ಹೂಡಿಕೆ (Investment) ಮಾಡಬೇಕು, ಹೆಚ್ಚು ಹಣ ಗಳಿಸಬೇಕು ಎಂಬುದು ಹಲವರ ಕನಸು. ಆದ್ರೆ ಗೃಹಣಿಯರೂ ಹೇಗಪ್ಪಾ ಹಣ ಗಳಿಸುವುದು ಎಂಬುದೇ ಎಲ್ಲರ ಪ್ರಶ್ನೆ. ಆದ್ರೆ ಸಂಬಳ ಇಲ್ಲದಿದ್ದರೂ, ಮಹಿಳೆಯರು ಪ್ರತಿದಿನ ಹಣ ನಿರ್ವಹಣೆ ಮಾಡುತ್ತಾರೆ. ಸಾಮಾನ್ಯ ಜ್ಞಾನದೊಂದಿಗೆ, ಮನೆಯ ಇಡೀ ಜವಾಬ್ದಾರಿಯನ್ನೇ ಹೊತ್ತುಕೊಂಡಿರುತ್ತಾರೆ. ಮಹಿಳೆಯರು ಮನೆಯಲ್ಲಿರುವುದು ಮಾತ್ರವಲ್ಲ, ಮನೆಯೊಂದರ ಇಡೀ ತಿಂಗಳ ಖರ್ಚನ್ನು ಲೆಕ್ಕ ಹಾಕುತ್ತಾರೆ. ಕರೆಂಟ್ ಬಿಲ್, ದಿನಸಿ, ಮಕ್ಕಳ ಶಾಲಾ ಖರ್ಚುಗಳು, ಸಣ್ಣ ಪುಟ್ಟ ಉಳಿತಾಯಗಳನ್ನು ಸಹ ಹುಡುಕುತ್ತಾರೆ. ಇವೆಲ್ಲವು ಮನೆಯ ಆರ್ಥಿಕ ನಿರ್ವಹಣೆಯೇ, ಆದರೆ ಹೂಡಿಕೆ ಮಾಡಲು ಬಂದಾಗ ಮಾತ್ರ ಗೃಹಿಣಿಯರು ಹಿಂದೇಟು ಹಾಕುತ್ತಾರೆ. ಕಾರಣ ಭಯ.

ಹೌದು, ಹೂಡಿಕೆ ಮಾಡಲು ಸಾಕಷ್ಟು ತಿಳುವಳಿಕೆ ಇಲ್ಲ, ಹಣ ಇಲ್ಲ ಎಂಬ ಭಯದಿಂದ ಹಿಂದೆ ಸರಿಯುತ್ತಾರೆ. ಆದ್ರೆ ಈ ಎಲ್ಲಾ ಭಯಗಳನ್ನು ಬಿಟ್ಟರೆ, ಸಣ್ಣ ಮೊತ್ತದಿಂದಲೇ ಯಾರು ಬೇಕಾದರು ಹೂಡಿಕೆ ಆರಂಭಿಸಬಹುದು.
ಸಣ್ಣ ಮೊತ್ತ, ಉತ್ತಮ ಯೋಜನೆ:
ಹೂಡಿಕೆ ಯೋಜನೆಗಳನ್ನು ಆರಂಭಿಸಬೇಕೆಂದರೆ ಅಧಿಕ ಹಣ ಬೇಕು ಎಂಬುದು ತಪ್ಪು ಭಾವನೆ. ಆದ್ದರಿಂದ ಪ್ರತೀ ತಿಂಗಳು ಕೆಲವು ಸಾವಿರ ರೂ.ಗಳನ್ನು ಉಳಿಸುವ ಮೂಲಕ ಹೂಡಿಕೆ ಆರಂಭಿಸಬಹುದು. ಮನೆಯ ಖರ್ಚುಗಳಿಂದ, ಉಡುಗೊರೆಗಳಿಂದ ಅಥವಾ ಯಾರಾದರು ಕೊಟ್ಟ ಹಣದಿಂದ ಹೂಡಿಕೆ ಆರಂಭಿಸಬಹುದು. ಈ ಸಣ್ಣ ಹಣವೇ, ದೀರ್ಘಾವಧಿಯಲ್ಲಿ ಹೆಚ್ಚು ಲಾಭವನ್ನು ನೀಡಬಹುದು.
ಯೋಜನೆಗಳನ್ನು ಆರಂಭಿಸಿ:
ಗೃಹಿಣಿಯರು ತಮ್ಮ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಸೇವಿಂಗ್ಸ್ ಅಕೌಂಟ್, ಪೋಸ್ಟ್ ಆಫೀಸ್‌ನಲ್ಲಿ ಯೋಜನೆಗಳನ್ನು ಆರಂಭಿಸಬಹುದು. ಮಹಿಳೆಯರಿಗಾಗಿ ಸರ್ಕಾರಿ ಸ್ವಾಮ್ಯದ ಹಲವಾರು ಹೂಡಿಕೆ ಯೋಜನೆಗಳಿವೆ. ಈ ಮೂಲಕ ಒಂದು ಯೋಜನೆಯ ಸಂಪೂರ್ಣ ಪ್ರಯೋಜನಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ.
ಈ ಯೋಜನೆಗಳ ಮೂಲಕ ಹೂಡಿಕೆ ಆರಂಭಿಸಿ
- ಫಿಕ್ಸೆಡ್ ಡೆಪಾಸಿಟ್ (FD)
- ರಿಕರಿಂಗ್ ಡೆಪಾಸಿಟ್ (RD)
- ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆಗಳು
ಎಚ್ಚರಿಕೆಯಿಂದಿರಿ!
ಹೆಚ್ಚಿನವರು ಬೇಗ ಲಾಭ ಸಿಗಬೇಕು ಎಂಬ ಕಾರಣದಿಂದ, ಅತಿ ಹೆಚ್ಚು ರಿಟರ್ನ್ ನೀಡುವ ಯೋಜನೆಗಳತ್ತ ಹೋಗುತ್ತಾರೆ. ಆದ್ರೆ ಅಂತಹ ಯೋಜನೆಗಳನ್ನು ನಿಮ್ಮನ್ನು ನಷ್ಟಕ್ಕೆ ತಳ್ಳಬಹುದು. ಆದ್ದರಿಂದ ಯಾವುದೇ ಹೂಡಿಕೆ ಯೋಜನೆ ಆರಂಭಿಸುವ ಮುನ್ನ ಹಣಕಾಸು ತಜ್ಞರನ್ನು ಸಂಪರ್ಕಿಸಿ.
ಇದ್ದ ಹಣದಲ್ಲಿ ಸೇವಿಂಗ್ಸ್ ಆರಂಭಿಸುವುದು ದೀರ್ಘಾವಧಿಯಲ್ಲಿ ಹೆಚ್ಚಿನ ಆದಾಯ ತರಬಹುದು. ಆದ್ದರಿಂದ ಗೃಹಿಣಿಯರು ಈಗಲೇ ಹೂಡಿಕೆ ಆರಂಭಿಸಿ, ಹೆಚ್ಚು ಲಾಭಗಳಿಸಿ. ಅದಕ್ಕಾಗಿ ಸರಿಯಾದ ಮಾಹಿತಿ ಪಡೆದು, ನಿಮ್ಮಲ್ಲಿದ್ದ ಹಣದಲ್ಲಿ ಹೂಡಿಕೆ ಮಾಡಲು ಯಾವ ಯೋಜನೆ ಉತ್ತಮ ಎಂಬುದನ್ನು ತಿಳಿದುಕೊಂಡು ಹೂಡಿಕೆ ಆರಂಭಿಸಿ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications