ಪ್ರತಿಯೊಬ್ಬ ವ್ಯಕ್ತಿಯೂ ತಾನು ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಭವಿಷ್ಯಕ್ಕಾಗಿ ಎತ್ತಿಡುತ್ತಾನೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಉಳಿತಾಯವು ಅತ್ಯಗತ್ಯ. ಅದರಲ್ಲೂ ಉಳಿತಾಯವನ್ನು ಅದಷ್ಟು ಬೇಗ ಪ್ರಾರಂಭಿಸುವುದು ಯಾವಾಗಲೂ ಉತ್ತಮ. ಉಳಿತಾಯವಾಗಿ ಸಂಗ್ರಹಿಸಿಟ್ಟ ಹಣವು ಕಷ್ಟದ ಹಾಗೂ ಅಗತ್ಯದ ದಿನಗಳಲ್ಲಿ ಸಹಾಯಕ್ಕೆ ಬರುತ್ತದೆ. ಕೈಯಲ್ಲಿ ಒಂದೇ ಒಂದು ರೂಪಾಯಿ ಇಲ್ಲದೇ ಹೋದಲ್ಲಿ ಅಚಾನಕ್ ಆಗಿ ಬರುವ ಸಂದರ್ಭವನ್ನು ಎದುರಿಸಲು ಒದ್ದಾಡಬೇಕಾಗುತ್ತದೆ.
ಉಳಿತಾಯವನ್ನು ಹೆಚ್ಚಿಸಲು ಅನೇಕ ಮಾರ್ಗಗಳಿದ್ದರೂ, ಇವುಗಳಲ್ಲಿಸ್ಥಿರ ಠೇವಣಿಗಳನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ ಇವುಗಳು ಸಾಕಷ್ಟು ಜನಪ್ರಿಯವಾಗಿವೆ. ಭಾರತೀಯ ಅಂಚೆ ಇಲಾಖೆಯು ಗ್ರಾಹಕರ ಬೇಡಿಕೆಯಂತೆ ಅನೇಕ ವಿಧದ ಹಣ ಉಳಿತಾಯ ಯೋಜನೆಗಳನ್ನು ಪರಿಚಯಿಸಿದ್ದು, ಕೆಲವೊಂದು ಬಹಳ ಆಕರ್ಷಕವಾದ ಬಡ್ಡಿ ದರವನ್ನು ನೀಡುತ್ತವೆ. ಇಂಡಿಯಾ ಪೋಸ್ಟ್ ಕೂಡಾ ಸ್ಥಿರ ಠೇವಣಿ ಸೌಲಭ್ಯವನ್ನು ನೀಡುತ್ತದೆ. ಇದನ್ನು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್ಸ್ (ಟಿಡಿ) ಎಂದೂ ಕರೆಯುತ್ತಾರೆ.

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಥವಾ ಸ್ಥಿರ ಠೇವಣಿ ಸಾಮಾನ್ಯವಾಗಿ ಬ್ಯಾಂಕ್ ಗಳ FD ಗಳಂತೆಯೇ ಇರುತ್ತದೆ. ಇದು ನಿಗದಿತ ಅವಧಿಗೆ ಹೂಡಿಕೆ ಮಾಡಿದ ಠೇವಣಿದಾರರಿಗೆ ಖಾತರಿಯ ಲಾಭವನ್ನು ನೀಡುತ್ತದೆ.
ಒಬ್ಬ ವ್ಯಕ್ತಿಯು 15 ವರ್ಷಗಳ ಕಾಲ 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಲು ನಿರ್ಧರಿಸಿದರೆ, ಯಾವುದೇ ರಿಟರ್ನ್ ಮೊತ್ತವನ್ನು ಹಿಂಪಡೆಯದೆ, ಈ ಅವಧಿಯ ಕೊನೆಯಲ್ಲಿ ಅವರು 15 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ರಿಟರ್ನ್ ಪಡೆಯಬಹುದು.
ಅಂಚೆ ಕಚೇರಿಯ ಸ್ಥಿರ ಠೇವಣಿ ಅವಧಿ
ಅಂಚೆ ಕಚೇರಿಯಲ್ಲಿ ಗರಿಷ್ಠ ಸ್ಥಿರ ಠೇವಣಿ (FD) ಅವಧಿ ಐದು ವರ್ಷಗಳು ಮಾತ್ರ ಎಂಬ ವಿಚಾರ ನಿಮಗೆ ನೆನಪಿರಬೇಕು.ಹಾಗಿದ್ರೆ ಈ ಅವಧಿಯ ನಂತರ ಮುಂದೇನು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ೫ ವರ್ಷಗಳ ಮೆಚ್ಯೂರ್ಡ್ ಅವಧಿಯ ನಂತರ ಸಂಚಿತ ಬಡ್ಡಿಯೊಂದಿಗೆ ಮೆಚ್ಯೂರ್ಡ್ ಮೊತ್ತವನ್ನು ಹಿಂಪಡೆಯಬಹುದು ಅಥವಾ ಐದು ವರ್ಷಗಳ ಅಂಚೆ ಕಚೇರಿ ಹೊಸ FD ಯಲ್ಲಿ ಮರು ಹೂಡಿಕೆಯನ್ನು ಆಯ್ಕೆ ಮಾಡಬಹುದು. ಒಬ್ಬ ವ್ಯಕ್ತಿಯು 15 ವರ್ಷಗಳ ಕಾಲ ಹೂಡಿಕೆಯನ್ನು ಮುಂದುವರಿಸಲು ಬಯಸಿದರೆ, ಈ ಅವಧಿ ಮುಗಿದ ನಂತರ ಅವರು 15,24,149 ರೂ.ಗಳ ಲಾಭವನ್ನು ಪಡೆಯಬಹುದು.
ಲಾಭ ಪಡೆಯುವ ಲೆಕ್ಕಾಚಾರ ನೋಡೋಣ..
ನೀವು 5 ವರ್ಷಗಳ ಕಾಲ ಅಂಚೆ ಕಚೇರಿ ಯೋಜನೆಯಲ್ಲಿ 5,00,000 ರೂ. ಠೇವಣಿ ಇಟ್ಟರೆ, ನಿಮಗೆ ಅಂದಾಜು 7,24,974 ರೂ. ಲಾಭ ದೊರಕುತ್ತದೆ ಮತ್ತು ಬಡ್ಡಿ 2,24,974 ರೂ. ಆಗಿರುತ್ತದೆ.
ನೀವು ಮತ್ತೆ ಈ ಮೊತ್ತವನ್ನು ಐದು ವರ್ಷಗಳ ಎಫ್‌ಡಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅವಧಿಯ ಕೊನೆಯಲ್ಲಿ ಲಾಭವು 10,51,175 ರೂ. ಆಗಿರುತ್ತದೆ ಮತ್ತು ಸಂಚಿತ ಬಡ್ಡಿಯು 3,26,201 ರೂ. ಆಗಿರುತ್ತದೆ.
ಅಂಚೆ ಕಚೇರಿಯ ಎಫ್‌ಡಿ ಯೋಜನೆಯಲ್ಲಿ ಐದು ವರ್ಷಗಳವರೆಗೆ ಸಂಪೂರ್ಣ ಮೊತ್ತವನ್ನು ಅಂದರೆ 10,51,175 ರೂ. ಮತ್ತೆ ಹೂಡಿಕೆ ಮಾಡಿದರೆ, 15 ವರ್ಷಗಳ ಕೊನೆಯಲ್ಲಿ ಒಬ್ಬರು ಪಡೆಯಬಹುದಾದ ಒಟ್ಟು ಮೊತ್ತ 15,24,149 ರೂ.ಗಳಾಗಬಹುದು. ಈ ಅವಧಿಯಲ್ಲಿ ದೊರಕುವ ಒಟ್ಟು ಬಡ್ಡಿ 4,72,974 ರೂ.ಗಳಾಗಿರುತ್ತದೆ.
ಈ ಲೆಕ್ಕಾಚಾರವು ಶೇಕಡಾ 7.5 ರ ಸ್ಥಿರ ಠೇವಣಿ ಬಡ್ಡಿದರವನ್ನು ಆಧರಿಸಿದೆ ಎಂಬುದನ್ನು ಗಮನಿಸಬೇಕು. ಇದು ಅಂಚೆಕಚೇರಿ ನೀಡುವ ನೀಡುವ ಪ್ರಸ್ತುತ ಬಡ್ಡಿದರವಾಗಿದೆ. ಸರ್ಕಾರವು ಬಡ್ಡಿದರಗಳನ್ನು ಬದಲಾಯಿಸಲು ನಿರ್ಧರಿಸಿದರೆ ಅಂತಿಮ ಮೊತ್ತವು ಬದಲಾಗಬಹುದು ಎಂಬುವುದು ನೆನಪಿರಲಿ.
Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications