ಕನಕದಾಸ ಜಯಂತಿಯ ಹಿನ್ನೆಲೆಯಲ್ಲಿ ನಾಳೆ, ಶುಕ್ರವಾರ (ನವೆಂಬರ್ 27) ಕರ್ನಾಟಕದಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹೀಗಾಗಿ ಬ್ಯಾಂಕ್ ಶಾಖೆಗಳು, ಕ್ಯಾಶ್ ಕೌಂಟರ್‌ಗಳು ಹಾಗೂ ಲಾಕರ್ ಸೇವೆಗಳು ಬಂದ್ ಆಗಿರಲಿವೆ. ಆದರೆ ಡಿಜಿಟಲ್ ಹಾಗೂ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ. ಈ ರಜೆ ಕರ್ನಾಟಕಕ್ಕೆ ಮಾತ್ರ ಅನ್ವಯಿಸುವುದರಿಂದ, ದೇಶದ ಇತರೆ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆಗಳು ಯಥಾರೀತಿ ಮುಂದುವರಿಯಲಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಗ್ರಾಹಕರು ನಗದು ವ್ಯವಹಾರ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಯೋಜನೆಗಳಿದ್ದರೆ, ಅದನ್ನು ಮುಂದಿನ ಕೆಲಸದ ದಿನಕ್ಕೆ ನಿಗದಿಪಡಿಸಿಕೊಳ್ಳುವುದು ಸೂಕ್ತ. ಹೆಚ್ಚಿನ ಮಾಹಿತಿಗೆ ಇಂದೇ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಸಮಯ ಖಚಿತಪಡಿಸಿಕೊಳ್ಳಿ.
ಆದಾಗ್ಯೂ, ಬಹುತೇಕ ರಿಟೇಲ್ ಪಾವತಿ ಸೇವೆಗಳು ಮಾಮೂಲಿಯಂತೆ ಕಾರ್ಯನಿರ್ವಹಿಸಲಿವೆ. ಯುಪಿಐ (UPI) ಮತ್ತು ಐಎಂಪಿಸಿ (IMPS) ಸೇವೆಗಳು 24 ಗಂಟೆಯೂ ಲಭ್ಯವಿರಲಿವೆ. ಇದರೊಂದಿಗೆ ಎನ್‌ಇಎಫ್‌ಟಿ (NEFT) ಹಾಗೂ ಆರ್‌ಟಿಜಿಎಸ್ (RTGS) ಮೂಲಕವೂ ಯಾವುದೇ ಸಮಯದಲ್ಲಿ ಹಣ ವರ್ಗಾಯಿಸಬಹುದು. ಇಎಮ್‌ಐ ಹಾಗೂ ಎಸ್‌ಐಪಿಗಳಿಗಾಗಿ NACH ಮೂಲಕ ನಡೆಯುವ ಆಟೋ-ಡೆಬಿಟ್‌ಗಳು ರಜಾ ದಿನದಲ್ಲೂ ಕಟ್ ಆಗುತ್ತವೆ. ಹೀಗಾಗಿ ಬೌನ್ಸ್ ಶುಲ್ಕದಿಂದ ತಪ್ಪಿಸಿಕೊಳ್ಳಲು ಖಾತೆಯಲ್ಲಿ ಅಗತ್ಯ ಬ್ಯಾಲೆನ್ಸ್ ಕಾಯ್ದುಕೊಳ್ಳಿ.

ಕರ್ನಾಟಕದಲ್ಲಿ ಬ್ಯಾಂಕ್ ರಜೆ: ಯಾವುದು ಇರುತ್ತೆ? ಯಾವುದು ಇರಲ್ಲ? ಇಲ್ಲಿದೆ ವಿವರ
| ಸೇವೆಗಳು | ನವೆಂಬರ್ 27 ರಂದು ಸ್ಥಿತಿ |
|---|---|
| ಬ್ಯಾಂಕ್ ಶಾಖೆಗಳು/ಲಾಕರ್ಸ್ | ಕರ್ನಾಟಕದಲ್ಲಿ ಬಂದ್ |
| ಎಟಿಎಂ (ATM) | ಚಾಲನೆಯಲ್ಲಿರುತ್ತವೆ |
| UPI/IMPS | 24 ಗಂಟೆಯೂ ಲಭ್ಯ |
| NEFT/RTGS | 24 ಗಂಟೆಯೂ ಲಭ್ಯ |
| NACH SIP/EMI | ಕಾರ್ಯನಿರ್ವಹಿಸುತ್ತದೆ |
| ಚೆಕ್ ಕ್ಲಿಯರೆನ್ಸ್ | ಮುಂದಿನ ಕೆಲಸದ ದಿನ |
| NSE/BSE (ಷೇರು ಮಾರುಕಟ್ಟೆ) | ತೆರೆದಿರುತ್ತದೆ |
ಕರ್ನಾಟಕ ಬ್ಯಾಂಕ್ ರಜೆ: ಚೆಕ್, ಎಸ್‌ಐಪಿ/ಇಎಮ್‌ಐ ಹಾಗೂ ಷೇರು ಮಾರುಕಟ್ಟೆ ಮೇಲೇನು ಪರಿಣಾಮ?
ಗುರುವಾರದ ಕಟ್-ಆಫ್ ಸಮಯದ ನಂತರ ಅಥವಾ ಶುಕ್ರವಾರ ನೀವು ಡೆಪಾಸಿಟ್ ಮಾಡುವ ಚೆಕ್‌ಗಳು ಮುಂದಿನ ಕೆಲಸದ ದಿನದಂದೇ ಕ್ಲಿಯರೆನ್ಸ್‌ಗೆ ಹೋಗಲಿವೆ. ಎರಡನೇ ಮತ್ತು ನಾಲ್ಕನೇ ಶನಿವಾರವೂ ಬ್ಯಾಂಕ್ ರಜೆ ಇರುವುದರಿಂದ, ಚೆಕ್ ಟ್ರಂಕೇಷನ್ ಸಿಸ್ಟಮ್ ನಿಯಮಗಳ ಪ್ರಕಾರ ಈ ಚೆಕ್‌ಗಳು ನವೆಂಬರ್ 30ರ ಸೋಮವಾರದಂದು ಖಾತೆಗೆ ಜಮೆಯಾಗುವ ಸಾಧ್ಯತೆಯಿದೆ. ತುರ್ತು ಪಾವತಿಗಳಿದ್ದರೆ ಚೆಕ್ ಬದಲಿಗೆ ಯುಪಿಐ ಅಥವಾ ಐಎಂಪಿಸಿ ಬಳಸುವುದು ಒಳಿತು.
ಮ್ಯೂಚುವಲ್ ಫಂಡ್ ಹೂಡಿಕೆಗೆ ಸಂಬಂಧಿಸಿದಂತೆ, ನಿಗದಿತ ಸಮಯದೊಳಗೆ ಹಣ ಫಂಡ್ ಖಾತೆಗೆ ತಲುಪುವುದು ಕಡ್ಡಾಯ. ಹೆಚ್ಚಿನ ಸ್ಕೀಮ್‌ಗಳಿಗೆ ಮಧ್ಯಾಹ್ನ 3 ಗಂಟೆ ಮತ್ತು ಲಿಕ್ವಿಡ್/ಓವರ್‌ನೈಟ್ ಫಂಡ್‌ಗಳಿಗೆ ಮಧ್ಯಾಹ್ನ 1:30 ಕಟ್-ಆಫ್ ಸಮಯವಾಗಿರುತ್ತದೆ. ಹಣ ಜಮೆಯಾದ ನಂತರವೇ ಎನ್‌ಎವಿ (NAV) ಹಂಚಿಕೆಯಾಗುತ್ತದೆ. ನವೆಂಬರ್ 27 ರಂದು ಭಾರತೀಯ ಷೇರು ಮಾರುಕಟ್ಟೆಗಳು ಮಾಮೂಲಿಯಂತೆ ತೆರೆದಿರುವುದರಿಂದ, ಎನ್‌ಎವಿ ಪ್ರಕ್ರಿಯೆಗಳು ಯಥಾರೀತಿ ನಡೆಯಲಿವೆ.
ಬೆಂಗಳೂರಿನ ಗ್ರಾಹಕರಿಗೊಂದು ತ್ವರಿತ ಪರಿಶೀಲನಾ ಪಟ್ಟಿ: ನಿಮ್ಮ ಆಟೋ-ಡೆಬಿಟ್ ಪಾವತಿಗಳಿಗೆ ಖಾತೆಯಲ್ಲಿ ಇಂದೇ ಹಣವಿರಿಸಿ. ಸೋಮವಾರದವರೆಗೆ ಚೆಕ್ ಡೆಪಾಸಿಟ್ ಮಾಡುವುದನ್ನು ಮುಂದೂಡಿ ಹಾಗೂ ಮಾಸಿಕ ಬಿಲ್‌ಗಳಿಗೆ ಯುಪಿಐ ಆಟೋಪೇ ಬಳಸಿ. ಕೊನೆಯ ಕ್ಷಣದ ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಐಎಂಪಿಸಿ ಅಥವಾ ಆರ್‌ಟಿಜಿಎಸ್ ಆಯ್ಕೆ ಮಾಡಿಕೊಳ್ಳಿ. ಬ್ಯಾಂಕ್ ಲಾಕರ್ ಅಥವಾ ಶಾಖೆಯ ಅಪಾಯಿಂಟ್‌ಮೆಂಟ್ ಇದ್ದರೆ ಮುಂದಿನ ವಾರಕ್ಕೆ ನಿಗದಿಪಡಿಸಿಕೊಳ್ಳಿ. ಲೇಟ್ ಫೀ ಮತ್ತು ಬೌನ್ಸ್ ಶುಲ್ಕ ತಪ್ಪಿಸಲು ಪಾವತಿಯ ರಿಮೈಂಡರ್‌ಗಳನ್ನು ಹೊಂದಿಸಿಕೊಳ್ಳಿ, ಇದು ನಿಮ್ಮ ಸಿಬಿಲ್ ಸ್ಕೋರ್ ಹಾಳಾಗದಂತೆ ಕಾಪಾಡುತ್ತದೆ.


Click it and Unblock the Notifications