ಬೆಂಗಳೂರು, ಫೆಬ್ರವರಿ 6: ಇಂದಿನ ಪೀಳಿಗೆ ಯುವ ಸಮೂಹ ತಮ್ಮ 30 ನೇ ವಯಸ್ಸಿಗೆ ಮಿಲಿಯನೇರ್ ಆಗುವ ಕನಸು ಕಾಣುತ್ತಾರೆ. ಆದರೆ ಸ್ಟಾರ್ಟ್ಅಪ್ ಝೈಬರ್ 365 (Zyber 365) ರ ಸಂಸ್ಥಾಪಕರಾಗಿರುವ ಪರ್ಲ್ ಕಪೂರ್ ಅವರು 27 ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಆಗುವ ಮೂಲಕ ಇತಿಹಾಸದ ಬರೆದಿದ್ದಾರೆ.
ಇನ್ನೊಂದೆಡೆ ಝೈಬರ್ 365 ಅಪಾರ ಸಾಮರ್ಥ್ಯವನ್ನು ಗುರುತಿಸಿದ Sram & Mram ಗ್ರೂಪ್, ಇದರಲ್ಲಿ 8.3% ಹೂಡಿಕೆ ಮಾಡಿದೆ. ಈ ಮೂಲಕ ಸ್ಟಾರ್ಟ್‌ಅಪ್ ಮೌಲ್ಯವು $1.2 ಶತಕೋಟಿ ಅಂದರೆ ಸರಿಸುಮಾರು ರೂ. 9840 ಕೋಟಿಗೆ ಏರಿದೆ.

ಪರ್ಲ್ ಕಪೂರ್ ಮತ್ತು ಸನ್ನಿ ವಘೇಲಾ ಸ್ಥಾಪಿಸಿದ ಭಾರತೀಯ ಮೂಲದ ಕಂಪನಿಯಾದ ಝೈಬರ್ ಅತ್ಯಾಧುನಿಕ EVM-ಹೊಂದಾಣಿಕೆಯ ವೆಬ್3 ಲೇಯರ್ 1 ಪ್ರೂಫ್ ಆಫ್ ಅಥಾರಿಟಿ (PoA) ಸುಸ್ಥಿರ ಸರಪಳಿಗೆ ಹೆಸರುವಾಸಿಯಾಗಿದೆ. ಇದರ ಸಹ-ಸಂಸ್ಥಾಪಕರಾದ ಸನ್ನಿ ವಘೇಲಾ ಮೂಲತಃ ಎಥಿಕಲ್ ಹ್ಯಾಕರ್ ಆಗಿದ್ದು, ಅವರನ್ನು ಭಾರತದ ಪ್ರಮುಖ ನೈತಿಕ ಹ್ಯಾಕರ್‌ಗಳಲ್ಲಿ ಒಬ್ಬರಾಗಿದ್ದಾರೆ. ಕಪೂರ್ ಅವರು ವಿಶ್ವಸಂಸ್ಥೆಯ ಎಸ್‌ಡಿಜಿ ಗುರಿಗಳೊಂದಿಗೆ" ಪರಿಸರ ಸ್ಥಿರತೆ ಮತ್ತು ಹೊಂದಾಣಿಕೆ"ಗೆ ಅವರ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ.
ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾನಿಲಯದಿಂದ ಹೂಡಿಕೆ ಬ್ಯಾಂಕಿಂಗ್‌ನಲ್ಲಿ (CFA ಪಾಥ್‌ವೇ) MSC ಪಡೆದಿರುವ ಕಪೂರ್ ಅವರು ತಮ್ಮ ಉದ್ಯಮಶೀಲತೆಯ ಪಯಣವನ್ನು 2023 ರ ಮೇಯಲ್ಲಿ ಪ್ರಾರಂಭಿಸಿದರು. ಕುತೂಹಲಕಾರಿ ವಿಚಾರವೆಂದರೆ ಪರ್ಲ್ ಕಪೂರ್ ಅವರು Zyber 365 Technologies Ltd (UK) ನಲ್ಲಿ 90% ಪಾಲನ್ನು ಹೊಂದಿದ್ದು ಇದರಿಂದಾಗಿ ಅವರೇ ಕಂಪನಿಯ ಬಹುಪಾಲು ಷೇರುದಾರರಾಗಿದ್ದಾರೆ.
Zyber 365 ಅನ್ನು ಪ್ರಾರಂಭಿಸುವ ಸುಮಾರು ಎರಡು ವರ್ಷಗಳ ಮೊದಲು, ಕಪೂರ್ ಅವರು AMPM ಸ್ಟೋರ್‌ನಲ್ಲಿ ಹಣಕಾಸು ಸಲಹೆಗಾರರಾಗಿ ನೇಮಕಗೊಂಡಿದ್ದರು. ಇದಾದ ನಂತರ ಆಂಟಿಯರ್ ಸೊಲ್ಯೂಷನ್ಸ್‌ನಲ್ಲಿ 1.5 ವರ್ಷಗಳ ಕಾಲ ವ್ಯಾಪಾರ ಸಲಹೆಗಾರರಾಗಿದ್ದು ಈ ವೇಳೆ ತಮ್ಮ ಉದ್ಯಮಶೀಲ ಕೌಶಲ್ಯಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಫೆಬ್ರವರಿ 2022 ರಲ್ಲಿ, ಅವರು ಬಿಲಿಯನ್ ಪೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸಹ ಸ್ಥಾಪಿಸಿದ್ದರು.
ಝೈಬರ್ 365 ಭಾರತದಲ್ಲಿ ಕಾರ್ಯಾಚರಣೆಯ ನೆಲೆಯನ್ನು ಹೊಂದಿದ್ದರೂ , ಲಂಡನ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಇದರೊಂದಿಗೆ ಭಾರತವನ್ನು ತಮ್ಮ ಕಾರ್ಯಾಚರಣೆಯ ಕೇಂದ್ರವನ್ನಾಗಿ ಮಾಡಲು ಯೋಜಿಸಿದ್ದಾರೆ. ಝೈಬರ್ 365 ವಿಕೇಂದ್ರೀಕೃತ ಹಾಗೂ ಸೈಬರ್ ಸೆಕ್ಯೂರ್ ಆಗಿರುವ ಆಪರೇಟಿಂಗ್ ಸಿಸ್ಟಮ್ ಅನ್ನು ನೀಡುತ್ತದೆ.
ಕಪೂರ್ ಅವರು ತಮ್ಮ ವ್ಯಾಪಾರದ ಬೆಳವಣಿಗೆ, ಬಿಸಿನೆಸ್ ಮೌಲ್ಯ ಹಾಗೂ ತಂಡ ರಚನೆಯತ್ತ ಗಮನಹರಿಸುತ್ತಿದ್ದಾರೆ. ಎಐ, ಸೈಬರ್ ಸೆಕ್ಯೂರಿಟಿ ಹಾಗೂ ಬ್ಲಾಕ್‌ಚೈನ್‌ನಂಥ ತಂತ್ರಜ್ಞಾನ ಆವಿಷ್ಕಾರವು ತಮ್ಮ ಉದ್ಯಮ ಬೆಳವಣಿಗೆ ಸಾಕಷ್ಟು ವಿಪುಲ ಅವಕಾಶವನ್ನು ತೆರೆದಿಡಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ.


Click it and Unblock the Notifications