ಎಲ್ಲಾದರೂ ಹೂಡಿಕೆ (Invest) ಮಾಡಬೇಕು, ಉತ್ತಮ ಆದಾಯ ಗಳಿಸಬೇಕೆಂಬುದು ಹಲವರ ಗುರಿ. ಎಷ್ಟೇ ಕಮ್ಮಿ ಸಂಬಳ ಇದ್ದರೂ ಹೂಡಿಕೆ ಮಾಡುವ ಅಭ್ಯಾಸ ಹೊಂದಿರಬೇಕೆಂದು ಹಲವರು ಸಲಹೆ ನೀಡುತ್ತಾರೆ. ಆದ್ರೆ ಇನ್ನೂ ಕೆಲವರಿಗೆ ಎಷ್ಟೇ ಸಂಬಳ ಇದ್ದರೂ, ಹೂಡಿಕೆ ಮಾಡುವ ಅಭ್ಯಾಸವೇ ಇರಲ್ಲ. ಆದ್ದರಿಂದ ಯಾರೇ ಆಗಲಿ ಹೂಡಿಕೆ ಮಾಡುವ ಮುನ್ನ, ಸರಿಯಾದ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡಬೇಕು. ಅದಕ್ಕಾಗಿ ಇಲ್ಲಿದೆ ನೋಡಿ ಟಿಪ್ಸ್.

ಇಂದಿನ ಲೇಖನದಲ್ಲಿ ಹೂಡಿಕೆ ಮಾಡುವವರಿಗೆ FD ಮತ್ತು RD, ಮ್ಯೂಚುಯಲ್ ಫಂಡ್‌ಗಳು ಹಾಗೂ ಸದಾ ಜನಪ್ರಿಯವಾಗಿರುವ ಚಿನ್ನದ ಹೂಡಿಕೆಗಳಲ್ಲಿ ಯಾವುದು ಬೆಸ್ಟ್ ಎಂಬುದನ್ನು ವಿವರಿಸಲಾಗಿದೆ.
ಸ್ಥಿರ ಠೇವಣಿ (FD): ಸ್ಥಿರ ಠೇವಣಿ (FD) ಯಾವುದೇ ನಷ್ಟದ ಭಯವಿಲ್ಲದವರಿಗೆ ಬೆಸ್ಟ್ ಆಗಿದೆ. ದೊಡ್ಡ ಮೊತ್ತವನ್ನು ನಿರ್ದಿಷ್ಟ ಅವಧಿಗೆ ಹೂಡಿಕೆ ಮಾಡಬೇಕು. ಇಲ್ಲಿ ಬಡ್ಡಿದರ, ಆದಾಯವನ್ನು ಮೊದಲೇ ತಿಳಿಸಲಾಗಿರುತ್ತದೆ. ವಿಶೇಷವೆಂದರೆ, ಯಾವುದೇ ಮಾರುಕಟ್ಟೆ ಏರಿಳಿತಗಳು ಇದರ ಮೇಲೆ ಪರಿಣಾಮ ಬೀರುವುದಿಲ್ಲ.
RD ಯೋಜನೆ: ಆರ್‌ಡಿ ಯೋಜನೆ, ಮಾಸಿಕ ಸಂಬಳದಾರರಿಗೆ ಅಥವಾ ಸಣ್ಣ ಮೊತ್ತಗಳನ್ನು ಹೂಡಿಕೆ ಮಾಡುವವರಿಗೆ ಬೆಸ್ಟ್ ಆಗಿದೆ. ಇಲ್ಲಿ ನೀವು ಕಡಿಮೆ ಹಣದಿಂದಲೂ ಹೂಡಿಕೆ ಆರಂಭಿಸಬಹುದು. FDಯಷ್ಟೇ ಸುರಕ್ಷಿತವಾಗಿದ್ದರೂ, ಬಡ್ಡಿ ಆದಾಯ ಮಾತ್ರ ಸ್ವಲ್ಪ ಕಡಿಮೆ ಇರುತ್ತದೆ. ಇಂತಿಷ್ಟು ಅವಧಿಗಳವರೆಗೆ ಹೂಡಿಕೆ ಮಾಡುವುದು ಕಡ್ಡಾಯವಾಗಿರುತ್ತದೆ.
ಮ್ಯೂಚುವಲ್ ಫಂಡ್: ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ನಿರೀಕ್ಷಿಸುವವರಿಗೆ ಮ್ಯೂಚುಯಲ್ ಫಂಡ್‌ಗಳು ಉತ್ತಮ ಆಯ್ಕೆಯಾಗಿದೆ. ಇಲ್ಲಿ ಅಪಾಯವೂ ಹೆಚ್ಚು, ಆದಾಯವೂ ಹೆಚ್ಚು. ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ಮೂಲಕ ನೀವು ದುಡಿದ ಹಣವನ್ನು ನಿಯಮಿತವಾಗಿ ಇಲ್ಲಿ ಹೂಡಿಕೆ ಮಾಡಬೇಕು. ಮಾರುಕಟ್ಟೆ ಏರಿಳಿತಗಳನ್ನು ಆಧರಿಸಿ ಉತ್ತಮ ಆದಾಯ ಇಲ್ಲಿ ಗಳಿಸಬಹುದು. ಇಲ್ಲಿ ಹೂಡಿಕೆ ಮಾಡಿದ ಹಣ ಮಾರುಕಟ್ಟೆ ಏರಿಳಿತಗಳಿಗೆ ಒಳಪಟ್ಟಿರುತ್ತದೆ. ನೀವು ಹೂಡಿಕೆ ಮಾಡಿದ ಹಣ ಸೇಫ್ ಆಗಿರುತ್ತೆ ಎಂಬುದು ಯಾವುದೇ ಗ್ಯಾರಂಟಿ ಇರುವುದಿಲ್ಲ.
ಚಿನ್ನದ ಮೇಲಿನ ಹೂಡಿಕೆ:
ಭಾರತೀಯರು ಚಿನ್ನವನ್ನು ಹೂಡಿಕೆ ಮಾತ್ರವಲ್ಲ, ಸಾಂಪ್ರದಾಯಿಕವಾಗಿಯೂ ಬಹಳ ಆದ್ಯತೆ ನೀಡುತ್ತಾರೆ. ಚಿನ್ನದ ಬೆಲೆಯೂ ಏರಿಕೆಯಾದಂತೆ, ಗ್ರಾಹಕರ ಲಾಭವೂ ಹೆಚ್ಚಾಗುತ್ತದೆ.
ಹೂಡಿಕೆಗೆ ಯಾವುದು ಬೆಸ್ಟ್?
ನೀವು ಮಾಡಿದ ಹೂಡಿಕೆ ನಷ್ಟ ಕಾಣಬಾರದೆಂದರೆ FD ಅಥವಾ RD ಆಯ್ಕೆ ಮಾಡಿಕೊಳ್ಳಿ. ಮಾರುಕಟ್ಟೆ ಅಪಾಯಗಳನ್ನು ಎದುರಿಸಲು ಸಿದ್ಧರಿದ್ದರೆ, ದೀರ್ಘಾವಧಿಯ ಉತ್ತಮ ಆದಾಯಕ್ಕೆ ಮ್ಯೂಚುಯಲ್ ಫಂಡ್ ನೆರವಾಗುತ್ತದೆ. ಇನ್ನು ಯಾವುದೇ ಯೋಜನೆಗಳಲ್ಲಿ ಹೂಡಿಕೆ ಆರಂಭಿಸುವ ಮುನ್ನ ಆರ್ಥಿಕ ತಜ್ಞರ ಸಲಹೆ ಪಡೆಯಿರಿ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications