ಹೂಡಿಕೆ ಮಾಡಬೇಕು, ಸೇವಿಂಗ್ಸ್ (Savings) ಮಾಡಬೇಕು ಎಂಬುದು ಹಲವರ ಕನಸು. ಆದ್ರೆ ಕೆಲವರು ಈ ಅಭ್ಯಾಸವನ್ನು ಕೆಲಸ ಗಿಟ್ಟಿಸಿಕೊಂಡಾಗಿನಿಂದಲೇ ಮಾಡಿಕೊಂಡಿರುತ್ತಾರೆ. ಆದ್ರೆ ಕೆಲವರಿಗೆ ಎಷ್ಟೇ ಸಂಬಳ ಇರಲಿ, ಎಷ್ಟೇ ಹೂಡಿಕೆ ಯೋಜನೆಗಳಿರಲಿ ಉಳಿತಾಯ ಮಾಡೋ ಅಭ್ಯಾಸವೇ ಇರಲ್ಲ. ಆದ್ರೆ ಉಳಿತಾಯ ಮಾಡುವವರಿಗಾಗಿ ಪೋಸ್ಟ್ ಆಫೀಸ್‌ನಲ್ಲಿ (Post Office) ಹಲವಾರು ಯೋಜನೆಗಳಿವೆ. ಉಳಿತಾಯ ಸೇಫ್ ಆಗಿರಬೇಕು, ಉತ್ತಮ ಆದಾತ ಸಿಗಬೇಕು ಅನ್ನೋರಿಗೆ ಇಲ್ಲೊಂದು ಉತ್ತಮ ಹೂಡಿಕೆ ಯೋಜನೆಯಿದೆ.

ಉಳಿತಾಯ ಸುರಕ್ಷಿತವಾಗಿರಬೇಕು ಮತ್ತು ಉತ್ತಮ ಆದಾಯವನ್ನೂ ಗಳಿಸಬೇಕು ಎಂದು ಬಯಸುವವರಿಗೆ ಪೋಸ್ಟ್ ಆಫೀಸ್‌ನ ಕಿಸಾನ್ ವಿಕಾಸ್ ಪತ್ರ (KVP) ಒಂದು ಉತ್ತಮ ಆಯ್ಕೆಯಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಈ ಯೋಜನೆ ಕಾರ್ಯನಿರ್ವಹಿಸುವುದರಿಂದ, ನೀವು ಹೂಡಿಕೆ ಮಾಡಿದ ಹಣ ಇಲ್ಲಿ ಸುರಕ್ಷಿತವಾಗಿರುತ್ತದೆ.
ಏನಿದು ಕಿಸಾನ್ ವಿಕಾಸ್ ಪತ್ರ?
ಭಾರತ ಸರ್ಕಾರದ ಅಂಚೆ ಇಲಾಖೆಯ ಸ್ವಾಮ್ಯದಲಿರುವ ಈ ಕಿಸಾನ್ ವಿಕಾಸ್ ಪತ್ರ ಯೋಜನೆಯು ಇಂದು ಭಾರೀ ಜನಪ್ರಿಯತೆ ಪಡೆದಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವು ನಿಗದಿತ ಅವಧೀಯ ಬಳಿಕ ಡಬಲ್ ಆಗಲಿದೆ ಎಂಬುದೇ ಈ ಯೋಜನೆಯ ಪ್ರಮುಖ ಆಕರ್ಷಣೆ.
ಆರಂಭದಲ್ಲಿ ರೈತರಿಗಾಗಿ ಪ್ರಾರಂಭವಾದ ಈ ಯೋಜನೆ, ಈಗ ಎಲ್ಲಾ ಭಾರತೀಯ ನಾಗರಿಕರಿಗೂ ಹೂಡಿಕೆಗೆ ಮುಕ್ತವಾಗಿದೆ. ಹೂಡಿಕೆ ಮಾಡಿದ ಹಣವು ನಿರ್ದಿಷ್ಟ ಅವಧಿಯೊಳಗೆ ದ್ವಿಗುಣಗೊಳ್ಳುವುದು ಇದರ ಮುಖ್ಯ ಆಕರ್ಷಣೆ. ಪ್ರಸ್ತುತ, ಕೇಂದ್ರ ಸರ್ಕಾರವು ವಾರ್ಷಿಕ 7.5% ಚಕ್ರಬಡ್ಡಿ ದರವನ್ನು ನೀಡುವ ಮೂಲಕ ಹಲವಾರು ಹೂಡಿಕೆದಾರರನ್ನು ತನ್ನತ್ತ ಆಕರ್ಷಿಸಿದೆ.
ಬಡ್ಡಿದರ ಮತ್ತು ಮುಕ್ತಾಯ ಅವಧಿ
ಈ ಯೋಜನೆಯಲ್ಲಿ 7.5% ಬಡ್ಡಿದರದ ಪ್ರಕಾರ, ನಿಮ್ಮ ಹೂಡಿಕೆ 115 ತಿಂಗಳುಗಳಲ್ಲಿ (9 ವರ್ಷ 7 ತಿಂಗಳು) ದ್ವಿಗುಣಗೊಳ್ಳುತ್ತದೆ. ಕನಿಷ್ಠ ₹1,000 ರಿಂದ ಈ ಯೋಜನೆಯಲ್ಲಿ ನೀವು ಹೂಡಿಕೆ ಆರಂಭಿಸಬಹುದು. ಆದರೆ ಹೂಡಿಕೆಗೆ ಗರಿಷ್ಠ ಮಿತಿಯಿಲ್ಲ. ಇನ್ನು ಇದು ಸರ್ಕಾರಿ ಯೋಜನೆಯಾಗಿದ್ದು, ಮಾರುಕಟ್ಟೆ ಏರಿಳಿತಗಳಿಂದ ಯಾವುದೇ ಅಪಾಯವಿರುವುದಿಲ್ಲ.
ಯಾರು ಅರ್ಜಿ ಸಲ್ಲಿಸಬಹುದು?
18 ವರ್ಷ ಪೂರೈಸಿದ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹತೆಯನ್ನು ಹೊಂದಿದ್ದಾರೆ. ಇನ್ನು ಅಪ್ರಾಪ್ತರ ಪರವಾಗಿ ಪೋಷಕರು ಸಹ ಖಾತೆ ತೆರೆಯಬಹುದು. ಮೂವರು ಸೇರಿ ಜಂಟಿ ಖಾತೆ ತೆರೆಯುವ ಅವಕಾಶವಿದೆ. ಆದ್ರೆ ಅನಿವಾಸಿ ಭಾರತೀಯರಿಗೆ ಈ ಯೋಜನೆ ಓಪನ್ ಮಾಡಲು ಯಾವುದೇ ಅನುಮತಿ ನೀಡಲಾಗಿಲ್ಲ.
ಅಗತ್ಯ ದಾಖಲೆಗಳು:
ಇನ್ನು ಈ ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು ಅಂಚೆ ಕಚೇರಿ ಅಥವಾ ಆಯ್ದ ಬ್ಯಾಂಕುಗಳಲ್ಲಿ ಈ ಆರಂಭಿಸಬಹುದು. ಅರ್ಜಿ ಫಾರಂನೊಂದಿಗೆ ಆಧಾರ್/ವೋಟರ್ ಐಡಿ (ಗುರುತಿನ ಐಡಿ), ಪ್ಯಾನ್ ಕಾರ್ಡ್ (₹50,000 ಮೇಲ್ಪಟ್ಟ ಹೂಡಿಕೆಗೆ ಕಡ್ಡಾಯ), ವಿಳಾಸ ಪುರಾವೆ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸುವುದು ಕಡ್ಡಾಯವಾಗಿದೆ.
ಸಾಮಾನ್ಯವಾಗಿ, KVP ಗೆ 2.5 ವರ್ಷಗಳ (30 ತಿಂಗಳು) ಲಾಕ್-ಇನ್ ಅವಧಿ ಕಡ್ಡಾಯವಾಗಿರುತ್ತದೆ. ನಂತರ ವಿಶೇಷ ಸಂದರ್ಭಗಳಲ್ಲಿ ಹಣ ಹಿಂಪಡೆಯಲು ಅವಕಾಶವಿದ್ದರೂ, ಅವಧಿಗೂ ಮುನ್ನ ಹಿಂಪಡೆಯುವುದು ಬಡ್ಡಿ ಲಾಭದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮಾರುಕಟ್ಟೆ ಅಪಾಯವಿಲ್ಲದೆ ಹೆಚ್ಚಿನ ಆದಾಯ ಪಡೆಯುವವರಿಗೆ ಇದು ಉತ್ತಮ ಮಾರ್ಗವಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications