ಹೂಡಿಕೆಗಾಗಿ ಈಗಾಗಲೇ ಹಲವು ಯೋಜನೆಗಳಿಗೆವೆ. ಅದರಲ್ಲೀ ಪೋಸ್ಟ್ ಆಫೀಸ್‌ನ ಹಲವು ಸ್ಕೀಮ್‌ಗಳನ್ನು ಉತ್ತಮವೆಂದು ಪರಿಗಣಿಸಲಾಗಿದೆ. ಪೋಸ್ಟ್ ಆಫೀಸ್‌ನ ಹಲವು ಹೂಡಿಕೆ ಯೋಜನೆಗಳು ಉತ್ತಮ ಬಡ್ಡಿದರದೊಂದಿಗೆ, ಸುರಕ್ಷಿತ ಯೋಜನೆಗಳೆಂದು ಪರಿಗಣಿಸಲಾಗಿದೆ. ಅದೇ ಕಾರಣದಿಂದ ದೇಶದಲ್ಲಿ ಲಕ್ಷಗಟ್ಟಲೆ ಜನರು ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ (Post Office Investment) ಮಾಡುತ್ತಾರೆ. ಇನ್ನು ಕೇಂದ್ರ ಸರ್ಕಾರ ಉದ್ಯೋಗಿಗಳಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಕೂಡಾ ಒಂದು.

ಕೇಂದ್ರದಿಂದ ಜಾರಿಗೆ ಬಂದ ಈ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಯೋಜನೆಯು ವಾರ್ಷಿಕವಾಗಿ 7.1% ಬಡ್ಡಿ ದರವನ್ನು ನೀಡುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ತೆರಿಗೆ ವಿನಾಯಿತಿಯನ್ನೂ ಸಹ ಪಡೆಯಬಹುದು. ಇನ್ನು 15 ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ ₹1.5 ಲಕ್ಷ ಹೂಡಿಕೆ ಮಾಡುವ ಮೂಲಕ ₹40.68 ಲಕ್ಷ ಮೆಚುರಿಟಿ ಮೊತ್ತವನ್ನು ಗಳಿಸುವ ಅವಕಾಶವನ್ನು ಈ ಸ್ಕೀಮ್ ಒದಗಿಸುತ್ತದೆ.
ಅಧಿಕ ಲಾಭ, ಸುರಕ್ಷಿತ ಯೋಜನೆ:
ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆ ಯೋಜನೆಗಳನ್ನು ಹುಡುಕುತ್ತಿರುವವರಿಗೆ ಈ ಯೋಜನೆ ಉತ್ತಮವಾಗಿದೆ. ಅಂಚೆ ಇಲಾಖೆಯು ಇಂತಹ ಹಲವಾರು ಉಳಿತಾಯ ಯೋಜನೆಗಳ ಮೂಲಕ ಆಕರ್ಷಕ ಲಾಭಗಳನ್ನು ನೀಡುತ್ತಿದೆ. ಅದರಲ್ಲೂ ಸಣ್ಣ ಉದ್ಯಮಿಗಳಿಗೆ, ಕಡಿಮೆ ಹೂಡಿಕೆ ಮಾಡುವವರಿಗೆ ಈ PPF ಯೋಜನೆಯು ಉತ್ತಮವಾಗಿದೆ. ಈ ಯೋಜನೆ ಮೂಲಕ ಜನರು ತೆರಿಗೆ-ಮುಕ್ತ ಪ್ರಯೋಜನಗಳನ್ನು ಪಡೆಯಬಹುದು.
ಒಂದು ಯೋಜನೆ, ಹಲವು ಪ್ರಯೋಜನ
ಪ್ರಸ್ತುತ, ವಾರ್ಷಿಕವಾಗಿ 7.1% ಬಡ್ಡಿ ದರದ ಅಡಿಯಲ್ಲಿ ಬರುವ ಈ PPF ಯೋಜನೆಯ ಹೂಡಿಕೆದಾರರು ಠೇವಣಿ ಇಟ್ಟ ಮೊತ್ತದ ಮೇಲೆ ಮಾತ್ರವಲ್ಲದೆ ಗಳಿಸಿದ ಬಡ್ಡಿ ಮತ್ತು ಮೆಚುರಿಟಿ ಮೊತ್ತದ ಮೇಲೂ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಆದ್ದರಿಂದ ಒಂದೇ ಯೋಜನೆಯಿಂದಾಗಿ ಮೂರು ರೀತಿಯಲ್ಲಿ ತೆರಿಗೆ ವಿನಾಯಿತಿಯನ್ನು ನೀಡುವ ಈ ಯೋಜನೆಯನ್ನು ದೇಶದ ಅತ್ಯಂತ ಸುರಕ್ಷಿತ ಮತ್ತು ತೆರಿಗೆ ವಿನಾಯಿತಿ ನೀಡುವ ಯೋಜನೆ ಎಂದು ಗುರುತಿಸಲಾಗಿದೆ.
ಅಂಚೆ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 15 ವರ್ಷಗಳ ಕಾಲ ಪ್ರತಿ ತಿಂಗಳು ₹12,500 (ಅಂದರೆ, ವಾರ್ಷಿಕವಾಗಿ ₹1.5 ಲಕ್ಷ) ಹೂಡಿಕೆ ಮಾಡುವವರು, ಮೆಚುರಿಟಿ ನಂತರ 40 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪಡೆಯುತ್ತಾರೆ ಎಂದು ವರದಿಯಾಗಿದೆ.
15 ವರ್ಷದಲ್ಲಿ ಒಟ್ಟು ಹೂಡಿಕೆ 22.5 ಲಕ್ಷ ರೂಪಾಯಿ ಆಗಿದ್ದರೆ, ಗಳಿಸಿದ ಬಡ್ಡಿ ಸುಮಾರು ₹18.18 ಲಕ್ಷ ಇರುತ್ತದೆ. ಇದರಿಂದ ಅವಧಿಯ ಕೊನೆಯಲ್ಲಿ ಒಟ್ಟು ಮೊತ್ತ ₹40.68 ಲಕ್ಷಕ್ಕೆ ತಲುಪುತ್ತದೆ ಎಂದು ವರದಿಯಾಗಿದೆ.
ಕಡಿಮೆ ಆದಾಯದವರಿಗೆ ಬೆಸ್ಟ್ ಸ್ಕೀಮ್
PPF ಯೋಜನೆಯನ್ನು ಕನಿಷ್ಠ 500 ರೂ. ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು. ಕಡಿಮೆ ಆದಾಯವಿದ್ದವರಿಗೆ ಈ ಯೋಜನೆ ಉತ್ತಮವಾಗಿದೆ. ಆದಾಗ್ಯೂ, ಇದು 15 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದ್ದು, ಹೂಡಿಕೆದಾರರ ಉಳಿತಾಯ ಪ್ಲಾನ್‌ಗೂ ಸೂಕ್ತವಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications