ಯಾವುದೇ ಹಬ್ಬ, ವಿಶೇಷ ದಿನಗಳ ಬರುತ್ತಿದ್ದಂತೆ, ಇಕಾಮರ್ಸ್ ಕಂಪನಿಗಳು ಆಫರ್‌ಗಳ ಸುರಿಮಳೆಯನ್ನೂ ಶುರು ಮಾಡುತ್ತದೆ. ಅದರಲ್ಲೂ ಲ್ಯಾಪ್‌ಟಾಪ್, ಸ್ಮಾರ್ಟ್‌ಪೋನ್, ಐಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸುತ್ತದೆ. ಇನ್ನೇನು ವ್ಯಾಲೆಂಟೈನ್ಸ್ ಡೇ (Valentines Day) ಬರುತ್ತಿದೆ. ಈಗಾಗಲೇ ವ್ಯಾಲೆಂಟೈನ್ಸ್ ವೀಕ್ ಆರಂಭವಾಗಿದೆ. ಈ ಹಿನ್ನೆಲೆ ಇ-ಕಾಮರ್ಸ್ ಕಂಪನಿಗಳು (E-Commerce Company) ಕೂಡಾ ಗಿಫ್ಟ್‌ಗಾಗಿ ವಿಶೇಷ ಆಫರ್ ಸೇಲ್ (Offer Sale) ಆರಂಭಿಸಿದೆ.

ಹೌದು, ವ್ಯಾಲೆಂಟೈನ್ಸ್ ಡೇಗೂ ಮುನ್ನವೇ ಪ್ರಮುಖ ಇ-ಕಾಮರ್ಸ್ ಕಂಪನಿಯೆಂದು ಗುರುತಿಸಿಕೊಂಡಿರುವ ವಿಜಯ್ ಸೇಲ್ಸ್‌ನಲ್ಲಿ (Vijay Sales) ಐಫೋನ್ ಮತ್ತು ಮ್ಯಾಕ್‌ಬುಕ್‌ಗಳು ಭಾರೀ ರಿಯಾಯಿತಿಯೊಂದಿಗೆ ಲಭ್ಯವಿದೆ. ವ್ಯಾಲೆಂಟೈನ್ಸ್ ಡೇ ಸೇಲ್ 2026 ಇದೀಗ ಆರಂಭವಾಗಿದ್ದು, ಈ ಹಿನ್ನೆಲೆ ಆಪಲ್ ಪ್ರೀಮಿಯಂ ಉತ್ಪನ್ನಗಳು ಭಾರೀ ಆಫರ್‌ನೊಂದಿಗೆ ನೀಡಲಾಗುತ್ತಿದೆ.
ಆಪಲ್ ಕಂಪನಿಯ ಉತ್ಪನ್ನಗಳನ್ನು ಖರೀದಿಸುವ ಪ್ಲಾನ್‌ನಲ್ಲಿದ್ದವರಿಗೆ, ಇದೊಂದು ಬಂಪರ್ ಸುದ್ದಿಯಾಗಿದ್ದು, ವಿಜಯ್ ಸೇಲ್ಸ್ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ಆದ್ದರಿಂದ ಆನ್‌ಲೈನ್ ಮತ್ತು ಸ್ಟೋರ್‌ಗಳಲ್ಲಿ ಖರೀದಿಗೆ ಅವಕಾಶವಿದ್ದು, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಲಭ್ಯವಿದೆ.
ವಿಜಯ್ ಸೇಲ್ಸ್ ವ್ಯಾಲೆಂಟೈನ್ಸ್ ಡೇ ಸೇಲ್ ಆಫರ್‌ಗಳು:
ಐಫೋನ್‌ಗಳು:
- ಐಫೋನ್‌ಗಳು 50,390 ರೂ.ನಿಂದ ಆರಂಭಿಕ ಬೆಲೆಯೊಂದಿಗೆ ಖರೀದಿಗೆ ಲಭ್ಯವಿದೆ. ಅಲ್ಲದೇ ಇನ್‌ಸ್ಟಂಟ್ ಬ್ಯಾಂಕ್ ಕ್ಯಾಶ್‌ಬ್ಯಾಕ್ ಸೇರಿದಂತೆ, ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಆಫರ್‌ನಲ್ಲಿ ಖರೀದಿಸಬಹುದು.
- ಐಫೋನ್ 17 ಪ್ರೋ, ಮಾಡೆಲ್‌ಗಳ ಮೇಲೆ 7,000 ರೂ.ವರೆಗೆ ರಿಯಾಯಿತಿ ಲಭ್ಯವಿದೆ. ಅಲ್ಲದೇ ಐಫೋನ್ ಏರ್, ಐಫೋನ್ 17 ಸೀರಿಸ್ ಮೇಲೂ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ.
ಮ್ಯಾಕ್‌ಬುಕ್‌ಗಳು:
ಮ್ಯಾಕ್‌ಬುಕ್ ಏರ್ M4 (16GB Ram + 256GB ಸ್ಟೋರೇಜ್) 94,990 ರೂ.ನಿಂದ ಖರೀದಿಗೆ ಲಭ್ಯವಿದೆ. ಅಲ್ಲದೇ ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ 5000 ರೂ.ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಿದೆ. ಇನ್ನು M4 ಚಿಪ್‌ನೊಂದಿಗೆ 13.6 ಇಂಚ್ ಡಿಸ್‌ಪ್ಲೇ, ಸ್ಕೈಬ್ಲೂ, ಹಲವು ಕಲರ್‌ಗಳಲ್ಲಿ ಖರೀದಿಗೆ ಆಯ್ಕೆ ಮಾಡಲಾಗಿದೆ.
ಇತರ ಆಪಲ್ ಉತ್ಪನ್ನಗಳ ಮೇಲೂ ಆಫರ್!
ಐಪ್ಯಾಡ್‌ಗಳು, ಏರ್‌ಪಾಡ್ಸ್, ಆಪಲ್ ವಾಚ್ ಸೀರಿಸ್ 11 ಮತ್ತು ಇತರ ಸಾಧನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ.
ರಿಲಯನ್ಸ್ ಡಿಜಿಟಲ್ ಸೇಲ್:
ವ್ಯಾಲೆಂಟೈನ್ಸ್ ಡೇ ಸೇಲ್ ಇದೀಗ ರಿಲಯನ್ಸ್ ಡಿಜಿಟಲ್ ಸೇಲ್‌ನಲ್ಲೂ ಆರಂಭವಾಗಿದೆ. ಐಫೋನ್ 15 ಮಾದರಿಯ ಫೋನ್‌ಗಳು 24,000 ರೂ. ರಿಯಾಯಿತಿಯೊಂದೊಗೆ ಖರೀದಿಗೆ ಲಭ್ಯವಿದೆ. ಅಲ್ಲದೇ ಬ್ಯಾಂಕ್ ರಿಯಾಯಿತಿಯೊಂದಿಗೆ ಇದನ್ನು ಭಾರೀ ಅಗ್ಗದಲ್ಲಿ ಪಡೆಯಬಹುದು.
ಐಫೋನ್ 15 ಮೇಲೆ ಭರ್ಜರಿ ಆಫರ್:
ಐಫೋನ್ 15 ಮಾದರಿಯ ಒಟ್ಟು 3 ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. (128GB, 256GB, 512GB). 128GB ಸ್ಟೋರೇಜ್‌ನ ಫೋನ್‌ನಲ್ಲಿ 3000 ಸಾವಿರದವರೆಗೆ ಬ್ಯಾಂಕ್ ರಿಯಾಯಿತಿ ಲಭ್ಯವಿದೆ.
ಆಪಲ್ ಐಫೋನ್ 15 ಮಾದರಿಯ 128 ಜಿಬಿ ಫೋನ್ ಬಿಡುಗಡೆ ಬೆಲೆ 79,900 ರೂ. ಆಗಿದ್ದು, ರಿಲಯನ್ಸ್ ಡಿಜಿಟಲರ್ ಇದನ್ನು 55,900 ರೂ.ಗೆ ಸೇಲ್ ಮಾಡುತ್ತಿದೆ. ಒಂದು ವೇಳೆ ಬ್ಯಾಂಕ್ ಆಫರ್ ಸೇರಿದ್ರೆ ಬರೀ 52,900 ರೂ.ಗೆ ಖರೀದಿಸಬಹುದು.


Click it and Unblock the Notifications