ತಿರುವನಂತಪುರಂ: ಕೇಂದ್ರ ಸರ್ಕಾರ (Central Govt) ಮಾತ್ರವಲ್ಲದೇ, ದೇಶದ ಆಯಾ ರಾಜ್ಯ ಸರ್ಕಾರಗಳು ಭರ್ಜರಿ ಯೋಜನೆಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಮಹಿಳೆಯರ ಸಬಲೀಕರಣಕ್ಕಾಗಿ ಕೇರಳದಲ್ಲಿ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲಾಗಿತ್ತು. ಅದೇ 'ಸ್ತ್ರೀಸುರಕ್ಷಾ ಯೋಜನೆ' (Sthree Suraksha Scheme). ಇದೀಗ ಈ ಯೋಜನೆಗೆ ಇಂದು ಅರ್ಜಿ ಸಲ್ಲಿಕೆ ಆರಂಭವಾಗಿದೆ. ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ನಿರ್ದೇಶಕರು ಇದನ್ನು ಪ್ರಕಟಿಸಿದ್ದಾರೆ. ಈ ಯೋಜನೆಯಡಿ, ಕೇರಳದ 35-60 ವರ್ಷ ವಯಸ್ಸಿನ ಮಹಿಳೆಯರು (Women) ಮತ್ತು ಟ್ರಾನ್ಸ್ ವುಮೆನ್ ಪ್ರತಿ ತಿಂಗಳು 1000 ರೂ. ಆರ್ಥಿಕ ನೆರವು ಪಡೆಯಲು ಅರ್ಹರಾಗಿರುತ್ತಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಯೋಜನೆ ಕುರಿತು ಕಳೆದ ನವೆಂಬರ್‌ನಲ್ಲಿ ಘೋಷಣೆ ಮಾಡಿ, ಕೇರಳದ ಮಹಿಳೆಯರಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಇದರ ಅನುಷ್ಠಾನ ಸ್ವಲ್ಪ ವಿಳಂಬವಾಯಿತು. ಒಂದು ವೇಳೆ ಸುಳ್ಳು ಮಾಹಿತಿ ನೀಡಿ ಪಿಂಚಣಿ ಸೌಲಭ್ಯ ಪಡೆದರೆ, ಶೇ. 18ರಷ್ಟು ಬಡ್ಡಿಯೊಂದಿಗೆ ಹಣವನ್ನು ಮರುಪಡೆಯಲಾಗುವುದು ಎಂದು ಎಚ್ಚರಿಕೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?
ಇನ್ನು ಈ ಯೋಜನೆಗೆ ಕೇರಳ ರಾಜ್ಯದ ಪ್ರಜೆಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ksmart.lsgkerala.gov.in ವೆಬ್‌ಸೈಟ್ ಓಪನ್ ಮಾಡಬೇಕು. ನಂತರ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು. ವಾರ್ಡ್ ಸದಸ್ಯರ ಅಥವಾ ಪಂಚಾಯತ್ ಕಚೇರಿಯ ನೆರವನ್ನು ಪಡೆದುಕೊಂಡು ಸಹ ಇದಕ್ಕೆ ಅರ್ಜಿ ಸಲ್ಲಿಸಬಹುದು.
ಯಾರೆಲ್ಲಾ ಅರ್ಹರು?
ಇತರೆ ಯಾವುದೇ ಸಾಮಾಜಿಕ ಕಲ್ಯಾಣ ಯೋಜನೆ ಅಥವಾ ಪಿಂಚಣಿಗಳ ಫಲಾನುಭವಿಗಳಲ್ಲದ ಮಹಿಳೆಯರು ಮಾತ್ರ ಯೋಜನೆಗೆ ಅರ್ಹರು. ಅಂತ್ಯೋದಯ ಅನ್ನ ಯೋಜನೆ (ಹಳದಿ ಕಾರ್ಡ್) ಅಥವಾ ಆದ್ಯತಾ (ಪಿಂಕ್ ಕಾರ್ಡ್) ರೇಷನ್ ಕಾರ್ಡ್ ಹೊಂದಿರಬೇಕು. ಅವಿವಾಹಿತ, ವಿಕಲಚೇತನರ, ಕುಟುಂಬ, ಇಪಿಎಫ್ ಪಿಂಚಣಿ ಪಡೆಯುವವರು ಅನರ್ಹರು. ಕೇಂದ್ರ/ರಾಜ್ಯ ಸರ್ಕಾರಿ ಸೇವೆ, ಸರ್ಕಾರಿ ಸಂಸ್ಥೆಗಳು/ವಿಶ್ವವಿದ್ಯಾಲಯಗಳಲ್ಲಿ ಖಾಯಂ/ಗುತ್ತಿಗೆ ನೌಕರರೂ ಸಹ ಯೋಜನೆಗೆ ಅರ್ಹರಲ್ಲ ಎಂದು ಹೇಳಲಾಗಿದೆ.
ಏನೆಲ್ಲಾ ಸಲ್ಲಿಸಬೇಕು?
ವಯಸ್ಸಿನ ದೃಢೀಕರಣಕ್ಕಾಗಿ ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ, ಚಾಲನಾ ಪರವಾನಗಿ ಅಥವಾ ಪಾಸ್‌ಪೋರ್ಟ್ ಸಲ್ಲಿಸಲೇಬೇಕು. ಇವು ಲಭ್ಯವಿಲ್ಲದಿದ್ದರೆ, ವೈದ್ಯಾಧಿಕಾರಿ ನೀಡಿದ ಪ್ರಮಾಣಪತ್ರ ಕೂಡಾ ಬಳಸುವ ಅವಕಾಶವಿದೆ. ಬ್ಯಾಂಕ್ ಖಾತೆ ವಿವರ (IFSC ಸಹಿತ), ಆಧಾರ್ ಮಾಹಿತಿ ಮತ್ತು ಸ್ವಯಂ ದೃಢೀಕೃತ ಅಫಿಡವಿಟ್ ಅನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕು.


Click it and Unblock the Notifications