ಟೆಲಿಕಾಂ ಕಂಪನಿಗಳಲ್ಲಿ (Telecom Company) ಭಾರೀ ಬೇಡಿಕೆಯಲ್ಲಿರುವ ಕಂಪನಿಯೆಂದರೆ ಅದು ಜಿಯೋ ಕೂಡಾ ಒಂದು. ಅಲ್ಲದೇ ಅತೀ ಹೆಚ್ಚು ಗ್ರಾಹಕರು ಜಿಯೋ ಸೇವೆಯನ್ನು ಇಷ್ಟ ಪಡುತ್ತಾರೆ. ಇನ್ನು ರಿಲಯನ್ಸ್ ಜಿಯೋ ಕೂಡಾ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲಿ, ವಿಶೇಷ ಆಫರ್‌ಗಳನ್ನು (Recharge Offer) ಸಹ ಪರಿಚಯಿಸುತ್ತಿರುತ್ತದೆ. ಈಗಾಗಲೇ ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದೆ. ಈ ಸಂದರ್ಭದಲ್ಲಿ ಪ್ರಮುಖ ಕಂಪನಿಗಳು ವಿಶೇಷ ಕೊಡುಗೆಗಳನ್ನು ನೀಡುತ್ತಿರುತ್ತದೆ. ಇದೀಗ ಜಿಯೋ (Jio) ಗ್ರಾಹಕರಿಗೆ ಬಂಪರ್ ಸುದ್ದಿಯೊಂದು ಇಲ್ಲಿದೆ.

ಹೌದು, ಇದೀಗ ರಿಲಯನ್ಸ್ ಜಿಯೋ ತನ್ನ ಹೊಸ "ಹ್ಯಾಪಿ ನ್ಯೂ ಇಯರ್ 2026" ಪ್ರಿಪೇಯ್ಡ್ ಪ್ಲಾನ್‌ಗಳನ್ನು ಗ್ರಾಹಕರಿಗಾಗಿ ಪರಿಚಯಿಸಿದೆ. ಈ ಹೊಸ ಯೋಜನೆಗಳು ವಾರ್ಷಿಕ, ಮಾಸಿಕ ಮತ್ತು ಆಡ್-ಆನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಬಳಕೆದಾರರಿಗೆ ಡೇಟಾ, ಒಟಿಟಿ ಚಂದಾದಾರಿಕೆಗಳು ಮತ್ತು ಗೂಗಲ್ ಜೆಮಿನಿ ಪ್ರೋ ಎಐನಂತಹ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಗಳನ್ನು ಡಿಸೆಂಬರ್ 14, 2025 ರಂದು ಬಿಡುಗಡೆ ಮಾಡಲಾಗಿದ್ದು, ಜಿಯೋ ಆಪ್‌ಗಳಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಜಿಯೋ ಈ ಹೊಸ ಪೋರ್ಟ್‌ಫೋಲಿಯೊದೊಂದಿಗೆ ಉತ್ತಮ ಸಂಪರ್ಕ, ಮನರಂಜನಾ ಆಪ್‌ಗಳು ಮತ್ತು ಎಐ-ಚಾಲಿತ ಸೇವೆಗಳನ್ನು ಬಯಸುವ ಬಳಕೆದಾರರನ್ನು ಮತ್ತಷ್ಟು ಆಕರ್ಷಿಸುವ ಗುರಿಯನ್ನು ಹೊಂದಿದೆ. ರಿಚಾರ್ಜ್ ದರಗಳು 103 ರೂಪಾಯಿಗಳಿಂದ ಆರಂಭವಾಗುತ್ತವೆ. ಈ ಹೊಸ ಯೋಜನೆಗಳಲ್ಲಿ ಗೂಗಲ್‌ನೊಂದಿಗೆ ಜಿಯೋ ಮಾಡಿಕೊಂಡಿರುವ ಸಹಭಾಗಿತ್ವದ ಮೂಲಕ ಜೆಮಿನಿ ಪ್ರೋ ಎಐ ಸೇವೆಯನ್ನು ನೀಡುವುದು ಇದರ ಪ್ರಮುಖ ಆಕರ್ಷಣೆಯಾಗಿದೆ.
3,599 ರೂ. ರೀಚಾರ್ಜ್ ಯೋಜನೆ:
"ಹೀರೋ ವಾರ್ಷಿಕ ರಿಚಾರ್ಜ್" ಯೋಜನೆಯ ಬೆಲೆ ₹3,599 ಆಗಿದ್ದು, ಇದು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಪ್ರತಿದಿನ 2.5GB ಡೇಟಾವನ್ನು ಇಲ್ಲಿ ಪಡೆಯಬಹುದು. ಇದರ ಜೊತೆಗೆ, ಲಭ್ಯವಿರುವ ಪ್ರದೇಶಗಳಲ್ಲಿ ಅನ್ಲಿಮಿಟೆಡ್ 5G ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನಗಳನ್ನು ಇದರಲ್ಲಿ ನೀವು ಪಡೆಯಬಹುದು..
ಅಷ್ಟೆಲ್ಲಾ ಪ್ರಯೋಜನಗಳು ಮಾತ್ರವಲ್ಲದೇ, ಈ ಯೋಜನೆಯು 18 ತಿಂಗಳ ಗೂಗಲ್ ಜೆಮಿನಿ ಪ್ರೊ ಸಬ್‌ಸ್ಕ್ರಿಪ್ಷನ್ ಅನ್ನೂ ಸಹ ನೀಡುತ್ತದೆ.
500 ರೂ.ನ ರೀಚಾರ್ಜ್ ಪ್ಲಾನ್:
"ಸೂಪರ್ ಸೆಲೆಬ್ರೇಷನ್ ಮಾಸಿಕ ಯೋಜನೆ" ಎಂದು ಹೆಸರಿಸಲಾಗಿುವ ₹500 ರೂ.ನ ರೀಚಾರ್ಜ್ ಯೋಜನೆ ಇದಾಗಿದೆ. ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ, ಪ್ರತಿದಿನ 2GB ಡೇಟಾ, ಅನಿಯಮಿತ 5G ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನಗಳು ಸಹ ನೀಡುತ್ತದೆ.
ಈ ಮಾಸಿಕ ಯೋಜನೆಯು ಹಲವಾರು ಒಟಿಟಿ ಪ್ಲಾಟ್‌ಫಾಮ್‌ಗಳಿಗೆ ಪ್ರವೇಶವನ್ನು ಸಹ ನೀಡುತ್ತದೆ. ವಿಶೇಷವಗಿ YouTube Premium, JioHotstar, Amazon Prime Video Mobile Edition, Sony LIV, ZEE5, Lionsgate Play, Discovery+, Sun NXT, Hoichoi, FanCode, Chaupal, Planet Marathi ಮತ್ತು Kancha Lanka ಇವೇ ಮೊದಲಾದ ಸೌಲಭ್ಯಗಳು ಈ ಪ್ಯಾಕ್‌ನಲ್ಲಿ ಸೇರಿವೆ. ವಾರ್ಷಿಕ ಯೋಜನೆಯಂತೆ, ಇದರಲ್ಲಿಯೂ 18 ತಿಂಗಳ ಗೂಗಲ್ ಜೆಮಿನಿ ಪ್ರೋ ಚಂದಾದಾರಿಕೆ ನೀಡಲಾಗುತ್ತದೆ.
103 ರೂ.ರೀಚಾರ್ಜ್ ಪ್ಲಾನ್:
"ಫ್ಲೆಕ್ಸಿ ಪ್ಯಾಕ್ ಆಡ್-ಆನ್" ಯೋಜನೆಯೆ ಬೆಲೆ ₹103 ರೂ. ಆಗಿದ್ದು, 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದು ಒಟ್ಟಾರೆಯಾಗಿ 5GB ಡೇಟಾ ಪ್ರಯೋಜನವನ್ನು ನೀಡುತ್ತದೆ. ಅಲ್ಲದೇ ಕೆಲವೊಂದು ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶದ ಅವಕಾಶವನ್ನು ನೀಡುತ್ತದೆ.
ಇನ್ನು ಈ "ಹ್ಯಾಪಿ ನ್ಯೂ ಇಯರ್ 2026" ಪ್ರಿಪೇಯ್ಡ್ ರೀಚಾರ್ಜ್ ಮಾಡುವವರು ಜಿಯೋದ ಅಧಿಕೃತ ವೆಬ್‌ಸೈಟ್, MyJio ಅಪ್ಲಿಕೇಶನ್ ಮತ್ತು ಭಾರತದಾದ್ಯಂತ ಅಧಿಕೃತ ರಿಟೇಲ್ ಮಳಿಗೆಗಳಲ್ಲಿ ಬಳಸಿಕೊಳ್ಳಬಹುದು.


Click it and Unblock the Notifications