ಜಗತ್ತು ಬದಲಾದಂತೆಲ್ಲ ಜನ ಕೂಡ ಬದಲಾಗುತ್ತಾರೆ, ತಮ್ಮ ಜೀವನ ಶೈಲಿಯನ್ನೂ ಬದಲಿಸಿಕೊಳ್ಳುತ್ತಾರೆ. ಆದರೆ ಜೀವನ ಶೈಲಿ ಬದಲಾವಣೆಯಾದಾಗ ಒಂದಷ್ಟು ಕುಂದು-ಕೊರತೆಗಳನ್ನು ಎದುರಿಸುವುದು ಸಾಮಾನ್ಯವಾಗಿರುತ್ತದೆ. ತಮ್ಮೆಲ್ಲಾ ಕೊರತೆಗಳನ್ನು ನೀಗಿಸಿಕೊಳ್ಳಲು, ಕೆಲವೊಮ್ಮೆ ಹಣಕಾಸಿನ ಸಮಸ್ಯೆಯಿಂದ ಪಾರಾಗಲು ಜನ ಈಗೀನ ಪರ್ಸನಲ್ ಲೋನ್‌ನ ಅನುಸರಿಸುತ್ತಾರೆ.
ಅಲ್ಲದೇ ತಮ್ಮ ಖರ್ಚುಗಳನ್ನು ಕೂಡ ಸರಿದೂಗಿಸಲು ಹಣ ಹೊಂದಿಸುವುದರಲ್ಲೇ ಜನರು ಜೀವಮಾನ ಕಳೆಯುತ್ತಾರೆ ಎಂದರೂ ತಪ್ಪಾಗಲ್ಲ. ಹೀಗಾಗಿ ಜನರು ಪಡೆದುಕೊಳ್ಳುವ ವೈಯಕ್ತಿಕ ಸಾಲಗಳನ್ನು NBFC ಗಳು, ಬ್ಯಾಂಕುಗಳು ಮತ್ತು ಆನ್‌ಲೈನ್ ಸಾಲದಾತರು ನೀಡುತ್ತಾರೆ. ಇದಕ್ಕಾಗಿ ಜನರು ಡಿಜಿಟಲ್ ಕೆವೈಸಿ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ. ಈ ಮೂಲಕ ಜನರು ತಮ್ಮ ವೈಯಕ್ತಿಕ ಸಾಲದ ಮೊತ್ತವನ್ನು ತ್ವರಿತವಾಗಿ ಪಡೆಯುತ್ತಾರೆ.

ಇನ್ನು ಸಾಮಾನ್ಯವಾಗಿ ಎಲ್ಲಾ ಸಾಲಗಳಿಗೂ ಹೋಲಿಸಿದರೆ, ಈ ವೈಯಕ್ತಿಕ ಸಾಲಗಳು ಕಡಿಮೆ ಸಾಲದ ಮೊತ್ತವನ್ನು ನೀಡುತ್ತವೆ. ಮತ್ತು ಇವುಗಳು ಕಡಿಮೆ ಅವಧಿಯಲ್ಲಿ ಮರು ಪಾವತಿ ಮಾಡಿಸಿಕೊಳ್ಳುತ್ತವೆ. ಹೀಗಾಗಿ ಸಾಲ ಮರುಪಾವತಿಸುವ ಜನರಿಗೆ, ಈ EMI ಕ್ಯಾಲ್ಕುಲೇಟರ್ ಕಾರ್ಯರೂಪಕ್ಕೆ ಬರುತ್ತದೆ. ಹಾಗಾದರೆ ಈ ಇಎಂಐನ ಲೆಕ್ಕ ಹಾಕುವುದು ಹೇಗೆ, EMI ಕ್ಯಾಲ್ಕುಲೇಟರ್ ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಒಂದು ತ್ವರಿತ ಮಾಹಿತಿ. ಅದಕ್ಕೂ ಮೊದಲು ಇಎಂಐ ಎಂದರೇನು ಎಂಬುದನ್ನು ಎಲ್ಲರೂ ತಿಳಿಯಬೇಕಾಗಿದೆ.
