Post Office Schemes: ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು, ನಿಮ್ಮ ಹಣ ವರ್ಷದ ಅಂತ್ಯದಲ್ಲಿ ಡಬಲ್‌ ಆಗುತ್ತೆ! ಪೋಸ್ಟ್‌ ಆಫೀಸ್‌ನ ಬೆಸ್

ಅನೇಕರು ಬ್ಯಾಂಕ್‌, ಷೇರು ಮಾರಕಟ್ಟೆ, ರಿಯಲ್‌ ಎಸ್ಟೇಟ್, ಪೋಸ್ಟ್‌ ಆಫೀಸ್‌ ಹೀಗೆ ಹಲವಾರು ಕಡೆ ಹೂಡಿಕೆ ಮಾಡುತ್ತಾರೆ. ಆದ್ರೆ ಹೂಡಿಕೆ ಮಾಡುವವರಿಗೆ ಪೋಸ್ಟ್‌ ಆಫೀಸ್‌ ಯೋಜನೆಗಳು (Post Office Schemes) ಉತ್ತಮವಾಗಿರುತ್ತೆ. ಇದು ಅತ್ಯಂತ ಸುರಕ್ಷಿತವೂ ಹೌದು. ಆದ್ದರಿಂದ ಎಷ್ಟೋ ಜನರು ಈಗಾಗಲೇ ಪೋಸ್ಟ್‌ ಆಫೀಸ್‌ ಯೋಜನೆಗಳ ಮೂಲಕ ತನ್ನ ಹೂಡಿಕೆಗಳನ್ನು ಮಾಡಲು ಶುರು ಮಾಡಿದ್ದಾರೆ. ದುಡಿದ ಹಣದಲ್ಲಿ ಇಂತಿಷ್ಟು ಅಂತ ಭವಿಷ್ಯಕ್ಕಾಗಿ ಸೇವಿಂಗ್ಸ್‌ (Savings Tips) ಮಾಡುತ್ತಿದ್ದಾರೆ. ಆದ್ರೆ ಪೋಸ್ಟ್‌ ಆಫೀಸ್‌ನಲ್ಲಿ ಹಲವಾರು ಹೂಡಿಕೆ ಯೋಜನೆಗಳಿವೆ. ಆದರೆ ಇವುಗಳಲ್ಲಿ ಯಾವುದು ಬೆಸ್ಟ್‌, ಯಾವುದರಲ್ಲಿ ಹೆಚ್ಚು ಲಾಭ ಬರುತ್ತೆ ಎಂದು ಗೊತ್ತಾ? ಹಾಗಿದ್ರೆ ಇಲ್ಲಿ ನಾವು ನಿಮಗೆ ಪೋಸ್ಟ್‌ ಆಫೀಸ್‌ನ ಬೆಸ್ಟ್‌ 5 ಹೂಡಿಕೆ ಯೋಜನೆ ಬಗ್ಗೆ ಹೇಳಲಿದ್ದೇವೆ ನೋಡಿ.

ನಿಮ್ಮ ಹಣವನ್ನು ಡಬಲ್‌ ಮಾಡುತ್ತೆ ಪೋಸ್ಟ್‌ ಆಫೀಸ್‌ನ ಈ ಸ್ಕೀಮ್!

1. ಸುಕನ್ಯಾ ಸಮೃದ್ಧಿ ಯೋಜನೆ (SSA): ಹೆಣ್ಣುಮಕ್ಕಳಿಗಾಗಿ ಅಂತಾನೇ ಕೇಂದ್ರ ಸರ್ಕಾರ ಶುರು ಮಾಡಿದ ಯೋಜನೆಯೆಂದರೆ ಅದು ಸುಕನ್ಯಾ ಸಮೃದ್ಧಿ ಯೋಜನೆ. ಹೆಣ್ಣುಮಕ್ಕಳು ಕೂಡಾ ಸ್ವಾವಲಂಬಿಗಳಾಗಿ ಬದುಕಬೇಕೆಂಬುದು ಈ ಯೋಜನೆಯ ಮುಖ್ಯ ಉದ್ದೇಶ. ಶಿಕ್ಷಣ, ಮದುವೆ, ಉದ್ಯೋಗ ಹೀಗೆ ಇನ್ನಿತರ ಖರ್ಚುಗಳಿಗಾಗಿ ಈ ಯೋಜನೆಯಲ್ಲಿ ಪೋಷಕರು ಹೆಣ್ಣುಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ, ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆದು, ಹೂಡಿಕೆ ಮಾಡಬಹುದು. ಈ ಯೋಜನೆಯು ವಾರ್ಷಿಕವಾಗಿ 8.2% ಬಡ್ಡಿಯನ್ನು ನೀಡುತ್ತದೆ. ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅಲ್ಲದೇ ಬರೀ 250 ರೂಪಾಯಿಯಿಂದ ವಾರ್ಷಿಕವಾಗಿ 1.5 ಲಕ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

2. RD ಯೋಜನೆ: ಈ ಆರ್‌ಡಿ ಯೋಜನೆಯನ್ನು ಮಧ್ಯಮ ವರ್ಗದ ಜನರಿಗಾಗಿ ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ತಿಂಗಳಿಗೆ ಕೇವಲ 100 ರೂ. ಹೂಡಿಕೆ ಮಾಡುವ ಮೂಲಕ ಓಪನ್‌ ಮಾಡಬಹುದು. ಅಲ್ಲದೇ ವಾರ್ಷಿಕವಾಗಿ ನಿಮ್ಮ ಹೂಡಿಕೆಗೆ 6.7% ಬಡ್ಡಿದರವನ್ನು ಸಹ ಇದು ನೀಡುತ್ತದೆ. ಇನ್ನು ಈ ಯೋಜನೆಯನ್ನು ಒಬ್ಬರು ಅಥವಾ ಇಬ್ಬರೂ ಕೂಡ ಓಪನ್‌ ಮಾಡಬಹುದು.

3. ಸಾರ್ವಜನಿಕ ಭವಿಷ್ಯ ನಿಧಿ (PPF): ಪಿಪಿಎಫ್‌ ಯೋಜನೆ, ಇದು ಸಾರ್ವಜನಿಕರಿಗಾಗಿ, ಪಿಎಫ್‌ ಖಾತೆ ಹೊಂದಿರದವರಿಗಾಗಿ ಜಾರಿ ಮಾಡಿದ ವಿಶೇಷ ಯೋಜನೆ. ಪಿಪಿಎಫ್‌ ಯೋಜನೆ ದೀರ್ಘಾವಧಿ ಹೂಡಿಕೆ ಮಾಡುವವರಿಗೆ ಹೇಳಿಮಾಡಿಸಿದ ಯೋಜನೆಯಾಗಿದೆ. ಇನ್ನು ಈ ಯೋಜನೆ ಮೂಲಕ ನೀವು ಖಾತೆ ಓಪನ್‌ ಮಾಡಿದರೆ ತೆರಿಗೆ ವಿನಾಯಿತಿಯನ್ನೂ ಪಡೆಯಬಹುದು. ಪ್ರಸ್ತುತ ಪಿಪಿಎಫ್‌ ಯೋಜನೆ ಮೂಲಕ ವಾರ್ಷಿಕ 7.1% ಬಡ್ಡಿದರ ಪಡೆಯಬಹುದು. ಇನ್ನು ಈ ಯೋಜನೆಯಲ್ಲಿ ನಿಮಗೆ ಹೂಡಿಕೆ ಮಿತಿಯಿದ್ದು, ಕನಿಷ್ಠ ₹500 ಮತ್ತು ಗರಿಷ್ಠ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಇನ್ನು ಈ ಖಾತೆಯ ಅವಧಿ 15 ವರ್ಷಗಳು.

4. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC): ಭಾರತ ಸರ್ಕಾರವು ನೀಡುವ ಮತ್ತೊಂದು ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆ ಯೋಜನೆಯೆಂದರೆ ಅದು ಎನ್‌ಎಸ್‌ಸಿ ಯೋಜನೆ. ಇನ್ನು ಈ ಯೋಜನೆ ಸಂಬಂಧಿಸಿದ ಪ್ರಮಾಣಪತ್ರವನ್ನು ಅಂಚೆ ಕಚೇರಿಯಿಂದ ಪಡೆಯಬಹುದು. NSC ಯಲ್ಲಿ ಗಳಿಸಿದ ಬಡ್ಡಿಯನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತಗೊಳಿಸುವಲ್ಲಿ ಪಾತ್ರವಹಿಸುತ್ತದೆ. ಈ ಕಾರಣದಿಂದಾಗಿ, ಹೆಚ್ಚಿನ ಉದ್ಯೋಗಿಗಳು, ಉದ್ಯಮಿಗಳು ತೆರಿಗೆ ಉಳಿಸುವ ನಿಟ್ಟಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಇನ್ನು ಇದರ ಲಾಕ್‌ಇನ್‌ ಅವಧಿ 5 ವರ್ಷಗಳು.

5. ಕಿಸಾನ್ ವಿಕಾಸ್ ಪತ್ರ (KVP):
ಪೋಸ್ಟ್‌ ಆಫೀಸ್‌ನ ಹಲವು ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆ ಕೂಡಾ ಒಂದು. ಇದನ್ನು ಭಾರತ ಸರ್ಕಾರವು ಏಪ್ರಿಲ್ 1, 1988 ರಂದು ಸಾರ್ವಜನಿಕರ ಹಿತದೃಷ್ಟಿಯಿಂದ ಆರಂಭಿಸಿದೆ. ಇದು ಒಂದು ಸುರಕ್ಷಿತ ಯೋಜನೆಯಾಗಿದ್ದು, ಒಮ್ಮೆ ಈ ಯೋಜನೆ ಮೂಲಕ ಹೂಡಿಕೆ ಮಾಡಿದ್ರೆ, ಕೆಲವು ವರ್ಷಗಳ ನಂತರ ನಿಮ್ಮ ಹಣವನ್ನು ಡಬಲ್‌ ಮಾಡಬಹುದು. ಪ್ರಸ್ತುತ, ಈ ಯೋಜನೆಯು ವರ್ಷಕ್ಕೆ 7.5% ಬಡ್ಡಿಯನ್ನು ನೀಡುತ್ತಿದ್ದು, ಹೂಡಿಕೆಗೆ ಉತ್ತಮ ಲಾಭವನ್ನು ನೀಡುತ್ತದೆ. ಹೆಚ್ಚು ಹೂಡಿಕೆ ಮಾಡಿದ್ರೆ ಹೆಚ್ಚು ಬಡ್ಡಿದರವನ್ನು ಪಡೆಯಬಹುದು. ಇನ್ನು ನೀವು ಹೂಡಿಕೆ ಮಾಡಿದ ಹನ 9 ವರ್ಷ 7 ತಿಂಗಳಲ್ಲಿ ಡಬಲ್‌ ಆಗುತ್ತದೆ. ಈ ಯೋಜನೆಯ ಮೇಲಿನ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿಯಿಲ್ಲ. ಇದಕ್ಕಾಗಿ ನೀವು ಅಂಚೆ ಕಚೇರಿಯಲ್ಲಿ ಅಥವಾ ಯಾವುದೇ ಬ್ಯಾಂಕ್‌ಗಳಲ್ಲಿ ಹೋಗಿ KVP ಅಕೌಂಟ್‌ ಓಪನ್‌ ಮಾಡಬೇಕು. ಅಲ್ಲದೇ ಎರಡೂವರೆ ವರ್ಷದ ನಂತರ ನೀವು ಹೂಡಿಕೆ ಮಾಡಿರುವ ಹಣವನ್ನು ಹಿಂಪಡೆಯುವ ಅವಕಾಶವೂ ಇದೆ.

(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+