ಹೂಡಿಕೆ (Investment) ಮಾಡೋದು ಹಲವರ ಕನಸು. ಕೆಲವರು ಚಿನ್ನ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರೆ, ಇನ್ನೂ ಕೆಲವರು ಬ್ಯಾಂಕ್, ಪೋಸ್ಟ್ ಆಫೀಸ್‌ನಂತಹ ಸರ್ಕಾರಿ ಯೋಜನೆಗಳನ್ನು ಹೂಡಿಕೆ ಮಾಡುತ್ತಾರೆ. ಆದ್ರೆ ಇನ್ನೂ ಕೆಲವರು ಮಾಹಿತಿಯ ಕೊರತೆಯಿಂದಲೋ, ನಿರ್ಲಕ್ಷ್ಯದಿಂದಲೋ ಎಲ್ಲೂ ಹೂಡಿಕೆ ಮಾಡದೆ ಸುಮ್ಮನಿದ್ದುಬಿಡುತ್ತಾರೆ. ಆದ್ರೆ ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ಲಾಭ ನೀಡುವ ನೀಡುವ ಪೋಸ್ಟ್ ಆಫೀಸ್, ಬ್ಯಾಂಕ್, ಎಲ್‌ಐಸಿ (Post Office, Bank, LIC) ಹೀಗೆ ಹಲವಾರು ಪ್ಲಾನ್‌ಗಳಿವೆ. ಅದೇ ರೀತಿ ಇಂದು ನಾವು ಮಹಿಳೆಯರಿಗೆ ಸೂಕ್ತ ಎನಿಸಿರುವ ಹೂಡಿಕೆ ಯೋಜನೆ ಬಗ್ಗೆ ಹೇಳಲಿದ್ದೇವೆ.

ಭಾರತೀಯ ಜೀವ ವಿಮಾ ನಿಗಮ (LIC) ಭಾರತದ ವಿಮಾ ವಲಯದಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ದಕ್ಷ ಸೌಲಭ್ಯದಿಂದಾಗಿ ಇಂದು ಎಲ್‌ಐಸಿ ಎಲ್ಲರ ಮನೆ ಮಾತಾಗಿದೆ. ಇನ್ನು ದೇಶದ ಎಲ್ಲಾ ವರ್ಗದ ಜನರಿಗೆ ಸೂಕ್ತವಾದ ಯೋಜನೆಗಳು ಮತ್ತು ಪಾಲಿಸಿಗಳನ್ನು ಎಲ್‌ಐಸಿ ಒದಗಿಸುತ್ತದೆ. ಹೂಡಿಕೆದಾರರಿಗೆ ಖಚಿತ ಆದಾಯವನ್ನು ನೀಡುವ ಕಂಪನಿಯಾಗಿ ಎಲ್‌ಐಸಿ ಗುರುತಿಸಿಕೊಂಡಿದೆ. ಅದಕ್ಕಾಗಿ ಎಲ್‌ಐಸಿ ಹಲವಾರು ಯೋಜನೆಗಳನ್ನು ಸಹ ಒಳಗೊಂಡಿದೆ.
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ, ಸ್ವಾವಲಂಬಿಗಳಾಗಿ ಮಾಡುವ ಉದ್ದೇಶದಿಂದ ಎಲ್‌ಐಸಿ ಒಂದು ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಎಲ್‌ಐಸಿ ಆಧಾರ್ ಶಿಲಾ ಯೋಜನೆ:
ಮಹಿಳೆಯರಿಗಾಗಿ ಎಲ್‌ಐಸಿ ಅನೇಕ ಯೋಜನೆಗಳನ್ನು ಪರಿಚಯಿಸಿದೆ. ಆದರೆ ಆಧಾರ್ ಶಿಲಾ ಯೋಜನೆಯು (LIC Aadhaar Shila Scheme) ಅದರಲ್ಲಿ ಬಹಳ ವಿಶೇಷವಾಗಿದೆ. ಅತ್ಯಂತ ಆಕರ್ಷಕ ಮತ್ತು ಜನಪ್ರಿಯ ಯೋಜನೆಗಳಲ್ಲಿ ಈ ಎಲ್‌ಐಸಿ ಆಧಾರ್ ಶಿಲಾ ಯೋಜನೆ ಒಂದಾಗಿದೆ. ಇನ್ನು ವೈಯಕ್ತಿಕ ಜೀವ ವಿಮಾ ಪಾಲಿಸಿಗೆ ಇದನ್ನು ಲಿಂಕ್ ಮಾಡಲಾಗಿದ್ದು, ಮಾರುಕಟ್ಟೆ ಏರಿಳಿತಗಳು ಈ ಪಾಲಿಸಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಇನ್ನು ಈ ವಿಮಾ ಪಾಲಿಸಿಯ ಅವಧಿ ಮುಕ್ತಾಯವಾದಾಗ, ಬಳಕೆದಾರರಿಗೆ ದೊಡ್ಡ ಮೊತ್ತದ ಹಣ ಈ ಯೋಜನೆ ಮೂಲಕ ಸಿಗಲಿದೆ.
ಪಾಲಿಸಿಯ ವಿವರ:
ಎಲ್‌ಐಸಿಯ ಆಧಾರ್ ಶಿಲಾ ಪಾಲಿಸಿಯನ್ನು 8 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ತೆರೆಯಬಹುದು. ಪಾಲಿಸಿ ಅವಧಿಯು 10 ಅಥವಾ 20 ವರ್ಷಗಳವರೆಗೆ ಆಯ್ಕೆ ಮಾಡಬಹುದು. ಆದರೆ, ಪಾಲಿಸಿ ಅವಧಿ ಸಂಪೂರ್ಣಗೊಳ್ಳುವ ಸಮಯದಲ್ಲಿ ಪಾಲಿಸಿ ತೆರೆದವರ ಗರಿಷ್ಠ ವಯಸ್ಸು 70 ವರ್ಷಗಳನ್ನು ಮೀರಿರಬಾರದು ಎಂಬ ಷರತ್ತು ಅನ್ವಯವಾಗುತ್ತದೆ.
ಒಂದು ವೇಳೆ ಮಹಿಳೆಯೊಬ್ಬರು 55ನೇ ವಯಸ್ಸಿನಲ್ಲಿ ಈ ಪಾಲಿಸಿಯನ್ನು ತೆರೆದರೆ, ಗರಿಷ್ಠ 15 ವರ್ಷಗಳ ಅವಧಿಯವರೆಗೆ ಹೂಡಿಕೆಗೆ ಆಯ್ಕೆ ಮಾಡಬಹುದು. ವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಪ್ರೀಮಿಯಂ ಪಾವತಿ ಆಯ್ಕೆಗಳು ಇಲ್ಲಿ ಲಭ್ಯವಿವೆ.
ದಿನಕ್ಕೆ ₹87 ಹೂಡಿಕೆ ಮಾಡಿ, ಲಕ್ಷ ಗಳಿಸಿ!
ಪಾಲಿಸಿ ಕ್ಯಾಲ್ಕುಲೇಟರ್ ಪ್ರಕಾರ, ದಿನಕ್ಕೆ ₹87 ಪಾಲಿಸಿಗಾಗಿ ಮೀಸಲಿಟ್ಟರೆ, ಅವಧಿ ಮುಗಿಯುವ ಸಮುಯದಲ್ಲಿ ಅಂದಾಜು ₹11 ಲಕ್ಷ ರೂ.ವರೆಗೆ ಸಿಗುತ್ತದೆ. ದಿನಕ್ಕೆ ₹87 ಹೂಡಿಕೆ ಮಾಡಿದರೆ, ತಿಂಗಳಿಗೆ ₹2,610 ರೂ. ಹೂಡಿಕೆ ಮತ್ತು ವಾರ್ಷಿಕವಾಗಿ ₹31,320 ರೂ. ಹೂಡಿಕೆ ಮಾಡಿದಂತಾಗುತ್ತದೆ.
ಈ ಮೂಲಕ ಬರೀ ಹತ್ತು ವರ್ಷಗಳಲ್ಲಿ ಒಟ್ಟು ₹3,13,200 ರೂ. ಹೂಡಿಕೆ ಮಾಡಿದಂತಾಗಿದೆ. ಅವಧಿ ಪೂರ್ಣಗೊಂಡಾಗ ಎಲ್ಲಾ ಬಡ್ಡಿಗಳು ಸೇರಿ ₹11 ಲಕ್ಷ ರೂ. ಸಿಗಲಿದೆ. (ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications