Investment Tips: 15,000 ಸಂಬಳ ಇದ್ರೂ, ಉಳಿತಾಯ ಮಾಡುವುದು ಹೇಗೆ? ಇಲ್ಲಿದೆ ಸೂಪರ್‌ ಟಿಪ್ಸ್‌

ಹೂಡಿಕೆ (Investment) ಮಾಡಬೇಕು, ಸಂಪಾದಿಸಬೇಕು ಎಂಬುದು ಹಲವರ ಆಸೆ. ಆದ್ರೆ ಈ ಆಸೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಕಮ್ಮಿ ಸಂಬಳ, ಹೇಗಪ್ಪಾ ಸೇವಿಂಗ್ಸ್‌ ಮಾಡೋದು ಅನ್ನೋದೆ ಹೆಚ್ಚಿನವರು ಚಿಂತೆಯಲ್ಲಿರುತ್ತಾರೆ. ಕಮ್ಮಿ ಸಂಬಳವಿದ್ದರೂ, ದೀರ್ಘಾವಧಿಯಲ್ಲಿ ಉತ್ತಮ ಆದಾಯ ನಿಮ್ಮದಾಗಿಸಬಹುದು. ಅದು ಹೇಗೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

15,000 ಸಂಬಳ ಇದ್ರೂ, ಉಳಿತಾಯ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್‌

15,000 ಸಂಬಳದಲ್ಲೂ ಹೂಡಿಕೆ ಆರಂಭಿಸಿ

ಇಂದಿನ ದುಬಾರಿ ದುನಿಯಾದಲ್ಲಿ ಹಣ ಉಳಿತಾಯ ಮಾಡೋದೆ ದೊಡ್ಡ ಸಾಹಸವಾಗಿಬಿಟ್ಟಿದೆ. ₹15,000 ರೂ. ಮಾಸಿಕ ಸಂಬಳ, ಆರ್ಥಿಕ ಹೊರೆಯಾಗುತ್ತದೆ. ಆದರೆ ಸರಿಯಾದ ಮಾದರಿಯಲ್ಲಿ ಎಲ್ಲಾ ಖರ್ಚುಗಳನ್ನು ನಿಭಾಯಿಸಿದರೆ, ಉತ್ತರ ಉಳಿತಾಯ ಖಾತೆ ನಿಮ್ಮದಾಗಲಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, 50:30:20 ಅನುಪಾತ ಸೂತ್ರವನ್ನು ಅನುಸರಿಸುವುದು ಇದಕ್ಕೆ ಉತ್ತಮ ಮಾರ್ಗವೆಂದು ತಜ್ಞರು ಹೇಳುತ್ತಾರೆ.

ಏನಿದು 50:30:20 ನಿಯಮ?

ಈ 50:30:20 ನಿಯಮವೆಂದರೆ ನೀವು ಪಡೆಯುವ ಸಂಬಳವನ್ನು ಮೂರು ವಿಭಾಗಗಳಾಗಿ ವಿಂಗಡಿಸುವುದಾಗಿದೆ. ಅಂದರೆ 50% ಅಗತ್ಯಗಳಿಗೆ, 30% ಆಸೆಗಳಿಗೆ, ಮತ್ತು 20% ಉಳಿತಾಯ ಹಾಗೂ ಹೂಡಿಕೆಗಾಗಿ. ₹15,000 ಸಂಬಳಕ್ಕೆ ಇದನ್ನು ಅನ್ವಯಿಸಿದಾಗ, ಇದು ಕ್ರಮವಾಗಿ ₹7,500, ₹4,500, ಮತ್ತು ₹3,000 ಆಗುತ್ತದೆ. ಹಾಗಿದ್ರೆ ಈ ಹಣವನ್ನು ಹೇಗೆ ಬಳಸಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಓದಿ.

ಮೊದಲಿಗೆ, 50% ಅಂದರೆ ನಿಮ್ಮ 15,000 ಸಂಬಳದಲ್ಲಿ ₹7,500 ಅನ್ನು ನಿಮ್ಮ ಅಗತ್ಯ ಖರ್ಚುಗಳಾದ ದಿನಸಿ, ವಿದ್ಯುತ್, ನೀರಿನ ಬಿಲ್, ಮನೆ ಬಾಡಿಗೆ ಮುಂತಾದ ಮೂಲಭೂತ ಮತ್ತು ಅನಿವಾರ್ಯ ಖರ್ಚುಗಳಿಗೆ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಂತರ, 30% ಅಂದರೆ ₹4,500 ರೂ. ಹಣವನ್ನು ನಿಮ್ಮ ಆಸೆಗಳು ಹಾಗೂ ವೈಯಕ್ತಿಕ ಆಯ್ಕೆಗಳಿಗಾಗಿ ಬಳಸಬೇಕು. ಉದಾಹರಣೆಗೆ, ಸಿನಿಮಾಗಾಗಿ, ಹೊಸ ಬಟ್ಟೆಗಳ ಖರೀದಿ ಅಥವಾ ಸುತ್ತಾಡಲು ಬಳಸಬಹುದು.

ಇನ್ನುಳಿದ 20% ಅಂದರೆ ₹3,000 ಅನ್ನು ಉಳಿತಾಯ ಮತ್ತು ಹೂಡಿಕೆಗೆ ಮೀಸಲಿಡಬೇಕು. ಈ ಮೊತ್ತದ ಅರ್ಧಭಾಗ ಅಂದರೆ ₹1,500 ರೂ. ಅನ್ನು ಆರ್‌ಡಿ (RD) ಯಂತಹ ಸುರಕ್ಷಿತ ಹೂಡಿಕೆಗಳಿಗೆ ಬಳಸಬೇಕು. ಉಳಿದ ಅರ್ಧಭಾಗವನ್ನು ಅಂದರೆ ₹1,500 ರೂ. ಅನ್ನು ಮ್ಯೂಚುವಲ್ ಫಂಡ್‌ಗಳಂತಹ ಸ್ವಲ್ಪ ಅಪಾಯಕಾರಿಯಾದರೂ, ಹೆಚ್ಚು ಆದಾಯ ನೀವು ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು.

ಒಂದು ವೇಳೆ ನೀವು ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳಲು ಇಚ್ಛಿಸದಿದ್ದರೆ, ನಿಮ್ಮ ಸಂಪೂರ್ಣ ಉಳಿತಾಯವನ್ನು ಕೇವಲ ಸುರಕ್ಷಿತ ಹೂಡಿಕೆಗಳಲ್ಲೇ ಅಂದರೆ ಪೋಸ್ಟ್‌ ಆಫೀಸ್‌, ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಬೇಕು. ಕೇವಲ ಹಣವನ್ನು ಉಳಿಸುವುದು ಮುಖ್ಯವಲ್ಲ, ಅದನ್ನು ಯಾವ ರೀತಿ ಹೂಡಿಕೆ ಮಾಡಿ, ಇತರ ಆದಾಯದ ಮೂಲವನ್ನು ಕಂಡುಕೊಳ್ಳುವುದು ಹೇಗೆ ಎಂಬುದು ಮುಖ್ಯ. ಅದಕ್ಕಾಗಿ ಈ ಸಲಹೆ ನೀಡಲಾಗಿದೆ.

(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+