ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯೆಂದು ಗುರುತಿಸಿಕೊಂಡಿರುವ ಜಿಯೋ ಟೆಲಿಕಾಂ ಕಂಪನಿ (Jio Telecom Company), ರೀಚಾರ್ಜ್ ಆಫರ್ಸ್ ಮೂಲಕ ಬಹಳಷ್ಟು ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಆರಂಭದಿಂದಲೂ ಉಚಿತ ಉಚಿತ ಎಂಬ ಆಫರ್‌ಗಳನ್ನು (Free Offer) ನೀಡುತ್ತಾ ಬಂದಿರುವ ರಿಲಯನ್ಸ್ ಜಿಯೋ ಲಕ್ಷಗಟ್ಟಲೆ ಗ್ರಾಹಕರನ್ನು ಹೊಂದಿದೆ. ಇದೀಗ ತನ್ನ ಗ್ರಾಹಕರಿಗೆ ಜಿಯೋ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ.

ಹೌದು, ಲಕ್ಷಗಟ್ಟಲೆ ಜನರ ಫೇವರೀಟ್ ಜಿಯೋ, ಇದೀಗ ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಇತ್ತೀಚೆಗೆ ಗೂಗಲ್‌ನ ಜೆಮಿನಿ ಎಐ ಪ್ರೊ ಯೋಜನೆಯನ್ನು ಸಹ ಜಿಯೋ ಲಾಂಚ್ ಮಾಡಿದೆ. ಇದೀಗ ಈ ಮಧ್ಯೆ ಮತ್ತೊಂದು ಆಕರ್ಷಕ ಕೊಡುಗೆಯೊಂದನ್ನು ಗ್ರಾಹಕರಿಗಾಗಿ ಘೋಷಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಜಿಯೋ ಗ್ರಾಹಕರಿಗೆ ಬಂಪರ್!
ಜಿಯೋ 5ಜಿ ಗ್ರಾಹಕರು ಇನ್ನು ಮುಂದೆ ಗೂಗಲ್‌ನಿಂದ ಹೊಸ ಜೆಮಿನಿ 3 ಎಐ ಮಾದರಿಯನ್ನು 18 ತಿಂಗಳ ಕಾಲ ಉಚಿತವಾಗಿ ಯೂಸ್ ಮಾಡಬಹುದು. ಈ ಸೇವೆ ಭಾರತದ ಜಿಯೋ 5ಜಿ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಜೆಮಿನಿ ಆಫರ್ ಜಿಯೋ 5ಜಿ ಅನ್ಲಿಮಿಟೆಡ್ ಪ್ಲಾನ್ ರೀಚಾರ್ಜ್ ಮಾಡುವವರಿಗೆ ಮಾತ್ರ ಬರಲಿದೆ. ಆದ್ದರಿಂದ ಯಾರೆಲ್ಲಾ ಜಿಯೋನಲ್ಲಿ 5ಜಿ ಅನ್ಲಿಮಿಟೆಡ್ ರೀಚಾರ್ಜ್ ಮಾಡುತ್ತಾರೋ, ಅವರಿಗೆ ಇದು ಲಭ್ಯವಾಗಲಿದೆ.
ಜಿಯೋ ಬಳಕೆದಾರರು ಇದೀಗ ಉಚಿತ ಆಫರ್ ಮೂಲಕ ಬಳಕೆದಾರರು ಜೆಮಿನಿ 3 ಎಐ ಮಾದರಿಯ ಸಬ್‌ಸ್ಕ್ರಿಪ್ಷನ್ ಪಡೆಯಬಹುದು. ಮೊದಲಿಗೆ, ಜಿಯೋ 18 ರಿಂದ 25 ವರ್ಷ ವಯಸ್ಸಿನವರಿಗೆ ಮಾತ್ರ ಈ ಎಐ ಬಳಕೆಗೆ ಅನುಮತಿ ನೀಡುತ್ತಿತ್ತು. ಆದರೆ ಈಗ ಯಾವುದೇ ವಯಸ್ಸಿನ ಜಿಯೋ 5ಜಿ ಅನ್ಲಿಮಿಟೆಡ್ ಪ್ಲಾನ್ ಗ್ರಾಹಕರು ಗೂಗಲ್‌ನ ಹೊಸ ಎಐ ಮಾದರಿ ಮತ್ತು ಜೆಮಿನಿ ಎಐ ಪ್ರೊ ಪ್ರಯೋಜನಗಳನ್ನು ಪಡೆಯಬಹುದು.
ಈ ಆಫರ್ ಪಡೆಯೋದು ಹೇಗೆ?
ಗ್ರಾಹಕರು ಜಿಯೋ ಜೆಮಿನಿ ಎಐ ಪ್ರೊ ಆಫರ್ ಪಡೆಯಲು, MyJio ಅಪ್ಲಿಕೇಶನ್‌ನಲ್ಲಿ 'ಕ್ಲೈಮ್ ನೌ' ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ₹349 ಅಥವಾ ಅದಕ್ಕಿಂತ ಹೆಚ್ಚಿನ ಜಿಯೋ 5ಜಿ ಪ್ಲಾನ್ ರೀಚಾರ್ಜ್ ಮಾಡಿದವರಿಗೆ ಆಟೋಮೆಟಿಕ್ ಆಗಿ ಇದು ಸಿಗಲಿದೆ. ಅಂದರೆ ರೀಚಾರ್ಜ್ ಮಾಡಿದ ಮರುಕ್ಷಣವೇ 18 ತಿಂಗಳ ಚಂದಾದಾರಿಕೆ ತಕ್ಷಣವೇ ಪ್ರಾರಂಭವಾಗುತ್ತದೆ.
ಜಿಯೋ 5ಜಿ ಬಳಕೆದಾರರಿಗೆ 18 ತಿಂಗಳ ಜೆಮಿನಿ ಎಐ ಪ್ರೊ ಉಚಿತ ಆಫರ್ ನೀಡುತ್ತಿದ್ದು, ಇದರ ನಿಜವಾದ ಮೌಲ್ಯ ಭಾರತದಲ್ಲಿ ಸುಮಾರು ₹35,100 ರೂ. ಆಗಿದೆ. ಜೆಮಿನಿ ಎಐ ಪ್ರೊ ಆಫರ್ ಬಳಸುವ ಮೂಲಕ ಗ್ರಾಹಕರು ಜೆಮಿನಿ ಅಪ್ಲಿಕೇಶನ್‌ನಲ್ಲಿ ಜೆಮಿನಿ 3, ನ್ಯಾನೋ ಬನಾನಾ, ಮತ್ತು ವಿಯೋ 3.1 ಮಾದರಿಗಳನ್ನು ಬಳಸಿಕೊಂಡು ಚಿತ್ರಗಳು ಮತ್ತು ವೀಡಿಯೊಗಳನ್ನು ಕ್ರಿಯೇಟ್ ಮಾಡಬಹುದು. ಅಲ್ಲದೇ 2TB ಕ್ಲೌಡ್ ಸ್ಟೋರೇಜ್ ಕೂಡಾ ಸಿಗಲಿದೆ. ಈ ಕ್ಲೌಡ್ ಸ್ಟೋರೇಜ್ ಮೂಲಕ ಗೂಗಲ್ ಫೋಟೋಗಳು, ಜಿಮೇಲ್, ಡ್ರೈವ್, ಮತ್ತು WhatsApp ಚಾಟ್ ಬ್ಯಾಕಪ್‌ಗಳನ್ನೂ ಪಡೆಯಬಹುದು.
ಜೆಮಿನಿ ಎಐ ಪ್ರೊ ಮಾತ್ರವಲ್ಲದೆ, ChatGPT ಮತ್ತು Perplexity ನಂತಹ ಪ್ಲಾಟ್‌ಫಾರ್ಮ್‌ಗಳು ಸಹ ಉಚಿತವಾಗಿ ಪಡೆಯಬಹುದಾಗಿದೆ. OpenAI ತನ್ನ ChatGPT Go ಅನ್ನು 12 ತಿಂಗಳ ಕಾಲ ಉಚಿತವಾಗಿ ಬಳಸುತ್ತದೆ. ಹಾಗೆಯೇ ಏರ್‌ಟೆಲ್ ತನ್ನ ಬಳಕೆದಾರರಿಗೆ Perplexity ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಆಫರ್ ಮೂಲಕ, ಬಳಕೆದಾರರು ಇನ್ಮೇಲೆ ಎಐ ಪ್ಲಾಟ್‌ಫಾರ್ಮ್‌ಗಳನ್ನು ಉಚಿತವಾಗಿ ಬಳಸಬಹುದು.


Click it and Unblock the Notifications