ಐಟಿಆರ್ ಸಲ್ಲಿಕೆ ಗಡುವು: ನೋಟಿಸ್‌ಗಳಿಂದ ಬಚಾವಾಗಲು ಮತ್ತು ತಪ್ಪುಗಳನ್ನು ತಡೆಯಲು ಈ ಚೆಕ್‌ಲಿಸ್ಟ್ ಮಿಸ್ ಮಾಡ್ಬೇಡಿ!

ಆಡಿಟ್ ವರದಿಗಳನ್ನು ಸಲ್ಲಿಸಲು 2026ರ ಅಕ್ಟೋಬರ್ 21 ಕೊನೆಯ ದಿನಾಂಕವಾದರೆ, ಆಡಿಟ್‌ಗೆ ಒಳಪಡುವ ಪ್ರಕರಣಗಳ ಐಟಿಆರ್ ಸಲ್ಲಿಕೆಗೆ 2026ರ ನವೆಂಬರ್ 21 ಕೊನೆಯ ಗಡುವಾಗಿದೆ. ಕೊನೆ ಗಳಿಗೆಯಲ್ಲಿ ಐಟಿಆರ್ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುವುದರಿಂದ ಸಣ್ಣಪುಟ್ಟ ತಪ್ಪುಗಳಾಗುವ ಸಾಧ್ಯತೆಗಳಿರುತ್ತವೆ. ಸಿಬಿಡಿಟಿಯ (CBDT) ಇತ್ತೀಚಿನ ಗಡುವು ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಸಮಯ ಉಳಿಸಲು ಮತ್ತು ಆದಾಯ ತೆರಿಗೆ ನೋಟಿಸ್‌ಗಳಿಂದ ಬಚಾವಾಗಲು ಸಹಾಯ ಮಾಡುವ ಪ್ರಮುಖ ಚೆಕ್‌ಲಿಸ್ಟ್ ಇಲ್ಲಿದೆ.

ಮೊದಲಿಗೆ ನಿಮ್ಮ ಅಕೌಂಟ್ ಬುಕ್‌ಗಳನ್ನು ಕ್ಲೋಸ್ ಮಾಡಿ, AIS, ಫಾರ್ಮ್ 26AS ಮತ್ತು ಬ್ರೋಕರ್ ಸ್ಟೇಟ್‌ಮೆಂಟ್‌ಗಳಲ್ಲಿ ಕಾಣಿಸುವ ಆದಾಯ, TDS ಹಾಗೂ TCS ವಿವರಗಳನ್ನು ತಾಳೆ ನೋಡಿ. AIS ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿರುವ ತಪ್ಪು ಅಥವಾ ಡೂಪ್ಲಿಕೇಟ್ ಎಂಟ್ರಿಗಳನ್ನು ಗುರುತಿಸಿ, ತೆರಿಗೆ ಕಡಿತಗೊಳಿಸಿದವರಿಂದ ತಿದ್ದುಪಡಿ ಮಾಡಿಸಿ. ನೆನಪಿಡಿ, ಫಾರ್ಮ್ 26AS ನಲ್ಲಿ ಈಗ ಪೂರ್ಣ ಆದಾಯಕ್ಕಿಂತ ಹೆಚ್ಚಾಗಿ ಟ್ಯಾಕ್ಸ್ ಕ್ರೆಡಿಟ್ ವಿವರಗಳು ಮಾತ್ರ ಕಾಣಿಸುತ್ತವೆ. ಹಾಗಾಗಿ ಬಡ್ಡಿ ಮತ್ತು ಡಿವಿಡೆಂಡ್ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

ಐಟಿಆರ್ ಸಲ್ಲಿಕೆ: ನೋಟಿಸ್ ತಪ್ಪಿಸಲು ಈ ಚೆಕ್‌ಲಿಸ್ಟ್ ನೋಡಿ

ಅಕ್ಟೋಬರ್ 21ರ ಆಡಿಟ್ ವರದಿ: F&O ಟರ್ನೋವರ್, ಪ್ರಿಸಂಪ್ಟಿವ್ ತೆರಿಗೆ ಮತ್ತು ಸವೆಕಳಿ (Depreciation)

ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ವ್ಯವಹಾರ ಮಾಡುವವರು, ಎಲ್ಲಾ ಲಾಭ ಮತ್ತು ನಷ್ಟಗಳ ಮೊತ್ತವನ್ನು (Absolute sum) ಒಟ್ಟುಗೂಡಿಸಿ ಟರ್ನೋವರ್ ಲೆಕ್ಕಹಾಕಿ. ಫಲಿತಾಂಶದಲ್ಲಿ ಈಗಾಗಲೇ ನೆಟ್ ಮಾಡಿರದಿದ್ದರೆ ಆಪ್ಷನ್ ಪ್ರೀಮಿಯಂ ಅನ್ನು ಸಹ ಸೇರಿಸಿ. ಸೆಕ್ಷನ್ 44AB ನಿಯಮಗಳ ಅಡಿಯಲ್ಲಿ ನಿಮ್ಮ ಲಾಭ ಮತ್ತು ಟರ್ನೋವರ್ ಪರಿಶೀಲಿಸಿ ಆಡಿಟ್ ಅಗತ್ಯವಿದೆಯೇ ಎಂದು ನಿರ್ಧರಿಸಿ. ಆಸ್ತಿಗಳ ಸವೆಕಳಿ (Depreciation), ಹೊಸದಾಗಿ ಖರೀದಿಸಿದ ಹಾಗೂ ಮಾರಾಟ ಮಾಡಿದ ವಿವರಗಳನ್ನು ಪರಿಶೀಲಿಸಿ. ಹಾಗೆಯೇ ಪಾಲುದಾರರ ಸಂಭಾವನೆಯನ್ನು ಪಾರ್ಟ್‌ನರ್‌ಶಿಪ್ ಡೀಡ್ ಹಾಗೂ ಗರಿಷ್ಠ ಮಿತಿಗಳಿಗೆ ತಕ್ಕಂತೆ ಪರಿಶೀಲಿಸಿ.

ಫಾರ್ಮ್ 3CD ಅಪ್‌ಲೋಡ್ ಮಾಡುವ ಮೊದಲು ಟ್ರಯಲ್ ಬ್ಯಾಲೆನ್ಸ್ ಅನ್ನು ಲೆಡ್ಜರ್ ಮತ್ತು ಬ್ಯಾಂಕ್ ರಿಕನ್ಸಿಲಿಯೇಶನ್ ಜೊತೆ ಮ್ಯಾಚ್ ಮಾಡಿ. GSTR-3B ಮತ್ತು ಸೇಲ್ಸ್ ರಿಜಿಸ್ಟರ್ ತಾಳೆ ನೋಡುವುದರ ಜೊತೆಗೆ, ಬರಬೇಕಾದ TDS ವಿವರಗಳನ್ನು ಸರಿಯಾಗಿ ಪರಿಶೀಲಿಸಿ. ಫಿಕ್ಸ್ಡ್ ಅಸೆಟ್ ರಿಜಿಸ್ಟರ್ ಅನ್ನು ಡೆಪ್ರಿಸಿಯೇಷನ್ ಷೆಡ್ಯೂಲ್ ಜೊತೆ ಕ್ರಾಸ್ ಚೆಕ್ ಮಾಡಿ. ಪ್ರಿಸಂಪ್ಟಿವ್ ಟ್ಯಾಕ್ಸ್ (ಪೂರ್ವಭಾವಿ ತೆರಿಗೆ) ಆಯ್ಕೆ ಮಾಡಿಕೊಂಡಿದ್ದರೆ, ನಗದು ಮತ್ತು ಬ್ಯಾಂಕ್ ವ್ಯವಹಾರಗಳ ವಿವರಗಳನ್ನು ಇಟ್ಟುಕೊಳ್ಳಿ ಹಾಗೂ ನೀವು ಘೋಷಿಸಿದ ಲಾಭದ ಪ್ರಮಾಣ ಸರಿಯಾಗಿದೆ ಎಂಬುದಕ್ಕೆ ಸಮರ್ಥನೀಯ ಕಾರಣಗಳನ್ನು ಸಿದ್ಧವಾಗಿಡಿ.

ನವೆಂಬರ್ 21ರ ಐಟಿಆರ್ ಗಡುವು: TDS/TCS, GST ಮತ್ತು ELSS/NPS ದಾಖಲೆಗಳು

TDS ಮತ್ತು TCS ಕ್ರೆಡಿಟ್‌ಗಳನ್ನು ಫಾರ್ಮ್ 26AS ಜೊತೆ ಮ್ಯಾಚ್ ಮಾಡಿ ಹಾಗೂ ಪರೋಕ್ಷ ತೆರಿಗೆ (Indirect tax) ಲೆಡ್ಜರ್‌ಗಳನ್ನು ಕಂಪನಿ ಅಕೌಂಟ್ಸ್‌ಗೆ ತಾಳೆ ನೋಡಿ. ELSS ಮತ್ತು ಎನ್‌ಪಿಎಸ್ (NPS) ಹೂಡಿಕೆಗಳ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಸೆಕ್ಷನ್ 80CCD(1B) ಅಡಿಯಲ್ಲಿ ಪ್ರತ್ಯೇಕ ರಶೀದಿ ಅಥವಾ ಸ್ಟೇಟ್‌ಮೆಂಟ್ ಇರಲಿ. ಇನ್ನು ಹೆಚ್‌ಆರ್‌ಎ (HRA) ಕ್ಲೈಮ್ ಮಾಡಲು ಮನೆ ಬಾಡಿಗೆ ಒಪ್ಪಂದ ಮತ್ತು ಪ್ರತಿ ತಿಂಗಳ ಬಾಡಿಗೆ ರಶೀದಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

ಕೊನೆ ವಾರದಲ್ಲಿ ಐಟಿಆರ್ ಸಲ್ಲಿಸುವಾಗ ಎದುರಾಗುವ ಪೋರ್ಟಲ್ ದೋಷಗಳಿಗೆ 10 ಹಂತದ ಪರಿಹಾರ

ಐಟಿಆರ್ ಅಪ್‌ಲೋಡ್ ಮಾಡುವ ಮುನ್ನ ನವೀಕರಿಸಿದ ಆಫ್‌ಲೈನ್ ಯುಟಿಲಿಟಿ ಮತ್ತು ಪೋರ್ಟಲ್‌ನ JSON ವ್ಯಾಲಿಡೇಟರ್ ಬಳಸಿ. ಪೋರ್ಟಲ್ ಸಮಸ್ಯೆಗೆ ತ್ವರಿತ ಪರಿಹಾರಗಳು: AIS ಪ್ರೀಫಿಲ್ ರಿಫ್ರೆಶ್ ಮಾಡಿ; ಪ್ರೀಫಿಲ್ಡ್ JSON ಅನ್ನು ಮರು-ಜನರೇಟ್ ಮಾಡಿ; ಬ್ಯಾಂಕ್ ಖಾತೆಯನ್ನು ಪ್ರಿ-ವ್ಯಾಲಿಡೇಟ್ ಮಾಡಿ; emsigner ನವೀಕರಿಸಿ; ಡಿಸಿಎಸ್‌ (DSC) ಅನ್ನು ಮತ್ತೊಮ್ಮೆ ನೋಂದಾಯಿಸಿ. ಜೊತೆಗೆ: ಸರಿಯಾದ DIN ಮತ್ತು ದಿನಾಂಕ ನಮೂದಿಸಿ; 26AS ನ TDS ತಾಳೆ ನೋಡಿ; ಸರಿಯಾದ IFSC ಕೋಡ್ ನೀಡಿ; ಅಟ್ಯಾಚ್‌ಮೆಂಟ್‌ಗಳ ಫೈಲ್ ಸೈಸ್ ಕಡಿತಗೊಳಿಸಿ; ಹಾಗೂ ಆದಷ್ಟು ಬೇಗ ಇ-ವೆರಿಫೈ (e-verify) ಪೂರ್ಣಗೊಳಿಸಿ.

ಈ ಪ್ರಕ್ರಿಯೆಗೆ ಎರಡು ಪ್ರಮುಖ ಗಡುವುಗಳನ್ನು ವಿಧಿಸಿಕೊಳ್ಳಿ: ಅಕ್ಟೋಬರ್ 18ರ ವೇಳೆಗೆ ಆಡಿಟ್ ಲೆಕ್ಕಾಚಾರಗಳನ್ನು ಪೂರ್ಣಗೊಳಿಸಿ (ಫ್ರೀಜ್ ಮಾಡಿ), ಮತ್ತು ಮುಂಚಿತವಾಗಿಯೇ ಐಟಿಆರ್ ಸಲ್ಲಿಸಲು ಸಮಯ ನಿಗದಿಪಡಿಸಿ. ಅನುಮೋದನೆಗಳು ಮತ್ತು ಡಿಎಸ್‌ಸಿ (DSC) ಸಂಬಂಧಿತ ಕೆಲಸಗಳಿಗಾಗಿ ಪಾಲುದಾರರನ್ನು ಸಂಪರ್ಕದಲ್ಲಿಟ್ಟುಕೊಳ್ಳಿ. ಕೊನೆ ಗಳಿಗೆಯ ಧಾವಂತವಿಲ್ಲದೆ ಮುಂಚಿತವಾಗಿ ಫೈಲ್ ಮಾಡುವುದರಿಂದ ಪೋರ್ಟಲ್ ತಾಂತ್ರಿಕ ಸಮಸ್ಯೆಗಳಿಂದ ಪಾರಾಗಬಹುದು ಹಾಗೂ ರಿಫಂಡ್ ವಿಳಂಬವಾಗುವುದನ್ನು ತಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+