1. EMI ಎಂದರೇನು..?
EMI ಎಂದರೆ ಪ್ರತಿ ತಿಂಗಳು ಬಡ್ಡಿ ಸಹಿತ ಸಾಲವನ್ನು ಮರುಪಾವತಿ ಮಾಡುವುದು. ಅಂದರೆ ಸಾಲದ ಅಸಲಿ ಮೊತ್ತದ ಜೊತೆಗೆ ಬಡ್ಡಿಯನ್ನು ಸೇರಿ ಪ್ರತಿ ತಿಂಗಳು ಕಟ್ಟುವುದು. ಅವಧಿ ಪೂರ್ಣಗೊಂಡಾಗ ನಿಮ್ಮ ಸಾಲವೂ ತೀರುತ್ತದೆ. ಇದೊಂದು ಮೊತ್ತದ ಮೇಲಿನ ಬಡ್ಡಿಯನ್ನು ಒಳಗೊಂಡಿರುವ ನಿಯಮಿತ ಮಾಸಿಕ ಕಂತು. ಸಾಲವನ್ನು ಮರುಪಾವತಿಸುವಾಗ, ಪಾವತಿಸಿದ ಬಡ್ಡಿಯ ಮೊತ್ತವು ಕಡಿಮೆಯಾಗುತ್ತದೆ ಮತ್ತು ಅಸಲು ಮೊತ್ತವು ಕ್ರಮೇಣ ಏರುತ್ತದೆ.
2. EMI ಕ್ಯಾಲ್ಕುಲೇಟರ್ ಎಂದರೇನು?
ಈ EMI ಕ್ಯಾಲ್ಕುಲೇಟರ್ ಎಂದರೆ ಸಾಲ ಪಡೆದವರ EMI ಗಳನ್ನು ನಿಖರವಾಗಿ ಮತ್ತು ತ್ವರಿತವಾಗಿ ಲೆಕ್ಕಹಾಕಲು ಸಹಾಯ ಮಾಡುವ ಆನ್‌ಲೈನ್ ಸಾಧನ. ಇತರೆ ಸಾಲಗಳಿಗಿಂತ ವೈಯಕ್ತಿಕ ಸಾಲಗಳ ಅವಧಿ ಕಡಿಮೆ ಇರುವುದರಿಂದ, EMI ಮೊತ್ತವು ಹೆಚ್ಚಾಗಿರುತ್ತದೆ. ಹೀಗಾಗಿ EMI ಕ್ಯಾಲ್ಕುಲೇಟರ್ ಸಾಲ ಮರುಪಾವತಿಯನ್ನು ಪರಿಣಾಮಕಾರಿಯಾಗಿ, ಯೋಜಿಸಲು ಅನುಮತಿಸುತ್ತದೆ. ಈ ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಬಳಸುವುದು ತುಂಬಾ ಸರಳ . ನೀವು ನಮೂದಿಸಬೇಕಾಗಿರುವುದು ನಿಮ್ಮ ಸಾಲದ ಅಸಲು ಮೊತ್ತ, ಬಡ್ಡಿದರ ಮತ್ತು ಸಾಲದ ಅವಧಿ ಮಾತ್ರ.
3. EMI ಕ್ಯಾಲ್ಕುಲೇಟರ್ ಅನ್ನು ಹೇಗೆ ಬಳಸುವುದು?
ಪರ್ಸನಲ್ ಲೋನ್‌ನಲ್ಲಿ ನೀವು ಪಡೆಯಲು ಬಯಸುವ ಅಸಲು ಮೊತ್ತವನ್ನು ನಮೂದಿಸಬೇಕು.
ಬಳಿಕ ಸಾಲಕ್ಕೆ ಬೇಕಾದ ಬಡ್ಡಿ ದರವನ್ನು ನಮೂದಿಸಬೇಕು.
ಸಾಲದ ಮೊತ್ತವನ್ನು ಮರುಪಾವತಿಸಲು ಬಯಸುವ ಅವಧಿಯನ್ನು ನಮೂದಿಸಬೇಕು
ಎಂಟರ್ ಬಟನ್ ಒತ್ತಿದ ಬಳಿಕ EMIಗಳ ವಿವರವನ್ನು ನೀವು ಪಡೆಯಬಹುದು
4.EMI ಕ್ಯಾಲ್ಕುಲೇಟರ್‍ನಿಂದಾಗುವ ಅನುಕೂಲಗಳೇನು..?
ಈ ಇಎಂಐ ಕ್ಯಾಲ್ಕುಲೇಟರ್‍ಗಳು ಹಸ್ತಚಾಲಿತವಾಗಿ ಲೆಕ್ಕಾಚಾರ ಮಾಡುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಅತೀ ಕಡಿಮೆ ಸಮಯದಲ್ಲಿ ನಿಖರವಾದ ಫಲಿತಾಂಶಗಳನ್ನು ನೀಡುತ್ತದೆ. ಅಲ್ಲದೇ ಇದರಿಂದ ಹಸ್ತಚಾಲಿತ ಲೆಕ್ಕಾಚಾರಗಳಲ್ಲಿ ಸಾಧ್ಯವಾಗಬಹುದಾದ ದೋಷಗಳನ್ನು ಕೂಡ ನಿವಾರಿಸುತ್ತದೆ. ಜೊತೆಗೆ ಬಜೆಟ್ ರೂಪಿಸಲು ಕೂಡ ಸಹಾಯ ಮಾಡುತ್ತವೆ.
EMIನ ಪರಿಣಾಮಕಾರಿಯಾಗಿ ನಿರ್ವಹಿಸಲು ಸಲಹೆಗಳು:
ಸೂಕ್ತವಾದ ಸಾಲದ ಮರುಪಾವತಿ ಅವಧಿಯನ್ನು ಆರಿಸಿದರೆ ಉತ್ತಮ. ಅಂದರೆ ನಿಮಗೆ ಕಟ್ಟಲು ಅನುಕೂಲವಾಗುವಂತಹ ಸಾಲವನ್ನು ಪಡೆದುಕೊಳ್ಳಬೇಕು. ಜೊತೆಗೆ ಬಡ್ಡಿಯಾಗಿ ಪಾವತಿಸಬೇಕಾದ ಒಟ್ಟು ಮೊತ್ತವನ್ನು ಕಡಿಮೆ ಮಾಡುವ ಸಾಲ ಮರುಪಾವತಿ ಅವಧಿಯನ್ನು ಆರಿಸಬೇಕು. ತೆಗೆದುಕೊಂಡ ಸಾಲಗಳ ಮೇಲಿನ ಬಡ್ಡಿದರಗಳ ಮೇಲೆ ನಿಗಾ ವಹಿಸಬೇಕು. ಏಕೆಂದರೆ ನಿಮ್ಮ ಕ್ರೆಡಿಟ್ ಸ್ಕೋರ್ ಆರೋಗ್ಯವಾಗಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಸಾಲ ಪಡೆಯಲು ಸಾಧ್ಯ.
ಜೊತೆಗೆ ಮಾಸಿಕ EMI ಪಾವತಿಗಳು ಆದಾಯಕ್ಕಿಂತ 30-40% ಮೀರದಂತೆ ನೋಡಿಕೊಳ್ಳುವುದು ಬಹುಮುಖ್ಯ. ಹೀಗಾಗಿ ಬಜೆಟ್‌ನ ಯೋಜಿಸಿಕೊಳ್ಳುವುದು ಕೂಡ ಅಷ್ಟೇ ಅಗತ್ಯ. ಇನ್ನು ಆದಷ್ಟು ಮೊದಲೇ ಮರುಪಾವತಿ ಮಾಡಿದರೆ ಯಾವುದೇ ಬಾಕಿ ಉಳಿದಿರುವುದಿಲ್ಲ.
ಈ ಎಲ್ಲಾ ಅಂಶಗಳನ್ನೊಳಗೊಂದ EMI ಕ್ಯಾಲ್ಕುಲೇಟರ್ ಸಾಲ ಪಡೆದವರಿಗೆ, ನಿಜಕ್ಕೂ ಅನುಕೂಲವಾಗಿರುವಂತೆ ಮಾಡುತ್ತವೆ.


Click it and Unblock the Notifications