ಐಫೋನ್ (iPhone) ಖರೀದಿಸೋದು ಹಲವು ಯುವಕರ ಕನಸು. ಆದ್ರೆ ಈ ಫೋನ್‌ನ ಬೆಲೆ ಏರಿಕೆಯಿಂದಾಗಿ ಎಷ್ಟೋ ಮಂದಿಯ ಕನಸು ಕನಸಾಗಿಯೇ ಉಳಿದಿದೆ. ತನ್ನ ಸೂಪರ್ ಫೀಚರ್ಸ್ ಮೂಲಕ ಬಳಕೆದಾರರ ಗಮನಸೆಳೆದಿರುವ ಐಫೋನ್‌ಗಳು ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಈಗಾಗಲೇ ಆಪಲ್ ಕಂಪನಿಯಿಂದ ಐಫೋನ್ 17 ಸೀರಿಸ್ (iPhone 17 Series) ಲಾಂಚ್ ಆಗಿದೆ. ಭಾರತದಲ್ಲೂ ಈ ಸೀರಿಸ್‌ನ ಫೋನ್‌ಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗಿದೆ. ಹಾಗಿದ್ರೆ ಭಾರತ ಮತ್ತು ಇತರ ದೇಶಗಳಲ್ಲಿ ಐಫೋನ್ ದರಗಳು (iPhone Price) ಹೇಗಿದೆ ಎಂದು ನಿಮಗೆ ಗೊತ್ತಾ?

ಹೌದು, ಇದೀಗ 2026ರಲ್ಲಿ iPhone 17 ಸರಣಿಯಾದ iPhone 17, iPhone 17 Pro, ಮತ್ತು iPhone 17 Pro Max ಗಳ ಬೆಲೆಗಳನ್ನು ಭಾರತ, ಅಮೆರಿಕಾ, ಸಿಂಗಾಪುರ, ಕೆನಡಾ ಮತ್ತು ಆಸ್ಟ್ರೇಲಿಯಾದಾದ್ಯಂತ ಹೋಲಿಕೆ ಮಾಡಲಾಗಿದೆ. ಭಾರತದಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಐಫೋನ್ 17 ಸೀರಿಸ್ ಫೋನ್‌ಗಳು ಈಗಾಗಲೇ ಖರೀದಿಗೆ ಲಭ್ಯವಿದೆ. ಆದರೆ ಭಾರತಕ್ಕೆ ಹೋಲಿಸಿದ್ರೆ ಕೆಲವು ದೇಶಗಳಲ್ಲಿ ಐಫೋನ್ ಕಮ್ಮಿ ಬೆಲೆಗೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅದೇ ಕಾರಣದಿಂದ ಅನೇಕರು ಯುಎಸ್‌ಎ, ಸಿಂಗಾಪುರ, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿನ ಆಪಲ್ ಸ್ಟೋರ್ ಬೆಲೆಗಳನ್ನು ಚೆಕ್ ಮಾಡುತ್ತಿರುತ್ತಾರೆ.
2026ರ ಫೆಬ್ರವರಿ 3ರ ದತ್ತಾಂಶದ ಪ್ರಕಾರ, ರೂಪಾಯಿ ಮೌಲ್ಯ ಹೆಚ್ಚಾಗಿದ್ದರಿಂದ, ಐಫೋನ್ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಆದರೆ ಕೆಲವು ಮಾದರಿಗಳು ಇನ್ನೂ ವಿದೇಶದಲ್ಲಿ ಅಗ್ಗವಾಗಿವೆ. ಈ ಹೋಲಿಕೆಯು ಭಾರತದಲ್ಲಿನ ಆನ್‌ಲೈನ್ ಬೆಲೆಗಳನ್ನು ಮತ್ತು ಈ ದೇಶಗಳಲ್ಲಿನ ಅಧಿಕೃತ ಆಪಲ್ ಸ್ಟೋರ್ ಬೆಲೆಗಳನ್ನು ಪ್ರಸ್ತುತ ವಿನಿಮಯ ದರಗಳನ್ನು ಬಳಸಿ INR ಗೆ ಪರಿವರ್ತಿಸಿ ತೋರಿಸಲಾಗಿದೆ. ಈ ಮೂಲಕ ಐಫೋನ್ ಖರೀದಿಗೆ ಬೆಸ್ಟ್ ಸ್ಥಳ ಯಾವುದು ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
iPhone 17 ಬೆಲೆ:
iPhone 17 ಮಾದರಿಯ ಬೆಲೆ ನೋಡುವುದಾದ್ರೆ, ಭಾರತದಲ್ಲಿ ಅಮೆಜಾನ್‌ನಲ್ಲಿ ₹74,900 ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ₹74,990 ಬೆಲೆಗೆ ನಿಗದಿಪಡಿಸಲಾಗಿದೆ. ಅಮೆರಿಕಾದಲ್ಲಿ ಆಪಲ್ ಸ್ಟೋರ್‌ನಲ್ಲಿ ಇದರ ಬೆಲೆ ₹72,149 ಆಗಿದ್ದು, ಭಾರತಕ್ಕೆ ಹೋಲಿಸಿದ್ರೆ 2 ಸಾವಿರ ರೂ.ವರೆಗೆ ಕಡಿಮೆ ಇದೆ. ವಿದೇಶದಲ್ಲಿ ಖರೀದಿಸಲು ಸಾಧ್ಯವಾದರೆ, ಅಮೆರಿಕಾದಿಂದ ಖರೀದಿಸುವುದು ಬೆಸ್ಟ್. ಕೆನಡಾದಲ್ಲಿ ₹74,717 ಇದ್ದು, ಭಾರತದ ಬೆಲೆಯಷ್ಟೇ ಇದೆ. ಇನ್ನು ಸಿಂಗಾಪುರದಲ್ಲಿ ₹92,475 ಮತ್ತು ಆಸ್ಟ್ರೇಲಿಯಾದಲ್ಲಿ ₹88,626 ರೂ. ಇದೆ.
iPhone 17 Air ಬೆಲೆ:
iPhone 17 Air ಮಾದರಿಯು ಭಾರತದಲ್ಲಿ, ವಿಶೇಷವಾಗಿ ಫ್ಲಿಪ್‌ಕಾರ್ಟ್‌ನಲ್ಲಿ ₹93,900 ರೂ. ಬೆಲೆ ಹೊಂದಿದೆ. ಈ ಮಾದರಿಯ ಫೋನ್ ಕೂಡಾ ಅಮೆರಿಕಾದಲ್ಲಿ ಅಗ್ಗದಲ್ಲಿ ಸಿಗುತ್ತಿದ್ದು, ಅಲ್ಲಿ ₹90,209 ರೂ. ಆಗಿದೆ. ಭಾರತಕ್ಕೆ ಹೋಲಿಸಿದರೆ ಅಮೆರಿಕಾದಲ್ಲಿ ಖರೀದಿ ಮಾಡಬಹುದು. ಇನ್ನು ಕೆನಡಾದಲ್ಲಿ ಇದರ ಬೆಲೆ ₹95,894 ರಷ್ಟಿದೆ.
iPhone 17 Pro ಬೆಲೆ:
iPhone 17 Pro ಬೆಲೆಯು ಭಾರತದಲ್ಲಿ ₹1.25 ಲಕ್ಷ ದಾಟಿದೆ. ಇದು ಅಮೆರಿಕಾ ಮತ್ತು ಕೆನಡಾಗೆ ಹೋಲಿಸಿದ್ರೆ ಭಾರೀ ದುಬಾರಿಯಾಗಿದೆ. ಈ ಮಾದರಿಯನ್ನು ಅಮೆರಿಕಾದಿಂದ ಖರೀದಿಸಿದ್ರೆ ಭಾರೀ ಕಮ್ಮಿಗೆ ಸಿಗಲಿದೆ ಎನ್ನಲಾಗಿದೆ. ಹಾಗೆಯೇ ಕೆನಡಾ ಸಹ ಭಾರತಕ್ಕಿಂತ ಉತ್ತಮ ಬೆಲೆಗೆ ಐಫೋನ್ 17 ಪ್ರೋ ಮಾದರಿಯನ್ನು ನೀಡುತ್ತದೆ.
iPhone 17 Pro Max ಬೆಲೆ:
iPhone 17 Pro Max ಮಾದರಿ ಭಾರತದಲ್ಲಿ ಭಾರೀ ದುಬಾರಿ ಬೆಲೆಯನ್ನು ಹೊಂದಿದೆ. ಭಾರತದಲ್ಲಿ ಇದರ ಬೆಲೆ ₹1.4 ಲಕ್ಷಕ್ಕಿಂತ ಹೆಚ್ಚಾಗಿದ್ದು, ಆದರೆ ಅಮೆರಿಕಾದಲ್ಲಿನ ಆಪಲ್ ಸ್ಟೋರ್‌ನಲ್ಲಿ ಭಾರೀ ಕಮ್ಮಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕೆನಡಾ ಸಹ ಭಾರತಕ್ಕೆ ಹೋಲಿಸಿದರೆ ಕಡಿಮೆ ಬೆಲೆಯನ್ನು ಹೊಂದಿದೆ. ಆದರೆ ಸಿಂಗಾಪುರ ಮತ್ತು ಆಸ್ಟ್ರೇಲಿಯಾ ಭಾರತೀಯ ಮಾರುಕಟ್ಟೆಯಷ್ಟೇ ದುಬಾರಿಯಾಗಿವೆ.
ಇನ್ನು ಬೆಲೆಗಳು ಕಡಿಮೆಯಿದ್ದರೂ, ಖರೀದಿ ಮಾಡುವ ಸಮಯ, ಸ್ಥಳ ಬಹಳ ಮಹತ್ವವನ್ನು ಪಡೆಯುತ್ತದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಖರೀದಿಸಿದರೆ ಬಹಳ ಒಳ್ಳೆಯದು ಎಂದು ಹೇಳುತ್ತಾರೆ ತಜ್ಞರು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications