ಪಿಂಚಣಿದಾರರೇ ಗಮನಿಸಿ: ನವೆಂಬರ್ 30ರೊಳಗೆ ಜೀವನ್ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತ!

ಇಂದಿನಿಂದ (ನವೆಂಬರ್ 1) ನವೆಂಬರ್ 30 ರವರೆಗೆ ಪಿಂಚಣಿದಾರರು ತಮ್ಮ ಜೀವನ್ ಪ್ರಮಾಣ ಪತ್ರ (Life Certificate) ಸಲ್ಲಿಸುವುದು ಕಡ್ಡಾಯವಾಗಿದೆ. ಪಿಂಚಣಿ ಹಣ ಯಾವುದೇ ಅಡೆತಡೆಯಿಲ್ಲದೆ ಖಾತೆಗೆ ಬರಲು ಕೇಂದ್ರ ಸರ್ಕಾರಿ ಮತ್ತು ಬ್ಯಾಂಕ್ ಪಿಂಚಣಿದಾರರಿಗೆ ಈ ವಾರ್ಷಿಕ ಪರಿಶೀಲನೆ ಅತ್ಯಗತ್ಯ. 80 ವರ್ಷಕ್ಕೂ ಮೇಲ್ಪಟ್ಟ ಹಿರಿಯರಿಗೆ ಈ ಬಾರಿಯ ಅಕ್ಟೋಬರ್ 1 ರಿಂದಲೇ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ನೀವು 'ಜೀವನ್ ಪ್ರಮಾಣ್' ಆ್ಯಪ್ ಮೂಲಕ ಡಿಜಿಟಲ್ ಆಗಿ ಅಥವಾ ಬ್ಯಾಂಕ್, ಅಂಚೆ ಕಚೇರಿ ಮತ್ತು ಸಿಎಸ್‌ಸಿ (CSC) ಕೇಂದ್ರಗಳಿಗೆ ತೆರಳಿ ಪ್ರಮಾಣಪತ್ರ ಸಲ್ಲಿಸಬಹುದು. ಸಲ್ಲಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಈ ಇಡೀ ತಿಂಗಳು ದೇಶಾದ್ಯಂತ ವಿಶೇಷ ಶಿಬಿರಗಳನ್ನು ಸಹ ನಡೆಸಲಾಗುತ್ತಿದೆ.

ಮೊಬೈಲ್ ಫೋನ್ ಮೂಲಕ ಪ್ರಮಾಣ ಪತ್ರ ಸಲ್ಲಿಸಲು 'ಫೇಸ್ ಅಥೆಂಟಿಕೇಶನ್' (Face Authentication) ಅತ್ಯಂತ ವೇಗದ ಮಾರ್ಗವಾಗಿದೆ. ಇದಕ್ಕಾಗಿ ಮೊದಲು ನಿಮ್ಮ ಫೋನ್‌ನಲ್ಲಿ Aadhaar Face RD ಆ್ಯಪ್ ಡೌನ್‌ಲೋಡ್ ಮಾಡಿ, ನಂತರ ಜೀವನ್ ಪ್ರಮಾಣ್ ಅಥವಾ ಉಮಾಂಗ್ (UMANG) ಆ್ಯಪ್ ಓಪನ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಪಿಪಿಒ (PPO) ಸಂಖ್ಯೆ, ಪಿಂಚಣಿ ಬ್ಯಾಂಕ್ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಫೇಸ್ ಸ್ಕ್ಯಾನ್ ಮೂಲಕ ವೆರಿಫೈ ಮಾಡಿ. ಪರಿಶೀಲನೆ ಪೂರ್ಣಗೊಂಡ ನಂತರ ಸಿಸ್ಟಮ್ 'ಪ್ರಮಾಣ್ ಐಡಿ' (Pramaan ID) ಜನರೇಟ್ ಮಾಡುತ್ತದೆ ಮತ್ತು ನಿಮ್ಮ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಪಿಂಚಣಿ ವಿತರಣಾ ಸಂಸ್ಥೆಗೆ ರವಾನಿಸುತ್ತದೆ. ಮುಂದೆ ಇದೇ ಪ್ರಮಾಣ್ ಐಡಿ ಬಳಸಿ ನೀವು ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಅದರ ಸ್ಟೇಟಸ್ ಚೆಕ್ ಮಾಡಬಹುದು.

ನವೆಂಬರ್ 30ರೊಳಗೆ ಜೀವನ್ ಪ್ರಮಾಣ ಪತ್ರ ಸಲ್ಲಿಸಿ

ಜೀವನ್ ಪ್ರಮಾಣ ಪತ್ರ: ಮನೆ ಬಾಗಿಲಿಗೆ ಸೇವೆ ಮತ್ತು ಬ್ಯಾಂಕ್/ಸಿಎಸ್‌ಸಿ ಆಯ್ಕೆಗಳು

ಮನೆಯಲ್ಲಿಯೇ ಕುಳಿತು ಪ್ರಮಾಣ ಪತ್ರ ಸಲ್ಲಿಸಬೇಕೇ? ಹಾಗಿದ್ದರೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ (IPPB) 'ಡೋರ್‌ಸ್ಟೆಪ್ ಡಿಜಿಟಲ್ ಲೈಫ್ ಸರ್ಟಿಫಿಕೇಟ್' ಸೇವೆಗೆ 155299 ಸಂಖ್ಯೆಗೆ ಕರೆ ಮಾಡಿ ಅಥವಾ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ. ಈ ಸೇವೆಗೆ ಸಾಮಾನ್ಯವಾಗಿ ₹70 ಶುಲ್ಕ ಇರುತ್ತದೆ. ಆದರೆ ಕೆಲವು ವಲಯಗಳಲ್ಲಿ ಅಥವಾ ವಿಶೇಷ ಚಾಲನೆಗಳ ಸಮಯದಲ್ಲಿ ಯಾವುದೇ ಶುಲ್ಕವಿರುವುದಿಲ್ಲ. ಇಪಿಎಫ್‌ಒ (EPFO) ಕೂಡ ಕೆಲವು ಆಯ್ಕೆಮಾಡಿದ ಪಿಂಚಣಿದಾರರಿಗೆ ಉಚಿತವಾಗಿ ಅಂಚೆಯಣ್ಣಂದಿರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದೆ. ಇನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗ್ರಾಹಕರು 'PSB Alliance Doorstep Banking' ಸೇವೆ ಪಡೆಯಲು 9152220220 ಸಂಖ್ಯೆಗೆ ಕರೆ ಮಾಡಬಹುದು. ಇದರ ಜೊತೆಗೆ, DoPPW ಸಂಸ್ಥೆಯು ನವೆಂಬರ್ 1 ರಿಂದ 30 ರವರೆಗೆ ದೇಶದ ಸುಮಾರು 2,000 ಸ್ಥಳಗಳಲ್ಲಿ ಬೃಹತ್ ಶಿಬಿರಗಳನ್ನು ಆಯೋಜಿಸುತ್ತಿದೆ.

ಜೀವನ್ ಪ್ರಮಾಣ ಪತ್ರ: ಅಗತ್ಯ ದಾಖಲೆಗಳು, ಸಮಸ್ಯೆಗಳು ಮತ್ತು ತಕ್ಷಣದ ಪರಿಹಾರ

ಪ್ರಮಾಣ ಪತ್ರ ಸಲ್ಲಿಸುವ ಮುನ್ನ ಆಧಾರ್ ಸಂಖ್ಯೆ, ಪಿಪಿಒ (PPO) ಸಂಖ್ಯೆ, ಪಿಂಚಣಿ ಬ್ಯಾಂಕ್ ವಿವರಗಳು ಮತ್ತು ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಿ. ತಪ್ಪು ವಿವರಗಳು ಅಥವಾ ಬಯೋಮೆಟ್ರಿಕ್/ಫೇಸ್ ಸ್ಕ್ಯಾನ್ ಸರಿಯಾಗಿ ಆಗದಿದ್ದರೆ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಫೇಸ್ ಸ್ಕ್ಯಾನ್ ಮಾಡುವಾಗ ಮುಖಕ್ಕೆ ಬೆಳಕು ಸರಿಯಾಗಿ ಬೀಳುವಂತೆ ನೋಡಿಕೊಳ್ಳಿ, ಸ್ಥಿರವಾಗಿರಿ, ಕಣ್ಣು ಮಿಟುಕಿಸುವ ಸೂಚನೆಗಳನ್ನು ಅನುಸರಿಸಿ. ನಿಮ್ಮ ಬಯೋಮೆಟ್ರಿಕ್ ಲಾಕ್ ಆಗಿದ್ದರೆ ಅದನ್ನು ಅನ್‌ಲಾಕ್ ಮಾಡಿ. ಸ್ಕ್ಯಾನ್ ಮಾಡುವ ಮುನ್ನ Aadhaar Face RD ಆ್ಯಪ್ ಅಪ್‌ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಯಾವುದೇ ನೆರವಿಗಾಗಿ UIDAI ಉಚಿತ ಸಂಖ್ಯೆ 1947 ಗೆ ಕರೆ ಮಾಡಬಹುದು ಅಥವಾ [email protected] ಇಮೇಲ್ ಮೂಲಕ ಸಂಪರ್ಕಿಸಬಹುದು.

ಜೀವನ್ ಪ್ರಮಾಣ ಪತ್ರ: ಡೆಡ್‌ಲೈನ್ ತಪ್ಪಿದರೆ ಏನಾಗುತ್ತದೆ?

ಒಂದು ವೇಳೆ ನವೆಂಬರ್ 30 ರ ಡೆಡ್‌ಲೈನ್ ತಪ್ಪಿದರೆ ಏನಾಗುತ್ತದೆ? ಪ್ರಮಾಣ ಪತ್ರ ಸಿಗುವವರೆಗೆ ಬ್ಯಾಂಕ್‌ಗಳು ಅಥವಾ ಇಪಿಎಫ್‌ಒ ನಿಮ್ಮ ಪಿಂಚಣಿಯನ್ನು ತಡೆಹಿಡಿಯಬಹುದು. ನಂತರ ನೀವು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅಥವಾ ಬ್ಯಾಂಕ್ ಶಾಖೆಗೆ ತೆರಳಿ ಭೌತಿಕ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಪರಿಶೀಲನೆ ಪೂರ್ಣಗೊಂಡ ತಕ್ಷಣ ಪಿಂಚಣಿ ಮತ್ತೆ ಪ್ರಾರಂಭವಾಗುತ್ತದೆ ಮತ್ತು ನಿಯಮಗಳ ಪ್ರಕಾರ ಬಾಕಿ ಉಳಿದ ತಿಂಗಳ ಹಣವೂ ಖಾತೆಗೆ ಜಮೆಯಾಗುತ್ತದೆ. ನಿಮ್ಮ ಸರ್ಟಿಫಿಕೇಟ್ ಸಲ್ಲಿಕೆಯಾಗಿರುವುದನ್ನು 'ಜೀವನ್ ಪ್ರಮಾಣ್' ಅಥವಾ EPFO ಪೋರ್ಟಲ್‌ನಲ್ಲಿ 'ಪ್ರಮಾಣ್ ಐಡಿ' ಬಳಸಿ ಟ್ರ್ಯಾಕ್ ಮಾಡಬಹುದು. ಯಾವುದೇ ಸಮಸ್ಯೆ ಬಗೆಹರಿಯದಿದ್ದರೆ ನಿಮ್ಮ ಬ್ಯಾಂಕ್‌ನ CPPC ಅಥವಾ ಪ್ರಾದೇಶಿಕ ಕಚೇರಿಯನ್ನು (Regional Office) ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+