ಯಾರೇ ಆಗಲಿ, ಇತ್ತೀಚಿನ ಯುವ ಪೀಳಿಗೆ ಭವಿಷ್ಯದ ದೃಷ್ಟಿಯಿಂದ ಹಲವಾರು ಕಡೆಗಳಲ್ಲಿ ಹೂಡಿಕೆ ಮಾಡುತ್ತಿರುತ್ತಾರೆ. ಆದ್ರೆ ಮಕ್ಕಳಿಗಾಗಿ ಪೋಸ್ಟ್ ಆಫೀಸ್, ಬ್ಯಾಂಕ್‌ಗಳಲ್ಲಿ (Post Office, Bank) ಹಲವಾರು ಹೂಡಿಕೆ ಯೋಜನೆಗಳಿವೆ. ಈ ಮೂಲಕ ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ಬಡ್ಡಿ ಹಣವನ್ನು ಪಡೆಯಬಹುದು. ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಇಂದಿನ ದಿನದಲ್ಲಿ ಅತ್ಯಗತ್ಯವಾಗಿದೆ. ಶಿಕ್ಷಣ ಮತ್ತು ಜೀವನ ಬಹಳ ದುಬಾರಿಯಾಗುತ್ತಿದೆ. ಆದ್ದರಿಂದ ಪೋಷಕರು ಸುರಕ್ಷಿತ ಹಾಗೂ ತೆರಿಗೆ ಮುಕ್ತ ಆಯ್ಕೆಗಳಾದ PPF ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ (SSY) ಯೋಜನೆಯಲ್ಲಿ ಹೂಡಿಕೆ ಮಾಡಲು ಶುರು ಮಾಡಿದ್ದಾರೆ. ಇನ್ನೂ ಕೆಲವರು ಹೆಚ್ಚಿನ ಲಾಭಕ್ಕಾಗಿ ಮ್ಯೂಚುವಲ್ ಫಂಡ್‌ಗಳಲ್ಲೂ (Mutual Funds)faa111srtrdsa ಹೂಡಿಕೆ ಮಾಡುತ್ತಿದ್ದಾರೆ. ಆದ್ರೆ ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು PPF ಆದಾಯ 15 ವರ್ಷಗಳಲ್ಲಿ ಹೇಗೆ ಹೆಚ್ಚಾಗುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಶಿಕ್ಷಣ ವೆಚ್ಚವು ಇತ್ತೀಚೆಗೆ ದುಬಾರಿಯಾಗುತ್ತಿರುವುದರಿಂದ, ಹೂಡಿಕೆ ಮಾಡುವುದು ಈಗಲೇ ಉತ್ತಮ ಎಂದು ಹಣಕಾಸು ತಜ್ಞರು ನಂಬುತ್ತಾರೆ. ಭಾರತೀಯ ಪೋಷಕರಿಗೆ, ಮಕ್ಕಳ ಭವಿಷ್ಯದ ಯೋಜನೆ ಕೇವಲ ಹಣಕಾಸಿನ ಭದ್ರತೆಯಾಗಿರದೆ, ಇದು ಸುಭದ್ರ ಜೀವನಕ್ಕೆ ದಾರಿ ಎಂದು ಹೇಳಿದ್ದಾರೆ.
ಮಕ್ಕಳಿಗೆ ಆರ್ಥಿಕವಾಗಿ ಭವಿಷ್ಯವನ್ನು ರೂಪಿಸಬೇಕು ಎಂದು ತಜ್ಞರು ಹೇಳುತ್ತಾರೆ. ವ್ಯಾಲ್ಯೂ ರಿಸರ್ಚ್‌ನ ಸಿಇಒ ಧೀರೇಂದ್ರ ಕುಮಾರ್ ಹೂಡಿಕೆ ಬಗ್ಗೆ ಕೆಲವು ಟಿಪ್ಸ್ ಕೊಟ್ಟಿದ್ದಾರೆ.
"ಅಗತ್ಯಕ್ಕಿಂತ ಹೆಚ್ಚು ಉಳಿತಾಯ ಮಾಡಿದರೂ ಪರವಾಗಿಲ್ಲ. ಆದರೆ ಯಾವುದೇ ಹೂಡಿಕೆ ಮಾಡದೆ ಸುಮ್ಮನಿರುವುದು ಒಳ್ಳೆಯದಲ್ಲ" ಎಂದು ಕುಮಾರ್ ಸ್ಪಷ್ಟಪಡಿಸುತ್ತಾರೆ. ಇಂದು ಮಕ್ಕಳಿಗಾಗಿ ಇರುವ ಅತ್ಯಂತ ಜನಪ್ರಿಯ ಹೂಡಿಕೆ ಆಯ್ಕೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (SSY), ಸಾರ್ವಜನಿಕ ಭವಿಷ್ಯ ನಿಧಿ (PPF) ಮತ್ತು ಮ್ಯೂಚುವಲ್ ಫಂಡ್‌ಗಳು ಸೇರಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಹೆಣ್ಣುಮಕ್ಕಳಿಗಾಗಿ ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆ (SSY) ಪ್ರಸ್ತುತ 8.2% ರ ಅತ್ಯಧಿಕ ಸ್ಥಿರ ಬಡ್ಡಿ ದರವನ್ನು ನೀಡುತ್ತದೆ. ಅದಕ್ಕೆ ಹೋಲಿಸಿದ್ರೆ PPF ಸ್ವಲ್ಪ ಕಡಿಮೆ ಆದರೆ ಆದಾಯ ಸಿಗೋದು ಮಾತ್ರ ಪಕ್ಕಾ. ಈ ಸರ್ಕಾರಿ ಬೆಂಬಲಿತ ಯೋಜನೆಗಳು ಭದ್ರತೆ ಮತ್ತು ಸ್ಥಿರ ಆದಾಯ ಬಯಸುವವರಿಗೆ ಸೂಕ್ತವಾಗಿದೆ.
ಇದಿಷ್ಟೇ ಅಲ್ಲದೇ ಸ್ಥಿರ ಆದಾಯವು ಸಹ ಈಕ್ವಿಟಿಯ ಹೂಡಿಕೆಗಳಿಗೆ ಹೋಲಿಸಿದ್ರೆ ಕಡಿಮೆ ಎಂದು ಹೇಳುತ್ತಾರೆ ತಜ್ಞರು. 15 ವರ್ಷಗಳ ಅವಧಿಯಲ್ಲಿ ಮಾಸಿಕ ₹10,000 ಹೂಡಿಕೆಯು SSY ನಲ್ಲಿ ಸುಮಾರು ₹35-36 ಲಕ್ಷಕ್ಕೆ ಏರುತ್ತದೆ. ಆದರೆ ವಿವಿಧ ಈಕ್ವಿಟಿ ಮ್ಯೂಚುವಲ್ ಫಂಡ್, ಸಾಮಾನ್ಯವಾಗಿ 12% ಆದಾಯದಲ್ಲಿದ್ದರೂ ₹48 ಲಕ್ಷವನ್ನು ಗಳಿಸಬಹುದು ಎಂದು ಹೇಳಿದ್ದಾರೆ.
ಈ ಗಮನಾರ್ಹ ವ್ಯತ್ಯಾಸವು, ಷೇರು ಮಾರುಕಟ್ಟೆಯಂತಹ ಹೂಡಿಕೆಗಳ ಶಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಕುಮಾರ್ ಹೇಳುತ್ತಾರೆ. ಆದರೂ, ಅನೇಕ ಪೋಷಕರು ಮಾರುಕಟ್ಟೆಯ ಏರಿಳಿತದಿಂದಾಗಿ ಈಕ್ವಿಟಿಯಲ್ಲಿ ಹೂಡಿಕೆ ಮಾಡಲು ಭಯಪಡುತ್ತರೆ. ಆದರೆ ಈ ಹಿಂಜರಿಕೆ ಅಪಾಯಕ್ಕಿಂತಲೂ, ಮಾಹಿತಿಯ ಕೊರತೆಯಿಂದಾ ಉಂಟಾಗುತ್ತದೆ ಎನ್ನಲಾಗಿದೆ.
ಮ್ಯೂಚುವಲ್ ಫಂಡ್‌ಗಳು ಹೆಚ್ಚಿನ ಆದಾಯದ ಸಾಮರ್ಥ್ಯವನ್ನು ನೀಡಿದರೆ, PPF ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಉಳಿತಾಯ ಯೋಜನೆಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. PPF ಒಂದು EEE (Exempt-Exempt-Exempt) ಸಾಧನವಾಗಿ ಗುರುತಿಸಿಕೊಂಡಿದೆ. ಇದರಲ್ಲಿ ಹೂಡಿಕೆ ಮಾಡಿರುವ ಗ್ರಾಹಕರು, ಸೆಕ್ಷನ್ 80C ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು ಅಲ್ಲದೇ ಬಡ್ಡಿ ತೆರಿಗೆ ಕೂಡಾ ಮುಕ್ತವಾಗಿದೆ ಮತ್ತು ಮೆಚ್ಯೂರಿಟಿ ಹಣವು ಸಂಪೂರ್ಣವಾಗಿ ತೆರಿಗೆ ವಿನಾಯಿತಿಗೆ ಒಳಪಡುತ್ತದೆ. ಇದರ 15 ವರ್ಷಗಳ ಲಾಕ್-ಇನ್ ಅವಧಿಯು, ಐದು ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಿಸಲು ಅವಕಾಶವಿದ್ದು, ದೀರ್ಘಕಾಲೀನ ಗುರಿಗಳಿಗೆ ಉತ್ತಮ ಎಂದು ಗುರುತಿಸಿಕೊಂಡಿದೆ.
PPF vs SSY vs Mutual Fund:
ಪಿಪಿಎಫ್‌ನಲ್ಲಿ ಪ್ರತಿ ವರ್ಷ ₹500 ರಿಂದ ₹1.5 ಲಕ್ಷದವರೆಗೆ ಠೇವಣಿ ಇಡಲು ಅವಕಾಶವಿದ್ದು, ಪ್ರತಿ ತಿಂಗಳ 5 ನೇ ತಾರೀಖಿನ ಮೊದಲು ಹೂಡಿಕೆ ಮಾಡುವುದರಿಂದ ಬಡ್ಡಿ ಹೆಚ್ಚಳವಾಗುತ್ತದೆ. 7.1% ಬಡ್ಡಿ ದರದಲ್ಲಿ, ವಾರ್ಷಿಕ ₹1.5 ಲಕ್ಷದ ಹೂಡಿಕೆಯು 15 ವರ್ಷಗಳಲ್ಲಿ ಸುಮಾರು ₹40.68 ಲಕ್ಷಕ್ಕೆ ಏರುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ:
"ಬೇಟಿ ಬಚಾವೋ ಬೇಟಿ ಪಢಾವೋ" ಕಾರ್ಯಕ್ರಮದಡಿ ಜಾರಿಗೆ ಬಂದ ಈ ಸುಕನ್ಯ ಸಮೃದ್ಧಿ ಯೋಜನೆ ಕೂಡಾ ಹೆಣ್ಣು ಮಕ್ಕಳಿಗೆ ಸೂಕ್ತವಾಗಿದೆ. ಈ ಯೋಜನೆ ಮೂಲಕ ಪ್ರತಿ ವರ್ಷ ₹250 ರಿಂದ ₹1.5 ಲಕ್ಷದವರೆಗೆ ಠೇವಣಿಗಳನ್ನು ಮಾಡಬಹುದು ಮತ್ತು 21 ವರ್ಷಗಳ ನಂತರ ಪಕ್ವಗೊಳ್ಳುತ್ತದೆ. PPF ಗೆ ಹೋಲಿಸಿದ್ರೆ ಈ ಯೋಜನೆ ಹೆಚ್ಚಿನ ಆದಾಯವನ್ನು ನೀಡುತ್ತದೆ ಎನ್ನಲಾಗಿದೆ. ಆದ್ರೆ ಇದು ಹೆಣ್ಣುಮಕ್ಕಳಿಗಾಗಿ ಮಾತ್ರ ಹೂಡಿಕೆ ಮಾಡಲು ಇರುವ ಯೋಜನೆಯಾಗಿದೆ.
"ಅಲ್ಲದೇ ನಿಮ್ಮ ಮಗಳ ಹುಟ್ಟುಹಬ್ಬದಂದು SSY ನಲ್ಲಿ ₹5,000 ಹೂಡಿಕೆ ಮಾಡಿ, ಆದರೆ SIP ಅನ್ನು ಸಹ ಅಂದೇ ಪ್ರಾರಂಭಿಸಿ ಮತ್ತು ಪ್ರತಿ ವರ್ಷ ಅದನ್ನು ಹೆಚ್ಚಿಸಿ. ಎರಡು ಮೂರು ವರ್ಷಗಳ ನಂತರ, ಇದರ ಲಾಭ ಎಷ್ಟು ಎಂಬುದು ನಿಮಗೇ ಅರಿವಾಗುತ್ತದೆ" ಎಂದು ಕುಮಾರ್ ಹೇಳುತ್ತಾರೆ.
PPF ಮೆಚ್ಯೂರಿಟಿ ಮೊತ್ತದ ಉದಾಹರಣೆಗಳು (15 ವರ್ಷಗಳ ಅವಧಿ, 7.1% ಬಡ್ಡಿ)
- ವಾರ್ಷಿಕ ಹೂಡಿಕೆ ಮಾಡಿದ್ರೆ ₹1,00,000, ಅಂದಾಜು ಮೆಚ್ಯೂರಿಟಿ ಮೌಲ್ಯ ₹27,12,139 ರೂ. ಆಗುತ್ತದೆ.
- ಅದೇ ರೀತಿ ವಾರ್ಷಿಕ ಹೂಡಿಕೆ ₹1,50,000 ರೂ, ಆದ್ರೆ, ಮೆಚ್ಯೂರಿಟಿ ಮೊತ್ತ ₹40,68,209 ರೂ. ಆಗುತ್ತದೆ.
- ಅದೇ ಮಾಸಿಕವಾಗಿ ಎಸ್‌ಐಪಿನಲ್ಲಿ ಹೂಡಿಕೆ (SIP) ಮೊತ್ತ ₹10,000 ರೂ. ಆದ್ರೆ, ಮೆಚ್ಯೂರಿಟಿ ಮೌಲ್ಯ ₹32,54,567 ರೂ. ಆಗಬಹದು ಎಂದು ಅಂದಾಜಿಸಲಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications