ಆದಾಯಕ್ಕನುಗುಣವಾಗಿ ಹೆಚ್ಚಿನವರು ಇಂದಿನ ದಿನದಲ್ಲಿ ಹೂಡಿಕೆ ಮಾಡುತ್ತಾರೆ. ಅದಕ್ಕಾಗಿ ಪೋಸ್ಟ್ ಆಫೀಸ್, ಬ್ಯಾಂಕ್ (Post Office, Bank) ಹೀಗೆ ಇನ್ನಿತರ ಹೂಡಿಕೆ ಯೋಜನೆಗಳನ್ನು ಕಂಡುಕೊಳ್ಳುತ್ತಾರೆ. ಆದರೆ ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲಿ ಹೆಚ್ಚಿನ ಬಡ್ಡಿದರದಲ್ಲಿ ಎಫ್‌ಡಿ ಆಯ್ಕೆಗಳಿವೆ. ಆದರೆ, ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ, ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಎಫ್‌ಡಿಗಳ ಮೇಲಿನ ಬಡ್ಡಿದರಗಳು ಕೇವಲ 6-7% ರಷ್ಟು ನೀಡಲಾಗಿದೆ.

ಆದರೆ ಈ ಸಂದರ್ಭದಲ್ಲಿ ಹಣದುಬ್ಬರವು ಸುಮಾರು 5-6% ರಷ್ಟಿದ್ದು, ಎಫ್‌ಡಿಗಳಿಂದ ಬರುವ ಲಾಭ ಕೂಡಾ ತುಂಬಾ ಕಡಿಮೆಯಾಗಿದೆ. ಆದ್ದರಿಂದ ಹೆಚ್ಚಿನ ಯುವಕರು ಮ್ಯೂಚುವಲ್ ಫಂಡ್‌ಗಳಲ್ಲಿ (Mutual Funds) ಹೂಡಿಕೆ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಇದು ಹೆಚ್ಚಿನ ಲಾಭ ತಂದುಕೊಡುತ್ತದೆ ಎನ್ನಲಾಗಿದೆ.
ಯಾವುದು ಹೆಚ್ಚು ಲಾಭ ನೀಡುತ್ತದೆ?
ಹೆಚ್ಚಿನ ಹಣದೊಂದಿಗೆ, ದೀರ್ಘಾವಧಿಯವರೆಗೆ ಹೂಡಿಕೆ ಮಾಡುವ ಪ್ಲಾನ್ ಇದ್ದವರಿಗೆ, ಮ್ಯೂಚುವಲ್ ಫಂಡ್‌ಗಳು ಎಫ್‌ಡಿಗಳಿಗಿಂತ ಹೆಚ್ಚಿನ ಲಾಭ ನೀಡುತ್ತವೆ ಎನ್ನಲಾಗಿದೆ.
ಮ್ಯೂಚುವಲ್ ಫಂಡ್ ಎಂದರೇನು?
ಮ್ಯೂಚುವಲ್ ಫಂಡ್ ಎಂದರೆ, ಅನೇಕ ಹೂಡಿಕೆದಾರರು ತಮ್ಮ ಹಣವನ್ನು ಒಟ್ಟುಮಾಡಿ, ಹಣಕಾಸು ತಜ್ಞರು ಮತ್ತು ಫಂಡ್ ಮ್ಯಾನೇಜರ್‌ಗಳು ಮಾರುಕಟ್ಟೆಯನ್ನು ವಿಶ್ಲೇಷಿಸಿ ಷೇರುಗಳು, ಬಾಂಡ್‌ಗಳು, ಸರ್ಕಾರಿ ಸೆಕ್ಯುರಿಟಿಗಳು ಮತ್ತು ಇತರ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡುವುದಾಗಿದೆ.
ಆದರೆ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ರೆ ಅಪಾಯ ಕಡಿಮೆ ಎನ್ನಲಾಗಿದೆ. ಏಕೆಂದರೆ ಇದರಲ್ಲಿ ಒಂದು ಕಂಪನಿ ನಷ್ಟ ಅನುಭವಿಸಿದರೂ, ಇನ್ನೊಂದು ಕಂಪನಿಯ ಲಾಭ ನಿಮ್ಮ ಹೂಡಿಕೆಯ ಮೊತ್ತಕ್ಕೆ ಸಮತೋಲನಗೊಳಿಸುತ್ತದೆ.
1 ಲಕ್ಷ ಹೂಡಿಕೆ ಎಲ್ಲಿ ಮಾಡಿದ್ರೆ ಬೆಸ್ಟ್?
ಉದಾಹರಣೆಗೆ, ಎಫ್‌ಡಿಯಲ್ಲಿ 1 ಲಕ್ಷ ರೂ. ಒಬ್ಬ ವ್ಯಕ್ತಿ ಹೂಡಿಕೆ ಮಾಡಿದರೆ, ಅದಕ್ಕೆ 7% ಬಡ್ಡಿ ಸಿಗುತ್ತದೆ. ಅಂದರೆ 5 ವರ್ಷಗಳ ನಂತರ ಈ ಮೊತ್ತಕ್ಕೆ ಸುಮಾರು 1.4 ಲಕ್ಷ ರೂ. ಸಿಗುತ್ತದೆ.
ಅದೇ ಹಣವನ್ನು ಒಂದು ವೇಳೆ ಉತ್ತಮ ಇಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ, ಸರಾಸರಿ ವಾರ್ಷಿಕ ಆದಾಯ 12% ಎಂದು ಊಹಿಸಿದರೆ, 5 ವರ್ಷಗಳ ನಂತರ ಆ ಮೊತ್ತ 1.76 ಲಕ್ಷ ರೂ. ಸಿಗುತ್ತದೆ. ಅಂದರೆ, ಎಫ್‌ಡಿಗಿಂತ ಮ್ಯೂಚುವಲ್ ಫಂಡ್‌ನಲ್ಲಿ 36 ಸಾವಿರ ರೂ. ಹೆಚ್ಚು ಲಾಭ ಸಿಗುತ್ತದೆ.
ಇನ್ನು ಮ್ಯೂಚುವಲ್ ಫಂಡ್‌ನಲ್ಲಿ ಮಾರುಕಟ್ಟೆ ಪರಿಸ್ಥಿತಿಗಳು ಚೆನ್ನಾಗಿದ್ದರೆ, ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದು. ಆದರೆ ಮ್ಯೂಚುವಲ್ ಫಂಡ್‌ಗಳಿಗೆ ಹೋಲಿಸಿದ್ರೆ, ಎಫ್‌ಡಿಯಲ್ಲಿ ಅಪಾಯದ ಜೊತೆ ಲಾಭ ಕೂಡ ಕಡಿಮೆ. ಆದರೆ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ದೀರ್ಘಾವಧಿವರೆಗೆ ಮಾಡಿದ್ರೆ ಅಪಾಯ ಸ್ವಲ್ಪ ಕಡಿಮೆ ಮತ್ತು ಲಾಭವೂ ಹೆಚ್ಚು ಸಿಗುತ್ತದೆ ಎನ್ನಲಾಗಿದೆ.
ಇನ್ನು ಎಫ್‌ಡಿಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ನಿರ್ದಿಷ್ಟ ಅವಧಿಯವರೆಗೆ ಮೊತ್ತ ಠೇವಣಿ ಇಡಬೇಕಾಗುತ್ತದೆ. ಆದ್ರೆ ಮ್ಯೂಚುವಲ್ ಫಂಡ್‌ನಲ್ಲಿ ಹಣವನ್ನು ಯಾವಾಗ ಬೇಕಾದರು ಹಿಂಪಡೆಯಬಹುದು. ಎಫ್‌ಡಿ ಬಡ್ಡಿಯ ಮೇಲೆ ಪ್ರತಿ ವರ್ಷ ತೆರಿಗೆ ಕಡ್ಡಾಯ. ಆದರೆ ಕೆಲವು ಮ್ಯೂಚುವಲ್ ಫಂಡ್‌ಗಳು, ವಿಶೇಷವಾಗಿ ELSS (ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್), ಆದಾಯ ತೆರಿಗೆ ಕಾಯ್ದೆಯ 80C ಸೆಕ್ಷನ್ ಅಡಿಯಲ್ಲಿ 1.5 ಲಕ್ಷ ರೂ. ವರೆಗೆ ತೆರಿಗೆ ಮುಕ್ತ ಸೇವೆಯನ್ನು ಒದಗಿಸುತ್ತದೆ.
ಎಫ್‌ಡಿಗಳು ಸುರಕ್ಷಿತವಾಗಿದ್ದರೆ, ಮ್ಯೂಚುವಲ್ ಫಂಡ್‌ಗಳು ಸ್ವಲ್ಪ ಅಪಾಯದೊಂದಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಆದರೆ, ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಪ್ರಾರಂಭಿಸುವ ಮೊದಲು ಸರಿಯಾದ ಫಂಡ್ ಅನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿದ್ರೆ ಮಾಡಿದ್ರೆ ಉತ್ತಮ.
(ಈ ವಿಶ್ಲೇಷಣೆ ಮತ್ತು ಶಿಫಾರಸುಗಳು ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆಗೆ ಖಾತರಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟವನ್ನು ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸ್ವತಂತ್ರವಾಗಿ ಪರಿಶೀಲಿಸಬೇಕು.)


Click it and Unblock the Notifications