ಆದಾಯ ಗಳಿಸುವುದೆಂದರೆ, ಕೇವಲ ದುಡಿದು ಸಂಪಾದನೆ ಮಾಡುವುದಲ್ಲ. ಬದಲಿಗೆ ಹೂಡಿಕೆ ಮಾಡಿ, ಲಾಭಗಳಿಸುವುದು. ಅದಕ್ಕಾಗಿ ಹಲವಾರು ಯೋಜನೆಗಳಿವೆ. ಬ್ಯಾಂಕ್, ಪೋಸ್ಟ್ ಆಫೀಸ್‌ಗಳಲ್ಲಿ (Bank, Post Office) ಹೂಡಿಕೆ ಮಾಡುವವರಿಗೆ ಬಹಳಷ್ಟು ಹೂಡಿಕೆ ಸ್ಕೀಮ್‌ಗಳಿವೆ. ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ದಿನ ಮಹಿಳೆಯರು ತಮ್ಮ ಹೂಡಿಕೆಯನ್ನು ಆರಂಭಿಸಬಹುದು. ಇದರಿಂದ ಉತ್ತಮ ಬಡ್ಡಿಯನ್ನೂ ಗಳಿಸುವ ಅವಕಾಶವಿದೆ. ಹಾಗಿದ್ರೆ ಟಾಪ್ 5 ಬೆಸ್ಟ್ ಹೂಡಿಕೆ ಯೋಜನೆಗಳ ಮಾಹಿತಿ ಇಲ್ಲಿದೆ ಓದಿ.

ಮ್ಯೂಚುವಲ್ ಫಂಡ್ಸ್:
ದೀರ್ಘಕಾಲ ಹೂಡಿಕೆ ಮಾಡುವ ಮೂಲಕ, ಉತ್ತಮ ರಿಟರ್ನ್ ಪಡೆಯುವ ಅವಕಾಶ ಇಲ್ಲಿದೆ. ಭಾರತದ ಸ್ಟಾಕ್ ಮಾರ್ಕೆಟ್‌ನ ಬೆಳವಣಿಗೆಗಳ ಪ್ರಕಾರ 12-15% ರಿಟರ್ನ್ ಪಡೆಯುವ ಅವಕಾಶವಿದೆ. ಎಸ್‌ಐಪಿ ಮೂಲಕ ಸಣ್ಣ ಮೊತ್ತದಿಂದ ಹೂಡಿಕೆ ಆರಂಭಿಸಬಹುದು. ಮಹಿಳೆಯರು ರಿಸ್ಕ್ ತೆಗೆದುಕೊಳ್ಳಲು ರೆಡಿ ಇದ್ದರೆ ಈಕ್ವಿಟಿ ಫಂಡ್ಸ್ ಅಥವಾ ಇಂಡೆಕ್ಸ್ ಫಂಡ್ಸ್ (Nifty/Sensex) ಉತ್ತಮ ಆಯ್ಕೆಯಾಗಿದೆ. ಮಾರುಕಟ್ಟೆಗೆ ಅನುಗುಣವಾಗಿ ಆದಾಯ ಸಿಗಲಿದೆ.
ಸುಕನ್ಯಾ ಸಮೃದ್ಧಿ ಯೋಜನೆ:
ಈ ಯೋಜನೆ ವಿಶೇಷವಾಗಿ ಬಾಲಕಿಯರ ಏಳಿಗೆಗಾಗಿ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಪ್ರಸ್ತುತ ಬಡ್ಡಿದರ 8.2% ಆಗಿದೆ. ಈ ಯೋಜನೆ ತೆರಿಗೆ ಮುಕ್ತವಾಗಿದೆ. ಲಾಕ್ ಇನ್ ಅವಧಿ 21 ವರ್ಷಗಳಾಗಿದ್ದು ಅಥವಾ ಮದುವೆಯವರೆಗೂ ಮುಂದುವರೆಸಬಹುದು. ಮಹಿಳಾ ಪೋಷಕರು ತಮ್ಮ ಪುತ್ರಿಯ ಶಿಕ್ಷಣ/ ಮದುವೆಗಾಗಿ ಇದನ್ನು ಆರಂಭಿಸಬಹುದು.
ಪಬ್ಲಿಕ್ ಪ್ರಾವಿಡೆಂಟ್ ಫಂಡ್:
ಸರ್ಕಾರಿ ಬೆಂಬಲಿತ, ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಈ ಪಿಪಿಎಫ್ ಯೋಜನೆ ಕೂಡಾ ಒಂದು. 15 ವರ್ಷಗಳ ಲಾಕ್-ಇನ್ ಅವಧಿ ಹೊಂದಿದ್ದು, ಪ್ರಸ್ತುತ ಬಡ್ಡಿ ದರ ಸುಮಾರು 7-8% ಆಗಿದೆ. ಇದೂ ಕೂಡಾ ತೆರಿಗೆ ಮುಕ್ತವಾಗಿದೆ. ದೀರ್ಘಕಾಲ ಹೂಡಿಕೆ ಮಾಡುವವರಿಗೆ ಇದು ಸೂಕ್ತ. ಅದರಲ್ಲೂ ನಿವೃತ್ತಿ ಸಂದರ್ಭದಲ್ಲಿ ಅಥವಾ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಆಯ್ಕೆ. ಆದ್ದರಿಂದ ಮಹಿಳೆಯರು ತಮ್ಮ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆದು ನಿರಂತರ ಹೂಡಿಕೆ ಅಭ್ಯಾಸವನ್ನು ರೂಢಿಸಿಕೊಳ್ಳಬಹುದು.
ನ್ಯಾಷನಲ್ ಪೆನ್ಷನ್ ಸಿಸ್ಟಮ್ (NPS):
ನಿವೃತ್ತಿ ಸಮಯದಲ್ಲಿ ಉಪಯೋಗಕ್ಕಾಗಿ, ರಚಿಸಲಾದ ಸರ್ಕಾರಿ ಸ್ವಾಮ್ಯದ ಯೋಜನೆಯೇ ಎನ್‌ಪಿಎಸ್. ಮಾರ್ಕೆಟ್ ಲಿಂಕ್ಡ್ ಆದರೂ ವಿವಿಧ ಆಯ್ಕೆಗಳು ಇಲ್ಲಿವೆ. ತೆರಿಗೆ ಉಳಿತಾಯವನ್ನೂ ಈ ಯೋಜನೆಯಲ್ಲಿ ಮಾಡಬಹುದು. 60 ವರ್ಷದ ನಂತರ ನಿಮ್ಮ ಹೂಡಿಕೆಗೆ ಭಾಗಶಃ ಹಣವನ್ನು ಪಡೆಯಬಹುದು. ಮಹಿಳೆಯರಿಗೆ ಈ ಹೂಡಿಕೆ ಆಯ್ಕೆ ಸೂಕ್ತವಾಗಿದೆ.
ಗೋಲ್ಡ್ ಇನ್ವೆಸ್ಟ್‌ಮೆಂಟ್:
ಬಹುತೇಕ ಮಹಿಳೆಯರಿಗೆ ಚಿನ್ನಾಭರಣಗಳೆಂದರೆ ಬಹಳ ಇಷ್ಟ. ಇತ್ತೀಚೆಗೆ ಚಿನ್ನದ ಬೆಲೆ ಗಗನಕ್ಕೇರಿದೆ. ಆದ್ದರಿಂದ ಚಿನ್ನದ ಮೇಲಿನ ಹೂಡಿಕೆ ಉತ್ತಮ ಆಯ್ಕೆಯಾಗಿದೆ. ಸಾವರಿನ್ ಗೋಲ್ಡ್ ಬಾಂಡ್ಸ್ ಸರ್ಕಾರದ ಅಧೀನದಲ್ಲಿದ್ದು, ಬಡ್ಡಿಯೂ ಇರಲಿದೆ. ಅಲ್ಲದೇ ಭೌತಿಕ ಚಿನ್ನಕ್ಕಿಂತ ಸುರಕ್ಷಿತ ಮತ್ತು ತೆರಿಗೆ ಲಾಭ ಪಡೆಯಲು ಇದು ಉತ್ತಮ ಆಯ್ಕೆ. ಮಹಿಳೆಯರು ಡಿಜಿಟಲ್ ರೂಪದಲ್ಲಿ ಚಿನ್ನಕ್ಕೆ ಹೂಡಿಕೆ ಮಾಡಲು ಇದನ್ನು ಸೆಲೆಕ್ಟ್ ಮಾಡಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications