ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲಿ (Bank, Post Office) ಹೂಡಿಕೆದಾರರಿಗಾಗಿ ಹಲವಾರು ಹೂಡಿಕೆ ಯೋಜನೆಗಳಿವೆ. ಆದರೆ ಅದರಲ್ಲಿ ಕೆಲವು ಯೋಜನೆಗಳು ಉತ್ತಮ ಬಡ್ಡಿಯನ್ನು ನೀಡಿದ್ರೆ, ಇನ್ನೂ ಕೆಲವು ಸ್ವಲ್ಪ ಪ್ರಮಾಣದಲ್ಲಿ ಬಡ್ಡಿದರವನ್ನು ನೀಡುತ್ತದೆ. ಅದಕ್ಕಾಗಿ ಹೆಚ್ಚಿನ ಹೂಡಿಕೆದಾರರು ಸದಾ ಯಾವುದು ಬೆಸ್ಟ್ ಯೋಜನೆಗಳು? ಎಂದು ಹುಡುಕುತ್ತಲೇ ಇರುತ್ತಾರೆ. ಇನ್ನು ಸರ್ಕಾರಿ ಬೆಂಬಲಿತ ಪೋಸ್ಟ್ ಆಫೀಸ್‌ನಲ್ಲಿ ಚಿಕ್ಕಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಹಲವಾರು ಹೂಡಿಕೆ ಯೋಜನೆಗಳಿವೆ (Investment Scheme). ಅಲ್ಲದೇ ಅವುಗಳೆಲ್ಲೂ ವರ್ಷ ಕಳೆದಂತೆ ಪಕ್ಕಾ ಆದಾಯ ನೀಡುತ್ತದೆ.

ಪೋಸ್ಟ್ ಆಫೀಸ್‌ನ ಹಲವು ಯೋಜನೆಗಳಲ್ಲಿ ಮಾಸಿಕ ಆದಾಯ ಯೋಜನೆ (POMIS) ಕೂಡಾ ಒಂದು. ಇದನ್ನು ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಖಾತೆ ಎಂದೂ ಕರೆಯಲಾಗುತ್ತದೆ. ಅಪಾಯ ಕಡಿಮೆಯಾಗಿದ್ದು, ಗ್ಯಾರಂಟಿ ಆದಾಯ ನೀಡುವ ಯೋಜನೆಗಳಲ್ಲಿ ಇದೂ ಕೂಡಾ ಒಂದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರು, ಮೊದಲಿಗೆ ಭಾರತೀಯ ನಿವಾಸಿಯಾಗಿರಬೇಕು ಮತ್ತು ಕನಿಷ್ಠ 18 ವರ್ಷ ತುಂಬಿರಬೇಕು. ಪ್ರಸ್ತುತ, ಈ ಯೋಜನೆಯು ನಿಗದಿತ ಬಡ್ಡಿದರವನ್ನು ನೀಡುತ್ತದೆ ಮತ್ತು ಇದಕ್ಕೆ ಹೂಡಿಕೆ ಒಮ್ಮೆಲೆ ಮಾಡಬೇಕಾಗುತ್ತದೆ.
ಹಾಗಿದ್ರೆ ಈ ಮಾಸಿಕ ಆದಾಯ ಯೋಜನೆಯ ಅರ್ಹತೆ, ಬಡ್ಡಿದರ, ಪಕ್ವತೆಯ ವಿವರಗಳು ಮತ್ತು ತಿಂಗಳಿಗೆ ₹9000 ಆದಾಯ ಪಡೆಯಲು ಎಷ್ಟು ಹೂಡಿಕೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. POMIS, ಅಂದರೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ, ಅಪಾಯ ಕಡಿಮೆಯಾಗಿದೆ, ಅಲ್ಲದೇ ಗ್ಯಾರಂಟಿ ಮಾಸಿಕ ಆದಾಯವನ್ನು ಬಯಸುವವರಿಗೆ ಉತ್ತಮ ಯೋಜನೆ ಎಂದು ಭಾರತದಲ್ಲಿ ಗುರುತಿಸಿಕೊಂಡಿದೆ.
ಭಾರತ ಸರ್ಕಾರದಿಂದ ಬೆಂಬಲಿತವಾಗಿರುವ ಈ ಯೋಜನೆ, ನಿವೃತ್ತಿ ಪಡೆದವರು, ಮಧ್ಯಮ ವರ್ಗದ ಕುಟುಂಬಗಳು ಮತ್ತು ಸುಲಭವಾಗಿ ಮಾಸಿಕ ಆದಾಯವನ್ನು ಬಯಸುವವರು ಆಯ್ಕೆ ಮಾಡಬಹುದು. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಪ್ರಸ್ತುತ ಬಡ್ಡಿದರವು 7.4% ಪ್ರತಿಶತದಷ್ಟಿದೆ. ಇದು ಬ್ಯಾಂಕ್ ಎಫ್‌ಡಿಗಳು ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಹೆಚ್ಚು ಆದಾಯ ಮತ್ತು ಉತ್ತಮವಾಗಿದೆ.
ಯಾರು ಅರ್ಹರು?
POMIS ಖಾತೆಯನ್ನು ಭಾರತೀಯ ಪ್ರಜೆಯಾಗಿರುವ ಯಾರೂ ಕೂಡಾ ಓಪನ್ ಮಾಡಬಹುದು.
ಗರಿಷ್ಠ ಮೂವರು ವಯಸ್ಕರ ಜಂಟಿ ಖಾತೆಯೊಂದಿಗೆ ತೆರೆಯಬಹುದು. ಅಲ್ಲದೇ ಅಪ್ರಾಪ್ತ ವಯಸ್ಕರ ಅಥವಾ ಅಸ್ವಸ್ಥ ಮನಸ್ಸಿನ ವ್ಯಕ್ತಿಯ ಪರವಾಗಿ ಪೋಷಕರು, ಅಥವಾ 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ತಮ್ಮದೇ ಹೆಸರಿನಲ್ಲಿ ಖಾತೆ ತೆರೆಯುವ ಅವಕಾಶವಿದೆ.
POMIS ನಲ್ಲಿ ಕನಿಷ್ಠ ಮತ್ತು ಗರಿಷ್ಠ ಹೂಡಿಕೆ ಎಷ್ಟು?
POMIS ಖಾತೆಯನ್ನು ತೆರೆಯಲು ಕನಿಷ್ಠ ಮೊತ್ತ ₹1000, ನಂತರ ₹1000 ಗುಣಕಗಳಲ್ಲಿ ಹೆಚ್ಚುವರಿ ಡೆಪಾಸಿಟ್ ಮಾಡುವ ಅವಕಾಶವಿದೆ. ಇನ್ನು ಒಬ್ಬ ವ್ಯಕ್ತಿ ಓಪನ್ ಮಾಡಿದ ಖಾತೆಗೆ ಗರಿಷ್ಠ ಹೂಡಿಕೆ ಮಿತಿ ₹9 ಲಕ್ಷ, ಮತ್ತು ಜಂಟಿ ಖಾತೆಗೆ ₹15 ಲಕ್ಷ ನಿಗದಿಪಡಿಸಲಾಗಿದೆ.
POMIS ನಲ್ಲಿ ತಿಂಗಳಿಗೆ ₹9000 ಗಳಿಸಲು ಎಷ್ಟು ಹೂಡಿಕೆ ಮಾಡಬೇಕು?
ಉದಾಹರಣೆಗೆ, ಮಾಸಿಕ ಆದಾಯ ಯೋಜನೆಯಲ್ಲಿ ನೀವು ₹5 ಲಕ್ಷ ಠೇವಣಿಯು ತಿಂಗಳಿಗೆ ₹3,083.33 ಆದಾಯವನ್ನು ನೀಡುತ್ತದೆ. ₹9 ಲಕ್ಷ ಹೂಡಿಕೆಯು ತಿಂಗಳಿಗೆ ₹5,550 ಆದಾಯವನ್ನು ಒದಗಿಸುತ್ತದೆ. ₹15 ಲಕ್ಷ ಹೂಡಿಕೆಯು ಪ್ರಸ್ತುತ POMIS ಬಡ್ಡಿದರದ ಆಧಾರದ ಮೇಲೆ ತಿಂಗಳಿಗೆ ₹9,250 ಮತ್ತು ವಾರ್ಷಿಕವಾಗಿ ₹1,11,000 ಆದಾಯವನ್ನು ನೀಡುತ್ತದೆ. ಆದ್ದರಿಂದ ಈ ಆದಾಯ ಐದು ವರ್ಷಗಳವರೆಗೆ ಬರುತ್ತಿರುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications