ಐಫೋನ್ (iPhone) ಖರೀದಿಸಬೇಕೆಂದು ಯಾರಿಗೆ ಆಸೆ ಇರಲ್ಲ ಹೇಳಿ? ಆದ್ರೆ ಏನ್ ಮಾಡೋದು ಬೆಲೆ ದುಬಾರಿಯಾದ್ದರಿಂದ ಕೆಲವರ ಕನಸು ಕನಸಾಗಿಯೇ ಉಳಿಯುತ್ತೆ. ಆದ್ರೆ ಕೆಲವೊಮ್ಮೆ ಐಫೋನ್ ಪ್ರಿಯರಿಗಾಗಿ ಇಕಾಮರ್ಸ್ ವೆಬ್‌ಸೈಟ್‌ಗಳು ಬಂಪರ್ ಆಫರ್ ಘೋಷಿಸುತ್ತವೆ. ಅದೇ ಆಫರ್ ಇದೀಗ ಬಂದಿದೆ ನೋಡಿ. ಹೊಸ ಐಫೋನ್ 17 ಮಾರುಕಟ್ಟೆಗೆ ಬಂದಿದ್ದೇ ತಡ, ಐಫೋನ್ 16 (iPhone 16) ಈಗ 40,000 ರೂ.ಗಿಂತಲೂ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದೆ. ಹಳೆಯ ಐಫೋನ್‌ನಿಂದ ಅಪ್‌ಗ್ರೇಡ್ ಮಾಡಲು ಅಥವಾ ಆಪಲ್ ಫೋನ್ ಖರೀದಿಸಲು (Apple Phone) ಬಯಸುವವರಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಬ್ಲಾಕ್ ಫ್ರೈಡೆ ರಿಯಾಯಿತಿಗಳಿಂದಾಗಿ ಐಫೋನ್ 16 ಬೆಲೆ ಗಣನೀಯವಾಗಿ ಇಳಿದಿದೆ.

ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಕ್ರೋಮಾ (Amazon, Flipkart, Croma) ಸೇರಿದಂತೆ ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್‌ಗಳು ಇದೀಗ ಬಂಪರ್ ಆಫರ್ ಘೋಷಿಸಿದೆ. ಹೌದು ಎಕ್ಸ್‌ಚೇಂಜ್ ಆಫರ್‌ಗಳನ್ನು, ಬ್ಯಾಂಕ್ ರಿಯಾಯಿತಿ ಮೂಲಕ ಐಫೋನ್ ಖರೀದಿಯಲ್ಲಿ ಭಾರೀ ಉಳಿತಾಯವನ್ನು ಮಾಡಬಹುದು. ಇದು ಐಫೋನ್ 16 ಅನ್ನು 40,000 ರೂ.ಗಿಂತ ಕಡಿಮೆಗೆ ಖರೀದಿಸಬಹುದು.
ಐಫೋನ್ 16 ಮೇಲೆ ಬಂಪರ್ ಆಫರ್!
ಅಮೆಜಾನ್‌ನಲ್ಲಿ ಐಫೋನ್ 16 ಅನ್ನು 66,900 ರೂ.ಗೆ ಪಟ್ಟಿ ಮಾಡಲಾಗಿದೆ, ಇದು ಈಗಾಗಲೇ 13,000 ರೂ.ಗಳ ರಿಯಾಯಿತಿಯೊಂದಿಗೆ ನೀಡಲಾಗಿದೆ. ಒಂದು ವೇಳೆ ಹಳೆಯ ಫೋನ್ ಎಕ್ಸ್‌ಚೇಂಜ್ ಮಾಡಿದರೆ 47,650 ರೂ.ವರೆಗೆ ಆಫರ್ ಪಡೆಯಬಹುದು. ಉದಾಹರಣೆಗೆ, 128GB ಸಂಗ್ರಹಣೆ ಮತ್ತು ಯಾವುದೇ ಡ್ಯಾಮೇಜ್ ಇಲ್ಲದೇ ಐಫೋನ್ 15 ಗೆ 30,250 ರೂ. ಆಫರ್ ಸಿಗಲಿದೆ.
ಇದರಿಂದ ಐಫೋನ್ 16 ರ ಪರಿಣಾಮಕಾರಿ ಬೆಲೆ 36,650 ರೂ.ಗೆ ಇಳಿಯುತ್ತದೆ. ಗ್ರಾಹಕರು ಒಂದು ವೇಳೆ ಬ್ಯಾಂಕ್ ಆಫರ್‌ಗಳನ್ನು ಬಳಸಿಕೊಂಡು ಹೆಚ್ಚುವರಿಯಾಗಿ 4,000 ರೂ.ವರೆಗೆ ಉಳಿಸಬಹುದು. ಈ ಮೂಲಕ ಬಂಪರ್ ರಿಯಾಯಿತಿ ನಿಮ್ಮದಾಗುತ್ತದೆ.
ಫ್ಲಿಪ್‌ಕಾರ್ಟ್‌ನಲ್ಲೂ ಆಫರ್!
ಫ್ಲಿಪ್‌ಕಾರ್ಟ್‌ನಲ್ಲಿಯೂ ಅಮೆಜಾನ್‌ನಂತೆಯೇ ವಿಶೇಷ ಆಫರ್‌ಗಳಿವೆ. ಹಳೆಯ ಸ್ಮಾರ್ಟ್‌ಫೋನ್‌ಗೆ 57,400 ರೂ.ವರೆಗೆ ಎಕ್ಸ್‌ಚೇಂಜ್ ಆಫರ್ ಪಡೆಯಬಹುದು. ಐಫೋನ್ 16 ಅನ್ನು ಸದ್ಯ 69,900 ರೂ.ಗೆ ಪಟ್ಟಿ ಮಾಡಲಾಗಿದ್ದು, ಯಾವುದೇ ಹಾನಿಯಿಲ್ಲದ 128GB ಐಫೋನ್ 15 ಅನ್ನು ಎಕ್ಸ್‌ಚೇಂಜ್ ಮಾಡಿಕೊಂಡರೆ 27,450 ರೂ. ಆಫರ್ ಸಿಗಲಿದೆ.
ಇದರಿಂದ ಐಫೋನ್ ಬೆಲೆ 41,550 ರೂ. ಆಗುತ್ತದೆ. ಇದರೊಂದಿಗೆ 4,000 ರೂ.ವರೆಗೆ ಕ್ಯಾಶ್‌ಬ್ಯಾಕ್ ಪಡೆದರೆ, ಐಫೋನ್ 16 ಅನ್ನು 40,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಕ್ರೋಮಾ ಬ್ಲಾಕ್ ಫ್ರೈಡೆ ಮಾರಾಟದಲ್ಲಿ ಐಫೋನ್ 16 ಅನ್ನು 39,990 ರೂ.ಗೆ ಭರ್ಜರಿ ಆಫರ್‌ನೊಂದಿಗೆ ನೀಡಲಾಗುತ್ತಿದೆ. ರೀಟೇಲರ್ ವೆಬ್‌ಸೈಟ್ ಪ್ರಕಾರ, ಐಫೋನ್ 16 ಪ್ರಸ್ತುತ 66,490 ರೂ.ಗೆ ಲಭ್ಯವಿದೆ. ಇದು 13,410 ರೂ.ಗಳ ನೇರ ರಿಯಾಯಿತಿಯಾಗಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿರುವಂತೆ, ಗ್ರಾಹಕರು ನಿರ್ದಿಷ್ಟ ಬ್ಯಾಂಕ್ ರಿಯಾಯಿತಿಗಳು (4,000 ರೂ.ವರೆಗೆ), ಎಕ್ಸ್‌ಚೇಂಜ್ ಆಫರ್ ಮತ್ತು ಕ್ರೋಮಾ ಒದಗಿಸುವ ರಿಯಾಯಿತಿ ಕೂಪನ್‌ಗಳನ್ನು ಬಳಸಿಕೊಂಡು 39,990 ರೂ.ಗೆ ಐಫೋನ್ 16 ಖರೀದಿ ಮಾಡಬಹುದು.


Click it and Unblock the Notifications