊತ್ತುಪಡಿಸಿದ ಪೋರ್ಟಲ್‌ನಲ್ಲಿ ತನ್ನ ನೋಂದಾಯಿತ ಖಾತೆಗೆ ಲಾಗ್ ಇನ್ ಮಾಡುವ ಮೂಲಕ ಎಲೆಕ್ಟ್ರಾನಿಕ್ ದಾಖಲೆಯನ್ನು ಸಲ್ಲಿಸಿದರೆ, ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 144B (7) (i) (b) ನ ಉದ್ದೇಶಗಳಿಗಾಗಿ ಇವಿಸಿಯಿಂದ ಎಲೆಕ್ಟ್ರಾನಿಕ್ ದಾಖಲೆಯನ್ನು ದೃಢೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ," ಎಂದು ಸಿಬಿಡಿಟಿ ತಿಳಿಸಿತ್ತು.
ಇನ್ನು ಗುರುವಾರ ಈ ಬಗ್ಗೆ ಸ್ಪಷ್ಟಣೆ ನೀಡಿರುವ ಐಟಿ ಇಲಾಖೆ, "ಆದಾಯ ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ತೊಂದರೆ ಉಂಟಾಗುತ್ತಿದೆ ಹಾಗೂ ಆಡಿಟ್ ರಿಪೋರ್ಟ್ ಮಾಡಲು ತೊಂದರೆ ಉಂಟಾಗುತ್ತಿದೆ ಎಂದು ಹಿನ್ನೆಲೆ ಸಿಡಿಬಿಟಿ ಮತ್ತೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಹಾಗೂ ಆಡಿಟ್ ರಿಪೋರ್ಟ್ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಿದೆ," ಎಂದು ತಿಳಿಸಿದೆ.


Click it and Unblock the Notifications