ಬ್ಯಾಂಕ್, ಪೋಸ್ಟ್ ಆಫೀಸ್ (Bank, Post Office) ಹೀಗೆ ಹಲವಾರು ರೀತಿಯಲ್ಲಿ ಹೂಡಿಕೆ ಯೋಜನೆಗಳಿವೆ. ಆದ್ರೆ ಯಾವುದು ಒಳ್ಳೆಯದು? ಯಾವುದು ಹೆಚ್ಚು ಬಡ್ಡಿಯನ್ನು ನೀಡುತ್ತದೆ? ಎಂದು ತಿಳಿಯೋದು ಮುಖ್ಯ. ಏಕೆಂದರೆ ಸಣ್ಣ ಪ್ರಮಾಣದ ಬಡ್ಡಿಯೂ, ದೀರ್ಘಾವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಲಾಭವನ್ನು ತಂದುಕೊಡಬಹುದು. ಆದ್ದರಿಂದ ಹೂಡಿಕೆ (Investment) ಮಾಡುವ ಮುನ್ನ ಸರಿಯಾದ ಹೂಡಿಕೆ ಯೋಜನೆ ಯಾವುದು ಎಂದು ತಿಳಿದುಕೊಂಡರೆ ಉತ್ತಮ.

ಅಂಚೆಕಚೇರಿಯ ಬೆಸ್ಟ್ ಯೋಜನೆ!
ಭಾರತೀಯ ಅಂಚೆ ಇಲಾಖೆಯು ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲಿ ರಿಕರಿಂಗ್ ಡೆಪಾಸಿಟ್ (RD) ಕೂಡಾ ಒಂದು. ಆದ್ದರಿಂದ ನೀವೂ ಕೂಡಾ ಆರ್‌ಡಿಯಲ್ಲಿ ಹೂಡಿಕೆ ಮಾಡಲು ಶುರು ಮಾಡಿದ್ರೆ 10 ವರ್ಷದಲ್ಲಿ 25 ಲಕ್ಷ ಹಣ ಸಂಪಾದಿಸಬಹುದು. ಹಾಗಿದ್ರೆ ಅದು ಹೇಗೆ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.
ಆರ್‌ಡಿ ಯೋಜನೆಯ ಬಡ್ಡಿ ಎಷ್ಟು?
ಕಡಿಮೆ ರಿಸ್ಕ್‌ನೊಂದಿಗೆ ಹೆಚ್ಚಿನ ಆದಾಯ ನೀಡುವ ಯೋಜನೆಗಳಲ್ಲಿ ಪೋಸ್ಟ್ ಆಫೀಸ್‌ನ ಆರ್‌ಡಿ ಯೋಜನೆ ಕೂಡಾ ಒಂದು. ಇದರಲ್ಲಿ ಶೇ. 6.7% ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಅಂದರೆ ಪ್ರತೀ ತಿಂಗಳು 15 ಸಾವಿರ ಹೂಡಿಕೆ ಮಾಡಿದ್ರೆ ಸಾಕು, ಬರೀ 10 ವರ್ಷಗಳಲ್ಲಿ 25 ಲಕ್ಷ ಹಣವನ್ನು ಹಿಂಪಡೆಯಬಹುದು.
ಪೋಸ್ಟ್ ಆಫೀಸ್‌ನ ಮರುಕಳಿಸುವ ಠೇವಣಿ ಯೋಜನೆ ಅಥವಾ ಆರ್‌ಡಿ ಯೋಜನೆಯು ಲಕ್ಷಾಂತರ ಜನರು ಆಯ್ಕೆ ಮಾಡುತ್ತಾರೆ. ಈ ಯೋಜನೆ ಮೂಲಕ ಪ್ರತೀ ತಿಂಗಳು 100 ರೂ. ಹೂಡಿಕೆ ಮಾಡಬಹುದು. ಆದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೂಡಿಕೆ ಮೊತ್ತವನ್ನು ಹೆಚ್ಚಿಸಿದರೆ ಉತ್ತಮ. ಒಟ್ಟು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುವ ಈ ಯೋಜನೆ, ನಂತರ ನಿಮ್ಮ ಹೂಡಿಕೆಯ ಹಣಕ್ಕೆ ಮೆಚೂರಿಟಿ ಮೊತ್ತವನ್ನು ನೀಡುತ್ತದೆ.
15 ಸಾವಿರ ಹೂಡಿಕೆ ಮಾಡಿದ್ರೆ 25 ಲಕ್ಷ ಹೇಗೆ ಸಿಗುತ್ತೆ?
- ಅವಧಿ: 5 ವರ್ಷ
- ಒಟ್ಟು ಹೂಡಿಕೆ ಮೊತ್ತ: 9 ಲಕ್ಷ (ಮಾಸಿಕ 15 ಸಾವಿರ)
- ಒಟ್ಟು ಮೆಚ್ಯೂರಿಟಿ ಮೊತ್ತ: 10,71,545 ರೂ.
ವಿವರ:
ಒಬ್ಬ ಹೂಡಿಕೆದಾರ ಮಾಸಿಕವಾಗಿ 15 ಸಾವಿರ ರೂ. ಆರ್‌ಡಿ ಯೋಜನೆಯಲ್ಲಿ 5 ವರ್ಷ (60 ತಿಂಗಳು) ಹೂಡಿಕೆ ಮಾಡಬೇಕು. ಹೂಡಿಕೆ ಮಾಡಿದ ಒಟ್ಟು ಮೊತ್ತ 9 ಲಕ್ಷ ರೂಪಾಯಿ ಆಗುತ್ತದೆ. ಹೂಡಿಕೆ ಮಾಡಿದ ಮೊತ್ತಕ್ಕೆ 6.7% ಬಡ್ಡಿ ಸೇರಿದರೆ, ಮೆಚ್ಯೂರಿಟಿ ಮೊತ್ತವು 10,71,545 ರೂ. ಆಗುತ್ತದೆ. ಈ ಮೂಲಕ 5 ವರ್ಷದಲ್ಲಿ ನೀವು 1,71,545 ರೂ. ಆದಾಯವನ್ನು ಪಡೆಯುತ್ತೀರಿ. ಇನ್ನು ನೀವು ಈ ಯೋಜನೆಯನ್ನು ವಿಸ್ತರಿಸುವ ಅವಕಾಶವೂ ಇದೆ.
25 ಲಕ್ಷ ಹೀಗೆ ಪಡೆಯಿರಿ:
ನಿಮ್ಮ ಹೂಡಿಕೆಯನ್ನು ಮತ್ತೆ 5 ವರ್ಷಗಳಷ್ಟು ವಿಸ್ತರಿಸಿದರೆ ಮತ್ತಷ್ಟು ಆದಾಯ ಪಡೆಯಬಹುದು.
- ಹೂಡಿಕೆ ಅವಧಿ: 10 ವರ್ಷಗಳು
- ಒಟ್ಟು ಹೂಡಿಕೆ ಮೊತ್ತ: 18 ಲಕ್ಷ ರೂ.
- ಒಟ್ಟು ಮೆಚ್ಯೂರಿಟಿ ಮೊತ್ತ: 25,68,197
ವಿವರ:
10 ವರ್ಷಗಳ ಅವಧಿಗೆ ನೀವೂ ಹೂಡಿಕೆ ಮಾಡಿದ್ರೆ, ಒಟ್ಟು ಹೂಡಿಕೆ ಮೊತ್ತ 18 ಲಕ್ಷ ರೂ. ಆಗುತ್ತದೆ. ಎಲ್ಲಾ ಮೆಚ್ಯೂರಿಟಿ ಸೇರಿದ್ರೆ 25,68,107 ರೂ. ಹೂಡಿಕೆದಾರನಿಗೆ ಸಿಗುತ್ತದೆ. ಈ ಮೂಲಕ 10 ವರ್ಷದಲ್ಲಿ ನೀವು ಮಾಡಿದ ಹೂಡಿಕೆಗೆ 7,68,107 ರೂ. ಆದಾಯ ಸಿಗಲಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications