ಭಾರತ ಮತ್ತು ಪಾಕಿಸ್ತಾನ ನಡುವಿನ ಕದನಕ್ಕೆ ಕದನ ವಿರಾಮ ಬಿದ್ದಿದೆ..ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಪ್ರಕಾರ, ಇದು ಕದನ ವಿರಾಮ ಎನ್ನುವುದಕ್ಕಿಂತ ಅಲ್ಪ ವಿರಾಮ ಎನ್ನಬಹುದು. ಈ ವಾರಾಂತ್ಯದಿಂದಲೇ ಗಡಿ ಪ್ರದೇಶದ ಉದ್ವಿಗ್ನತೆ ಶಾಂತ ರೂಪಕ್ಕೆ ತಿರುಗಿದೆ. ಈ ಪರಿಣಾಮದಿಂದ ಭಾರತದ ಹಣಕಾಸು ಮಾರುಕಟ್ಟೆಯಲ್ಲೂ ಸ್ವಲ್ಪ ನಿರಾಳದ ಸುದ್ದಿ ಕೇಳಬಹುದಾಗಿದೆ.

ಹೌದು, ಹಣಕಾಸು ಮಾರುಕಟ್ಟೆಯಲ್ಲಿ ಕದನ ವಿರಾಮದ ಕಾರಣದಿಂದ ದೃಢೀಕರಣದ ಹಾದಿ ಕಾಣಿಸುತ್ತಿದೆ. ಅಂದರೆ ಇಂದಿನ ಮಾರುಕಟ್ಟೆಯಲ್ಲಿ, ದೃಢೀಕರಣದ ಹಾದಿಯನ್ನು ಕಾಣಬಹುದಾಗಿದೆ. ಇಂದಿನ ವಹಿವಾಟಿನಲ್ಲಿ ಭಾರತ ಸರಕಾರದ ಬಾಂಡ್‌ಗಳು ಮತ್ತು ರೂಪಾಯಿ ಶಕ್ತಿಶಾಲಿಯಾಗಿ ತೆರೆಯುವ ನಿರೀಕ್ಷೆಯಿದೆ.
ಬಾಂಡ್ ಇಳುವರಿ ಬೇಸಿಸ್ ಇಳಿಯುವ ಸಾಧ್ಯತೆ:
ಅಂದಹಾಗೆ ಭಾರತೀಯ ರಿಸರ್ವ್ ಬ್ಯಾಂಕ್ ಓಪನ್ ಮಾರ್ಕೆಟ್ ಆಪರೇಷನ್ ಹರಾಜು ಹಮ್ಮಿಕೊಂಡಿದೆ. ಈ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಭಾವನೆ ಬಲವಾಗಿದೆ ಎಂದು ಬಾಂಡ್ ಡೀಲರ್‍ಗಳು ವ್ಯಕ್ತಪಡಿಸುತ್ತಿದ್ದಾರೆ. ಅಂದರೆ 10 ವರ್ಷಗಳ ಮಾನದಂಡದ ಸರ್ಕಾರಿ ಬಾಂಡ್ ಇಳುವರಿ ಮಂಗಳವಾರ 3 ರಿಂದ 4 ಬೇಸಿಸ್ ಪಾಯಿಂಟ್‌ಗಳವರೆಗೆ ಇಳಿಯಬಹುದು ಎನ್ನಲಾಗುತ್ತಿದೆ.
ಬಾಂಡ್ ಡೀಲರ್‌ಗಳ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಓಪನ್ ಮಾರ್ಕೆಟ್ ಆಪರೇಷನ್ (ಒಎಂಒ) ಹರಾಜು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಭಾವನೆ ಬಲವಾಗಿದ್ದು, 10 ವರ್ಷಗಳ ಮಾನದಂಡದ ಸರ್ಕಾರಿ ಬಾಂಡ್ ಇಳುವರಿ ಮಂಗಳವಾರ 3 ರಿಂದ 4 ಬೇಸಿಸ್ ಪಾಯಿಂಟ್‌ಗಳವರೆಗೆ ಇಳಿಯಬಹುದು. ಶುಕ್ರವಾರ, 6.40% ಪ್ರಮಾಣದ ಪ್ರಮುಖ ನಿರ್ಣಾಯಕ ಮಟ್ಟವನ್ನು ದಾಟಿದ ನಂತರ, ಮಾನದಂಡದ ಬಾಂಡ್ ಇಳುವರಿ ಶೇ. 6.38 ರವರೆಗೆ ಇಳಿದಿತ್ತು, ಇದು ಮಾರುಕಟ್ಟೆಯ ಭರವಸೆಯನ್ನು ಬಿಂಬಿಸುತ್ತದೆ.
ರೂಪಾಯಿ ಮೌಲ್ಯ ಸ್ಥಿರತೆ ಸಾಧ್ಯತೆ:
ಇನ್ನು ಕಳೆದ ವಾರ ರೂಪಾಯಿ ಮೌಲ್ಯ ಶೇ. 0.98 ರಷ್ಟು ಕುಸಿತ ಕಂಡಿತ್ತು. ಕಳೆದ ಗುರುವಾರದ ವಹಿವಾಟಿನಲ್ಲಿ, ಎರಡು ವರ್ಷಗಳಲ್ಲಿಯೇ ಅತಿದೊಡ್ಡ ಏಕದಿನ ಇಳಿಕೆಗೆ ಶಿಕಾರಿಯಾಯಿತು. ಇದರ ಪರಿಣಾಮದಿಂದ ರೂಪಾಯಿ ಮೌಲ್ಯವು, ಇತ್ತೀಚಿನ ಕ್ಯಾಲೆಂಡರ್ ವರ್ಷ ನತ್ತು ಹಣಕಾಸು ವರ್ಷದ ಗಳಿಕೆಯನ್ನು ನಷ್ಟವಾಗಿಸಿದೆ. ಆದರೆ ಆರ್‌ಬಿಐನ ಡಾಲರ್ ಮಾರಾಟದ ಹಸ್ತಕ್ಷೇಪದಿಂದಾಗಿ ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ದೃಢವಾಯಿತು. ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 85.38ಕ್ಕೆ ಬಲ ಪಡೆದಿದ್ದು, ಮೊದಿನೆ ದಿನದ 85.72 ಮಟ್ಟದಿಂದ ಸುಧಾರಣೆ ಕಂಡಿದೆ. ವಹಿವಾಟಿನ ಆರಂಭದಲ್ಲಿ ರೂಪಾಯಿ 85.87 ರಷ್ಟು ಮಟ್ಟಕ್ಕೆ ಕುಸಿದರೂ, ಕೇಂದ್ರ ಬ್ಯಾಂಕ್ ಹಸ್ತಕ್ಷೇಪದ ಪರಿಣಾಮವಾಗಿ ಅದು ಬಲವಾಗಿ ಚೇತರಿಸಿತು.
ಪರಿಪೂರ್ಣತೆ ತಲುಪಿದ ವಹಿವಾಟು:
ಇನ್ನು ಖಾಸಗಿ ಬ್ಯಾಂಕಿನ ಖಜಾನೆ ವಿಭಾಗದ, ಮುಖ್ಯಸ್ಥರು ಹೇಳಿರುವ ಪ್ರಕಾರ, ಇಂದು ರೂಪಾಯಿ ಮೌಲ್ಯವು ಡಾಲರ್‌ಗೆ 85 ರ ಸಮೀಪ ತೆರೆಯುವ ಸಾಧ್ಯತೆ ಇದೆ ಎನ್ನಬಹುದು. ಆದರೆ ಈ ಮಟ್ಟದಿಂದ ಹೆಚ್ಚಿನ ಇಳಿಕೆಗೆ ನಿರೀಕ್ಷೆ ಕಡಿಮೆ ಇದದೆ. ಡಾಲರ್ ಸೂಚ್ಯಂಕದ ಮೇಲೆ ಸದ್ಯ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ಯುಎಸ್ ಫೆಡರಲ್ ರಿಸರ್ವ್ ತನ್ನ ದರ ತೀರ್ಮಾನದಲ್ಲಿ ವಿರಾಮವನ್ನೇ ಕೊಂಡೊಯ್ಯಿದರೂ, ಮತ್ತೊಮ್ಮೆ ದರ ಏರಿಕೆಗೆ ಸಾಧ್ಯತೆಗಳಿರುವುದರಿಂದ, ಚಂಚಲತೆ ಇನ್ನೂ ಸಂಪೂರ್ಣ ಶಮನಗೊಂಡಿಲ್ಲ. ವಾರಾಂತ್ಯದ ಕೊನೆ ವೇಳೆಗೆ ರೂಪಾಯಿ ಮೌಲ್ಯವು ಕ್ಯಾಲೆಂಡರ್ ವರ್ಷಕ್ಕೆ ಶೇ. 0.27 ರಷ್ಟು ಮತ್ತು ಹಣಕಾಸು ವರ್ಷಕ್ಕೆ ಶೇ. 0.1 ರಷ್ಟು ಲಾಭ ದಾಖಲಿಸಿದ್ದು, ಹೊಸ ಆರ್ಥಿಕ ಚಕ್ರಕ್ಕೆ ಸ್ಥಿರವಾದ ಆರಂಭ ನೀಡಿದೆ.
ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮವು ಕೇವಲ ರಾಜಕೀಯ ಸ್ಥಿತಿಗತಿಗಳಿಗೆ ಮಾತ್ರವಲ್ಲ, ಹಣಕಾಸು ಮಾರುಕಟ್ಟೆಯ ಮೇಲೆಲೂ ಪಾಸಿಟಿವ್ ಪರಿಣಾಮ ಬೀರುತ್ತಿರುವುದನ್ನು ಈ ವಾರದ ರೂಪಾಯಿ ಹಾಗೂ ಸರ್ಕಾರಿ ಬಾಂಡ್‌ಗಳ ಚಲನೆಯಿಂದ ಸ್ಪಷ್ಟವಾಗಿ ಗಮನಿಸಬಹುದು. ರೂಪಾಯಿಯ ಸ್ಥೈರ್ಯ ಮತ್ತು ಬಾಂಡ್ ಇಳುವರಿಗಳ ಇಳಿಕೆ ಹೂಡಿಕೆದಾರರ ಆತ್ಮವಿಶ್ವಾಸವನ್ನು ಪುನಃ ಸ್ಥಾಪಿಸುತ್ತಿದೆ. ಮುಂದಿನ ದಿನಗಳಲ್ಲಿ ಆರ್‌ಬಿಐಯ ನೀತಿಗತ ಕ್ರಮಗಳು, ಜಾಗತಿಕ ದರ ಚಲನೆಗಳು ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಪೈಪೋಟಿಯಲ್ಲಿ ರೂಪಾಯಿ ಮತ್ತು ಬಾಂಡ್ ಮಾರುಕಟ್ಟೆ ಯಾವ ದಿಕ್ಕಿಗೆ ಸಾಗುತ್ತವೆ ಎಂಬುದನ್ನು ತೀರ್ಮಾನಿಸಲಾಗುವುದು. ಹೀಗಾಗಿ, ಹೂಡಿಕೆದಾರರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಹಾಗೂ ಆರ್ಥಿಕ ಬೆಳವಣಿಗೆಗಳತ್ತ ಕಣ್ಣಿಟ್ಟಿರುವುದು ಅವಶ್ಯಕ.


Click it and Unblock the Notifications