ಹೆಚ್ಚಿನವರು ಹೂಡಿಕೆ (Investment) ಮಾಡೋದರ ಮೇಲೆ ಗಮನ ಹರಿಸುತ್ತಾರೆ. ಆದ್ರೆ ಯಾವುದು ಬೆಸ್ಟ್ ಸ್ಕೀಮ್ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಅಲ್ಲದೇ ಕೆಲವು ಹೂಡಿಕೆ ಯೋಜನೆಗಳು ಉತ್ತಮ ಆದಾಯ ನೀಡಿದರೆ, ಇನ್ನೂ ಕೆಲವು ನಿಮ್ಮ ಹೂಡಿಕೆಯನ್ನ ಲಾಸ್ ಮಾಡಬಹುದು. ಅಲ್ಲದೇ ಇಂದಿನ ದಿನಗಳಲ್ಲಿ ಹಣದುಬ್ಬರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಅಲ್ಲದೇ ನಿವೃತ್ತಿಯ ನಂತರದ ಬದುಕನ್ನು ಆರ್ಥಿಕವಾಗಿ ಭದ್ರಪಡಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಉದ್ಯೋಗವಾಗಲಿ, ವ್ಯವಹಾರವಾಗಲಿ ತುರ್ತು ಸಂದರ್ಭದಲ್ಲಿ, ನಿವೃತ್ತಿಯ ಸಂದರ್ಭದಲ್ಲಿ ನಾವು ಮಾಡುವ ಹೂಡಿಕೆಯೇ ಉಪಯೋಗಕ್ಕೆ ಬರುತ್ತದೆ..

ಇಂದಿನ ಹೆಚ್ಚಿನ ಯುವಕರು, ಹಣ ಸುರಕ್ಷಿತವಾಗಿರುವ ಮತ್ತು ಭವಿಷ್ಯದಲ್ಲಿ ಸ್ಥಿರ ಆದಾಯ ನೀಡುವ ಯೋಜನೆಗಳ ಬಗ್ಗೆಯೇ ಗಮನಹರಿಸುತ್ತಾರೆ. ಅಂತಹವರಿಗಾಗಿ, ಎಲ್‌ಐಸಿ (LIC) ಯ ನ್ಯೂ ಜೀವನ್ ಶಾಂತಿ (New Jeevan Shanti) ಯೋಜನೆಯು ಒಂದು ಉತ್ತಮ ಪಿಂಚಣಿ ಆಯ್ಕೆಯಾಗಿದೆ.
ನಿವೃತ್ತಿ ಯೋಜನೆಗೆ ಪಿಂಚಣಿ ಏಕೆ ಮುಖ್ಯ?
ನಿವೃತ್ತಿ ನಂತರದ ಜೀವನದಲ್ಲಿ ಮಾಸಿಕ ಖರ್ಚಿಗಾಗಿ ನಾವು ಈಗ ಮಾಡುವ ಹೂಡಿಕೆ ಮುಖ್ಯವಾಗಿರುತ್ತದೆ. ಅದರಲ್ಲೂ ವೈದ್ಯಕೀಯ ವೆಚ್ಚಗಳು, ಮನೆ ನಿರ್ವಹಣೆ, ಮಕ್ಕಳ ಮೇಲಿನ ಅವಲಂಬನೆ ಮತ್ತು ಅನಿರೀಕ್ಷಿತ ಖರ್ಚುಗಳಂತಹ ಸವಾಲುಗಳನ್ನು ಎದುರಿಸಲು ನಿರಂತರ ಆದಾಯ ಗಳಿಸುತ್ತಿರಬೇಕು. ಆದ್ದರಿಂದ ಪಿಂಚಣಿ ಯೋಜನೆಗಳು ಈ ಸಮಸ್ಯೆಗಳಿಗೆ ಪರಿಹಾರವಾಗಿದೆ.
ಎಲ್‌ಐಸಿ ನ್ಯೂ ಜೀವನ್ ಶಾಂತಿ ಯೋಜನೆ ಎಂದರೇನು?
ಎಲ್‌ಐಸಿ ನ್ಯೂ ಜೀವನ್ ಶಾಂತಿ ಎಂಬುದು ಒಂದು ವಿಶೇಷ ಪೆನ್ಷನ್ ಯೋಜನೆಯಾಗಿದೆ. ಇದರಲ್ಲಿ ನೀವು ಕೇವಲ ಒಂದು ಬಾರಿ ಹಣ ಹೂಡಿಕೆ ಮಾಡಬೇಕು. ಆ ಹೂಡಿಕೆ ಅವಧಿ ಮುಗಿದ ನಂತರ, ನಿಯಮಿತವಾಗಿ ನಿಮಗೆ ಮಾಸಿಕ ಪಿಂಚಣಿ ಸಿಗುತ್ತದೆ. ಅಲ್ಲದೇ ಎಲ್‌ಐಸಿಯ ಈ ಯೋಜನೆಯಲ್ಲಿ ಪಿಂಚಣಿ ಮೊತ್ತ ಮೊದಲೇ ನಿಗದಿಯಾಗಿರುತ್ತದೆ, ಅಂದರೆ ನಂತರ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ.
ಯಾವಾಗಿನಿಂದ ಸಿಗುತ್ತೆ ಪಿಂಚಣಿ?
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ, ಐದು ವರ್ಷಗಳ ಲಾಕ್-ಇನ್ ಅವಧಿ ಇರುತ್ತದೆ. ಇದು ಹೂಡಿಕೆ ಮಾಡಿದ ಮೊತ್ತವು ಐದು ವರ್ಷಗಳ ಅವಧಿಗೆ ಸುರಕ್ಷಿತ ಎಂದು ತಿಳಿದುಕೊಳ್ಳಬೇಕು. ಈ ಅವಧಿ ಮುಗಿದ ನಂತರ, ನೀವು ಆಯ್ದುಕೊಂಡಿರುವ ಆಯ್ಕೆಯ ಪ್ರಕಾರ ಪಿಂಚಣಿ ಲಭ್ಯವಾಗುತ್ತದೆ. ನಿವೃತ್ತಿ ನಂತರ ಆದಾಯ ಗಳಿಸಬೇಕೆಂಬ ಕನಸು ಹೊಂದಿರುವವರಿಗೆ ಇದು ಉಪಯುಕ್ತವಾಗಿದೆ.
ಹೂಡಿಕೆಯ ಕನಿಷ್ಠ ಮೊತ್ತ ಎಷ್ಟು?
ಎಲ್‌ಐಸಿ ನ್ಯೂ ಜೀವನ್ ಶಾಂತಿ ಯೋಜನೆಯಲ್ಲಿ ಕನಿಷ್ಠ ₹1.5 ಲಕ್ಷ ರೂ. ಹೂಡಿಕೆ ಮಾಡಬೇಕು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ವಿಶೇಷವೆಂದರೆ, ನೀವು ಈ ಯೋಜನೆಯಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿದಷ್ಟೂ ಹೆಚ್ಚು ಪಿಂಚಣಿ ಪಡೆಯಬಹುದು.
ಸಿಂಗಲ್ ಮತ್ತು ಜಾಯಿಂಟ್ ಲೈಫ್ ಆಯ್ಕೆಗಳು:
ಈ ಯೋಜನೆಯಲ್ಲಿ ಎರಡು ಪ್ರಮುಖ ಆಯ್ಕೆಗಳು ಲಭ್ಯವಿದೆ:
ಸಿಂಗಲ್ ಲೈಫ್ ಮತ್ತು ಜಾಯಿಂಟ್ ಲೈಫ್.
ಸಿಂಗಲ್ ಲೈಫ್ ಯೋಜನೆ ಎಂದರೇನು?
ಇದರಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಜೀವಿತಾವಧಿ ಪಿಂಚಣಿ ಪಡೆಯುವ ಅವಕಾಶವಿದೆ. ಆ ವ್ಯಕ್ತಿಯ ನಿಧನದ ನಂತರ, ಜಮಾ ಮಾಡಿದ ಮೊತ್ತವನ್ನು ನಾಮಿನಿ ಹೆಸರಿನವರಿಗೆ ನೀಡಲಾಗುತ್ತದೆ.
ಜಾಯಿಂಟ್ ಲೈಫ್ ಯೋಜನೆ: ಈ ಆಯ್ಕೆಯಲ್ಲಿ ದಂಪತಿ ಇಬ್ಬರೂ ಸೇರಿರುತ್ತಾರೆ. ಒಬ್ಬರು ಇಲ್ಲದಿದ್ದಾಗ, ಇನ್ನೊಬ್ಬರಿಗೆ ಪಿಂಚಣಿ ಹಣವನ್ನು ಇಲ್ಲಿ ನೀಡಲಾಗುತ್ತದೆ. ಇಂದು ವೇಳೆ ಇಬ್ಬರೂ ನಿಧನರಾದ್ರೆ ಹೂಡಿಕೆ ಮೊತ್ತವನ್ನು ನಾಮಿನಿದಾರರಿಗೆ ನೀಡಲಾಗುತ್ತದೆ..
ವಯಸ್ಸಿನ ಮಿತಿ ಮತ್ತು ಇತರೆ ಪ್ರಯೋಜನಗಳು
ಈ ಯೋಜನೆಗೆ ಅರ್ಹರಾಗಲು ವಯಸ್ಸಿನ ಮಿತಿ 30 ರಿಂದ 79 ವರ್ಷಗಳು ಇರಬೇಕು. ನಿವೃತ್ತಿ ನಂತರದ ಲಾಭಕ್ಕಾಗಿ ಯಾರೂ ಬೇಕಾದರು ಈ ಯೋಜನೆಯನ್ನು ಆಯ್ಕೆ ಮಾಡಬಹುದು ಮತ್ತು ಹಿರಿಯ ನಾಗರಿಕರು ಸಹ ಇದರಲ್ಲಿ ಹೂಡಿಕೆ ಮಾಡುವ ಅವಕಾಶವಿದೆ. ಇದು ಜೀವ ವಿಮಾ ರಕ್ಷಣೆಯನ್ನು ಒದಗಿಸದಿದ್ದರೂ, ಪಿಂಚಣಿ ಸಂಪೂರ್ಣವಾಗಿ ಸುರಕ್ಷಿತ ಮತ್ತು ಗ್ಯಾರಂಟಿ ಆಗಿರುತ್ತದೆ.
1 ಲಕ್ಷ ವಾರ್ಷಿಕ ಪಿಂಚಣಿಯ ಲೆಕ್ಕಾಚಾರ
ಉದಾಹರಣೆಗೆ, ಸುಮಾರು 55 ವರ್ಷ ವಯಸ್ಸಿನ ವ್ಯಕ್ತಿ ಈ ಯೋಜನೆಯಲ್ಲಿ ಸುಮಾರು ₹11 ಲಕ್ಷ ರೂ. ಹೂಡಿಕೆ ಮಾಡಬೇಕು. ನಂತರ ಆ ಹೂಡಿಕೆ ಮೊತ್ತವನ್ನು 5 ವರ್ಷಗಳ ಕಾಲ ಮುಂದುವರಿಸಿದರೆ, ನಂತರ ಅವರಿಗೆ ವಾರ್ಷಿಕವಾಗಿ ₹1 ಲಕ್ಷ ರೂ. ಗಿಂತ ಹೆಚ್ಚು ಪಿಂಚಣಿ ಸಿಗುವ ಸಾಧ್ಯತೆ ಇದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications